afghanistan-cricket-team News, afghanistan-cricket-team News in kannada, afghanistan-cricket-team ಕನ್ನಡದಲ್ಲಿ ಸುದ್ದಿ, afghanistan-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  afghanistan cricket team

Latest afghanistan cricket team Photos

ಟ್ರಿನಿಡಾಡ್​​​ನಲ್ಲಿ ಜೂನ್ 27ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿತ್ತು. ಸೆಮೀಸ್​ನಲ್ಲಿ ಸೋತರೂ ಈ ವರ್ಷದ ಟಿ20 ವಿಶ್ವಕಪ್ ಆಫ್ಘನ್ ಪಾಲಿಗೆ ಐತಿಹಾಸಿಕವಾಗಿದೆ. ಏಕೆಂದರೆ ಆಫ್ಘನ್ ವಿಶ್ವಕಪ್​ನಲ್ಲಿ ಸೆಮಿಫೈನಲ್ ತಲುಪಿದ್ದು ಇದೇ ಮೊದಲು. ಇದಲ್ಲದೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ತಂಡಗಳ ವಿರುದ್ಧ ಗೆಲುವು ಕೂಡ ಸಾಧಿಸಿದೆ.

ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದು ವಿಶ್ವಕಪ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ; ವನಿಂದು ಹಸರಂಗ ದಾಖಲೆ ಉಡೀಸ್

Thursday, June 27, 2024

ಮೊಟ್ಟ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡವನ್ನು ಟಿ20 ವಿಶ್ವಕಪ್​ ಸೆಮಿಫೈನಲ್​ಗೇರಿಸಿದ್ದ ತಮ್ಮ ದೇಶದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಶೀದ್ ಖಾನ್ ಅವರಿಗೆ ಐಸಿಸಿ ಛೀಮಾರಿ ಹಾಕಿದೆ. ಅಲ್ಲದೆ, ದಂಡವನ್ನೂ ವಿಧಿಸಿದೆ. ಆದರೆ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಎದುರು ಸೋತು ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಚೊಚ್ಚಲ ಟ್ರೋಫಿಯ ಕನಸು ಭಗ್ನಗೊಂಡಿತು. ಸೆಮೀಸ್​ಗೂ ಮುನ್ನ ನಡೆದ ಸೂಪರ್​-8 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಶೀದ್ ತೋರಿದ ವರ್ತನೆಗೆ ಐಸಿಸಿ ಬೇಸರ ವ್ಯಕ್ತಪಡಿಸಿದೆ.

Rashid Khan: ಕೋಪದಿಂದ ಬ್ಯಾಟ್ ಎಸೆದು ದುರ್ವತನೆ ತೋರಿದ ರಶೀದ್ ಖಾನ್; ಛೀಮಾರಿ ಹಾಕಿದ ಐಸಿಸಿ

Thursday, June 27, 2024

ಅಫ್ಘಾನಿಸ್ತಾನ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಅಫ್ಘಾನಿಸ್ತಾನ ಐತಿಹಾಸಿಕ ಗೆಲುವಿಗೆ ಅಫ್ಘನ್ ಬೀದಿಗಳಲ್ಲಿ ಸಂಭ್ರಮಾಚರಣೆ; ಆಟಗಾರರ ಕಣ್ಣಂಚಲ್ಲಿ ಖುಷಿಯ ಧಾರೆ -Photo

Tuesday, June 25, 2024

ಭಾರತದಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್‌ ವೇಳೆ ಎಲ್ಲವೂ ಪರಿಪೂರ್ಣವಾಗಿತ್ತು. ಆದರೆ, ವೆಸ್ಟ್‌ ಇಂಡೀಸ್‌ನಲ್ಲಿ ಹಲಾಲ್ ಮಾಂಸ ಒಂದು ಸಮಸ್ಯೆಯಾಗಿದೆ ಎಂದು ಆಟಗಾರರು ಹೇಳಿದ್ದಾರೆ.

ಸಿಗದ ಹಲಾಲ್‌ ಮಾಂಸ; ವೆಸ್ಟ್‌ ಇಂಡೀಸ್‌ನಲ್ಲಿ ಬಾಣಸಿಗರಾಗಿ ಬದಲಾದ ಅಫ್ಘಾನಿಸ್ತಾನ ಆಟಗಾರರು!

Saturday, June 22, 2024

ಅಫ್ಘಾನಿಸ್ತಾನ 10 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 66 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂದೆ ಗೆಲುವಿಗೆ 10 ಓವರ್‌ಗಳಲ್ಲಿ 116 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ನೈಬ್ (17) ಮತ್ತು ಒಮರ್ಜೈ (26) ರನ್‌ ಗಳಿಸಿದರು.

ಭಾರತ ವಿರುದ್ಧ ಅಫ್ಘಾನಿಸ್ತಾನದ ಎಲ್ಲಾ 10 ಬ್ಯಾಟರ್‌ಗಳು ಕ್ಯಾಚ್ ಔಟ್; ಟಿ20 ವಿಶ್ವಕಪ್‌ನಲ್ಲಿ ಎರಡನೇ ನಿದರ್ಶನ

Friday, June 21, 2024

ಹಾಲಿ ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಫಾರೂಕಿ ನಾಲ್ಕು ಸಲ 3 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​​ಗಳನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ಉಮರ್ ಗುಲ್, 2010ರಲ್ಲಿ ಡಿರ್ಕ್ ನ್ಯಾನ್ಸ್, 2012ರಲ್ಲಿ ಲಕ್ಷ್ಮೀಪತಿ ಬಾಲಾಜಿ ಹಾಗೂ 2021ರಲ್ಲಿ ವನಿಂದು ಹಸರಂಗ ತಲಾ 3 ಬಾರಿ ಸಾಧನೆ ಮಾಡಿದ್ದರು. ಇದೀಗ ಫಾರೂಕಿ ಎಲ್ಲರನ್ನೂ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾ ವಿರುದ್ಧ 3 ವಿಕೆಟ್ ಕಬಳಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ

Friday, June 21, 2024

ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಗಿನಿಯಾ 19.5 ಓವರ್​​​ಗಳಲ್ಲಿ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆಫ್ಘನ್ 15.1 ಓವರ್​​​ಗಳಲ್ಲಿ ಗೆದ್ದು ಬೀಗಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿತು.

ಪಿಎನ್​ಜಿ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ಅಫ್ಘಾನಿಸ್ತಾನ; ಬಲಿಷ್ಠ ನ್ಯೂಜಿಲೆಂಡ್ ಮೊದಲ ಬಾರಿಗೆ ಲೀಗ್​ನಿಂದಲೇ ಔಟ್

Friday, June 14, 2024

ರಹಮಾನುಲ್ಲಾ ಮತ್ತು ಇಬ್ರಾಹಿಂ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟವಾಡಿದ ದಾಖಲೆ ನಿರ್ಮಿಸಿದ್ದಾರೆ.‌ ಈ ವೇಳೆ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಹಿಂದಿಕ್ಕಿದರು. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ಆರಂಭಿಕರು ಭಾರತದ ವಿರುದ್ಧ ಆರಂಭಿಕರಾಗಿ 152 ರನ್‌ ಪೇರಿಸಿದ್ದರು.

ಉಗಾಂಡ ವಿರುದ್ಧ ಗೆದ್ದು ದಾಖಲೆಗಳ ಉತ್ತುಂಗಕ್ಕೇರಿದ ಅಫ್ಘಾನಿಸ್ತಾನ; ಭಾರತವೂ ಮಾಡಿಲ್ಲ ಇಷ್ಟೊಂದು ರೆಕಾರ್ಡ್

Tuesday, June 4, 2024

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 15ರಂದು ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ರಶೀದ್ ಖಾನ್ 14 ವರ್ಷಗಳ ಹಳೆಯ ದಾಖಲೆ ಮುರಿದರು. ಅವರು 4 ಓವರ್‌ ಬೌಲಿಂಗ್‌ ಮಾಡಿದ ಅವರು 19 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಪಡೆದರು. ಟಿ20 ಯಲ್ಲಿ ಅಫ್ಘಾನಿಸ್ತಾನ ನಾಯಕನ ಅತ್ಯುತ್ತಮ ಅಂಕಿ-ಅಂಶವಾಗಿದೆ.

ಟಿ20 ಕ್ರಿಕೆಟ್‌ನಲ್ಲಿ 14 ವರ್ಷ ಹಳೆಯ ದಾಖಲೆ ಮುರಿದ ರಶೀದ್ ಖಾನ್; ಅಫ್ಘಾನಿಸ್ತಾನ ನಾಯಕನಾಗಿ ವಿಶೇಷ ಮೈಲಿಗಲ್ಲು

Sunday, March 17, 2024

ರೋಹಿತ್ ಇದೇ ವೇಳೆ ಕೊಹ್ಲಿಯ ಮತ್ತೊಂದು ದಾಖಲೆ ಮುರಿದಿದ್ದಾರೆ. ಕೊಹ್ಲಿ 50 ಟಿ20 ಪಂದ್ಯಗಳಲ್ಲಿ ನಾಯಕನಾಗಿ 1570 ರನ್‌ ಗಳಿಸಿದ್ದಾರೆ. ಬುಧವಾರದ ಇನ್ನಿಂಗ್ಸ್ ನಂತರ, ಹಿಟ್‌ಮ್ಯಾನ್‌ ನಾಯಕನಾಗಿ 54 ಪಂದ್ಯಗಳಲ್ಲಿ 1648 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 72 ಪಂದ್ಯಗಳಲ್ಲಿ ನಾಯಕನಾಗಿ 1112 ರನ್ ಗಳಿಸಿದ್ದಾರೆ.

36 ವರ್ಷ 272 ದಿನ; ಸೆಂಚುರಿ ಬಾರಿಸಿ ಕೊಹ್ಲಿ ದಾಖಲೆ ಮುರಿದ ರೋಹಿತ್; ಈ ಸಾಧನೆ ಮಾಡಿದ ಹಿರಿಯ ಕ್ರಿಕೆಟಗ

Thursday, January 18, 2024

ಫರೀದ್ ಅಹ್ಮದ್ ಕೊಹ್ಲಿ ಮಾತ್ರವಲ್ಲ, ಭಾರತ ಕಳೆದುಕೊಂಡ 4 ವಿಕೆಟ್‌ಗಳಲ್ಲಿ 3 ವಿಕೆಟ್‌ ಪಡೆದರು. ಕೊಹ್ಲಿ ಹೊರತಾಗಿ ಯಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್​​​ರನ್ನು ಔಟ್ ಮಾಡಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ 22 ರನ್‌ಗಳಿಗೆ 4 ವಿಕೆಟ್‌ಗೆ 212 ರನ್ ಗಳಿಸಿತು.

Virat Kohli: ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿಯನ್ನು ಗೋಲ್ಡನ್​ ಡಕ್​ಗೆ ಔಟ್ ಮಾಡಿದ ಮೊದಲ ಬೌಲರ್ ಈತ

Thursday, January 18, 2024

ಎರಡನೇ ಸೂಪರ್ ಓವರ್‌ನಲ್ಲಿ ಅಫ್ಘನ್‌ ಗಳಿಸಿದ್ದು ಕೇವಲ ಒಂದು ರನ್  ಮಾತ್ರ. ಅಷ್ಟರಲ್ಲೇ ಎರಡು ವಿಕೆಟ್‌ ಕಳೆದುಕೊಂಡು ತಂಡ ಸೋಲೊಪ್ಪಿತು. ಅಫ್ಘಾನಿಸ್ತಾನವು ಮೊಹಮ್ಮದ್ ನಬಿ ಮತ್ತು ಗುರ್ಬಾಜ್ ಇಬ್ಬರನ್ನೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್‌ ಔಟ್‌ ಮಾಡಿ ಪಂದ್ಯದ ಹೀರೋ ಆಗಿ ಮಿಂಚಿದರು.

IND vs AFG 3rd T20: ಕೇವಲ 1 ರನ್ ಬಿಟ್ಟುಕೊಟ್ಟು ಪಂದ್ಯದ ಹೀರೋ ಆದ ರವಿ ಬಿಷ್ಣೋಯ್; ಶಿವಂ ದುಬೆ ಸರಣಿ ಶ್ರೇಷ್ಠ

Thursday, January 18, 2024

ಅಫ್ಘನ್ ವಿರುದ್ಧದ 2ನೇ ಟಿ20ಯಲ್ಲಿ ಯಶಸ್ವಿ ಜೈಸ್ವಾಲ್, 200ರ ಸ್ಟ್ರೈಕ್​ರೇಟ್​ನಲ್ಲಿ ಅರ್ಧಶತಕ ಸಿಡಿಸಿದ ಬಳಿಕ ರೋಹಿತ್ ಶರ್ಮಾ ಅವರ ಕ್ಲಬ್ ಸೇರಿದ್ದಾರೆ. ಇಬ್ಬರೂ ತಲಾ 3 ಬಾರಿ 200+ ಸ್ಟ್ರೈಕ್​ರೇಟ್​ನಲ್ಲಿ ಫಿಫ್ಟಿ ಚಚ್ಚಿದ್ದಾರೆ.

ಜೈಸ್ವಾಲ್ ಹೊಸ ಸೇರ್ಪಡೆ; 200ರ ಸ್ಟ್ರೈಕ್‌ರೇಟ್‌​ನಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯರಿವರು

Wednesday, January 17, 2024

ಪಂದ್ಯದಲ್ಲಿ ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಗುಲ್ಬದಿನ್ ನೈಬ್ ವಿಕೆಟ್‌ ಪಡೆದ ಅಕ್ಷರ್ ವಿಶೇಷ ಸಾಧನೆ ಮಾಡಿದರು. ಅದಕ್ಕೂ ಮುನ್ನ ಅಫ್ಘಾನ್ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.

ಜಡೇಜಾ ಬಳಿಕ ಅಪರೂಪದ ದಾಖಲೆ ಮಾಡಿದ ಅಕ್ಷರ್ ಪಟೇಲ್; ಟಿ20 ವಿಶ್ವಕಪ್‌ ಸ್ಥಾನಕ್ಕೆ ಭಾರಿ ಪೈಪೋಟಿ

Tuesday, January 16, 2024

ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್.

ಕೊಹ್ಲಿ ಅಲಭ್ಯ-ಸಂಜುಗಿಲ್ಲ ಅವಕಾಶ, 3ನೇ ಸ್ಥಾನಕ್ಕೆ ಗಿಲ್; ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI

Thursday, January 11, 2024

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ನಾಯಕನಾಗಿ ರೋಹಿತ್​ ಶರ್ಮಾ ಸಹ ಐತಿಹಾಸಿಕ ದಾಖಲೆ ಬರೆದರು. ಆದರೆ ಈ ಪಂದ್ಯದಲ್ಲಿ ಪಿಚ್ ಕಂಡಿಷನ್ ಕುರಿತು ಐಸಿಸಿ ಮತ್ತು ಮ್ಯಾಚ್ ರೆಫ್ರಿಗಳ ದ್ವಂದ್ವ ಮಾನದಂಡಗಳ ಬಗ್ಗೆ ರೋಹಿತ್​ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು.

Rohit Sharma: ನಿಷೇಧದ ಭೀತಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ; ಕಾರಣ ಹೀಗಿದೆ

Monday, January 8, 2024

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಉದಯ್ ಸಹರನ್ ನೇತೃತ್ವದ ಭಾರತ ತಂಡವು, ಅಫ್ಘಾನಿಸ್ತಾನವನ್ನು 173 ರನ್‌ಗಳಿಗೆ ನಿರ್ಬಂಧಿಸಿತು. ಸುಲಭ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಭಾರತ, ಕೇವಲ 37.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿತು.

ಅಂಡರ್‌ 19 ಏಷ್ಯಾಕಪ್‌; ಅರ್ಶಿನ್ ಕುಲಕರ್ಣಿ ಆಲ್‌ರೌಂಡ್ ಆಟ, ಅಫ್ಘಾನ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

Friday, December 8, 2023

ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ.

ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

Wednesday, November 15, 2023

ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್​ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್​​ನಲ್ಲಿ ನ್ಯೂಜಿಲೆಂಡ್​​ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್​ ರನ್-ರೇಟ್ +2.570.

ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್​ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ

Monday, November 13, 2023

ವಿಶ್ವಕಪ್​​ ಲೀಗ್‌ನ ತಮ್ಮ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ಆದರೆ, ಆಸೀಸ್ ತನ್ನ ಮುಂದಿನ ಪಂದ್ಯದಲ್ಲಿ ಭಾರಿ ಅಂತರದಿಂದ ಗೆದ್ದರೆ 2ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ. ಆಗ ಟೆಂಬಾ ಬವುಮಾ ಪಡೆ ಮೂರನೇ ಸ್ಥಾನಕ್ಕಿಳಿದರೂ ಅಚ್ಚರಿ ಇಲ್ಲ. 9 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಕಲೆ ಹಾಕಿದೆ. ದಕ್ಷಿಣ ಆಫ್ರಿಕಾ ನೆಟ್​ ರನ್-ರೇಟ್ +1.261. ಅಂಕಪಟ್ಟಿಯಲ್ಲಿ 2 ಅಥವಾ 3ನೇ ಸ್ಥಾನದಲ್ಲಿರುವ ಈ ತಂಡಗಳೇ ಸೆಮಿಫೈನಲ್​​ನಲ್ಲಿ ಸೆಣಸಾಟ ನಡೆಸಲಿವೆ.

ಅಫ್ಘನ್ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

Saturday, November 11, 2023