ಗಿವ್ ಮಿ ಮೈ ಮನಿ; ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ನೊಂದಿಗೆ ತಮ್ಮ ಕೋಚ್‌ಗೆ ಪ್ರಾಂಕ್ ಮಾಡಿದ ನೀರಜ್ ಚೋಪ್ರಾ -Video
ಕನ್ನಡ ಸುದ್ದಿ  /  ಕ್ರೀಡೆ  /  ಗಿವ್ ಮಿ ಮೈ ಮನಿ; ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ನೊಂದಿಗೆ ತಮ್ಮ ಕೋಚ್‌ಗೆ ಪ್ರಾಂಕ್ ಮಾಡಿದ ನೀರಜ್ ಚೋಪ್ರಾ -Video

ಗಿವ್ ಮಿ ಮೈ ಮನಿ; ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ನೊಂದಿಗೆ ತಮ್ಮ ಕೋಚ್‌ಗೆ ಪ್ರಾಂಕ್ ಮಾಡಿದ ನೀರಜ್ ಚೋಪ್ರಾ -Video

ಗಿವ್ ಮಿ ಮೈ ಮನಿ ಎಂಬ ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌, ಚಿನ್ನದ ಹುಡುಗ ನೀರಜ್‌ ಚೋಪ್ರಾ ಅವರವರೆಗೆ ತಲುಪಿದೆ. ಇದೇ ಟ್ರೆಂಡ್‌ ಬಳಸಿ ಒಲಿಂಪಿಕ್‌ ಪದಕ ವಿಜೇತ ಆಟಗಾರ ತಮ್ಮ ಕೋಚ್‌ ಬಾರ್ಟೋನಿಟ್ಜ್ ಅವರಿಗೆ ಪ್ರಾಂಕ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ನೊಂದಿಗೆ ತಮ್ಮ ಕೋಚ್‌ಗೆ ಪ್ರಾಂಕ್ ಮಾಡಿದ ನೀರಜ್ ಚೋಪ್ರಾ
ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್‌ನೊಂದಿಗೆ ತಮ್ಮ ಕೋಚ್‌ಗೆ ಪ್ರಾಂಕ್ ಮಾಡಿದ ನೀರಜ್ ಚೋಪ್ರಾ

ಒಲಿಂಪಿಕ್‌ ಪದಕ ಗೆದ್ದ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ‌ (Neeraj Chopra), ತಮ್ಮ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಅವರ ಮೇಲೆ ಮಾಡಿರುವ ಪ್ರಾಂಕ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಣ್ಣ ಹಾಸ್ಯಮಯ ವಿಡಿಯೋವನ್ನು ನೀರಜ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, ಅಭಿಮಾನಿಗಳು ಕೂಡಾ ಪ್ರತಿಕ್ರಿಯಿಸಿದ್ದಾರೆ. ಕೋಚ್‌ ಬಾರ್ಟೋನಿಟ್ಜ್ ಮತ್ತು ಫಿಸಿಯೋಥೆರಪಿಸ್ಟ್ ಇಶಾನ್ ಮರ್ವಾಹಾ ಕೂಡಾ ಈ ವಿಡಿಯೊದಲ್ಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಾಗಿರುವ ನೀರಜ್‌ ಅವರ ಕೋಚ್‌ ಆಗಿರುವ ಜರ್ಮನ್‌ನ ಬಾರ್ಟೋನಿಟ್ಜ್, ಪ್ರಸಕ್ತ ಋತುವಿನ ನಂತರ ತಮ್ಮ ಸ್ಥಾನದಿಂದ ನಿರ್ಗಮಿಸಲಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಆರಂಭದಲ್ಲಿ ಬಾರ್ಟೋನಿಟ್ಜ್ ಅವರನ್ನು 2019ರಲ್ಲಿ ಬಯೋಮೆಟ್ರಿಕ್ ತಜ್ಞರಾಗಿ ನೇಮಿಸಿತ್ತು. ಆದರೆ ಉವೆ ಹೋನ್ ತೊರೆದ ನಂತರ ಇವರನ್ನು ನೀರಜ್ ಅವರ ತರಬೇತುದಾರರನ್ನಾಗಿ ನೇಮಿಸಿತು.

ಸದ್ಯ ವೈರಲ್ ವಿಡಿಯೊದಲ್ಲಿ, ನೀರಜ್‌ ಜೊತೆಗೆ ಕೋಚ್‌ ಹಾಗೂ ಫಿಸಿಯೋ ಕೂಡಾ ಇದ್ದಾರೆ. ಆದರೆ ಪ್ರಾಂಕ್‌ಗೆ ಒಳಪಡಿಸಿದ್ದು ಕೋಚ್‌ ಬಾರ್ಟೋನಿಟ್ಜ್ ಅವರನ್ನು. ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ 'ಗಿವ್‌ ಮೀ ಮೈ ಮನಿ' ಎಂಬುದು ಟ್ರೆಂಡ್ ಆಗುತ್ತಿದೆ. ಹೀಗಾಗಿ ಈ ಮೂವರು ವೈರಲ್ ಗಿವ್‌ ಮಿ ಮೈ ಮನಿಯ ತಮ್ಮ ಆವೃತ್ತಿಯನ್ನು ತಮ್ಮದೇ ಶೈಲಿಯಲ್ಲಿ ಮಾಡಿದ್ದಾರೆ. ಆದರೆ, ನೀರಜ್ ಮತ್ತು ಮರ್ವಾಹಾ ಅವರ ಯೋಜನೆ ಬಗ್ಗೆ ಬಾರ್ಟೋನಿಟ್ಜ್ ಅವರಿಗೆ ಮೊದಲೇ ತಿಳಿದಿರಲಿಲ್ಲ. ಹೀಗಾಗಿ ಅವರನ್ನು ಪ್ರಾಂಕ್‌ ಮಾಡಲಾಗಿದೆ.

ಕೋಚ್‌ಗೆ ತಿಳಿಯಲೇ ಇಲ್ಲ ಉಳಿದ ಇಬ್ಬರ ಪ್ಲಾನ್

ವಿಡಿಯೊದಲ್ಲಿ, ನೀರಜ್ ಮೊದಲಿಗೆ “ಗಿವ್‌ ಮೀ ಮೈ ಮನಿ” ಎಂದು ಹೇಳುವ ಮೂಲಕ ಟ್ರೆಂಡ್ ಆರಂಭಿಸುತ್ತಾರೆ. ಈ ವೇಳೆ ಮಾರ್ವಾಹಾ ಮತ್ತು ಬಾರ್ಟೋನಿಟ್ಜ್ ಚಪ್ಪಾಳೆ ತಟ್ಟುತ್ತಾರೆ. ಆ ನಂತರ ಮರ್ವಾಹಾ ಅವರ ಸರದಿ. ಈ ವೇಳೆ ಉಳಿದ ಇಬ್ಬರು ಕೂಡಾ ಚಪ್ಪಾಳೆ ತಟ್ಟುತ್ತಾರೆ. ಕೊನೆಗೆ ಬಾರ್ಟೋನಿಟ್ಜ್ ಅವರ ಸರದಿ ಬಂದಾಗ, ಅವರನ್ನು ಹೊರತುಪಡಿಸಿ ಬೇರೆ ಯಾರೂ ಚಪ್ಪಾಳೆ ತಟ್ಟಲಿಲ್ಲ.‌ ಬದಲಿಗೆ ನೀರಜ್ ಮತ್ತು ಮರ್ವಾಹಾ ನಗಲು ಆರಂಭಿಸುತ್ತಾರೆ. ಈ ವೇಳೆ ಜರ್ಮನ್ ಮೂಲದ ಕೋಚ್ ಗೊಂದಲಕ್ಕೊಳಗಾಗುತ್ತಾರೆ. ತಾನು ಉಳಿದ ಇಬ್ಬರ ಪ್ಲಾನ್‌ನಂತೆ ಪ್ರಾಂಕ್‌ ಆಗಿದ್ದೇನೆ ಎಂದು ಅವರಿಗೆ ತಡವಾಗಿ ತಿಳಿಯುತ್ತದೆ. “ಕೋಚ್ ಇದಕ್ಕೆ ಸಿದ್ಧರಿರಲಿಲ್ಲ” ಎಂದು ನೀರಜ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.‌

ವಿಡಿಯೋ ಇಲ್ಲಿದೆ

ನೀರಜ್ ಚೋಪ್ರಾ ಮತ್ತು ದೀರ್ಘಕಾಲದ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಐದು ವರ್ಷಗಳ ಕಾಲ ಜೊತೆಗೆ ಕೆಲಸ ಮಾಡಿದ್ದಾರೆ. ಇಬ್ಬರ ನಡುವಿನ ಅತ್ಯಂತ ಯಶಸ್ವಿ ಪಾಲುದಾರಿಕೆ ಕೊನೆಗೊಳ್ಳಲಿದೆ. 75 ವರ್ಷ ವಯಸ್ಸಿನ ಬಾರ್ಟೋನಿಟ್ಜ್ ಅವರು, ತಮ್ಮ ವಯಸ್ಸು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವ ಬದ್ಧತೆಯನ್ನು ಉಲ್ಲೇಖಿಸಿ, ಚೋಪ್ರಾ ಅವರಿಗೆ ಕೋಚಿಂಗ್‌ನಿಂದ ದೂರ ಸರಿಯುತ್ತಿದ್ದಾರೆ.

“ಬಾರ್ಟೋನಿಟ್ಜ್ ಅವರಿಗೆ 75 ವರ್ಷ ವಯಸ್ಸು. ಅವರು ಈಗ ತಮ್ಮ ಕುಟುಂಬದೊಂದಿಗೆ ಇರಲು ಬಯಸುತ್ತಾರೆ” ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.