hindu-community News, hindu-community News in kannada, hindu-community ಕನ್ನಡದಲ್ಲಿ ಸುದ್ದಿ, hindu-community Kannada News – HT Kannada

Latest hindu community Photos

ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಇದು ತುಳಸಿ ಮಾತೆ ಮತ್ತು ಶಾಲಿಗ್ರಾಮರ ಮದುವೆ ಎಂದು ಹೇಳಲಾಗಿದೆ. ಆದ್ದರಿಂದ ತುಳಸಿ ವಿವಾಹದಂದು ತುಳಸಿ ಬೃಂದಾವನವನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ. ಕಬ್ಬು, ಬಾಳೆಗಿಡ ಮತ್ತು ಹೂವುಗಳಿಂದ ತುಳಸಿ ಕಟ್ಟೆಯನ್ನು ಶೃಂಗಾರ ಮಾಡುತ್ತಾರೆ. ತುಳಸಿ ಬೃಂದಾವನಕ್ಕೆ ದೀಪಾಲಂಕಾರವನ್ನು ಮಾಡಲಾಗುತ್ತದೆ, ನಾಲ್ಕು ಬದಿಗಳಲ್ಲಿ ಹಣತೆಯನ್ನಿಡುತ್ತಾರೆ. ತುಳಸಿ ಕಟ್ಟೆಯ ಮುಂದೆ ಚೆಂದದ ರಂಗೋಲಿ ಬರೆಯಲಾಗುತ್ತದೆ. ರಂಗೋಲಿ ಮಂಗಳಕರವಾದದ್ದು. ಹಾಗಾಗಿ ಹಬ್ಬ, ಶುಭಕಾರ್ಯಗಳಲ್ಲಿ ರಂಗೋಲಿ ಹಾಕುತ್ತಾರೆ.

Tulasi Vivah 2024: ತುಳಸಿ ಬೃಂದಾವನ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಬೇಕಾ? ಇಲ್ಲಿವೆ ಆಕರ್ಷಕ ರಂಗೋಲಿ ಐಡಿಯಾಗಳು

Tuesday, November 12, 2024

ಮುಂಬಯಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ದೇವಿಯ ಪ್ರತಿಮೆಯನ್ನು ಮೆರವಣಿಗೆ ಮೂಲಕ ಪಂಡಾಲ್‌ಗೆ ಕರೆದೊಯ್ಯುತ್ತಿದ್ದ ದೃಶ್ಯ.

ನವರಾತ್ರಿ ಉತ್ಸವ, ದುರ್ಗಾ ಪೂಜೆಗೆ ಸಜ್ಜಾಗುತ್ತಿದೆ ಮುಂಬಯಿ, ದುರ್ಗಾ ಪಂಡಾಲ್‌ಗೆ ದೇವಿಯರ ಮೆರವಣಿಗೆ- ಚಿತ್ರನೋಟ

Monday, September 30, 2024

ನವರಾತ್ರಿಯ ಸಮಯದಲ್ಲಿ, ಜಗದಂಬೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಮಹಾ ಅಷ್ಟಮಿ ಮತ್ತು ಮಹಾನವಮಿ ವಿಶೇಷ ಮಹತ್ವ. ಹಿಂದೂ ಆಚರಣೆಗಳ ಪ್ರಕಾರ, ಮಹಾನವಮಿಯೊಂದಿಗೆ ಕೊನೆಗೊಳ್ಳುವ ನವರಾತ್ರಿಯ ಒಂಬತ್ತನೇ ದಿನದಂದು ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ನವಮಿ ತಿಥಿಯಂದು ಕನ್ಯಾ ಪೂಜೆ ಮಾಡುವುದು ಕೂಡ ವಾಡಿಕೆ.

ನವರಾತ್ರಿಯ 9ನೇ ದಿನ ಪೂಜಿಸುವ ಈ ದೇವಿಯನ್ನು ಪರಶಿವನೂ ಆರಾಧಿಸಿದ್ದ, ಸಿದ್ಧಿದಾತ್ರಿ ಶಿವನಿಗೊಲಿದು ಏನಾಯಿತು

Saturday, September 28, 2024

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಗಿಂತ ಭಿನ್ನವಾಗಿ ಮಹಾಗೌರಿ ದೇವಿಯು ಶಾಂತ ಸ್ವಭಾವದಳು. ಭಕ್ತರಿಗೆ ಅಭಯದಾಯಿನಿಯಾಗಿ ಶಾಂತದೇವಿಯಾಗಿ ಕಾಣಿಸಿಕೊಂಡು ಪೂಜಿಸಲ್ಪಡುತ್ತಿದ್ದಾಳೆ.

ಪಾರ್ವತಿ ದೇವಿ ಮಹಾಗೌರಿಯಾಗಲು ಮಿಂದೆದ್ದ ಪುಣ್ಯನದಿ ಬಗ್ಗೆ ತಿಳ್ಕೊಂಡಿದ್ದೀರಾ... ನವರಾತ್ರಿ 8ನೇ ದಿನ ಪೂಜೆಗೆ ಮೊದಲು ತಿಳ್ಕೊಳ್ಳಿ..

Saturday, September 28, 2024

ದುರ್ಗಾಸಪ್ತ ಶತಿಯಲ್ಲಿ ಕಾಳರಾತ್ರಿಯ ಉಲ್ಲೇಖವಿದೆ. ಅದೇ ರೀತಿ ಮಾರ್ಕಂಡೇಯ ಪುರಾಣದ 81ರಿಂದ 93ನೇ ಅಧ್ಯಾಯ ನಡುವೆ ಕೂಡ ಕಾಳರಾತ್ರಿ ದೇವಿಯನ್ನು ಉಲ್ಲೇಖಿಸಲಾಗಿದೆ. ಕಾಳರಾತ್ರಿ ದೇವಿಯನ್ನು ಕಾಳಿ, ಮಹಾಕಾಳಿ, ಭದ್ರಕಾಳಿ, ಭೈರವಿ, ಮೃತ್ಯು-ರುದ್ರಾಣಿ, ಚಾಮುಂಡಾ, ಚಂಡಿ, ದುರ್ಗಾ, ರೌದ್ರಿ ಮತ್ತು ಧೂಮ್ರವರ್ಣ ಎಂಬ ಮಾತೃದೇವತೆಯ ಅನೇಕ ವಿನಾಶಕಾರಿ ರೂಪಗಳಲ್ಲಿ ವ್ಯಾಖ್ಯಾನಿಸಿ ಚಿತ್ರಿಸಲಾಗಿದೆ.

ಪಾರ್ವತಿ ದೇವಿಯ ರೌದ್ರಾವತಾರಕ್ಕೆ ಏಳನೇ ದಿನ ನವರಾತ್ರಿ ಪೂಜೆ, ಕತ್ತೆಯ ಮೇಲೇರಿ ಬರುವ ಕಾಳರಾತ್ರಿ ದೇವಿಯ ದಂತಕಥೆಗಳು ಅನೇಕ

Saturday, September 28, 2024

ನವರಾತ್ರಿಯ 6ನೇ ಕಾತ್ಯಾಯನಿ ದೇವಿಯ ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಯೋಧ ಅವತಾರ ಇದಾಗಿದ್ದು,ಸಿಂಹದ ಮೇಲೆ ಸವಾರಿ ಮಾಡುವ ಮಹಿಷಾಸುರಮರ್ದಿನಿಯಾಗಿ ಆರಾಧಿಸಲ್ಪಡುತ್ತಾಳೆ. ಷಷ್ಠಿಯಂದು ಕಮಲದ ಹೂವು ಮತ್ತು ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹಿಡಿದಿರುವ ಈ ದೇವಿಯನ್ನು ಪೂಜಿಸಲಾಗುತ್ತದೆ.

ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು

Saturday, September 28, 2024

ಸ್ಕಂದ ಎಂಬುದು ಭಗವಾನ್ ಕಾರ್ತಿಕೇಯನ (ಪಾರ್ವತಿ ದೇವಿಯ ಮಗ) ಮತ್ತೊಂದು ಹೆಸರು. ಆದ್ದರಿಂದ ಸ್ಕಂದಮಾತಾ ಎಂದರೆ ಕಾರ್ತಿಕೇಯನ ತಾಯಿ ಎಂದರ್ಥ. ಇದು ತಾಯಿ ಪಾರ್ವತಿಯ ಮತ್ತೊಂದು ರೂಪ.

ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ, ಫಲವಂತಿಕೆಗಾಗಿ ಆರಾಧಿಸಲ್ಪಡುವ ಈ ದೇವಿಯ ವಿಶೇಷಗಳಿವು

Saturday, September 28, 2024

ನವರಾತ್ರಿ ಉತ್ಸವದ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯ ಆರಾಧನೆಯು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.

ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ

Saturday, September 28, 2024

ತಾಯಿ ದುರ್ಗೆಯ ಶಾಂತ ಮತ್ತು ಪ್ರಯೋಜನಕಾರಿ ರೂಪ. ಆಕೆಯ ಹಣೆಯ ಮೇಲೆ ಗಂಟೆ ಮತ್ತು ಅರ್ಧಚಂದ್ರಾಕಾರಾ ಇರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ದೇವಿಯ ಶರೀರವು ಚಿನ್ನದಂತೆ ಪ್ರಕಾಶಮಾನವಾಗಿದ್ದು, ಸಿಂಹದ ಮೇಲೆ ಸವಾರಿ ಮಾಡುತ್ತಾಳೆ.

ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್‌ ಮಾಡಿ

Friday, September 27, 2024

ನವರಾತ್ರಿಯ ಎರಡನೇ ದಿನವು ತಾಯಿ ದುರ್ಗೆಯ ಎರಡನೇ ರೂಪ ಬ್ರಹ್ಮಚಾರಿಣಿ ದೇವಿಯ ಆರಾಧನೆಯ ದಿನವಾಗಿದೆ. ನವರಾತ್ರಿಯ ಎರಡನೇ ದಿನದಂದು ಪೂಜಿಸಲ್ಪಡುವ ಬ್ರಹ್ಮಚಾರಿಣಿ ದೇವಿಯ ಬಗ್ಗೆ ಮತ್ತು ಅವಳಿಗೆ ಸಂಬಂಧಿಸಿದ ಪುರಾಣ ಕಥೆಗಳ ಕಿರು ನೋಟ ಇದರಲ್ಲಿದೆ.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮುನ್ನ ಈ ಮಾತೆಯು ತಪಶ್ಚಾರಿಣಿ ಎಂದು ಕರೆಯಿಸಿಕೊಂಡ ಕಥೆ ತಿಳ್ಕೊಳಿ

Friday, September 27, 2024

ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ತಾಯಿಯೇ ಶೈಲಪುತ್ರೀ ದೇವಿ. ಪರ್ವತ ರಾಜನ ಮಗಳಾದ ಕಾರಣ ಶೈಲಾ ಪುತ್ರೀ ಎಂಬ ಹೆಸರು. ಹಿಮಾಲಯದ ರಾಜ ಹಿಮವಂತನ ಮಗಳಾಗಿ ಹುಟ್ಟಿದ ದೇವಿ. ಆಕೆಯನ್ನು ಸತಿ ಭವಾನಿ, ಹೇಮಾವತಿ ಮತ್ತು ಪಾರ್ವತಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತಾಯಿ ಶೈಲಪುತ್ರಿಯನ್ನು ದುರ್ಗಾ ದೇವಿಯ ಮೊದಲ ಮತ್ತು ಪ್ರಮುಖ ರೂಪವೆಂದು ಪೂಜಿಸಲಾಗುತ್ತದೆ, ಶಕ್ತಿ, ಪರಿಶುದ್ಧತೆ ಮತ್ತು ದೈವತ್ವವನ್ನು ಒಳಗೊಂಡಿರುವ ತಾಯಿ ಈಕೆ.

ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ತಿಳಿಯಿರಿ

Friday, September 27, 2024

ನವರಾತ್ರಿಯಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರೀ, ಮಹಾಗೌರಿ, ಸಿದ್ಧಿಧಾತ್ರೀ ಎಂಬ 9 ರೂಪಗಳಲ್ಲಿ ಆರಾಧಿಸಲಾಗುತ್ತದೆ. ಎಲ್ಲರಿಗೂ ಪೂಜೆ ಮಾಡಿಸುವ ಶಕ್ತಿ ಇರಲಾರದು. ದೇವಿಯನ್ನು ಒಲುಮೆ ಪಡೆಯಲು ಮನದುಂಬಿ ಪ್ರಾರ್ಥನೆ ಮಾಡಿದರೆ ಸಾಕು. ಆಯಾ ಸ್ವರೂಪದ ದೇವಿಯ ಪ್ರಾರ್ಥನಾ ಮಂತ್ರವನ್ನು ಶಕ್ತ್ಯಾನುಸಾರ ಪಠಿಸಿದರೆ ಸಾಕು. ಆ ಮಂತ್ರಗಳ ವಿವರ ಈ ಫೋಟೋ ಗ್ಯಾಲರಿಯಲ್ಲಿದೆ.

ಬದುಕಿನಲ್ಲಿ ಒಳಿತು ಕೋರಿ ಈ ನವರಾತ್ರಿ ವೇಳೆ ದೇವಿಯನ್ನು ಆರಾಧಿಸುತ್ತೀರಾದರೆ, ನೆರವಾದೀತು ನವದುರ್ಗೆಯರ ಈ 9 ಪ್ರಾರ್ಥನಾ ಮಂತ್ರ

Friday, September 27, 2024

ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿತು. ಮನೆ ಮಂದಿಯೆಲ್ಲಾ ಹಬ್ಬದ ತಯಾರಿಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಹಬ್ಬಕ್ಕೆ ಚಕ್ಕುಲಿ, ಕೋಡಬಳೆ, ಲಾಡುಗಳ ತಯಾರಿಯ ಜೊತೆಗೆ ಗೌರಿ ಗಣಪನನ್ನು ಬರಮಾಡಿಕೊಳ್ಳಲು ಮಂಟಪ, ಹೂವು, ರಂಗೋಲಿಗಳ ಭರ್ಜರಿ ತಯಾರಿ ನಡೆಯುತ್ತಿದೆ. ಗೌರಿ–ಗಣೇಶನ ಅಲಂಕಾರದಲ್ಲಿ ಗೆಜ್ಜೆವಸ್ತ್ರವನ್ನು ಸಹ ಕಾಣಬಹುದು. ದೇವರಿಗೆ ಅರ್ಪಿಸುವ ವಸ್ತುಗಳಲ್ಲಿ ಗೆಜ್ಜೆವಸ್ತ್ರವೂ ಒಂದು. ದೇವರಿಗೆ ಗೆಜ್ಜೆವಸ್ತ್ರ ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಗೌರಿ-ಗಣೇಶ ಹಬ್ಬಕ್ಕೆ ಗೆಜ್ಜೆವಸ್ತ್ರ ತಯಾರಿಸಬೇಕೆಂದಿದ್ದೀರಾ? ಆಕರ್ಷಕ ಹತ್ತಿಯ ಹಾರ ಮಾಡುವ ಐಡಿಯಾಗಳು ಇಲ್ಲಿವೆ

Friday, September 6, 2024

ಹಿಂದೂಗಳು ಅಮವಾಸ್ಯೆಗೆ ಧಾರ್ಮಿಕ ಮಹತ್ವವನ್ನು ನೀಡಿದ್ದಾರೆ. ಈ ದಿನದಂದು ಜನರು ಪೂಜೆ, ವ್ರತಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಈ ಬಾರಿ ಶ್ರಾವಣ ಮಾಸದ ಅಮಾವಾಸ್ಯೆಯು ಸೋಮವಾರದಂದು ಬರುವುದರಿಂದ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ.

Somvati Amavasya 2024: ಸೋಮಾವತಿ ಅಮಾವಾಸ್ಯೆ ಯಾವಾಗ? ಈ ರೀತಿ ಮಾಡುವುದರಿಂದ ಲಭಿಸುತ್ತದೆ ಪೂರ್ವಜರ ಆಶೀರ್ವಾದ

Wednesday, August 28, 2024

Hanuman Favourite Rashi; ಕೆಲವರು ರಾಶಿಯವರು ಆಂಜನೇಯನ ಒಲುಮೆ ಪಡೆದವರಾಗಿರುತ್ತಾರೆ. ಸಂಕಷ್ಟ ಎದುರಾದಾಗ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ಹಿರಿಯರು ಹೇಳುವುದನ್ನು ಪದೇಪದೆ ಕೇಳುತ್ತಿರುತ್ತೇವಲ್ಲ. ಹಾಗೆ, ಅಂತಹ ಹನುಮಾನ್ ಚಾಲೀಸಾ ಪಠಣದಿಂದಲೇ ಅಂಥವರು ಹನುಮಂತನ ಸಂಪ್ರೀತಗೊಳಿಸಬಲ್ಲರು, ಹನುಮಂತನ ಪ್ರಿಯ ರಾಶಿಚಕ್ರದವರು. ಅಂತಹ ರಾಶಿಚಕ್ರಗಳು ಯಾವುವು ಎಂದು ಗಮನಿಸೋಣ.

ಇವರು ಆಂಜನೇಯನ ಒಲುಮೆ ಪಡೆದವರು, ಹನುಮಾನ್ ಚಾಲೀಸಾ ಪಠಣದಿಂದ ಹನುಮಂತನ ಸಂಪ್ರೀತಗೊಳಿಸಬಲ್ಲರು, ನೀವೂ ಈ ರಾಶಿಯವರಾ ಮತ್ತೆ!

Tuesday, August 27, 2024

ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ಕಾರ್ಯಕ್ರಮ. ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದು ಆಷಾಢ ಮಾಸದಲ್ಲಿ ನಡೆಯುವ ಅತ್ಯಂತ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿ ಇದು ಜುಲೈ 7 ರಿಂದ ಶುರುವಾಗುತ್ತಿದೆ.

ಪುರಿ ಜಗನ್ನಾಥ ರಥೋತ್ಸವ 2024 ಜುಲೈ 7 ರಿಂದ ಶುರು, ವಾರ್ಷಿಕ ರಥೋತ್ಸವದ ಮುಹೂರ್ತ, ವಿಶೇಷ ಮತ್ತು ಇತರೆ ವಿವರ- ಫೋಟೋಸ್

Wednesday, July 3, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ರಥ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯನ್ನು ಸೂರ್ಯ ಜಯಂತಿ ಮತ್ತು ಅಚಲ ಸಪ್ತಮಿ ಎಂದೂ ಕರೆಯುತ್ತಾರೆ. ರಥ ಸಪ್ತಮಿಯಂದು ಸೂರ್ಯನಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಥ ಸಪ್ತಮಿಯಂದು ಸೂರ್ಯನನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಂಪತ್ತು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Ratha Saptami 2024: ರಥ ಸಪ್ತಮಿ ಯಾವಾಗ? ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಕ್ರಮಗಳ ಕುರಿತ ವಿವರ ಇಲ್ಲಿದೆ

Tuesday, February 13, 2024

ಮೌನಿ ಅಮಾವಾಸ್ಯೆ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಪವಿತ್ರ ನದಿಯಲ್ಲಿ ಮಿಂದು, ಉಪವಾಸ  ಮಾಡುವುದು ಬಹಳ ಒಳ್ಳೆಯದು. ಮೌನಿ ಅಮಾವಾಸ್ಯೆಯ ದಿನ ಮೌನವ್ರತವನ್ನು ಆಚರಿಸುವ ಮೂಲಕ ಉಪವಾಸವನ್ನು ಆಚರಿಸುತ್ತಾರೆ. 2024 ರಲ್ಲಿ, ಮಾಘ ಮಾಸ, ಫೆಬ್ರವರಿ 9 ರಂದು ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.

Mauni Amavasya 2024: ಮೌನಿ ಅಮಾವಾಸ್ಯೆ ಯಾವಾಗ, ಆಚರಣೆ ಹೇಗೆ; ಈ ದಿನ ದಾನ ಮಾಡುವುದು ಏಕೆ ಶ್ರೇಷ್ಠ?

Friday, February 2, 2024

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಗ್ರಹಚಾರ ಪೀಡಕ ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವನ ಕ್ರಿಯೆಗಳ ಪ್ರಕಾರ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಶನಿಯಿಂದ ಶುಭ ದೃಷ್ಠಿ ಪಡೆದ ವ್ಯಕ್ತಿಯು ಜೀವನದಲ್ಲಿ ತುಂಬಾ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ.

Shani Dev Blessings: ಈ ವರ್ಷ ಮೂರು ಬಾರಿ ಶನಿದೇವನ ಸ್ಥಾನಪಲ್ಲಟ; 3 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Tuesday, January 23, 2024