Mysuru News, Mysuru News in kannada, Mysuru ಕನ್ನಡದಲ್ಲಿ ಸುದ್ದಿ, Mysuru Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಮೈಸೂರು ಸುದ್ದಿ

Latest Mysuru Photos

ಅಬ್ಬಬ್ಬಾ ಏನು ಬಿಸಿಲು ಎನ್ನುತ್ತಿದ್ದಾನೆ ಹುಲಿರಾಯ. ನೀರು ಸಿಕ್ಕರೆ ಅಷ್ಟೇ ಸಾಕು ಎಂದು ಹುಡುಕಿಕೊಂಡು ಬಂದು ದೇಹದ ಕಾವು ತಣಿಸಿಕೊಳ್ಳುತ್ತಿರುವ ಹುಲಿ.

Wild life in Summer: ನಾಗರಹೊಳೆ ಅರಣ್ಯದಲ್ಲೂ ಬಿಸಿಲ ಬೇಗೆ, ನೀರು- ನೆರಳು ಹುಡುಕಾಟದಲ್ಲಿ ವನ್ಯಜೀವಿಗಳು; ಹೀಗಿವೆ ಭಿನ್ನ ನೋಟ

Saturday, March 15, 2025

ಮೈಸೂರಿನ ಸಂತೇಪೇಟೆ ಎಂದರೆ ಅದು ಶತಮಾನಗಳಿಂದ ವ್ಯಾಪಾರಿ ತಾಣ. ಇಲ್ಲಿನ ಪ್ರಸನ್ನ ನಂಜುಂಡೇಶ್ವರ ದೇಗುಲವೂ ಮೂರು ನೂರು ವರ್ಷದಷ್ಟು ಹಳೆಯದು. ಈ ದೇಗುಲದ ಬ್ರಹ್ಮ ರಥೋತ್ಸವ ಭಕ್ತರ ಸಂಭ್ರಮದಿಂದ ನೆರವೇರಿತು.

Mysore News: ಮೈಸೂರು ಮಹಾರಾಜರು ನಿರ್ಮಿಸಿದ್ದ ಪ್ರಸನ್ನ ನಂಜುಂಡೇಶ್ವರ ದೇಗುಲದಲ್ಲಿ ರಥೋತ್ಸವ ಸಡಗರ

Friday, March 14, 2025

ಕಾಡು ಮುಖ್ಯವಾಗಿ ಜಲ ಮೂಲದ ತಾಣ. ಆದರೆ ಬೇಸಿಗೆ ಬಂದರೆ ಕಾಡಿನಲ್ಲೇ ನೀರಿಗೆ ಸಮಸ್ಯೆ ಎದುರಾಗುತ್ತದೆ. ,ಕರ್ನಾಟಕದ ಕೆಲವು ಅರಣ್ಯ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಾರ್ಚ್‌ನಲ್ಲಿಯೇ ಕಂಡು ಬಂದಿದೆ.

Summer 2025: ಬಿಸಿಲ ಬೇಗೆ, ಕಾಡಿನಲ್ಲಿ ನೀರಿಗೂ ತತ್ವಾರ, ಟ್ಯಾಂಕರ್‌ ಮೂಲಕ ವನ್ಯಜೀವಿಗಳಿಗೆ ನೀರು ಕೊಡುತ್ತಿರುವ ಅರಣ್ಯ ಇಲಾಖೆ

Wednesday, March 12, 2025

ಬೇಸಿಗೆಯ ವೇಳೆ ದೇಹ ತಂಪಾಗಿಸಲು ಗೊರಿಲ್ಲ, ಚಿಂಪಾಜಿ, ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಬ್ಲಾಗ್, ಹಣ್ಣು ಹಂಪಲುಗಳ ವಿತರಣೆ ಮಾಡಲಾಗುತ್ತಿದೆ.

Karnataka Summer 2025: ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳು ಕೂಲ್‌ ಕೂಲ್‌; ಗೊರಿಲ್ಲಾಗೆ ಐಸ್‌ ಸೇವೆ, ಹುಲಿಗಳಿಗೆ ಜಲ ಸಿಂಚನ

Tuesday, March 11, 2025

ಗಜಾರಣ್ಯ ಎಂದು ಕರೆಯಿಸಿಕೊಳ್ಳುತ್ತಿದ್ದ ತಲಕಾಡು ಪಂಚಲಿಂಗ ದೇಗುಲಗಳಿರುವ ಊರು ಹೌದು. ತಲಕಾಡು ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ.

Summer Trip: ಕುಟುಂಬ ಬೇಸಿಗೆ ಪ್ರವಾಸಕ್ಕೆ ಪ್ರಾಕೃತಿಕ ಸೊಬಗಿನ ಬೆಸ್ಟ್‌ ತಾಣ ತಲಕಾಡು ; ಮರಳು ರಾಶಿ ನಡುವೆ ಹರಿವ ಕಾವೇರಿ ಜುಳು ಜುಳು ನಿನಾದ

Monday, March 10, 2025

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ಕ್ಷೇತ್ರ ಇರುವುದು ಅಣಶಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ. ಕಾಡು ದಾಟಿಕೊಂಡೇ ದೇವಸ್ಥಾನಕ್ಕೆ ಹೋಗಬೇಕು.,

Maha Shivaratri 2025: ರಾಷ್ಟ್ರೀಯ ಅಭಯಾರಣ್ಯದೊಳಗೆ ಇರುವ ಕರ್ನಾಟಕದ ಪ್ರಮುಖ ಶಿವನ ದೇಗುಲಗಳು

Wednesday, February 26, 2025

ಕಳೆದ ದಸರಾ ವೇಳೆ ಜನಿಸಿದ್ದ ಮಗನಿಗೆ ನಾಲ್ಕು ತಿಂಗಳು ತುಂಬಿರುವ ನಡುವೆ ನಾಮಕರಣವನ್ನು ಮೈಸೂರು ಅರಮನೆಯಲ್ಲಿ ನೆರವೇರಿಸಲಾಯಿತು. ಆಗ ಕಿವಿಯಲ್ಲಿ ಹೆಸರು ಹೇಳಿದ ತಂದೆ ಯದುವೀರ್‌ ಒಡೆಯರ್‌.

Mysore Royal Family: ಮೈಸೂರು ರಾಜವಂಶಸ್ಥ ಯದುವೀರ್‌ ಪುತ್ರ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್‌ ಹೇಗಿದ್ದಾನೆ, ನಾಮಕರಣ ಸಮಾರಂಭ ಹೀಗಿತ್ತು

Tuesday, February 25, 2025

ಮೈಸೂರು ಎಂದರೆ ಬರೀ ನಗರವಲ್ಲ. ಅದು ಇತಿಹಾಸದ ಊರು. ಹಸಿರಿನ ನಗರಿ. ಎಲ್ಲೆಡೆ ನೆಟ್ಟಿರುವ ಸಸಿಗಳು ರಸ್ತೆಗಳಿಗೆ ಹಸಿರು ತೋರಣವಾಗಿ ಕಂಡು ಬರುತ್ತವೆ. ವಸಂತಾಗಮನದ ಮುನ್ನ ಹರಿಸು ವಾತಾವರಣ ಹೀಗಿದೆ.

Mysore Spring Mood: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಗಳ ಮೇಲೆ; ಮೈಸೂರಿನ ರಸ್ತೆಗಳ ಹೂ ಮತ್ತು ಹಸಿರು ಯಾನದ ಖುಷಿ

Monday, February 24, 2025

ಮೈಸೂರಿನ ಕಾರಂಜಿ ಕೆರೆ ಕೂಡ ವಿಶಾಲವಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿರುವ ಈ ಕೆರೆ ಮೈಸೂರು ಮೃಗಾಲಯ ಪಕ್ಕದಲ್ಲಿಯೇ ಇದೆ. ಇಲ್ಲಿ ಬೋಟಿಂಗ್‌, ಚಿಟ್ಟೆ ಪಾರ್ಕ್‌, ಪಕ್ಷಿಗಳ ಲೋಕ ಚೆನ್ನಾಗಿದೆ. ಹಸಿರು ವಾತಾವರಣ ಮುದ ನೀಡುತ್ತದೆ.

Summer Travel: ಬೇಸಿಗೆಯಲ್ಲೂ ತಣ್ಣನೆಯ ವಾತಾವರಣ ನೀಡುವ ಕರ್ನಾಟಕದ ಪ್ರಮುಖ 10 ಕೆರೆಗಳ ಅಂಗಳದಲ್ಲಿ ಒಂದು ಸುತ್ತು ಹಾಕಿ

Friday, February 21, 2025

ಡಾ ರಾಜಕುಮಾರ್‌ :
ಕನ್ನಡದ ವರನಟ  ಡಾ. ರಾಜ್‌ಕುಮಾರ್ ಅವರ ಶತಮಾನೋತ್ಸವವು ಇದೇ ದಶಕದಲ್ಲಿದೆ. ಇನ್ನು ನಾಲ್ಕು ವರ್ಷಕ್ಕೆ ಅವರ ಶತಮಾನೋತ್ಸವ ಆರಂಭವಾಗಲಿದೆ. ಡಾ. ರಾಜ್‌ ಅವರು ಜನಿಸಿದ್ದು 1929ರ ಏಪ್ರಿಲ್ 24 ಅವಿಭಜಿತ ಮೈಸೂರು ಜಿಲ್ಲೆಯ ಗಾಜನೂರಿನಲ್ಲಿ.  ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮಿಂಚಿದವರು ಅಣ್ಣಾವ್ರು. ಅಭಿನಯಕ್ಕೆ ಹೆಸರಾದವರು. ನಟರಾಗಿಯಲ್ಲದೇ ಗಾಯಕರಾಗಿಯೂ ಗಮನ ಸೆಳೆದವರು. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಒಂದಕ್ಕಿಂತ ಭಿನ್ನ ಚಿತ್ರಗಳಲ್ಲಿ ನಟಿಸಿದ್ದ ಹಿರಿಮೆ ಅವರದ್ದು. ಡಾ.ರಾಜ್‌ ಅವರು 2000ದಲ್ಲಿ ದಂತಚೋರ ವೀರಪ್ಪನ್‌ನಿಂದ ಹುಟ್ಟೂರಿನಿಂದ ಅಪಹರಣವಾಗಿ 108 ದಿನಗಳ ನಂತರ ಬಿಡುಗಡೆಯಾಗಿದ್ದರು. 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಮ್ಮನ್ನಗಲಿದರು.

Sandalwood Centenary Artists: ಈ ದಶಕದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ಕಲಾವಿದರ ಶತಮಾನೋತ್ಸವ, ಡಾ.ರಾಜ್‌, ಅಶ್ವಥ್‌ ಸಹಿತ ಯಾರಿದ್ದಾರೆ

Thursday, February 20, 2025

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್‌ ಕ್ಯಾಂಪಸ್‌ ಇದು. ತರಬೇತಿ ಕೇಂದ್ರಗಳು, ಸಭಾಂಗಣಗಳು, ವಸತಿಗೃಹ, ಆಂಪಿ ಥಿಯೇಟರ್‌, ಕ್ರೀಡಾಂಗಣ.. ಒಂದು ರೀತಿ ಟೌನ್‌ಶಿಪ್‌ ಇದು, ಅದು ಸ್ಮಾರ್ಟ್‌ ಟೌನ್.‌ ಎರಡು ದಶಕದ ಹಿಂದೆ ಇದು ಉದ್ಘಾಟನೆಗೊಂಡು ನಂತರ ವಿಸ್ತರಣೆಗೊಂಡಿದೆ.

Mysore infosys Campus: ಹೈಟೆಕ್‌ ಟೌನ್‌ಶಿಪ್‌ ಮೀರಿಸುವ ಮೈಸೂರಿನ ಇನ್ಫೋಸಿಸ್‌ ಜಾಗತಿಕ ತರಬೇತಿ ಕ್ಯಾಂಪಸ್‌, ಇಲ್ಲಿ ಏನುಂಟು ಏನಿಲ್ಲ

Saturday, February 15, 2025

ಮೈಸೂರು ಜಿಲ್ಲೆ ತಿ.ನರಸೀಪುರ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಬುಧವಾರ ಜನವೋ ಜನ. ಕುಂಭಮೇಳದ ಕೊನೆ ದಿನವಾಗಿದ್ದರಿಂದ ಮಾಘ ಸ್ನಾನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು

Karnataka Kumbh Mela 2025: ತಿ.ನರಸೀಪುರ ಕುಂಭಮೇಳಕ್ಕೆ ಕೊನೆ ದಿನ ಭಾರೀ ಜನ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ, ಎಲ್ಲೆಡೆ ಟ್ರಾಫಿಕ್‌ಜಾಮ್

Wednesday, February 12, 2025

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಗಮನ ಸೆಳೆದ ಕಾವೇರಿ ಆರತಿ ವೈಭವ.

Karnataka Kumbh Mela 2025: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ಶಿವಸ್ತುತಿ ನಿನಾದ: ಹೀಗಿದ್ದವು ಅಪರೂಪದ ಕ್ಷಣಗಳು

Wednesday, February 12, 2025

ವ್ಯಾಸರಾಜ ಮಠ  ಸೋಸಲೆ:
ಕರ್ನಾಟಕದ ಹಳೆಯ ಮಠಗಳಲ್ಲಿ ಸೋಸಲೆ ವ್ಯಾಸರಾಜ ಮಠ ಕೂಡ ಒಂದು.
ಉತ್ತರಾದಿ ಮಠ ಮತ್ತು ರಾಘವೇಂದ್ರ ಮಠಗಳ ಜೊತೆಗೆ ವ್ಯಾಸರಾಜ ಮಠವನ್ನು ದ್ವೈತ ವೇದಾಂತದ ಮೂರು ಪ್ರಮುಖ ಧರ್ಮಪ್ರಚಾರಕ ಸಂಸ್ಥೆಗಳೆಂದು ಪರಿಗಣಿಸಲಾಗಿದೆ. ತಿನರಸೀಪುರದಿಂದ ಐದು ಕಿ.ಮಿ ದೂರದಲ್ಲಿದೆ ಸೋಸಲೆ ವ್ಯಾಸರಾಜರ ಮೂಲಮಠ. ಶ್ರೀ ವಿದ್ಯಾಶ್ರೀಶ ತೀರ್ಥರು ಸದ್ಯದ ಗುರುಗಳು. ಇಲ್ಲಿ  ನಿತ್ಯ ಪೂಜೆಗಳು ನಡೆಯಲಿವೆ. ಗೋ ಶಾಲೆಯೂ ಇದೆ.

Karnataka Kumbh Mela 2025: ತಿ ನರಸೀಪುರ ಕುಂಭಮೇಳಕ್ಕೆ ಬಂದರೆ 30 ಕಿ.ಮಿ ವ್ಯಾಪ್ತಿಯಲ್ಲಿ ನೀವು ನೋಡಬಹುದಾದ 10 ಪ್ರವಾಸಿ ತಾಣಗಳು

Tuesday, February 11, 2025

ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ (ಟಿ ನರಸೀಪುರ)ದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಮೂರು ದಿನ ಕುಂಭ ಮೇಳದ ಸಂಭ್ರಮ. ಇಂದು (ಫೆ.10) ಐತಿಹಾಸಿಕ ಕುಂಭ ಮೇಳಕ್ಕೆ ಚಾಲನೆ ಸಿಕ್ಕಿದೆ. 13ನೇ ಕುಂಭಮೇಳಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದ್ದು, ಸಂಭ್ರಮದ ಚಿತ್ರನೋಟ ಇಲ್ಲಿದೆ.

Kumbh Mela 2025: ತಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭ ಮೇಳಕ್ಕೆ ಚಾಲನೆ, ನಡುಹೊಳೆ ಬಸವೇಶ್ವರ ಮೂರ್ತಿ ಬಳಿ ಪೂಜೆ ಸಲ್ಲಿಕೆ- ಚಿತ್ರನೋಟ

Monday, February 10, 2025

ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತ್ರಿವೇಣಿ ಸಂಗಮ ಅಣಿಯಾಗಿದೆ,

Karnataka Kumbh mela 2025: ಕರ್ನಾಟಕದ ಕುಂಭಮೇಳಕ್ಕೆ ಮೈಸೂರಿನ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ ಹೀಗಿದೆ

Sunday, February 9, 2025

ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ಹಂಚಿಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಸಲಬೇಗೆ ಜೋರಾಗಿದೆ. ಜಿಂಕೆಗಳು ನೀರು ಹುಡುಕಿಕೊಂಡು ಹೋಗಿ ಕುಡಿದು ಬಿಸಿಲ ಬವಣೆ ನೀಗಿಸಿಕೊಳ್ಳುತ್ತಿವೆ.

Summer 2025: ಕೊಡಗು ಭಾಗದಲ್ಲಿ ಆಗಲೇ ಬಿಸಿಲು ಜೋರು, ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲಿ ವನ್ಯಜೀವಿಗಳ ಪರಿತಾಪ

Sunday, February 9, 2025

ಬಾಗಲಕೋಟೆ ನಗರದಲ್ಲಿರುವ  ಮೋಟಗಿ ಬಸವೇಶ್ವರ ರಥೋತ್ಸವ ಫೆಬ್ರವರಿ 12

ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪ್ರಮುಖ 10 ರಥೋತ್ಸವ, ಜಾತ್ರಾ ಸಂಭ್ರಮ

Monday, February 3, 2025

ಚಿಕ್ಕಮಗಳೂರು:
ಚಿಕ್ಕಮಗಳೂರು ಕೂಡ ಕರ್ನಾಟಕದ ಪ್ರಮುಖ ಬೆಟ್ಟಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ. ಮುಳ್ಳಯ್ಯನಗಿರಿ ಅತೀ ಎತ್ತರದ ಬೆಟ್ಟ. ಬೆಟ್ಟದ ತುಟ್ಟ ತುದಿ ಏರಿ ಸುತ್ತಲೂ ಕಣ್ಣು ಹಾಯಿಸಿದಾಗ ಆಗುವ ಮಜವೇ ಬೇರೆ. ಅಷ್ಟರ ಮಟ್ಟಿ ಅಲ್ಲಿನ ಸೌಂದರ್ಯ ನಮ್ಮನ್ನು ರಿಲಾಕ್ಸ್‌ ಹಂತಕ್ಕೆ ಕೊಂಡೊಯ್ಯಲಿದೆ. ಇದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ, ಭದ್ರಾ ಅರಣ್ಯ ಪ್ರದೇಶದ ಸಫಾರಿ. ಕಲ್ಹತ್ತಗಿರಿ ಜಲಪಾತದ ಸೊಬಗೂ ಬೇಸಿಗೆಗೆ ಖುಷಿ ಕೊಡಲಿವೆ

Karnataka Summer Travel: ಬೇಸಿಗೆ ಬಂತು, ಕರ್ನಾಟಕದ ಕೂಲ್‌ ಸ್ಥಳ ಹುಡುಕುತ್ತೀದ್ದೀರಾ: ಇಲ್ಲಿವೆ 10 ಬೆಸ್ಟ್‌ ಪ್ರವಾಸಿ ತಾಣಗಳು

Sunday, February 2, 2025

ಈ ವೃದ್ಧೆ ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದವರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆರು ದಿನಗಳ ಕಾಲ ಧೂಪ ಹಾಗೂ ಹಣ್ಣು ದವನ ವ್ಯಾಪಾರ ಮಾಡುತ್ತಿದ್ದರು. ಇವರನ್ನು ಜಾತ್ರೆಯ ಕೊನೆಯ ದಿನದಂದು ಮಾತನಾಡಿಸಿದಾಗ 'ಅಷ್ಟೂ ದಿನಗಳು ಉಚಿತ ಪ್ರಸಾದ ಹಾಗೂ ವಸತಿ ವ್ಯವಸ್ಥೆಯನ್ನು ಸುತ್ತೂರು ಮಠದ ವತಿಯಿಂದ ಪಡೆದೆ, ಸುಮಾರು ಒಂದು ಸಾವಿರ ರೂಪಾಯಿಗಳು ಲಾಭವಾಗಿದೆ ಎಂದು ಖುಷಿ ಪಟ್ಟು, ಆ ಕಾರಣಕ್ಕೆ ಪೂಜ್ಯ ಸ್ವಾಮೀಜಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದರು. ಜಾತ್ರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಹಾಗೂ ಆನಂದವನ್ನು ನೀಡುತ್ತದೆ. ಇಳಿವಯಸ್ಸಿನಲ್ಲೂ ವ್ಯಾಪಾರ ಮಾಡಿ ಬದುಕುವ ಇವರ ಮುಖದಲ್ಲಿ ಅವರಿಗಾದ ಸ್ವಲ್ಪ ಲಾಭದಲ್ಲೇ ಸಂತೃಪ್ತಿ, ಸಮಾಧಾನ ಕಂಡಿದ್ದು ಖುಷಿ ಕೊಟ್ಟಿತು.
ಇಂತಹ ಎಷ್ಟೋ ಜೀವಗಳಿಗೆ ಜಾತ್ರೆಯ ಮೂಲಕ ಸಂತಸ ತಂದುಕೊಟ್ಟ ಪರಮಪೂಜ್ಯರಿಗೆ ಅನಂತ ಪ್ರಣಾಮಗಳು

Suttur Jatre 2025: ಮುಗಿಯಿತು ಸುತ್ತೂರು ಜಾತ್ರೆ, ಮರೆಯಲಾಗದ ಭಿನ್ನ ಮುಖಗಳು: ಛಾಯಾ ಕಲಾವಿದ ತ್ರಿಪುರಾಂತಕ ಚಿತ್ರಗಳಲ್ಲಿ ಬದುಕು ಅನಾವರಣ

Sunday, February 2, 2025