Latest karnataka news Photos

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ಪುತ್ತೂರಿನ ಹಲಸು ಮೇಳದಲ್ಲಿ ವಿವಿಧ ತಳಿಯ ಹನಸಿನ ಹಣ್ಣುಗಳಲ್ಲದೆ, ಪ್ರಸಿದ್ಧ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಿದ ತಳಿಗಳು, ಇತರ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.

ಪುತ್ತೂರಿನಲ್ಲಿ ಹಲಸು ಮೇಳ; ವೈವಿಧ್ಯಮಯ ಸ್ಟಾಲ್‌ಗಳು, ವಿವಿಧ ಬಗೆಯ ಹಣ್ಣುಗಳು, ಫುಡ್ ಕೋರ್ಟ್; ಫೊಟೋಸ್

Saturday, May 25, 2024

ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ಪ್ರಸ್ತುತ ಕೇರಳ ತೀರದಿಂದ ಮರಾಠವಾಡದ ಕಡೆಗೆ ಚಲಿಸುತ್ತಿದ್ದು, ಇದರ ಪರಿಣಾಮ ಮುಂದಿನ ಒಂದು ವಾರದವರೆಗೆ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಅಂದರೆ, ಕರ್ನಾಟಕ ಹವಾಮಾನ ವರದಿಯಂತೆ ಮೇ 18ರ ತನಕ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರ್ನಾಟಕ ಹವಾಮಾನ; ಮೇ 18ರ ತನಕ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ

Thursday, May 16, 2024

ರೈಲು ನಿಲ್ದಾಣ ಪ್ರವೇಶಿಸಿದ ಕೂಡಲೇ ಅಲ್ಲಿ ಟಿಕೆಟ್ ಕೌಂಟರ್‌ಗಳ ಬದಿಗೆ ಎಟಿಎಂ ರೀತಿಯ ಕೆಲವು ಯಂತ್ರಗಳನ್ನು ಇರಿಸಿರುವುದನ್ನು ನೋಡಿಯೇ ಇರುತ್ತೀರಿ. ಇವುಗಳನ್ನು ಎಟಿವಿಎಂ ಅಥವಾ ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮಷಿನ್ ಎನ್ನುತ್ತಾರೆ. ಸಾಮಾನ್ಯ ದರ್ಜೆ ಪ್ರಯಾಣದ ಟಿಕೆಟ್ ಅನ್ನು ಈ ಮಷಿನ್ ಮೂಲಕ ಖರೀದಿಸಬಹುದು. ಕೌಂಟರ್‌ನಲ್ಲಿ ಸರದಿ ಸಾಲು ನಿಂತು ಟೆಕೆಟ್ ಪಡೆಯುವ ತೊಂದರೆಯನ್ನು ತಪ್ಪಿಸಬಹುದು. 5 ಸರಳ ಹಂತಗಳ ವಿಧಾನ ಅನುಸರಿಸಿದರೆ ಸಾಕು. ಅವುಗಳನ್ನು ತಿಳಿಯೋಣ.

ರೈಲ್ವೆ ನಿಲ್ದಾಣಗಳಲ್ಲಿರುವ ಭಾರತೀಯ ರೈಲ್ವೆಯ ಎಟಿವಿಎಂನಲ್ಲಿ ಟಿಕೆಟ್ ಖರೀದಿ ಹೇಗೆ; ಇಲ್ಲಿದೆ ಐದು ಹಂತಗಳ ಸುಲಭ ವಿಧಾನ

Sunday, May 12, 2024

ಅಕ್ಷಯ ತೃತೀಯದ ಮಂಗಳಕರ ದಿನವನ್ನು ಸಂತೋಷ ಮತ್ತು ಉತ್ಸಾಹದಿಂದ ನೀವೆಲ್ಲ ಆಚರಿಸುವಂತಾಗಲಿ. ಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ಕೊಟ್ಟು ಅನುಗ್ರಹಿಸಲಿ.

Akshaya Tritiya 2024: ಇಂದು ಚಿನ್ನ, ಬೆಳ್ಳಿ, ಸಂಪತ್ತಿನ ಹಬ್ಬ, ಸಮೃದ್ಧಿಯ ಉತ್ಸವ, ಅತ್ಯುತ್ತಮ ಅಕ್ಷಯ ತೃತೀಯ ಶುಭಾಶಯಗಳು ಇಲ್ಲಿವೆ ನೋಡಿ..

Friday, May 10, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಬಡತನ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸ್ಥಿತಿಗತಿ ಕಾರಣಗಳಿಂದ ಸಾಕಷ್ಟು ಜನರು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಆದರೆ, ಇನ್ನೊಂದೆರಡು ವರ್ಷ ಕಷ್ಟಪಟ್ಟು ಓದಿದರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು. ಈಗ ಎಸ್‌ಎಸ್‌ಎಲ್‌ಸಿ ಎನ್ನುವುದು ಕನಿಷ್ಠ ವಿದ್ಯಾರ್ಹತೆ ಎನ್ನುವಂತಾಗಿದೆ. ಎಸ್‌ಎಸ್‌ಎಲ್‌ಸಿ ಮಾತ್ರ ಓದಿದ್ರೆ ಅವಕಾಶಗಳು ಸೀಮಿತವಾಗಿವೆ.  ಪಿಯಸಿ, ಪದವಿ ಅಥವಾ ಉದ್ಯೋಗ ಕ್ಷೇತ್ರ ಬಯಸುವ ಯಾವುದಾದರೂ ಕೋರ್ಸ್‌ಗೆ ಸೇರುವ ಮೂಲಕ ಉತ್ತಮ ಅವಕಾಶ ಪಡೆದುಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದೋ ಯೋಚನೆ ಇಲ್ವಾ? ನಿಮ್ಮ ಜೀವನಕ್ಕೆ ಪಿಯುಸಿ ಏಕೆ ಅಗತ್ಯ ಎಂದು ತಿಳಿಯಿರಿ

Thursday, May 9, 2024

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಪವಾಡ ಪುರುಷ ಮಾದಪ್ಪನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿವಿಧ ವಿಶೇಷ ಪೂಜೆಗಳು ನಡೆದವು. ಬುಧವಾರ (ಮೇ8) ಬೆಳಗ್ಗೆ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದರು.

ತದಿಗೆ ಅಮಾವಾಸ್ಯೆ; ಹನೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಾದಪ್ಪ ಸ್ವಾಮಿಗೆ ವಿಶೇಷ ಪೂಜೆ, ಚಿನ್ನದ ರಥೋತ್ಸವ- ಚಿತ್ರನೋಟ

Thursday, May 9, 2024

ನರೇಗಾ ಕಾರ್ಮಿಕರು ಉತ್ಸಾಹದಿಂದ ಮತದಾನದ ಕರ್ತವ್ಯ ನಿಭಾಯಿಸಿ ನಂತರ ತಮ್ಮ ಎಂದಿನ ಕಾಯಕ ಮುಂದುವರೆಸುವ ಮೂಲಕ ಮಾದರಿಯಾದರು. ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿಮ, ಬಳಬಟ್ಟಿ ಮೊದಲಾದ ಗ್ರಾಮಗಳಲ್ಲಿ ನೊಂದಾಯಿತ ನರೇಗಾ ಕಾರ್ಮಿಕರು ಬೆಳಿಗ್ಗೆಯೇ ಮತದಾನ ಕೇಂದ್ರಕ್ಕೆ ತೆರಳಿ ಸಂಭ್ರಮದಿಂದ ಮತಚಲಾಯಿಸಿದರು. ನಂತರ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ 2ನೇ ಹಂತದ ಮತದಾನ, ಗುಮ್ಮಟ ನಗರಿ ವಿಜಯಪುರದಲ್ಲಿ ಮುಗಿಲು ಮುಟ್ಟಿದ ಮತದಾರರ ಸಂಭ್ರಮ- ಚಿತ್ರನೋಟ

Wednesday, May 8, 2024

ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಭಾನುವಾರ (ಮೇ 5) ರಾತ್ರಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿತ್ತು.

ತುಮಕೂರು: ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗಿತ್ತು ಆ ನಾಗರಹಾವು- ಫೋಟೋ ವರದಿ

Tuesday, May 7, 2024

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 46 ರಷ್ಟಿತ್ತು, ಇದೀಗ ಅದು ಚಾಲ್ತಿಗೆ ಬಂದಿದ್ದು, ಡಿಎ ಶೇಕಡಾ 50 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿಗೆ ತಲುಪಿದೆ. ಮಾರ್ಚ್ ತಿಂಗಳ ವೇತನದ ಜೊತೆಗೆ ಈಗಾಗಲೇ ಹೆಚ್ಚಿಸಲಾಗಿರುವ ತುಟ್ಟಿಭತ್ಯೆಯನ್ನು ಈಗಾಗಲೇ ಸರ್ಕಾರಿ ನೌಕರರು ಸ್ವೀಕರಿಸಿದ್ದಾರೆ. ಸರ್ಕಾರಿ ನೌಕರರು ಜನವರಿ ಮತ್ತು ಫೆಬ್ರವರಿ ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿ ಹೆಚ್ಚಳ, ಡಿಎ ಶೇ 50ಕ್ಕೆ ಏರಿಕೆ

Monday, May 6, 2024

ವಿ ಶ್ರಿನಿವಾಸ್ ಪ್ರಸಾದ್ ಯಾರು?; ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಎಬಿವಿಪಿ ಕಾರ್ಯಕರ್ತರಾಗಿ ಬೆಳೆದ ವಿ ಶ್ರೀನಿವಾಸ ಪ್ರಸಾದ್ ರಾಜಕೀಯವಾಗಿ ಸಂಯುಕ್ತ ಜನತಾದಳ, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ರಾಜಕಾರಣ ಮಾಡಿ ಸುದೀರ್ಘ 5 ದಶಕಗಳ ರಾಜಕಾರಣ ನಡೆಸಿದ್ದನ್ನು ಕಳೆದ ಮಾರ್ಚ್ 17ಕ್ಕೆ ಆಚರಿಸಿಕೊಂಡು ಅದೇ ದಿನ ರಾಜಕೀಯ ನಿವೃತ್ತಿ ಘೋಷಿಸಿದ ಅಪರೂಪದ ರಾಜಕೀಯ ಮುತ್ಸದ್ದಿ ವಿ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ ಎಂ ವೆಂಕಟಯ್ಯ ಮತ್ತು ಡಿವಿ ಪುಟ್ಟಮ್ಮ ಅವರ ಪುತ್ರನಾಗಿ 1947ರ ಜುಲೈ 6 ರಂದು ಜನಿಸಿದರು.

ವಿ ಶ್ರಿನಿವಾಸ್ ಪ್ರಸಾದ್ ಯಾರು?; ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಚಿತ್ರನೋಟ

Monday, April 29, 2024

ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

Saturday, April 27, 2024

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, “ಮತದಾನವು ಸುಗಮವಾಗಿ ನಡೆಯಿತು. ಮತದಾನ ಪ್ರಕ್ರಿಯೆಯು ತುಂಬಾ ಸರಳವಾಗಿತ್ತು. ನಮ್ಮ ಪ್ರಜಾಪ್ರಭುತ್ವವನ್ನು ಮುಂದಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಬಂದು ಮತ ಚಲಾಯಿಸಬೇಕು” ಎಂದು ಒತ್ತಾಯಿಸಿದರು.

ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್ ಮತದಾನ; ಹಕ್ಕು ಚಲಾಯಿಸಿದ ಅನಿಲ್ ಕುಂಬ್ಳೆ

Friday, April 26, 2024

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಮ್ಮ ಮತದಾನದ ಹಕ್ಕು ಚಾಲಾಯಿಸಿದ್ದಾರೆ, ಇಲ್ಲಿನ ಶಾಲೆಯೊಂದರಲ್ಲಿ ತೆರೆದಿದ್ದ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಅವರು, ಎಲ್ಲರೂ ತಪ್ಪದೆ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದರಿ, ತಪ್ಪದೆ ಎಲ್ಲರು ಮತದಾನ ಮಾಡಿ ಎಂದು ಕರೆ ನೀಡಿದರು.

ಲೋಕಸಭಾ ಚುನಾವಣೆ; ತುಮಕೂರು ಕ್ಷೇತ್ರದಲ್ಲಿ ಸಿದ್ಧಗಂಗಾ ಸ್ವಾಮೀಜಿ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಇತರರಿಂದ ಮತದಾನ - ಫೋಟೋಸ್

Friday, April 26, 2024

ಲೋಕಸಭಾ ಚುನಾವಣೆ 2024 ಆರಂಭವಾಗಿದೆ. ನಾಡಿನಾದ್ಯಂತ ಜನರು ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ವಿವಿಧ ಮತಗಟ್ಟೆಗಳಲ್ಲಿ ಸಾರ್ವಜನಿಕರು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿ ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಮತ ಚಲಾಯಿಸಿದ ವಿವಿಧ ನಾಯಕರು ಹಾಗೂ ಅಧಿಕಾರಿಗಳ ಫೋಟೊಸ್‌ ಇಲ್ಲಿದೆ.

ಲೋಕಸಭಾ ಚುನಾವಣೆ: ಕುಟುಂಬದವರೊಂದಿಗೆ ಮತ ಚಲಾಯಿಸಿದ ರಾಜಕೀಯ ನಾಯಕರು, ಅಧಿಕಾರಿಗಳು; ಮತದಾನ ಮಾಡಿ ಸಂಭ್ರಮಿಸಿದ ಪ್ರಮುಖರ ಫೋಟೊಸ್‌

Friday, April 26, 2024

ಮತಗಟ್ಟೆಗೆ ಪ್ರವೇಶಿಸಿ ಬೂತ್ ಚೀಟಿ ಕೊಟ್ಟು, ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಕೈ ಬೆರಳಿಗೆ ಮತದಾನದ ಗುರುತು ಹಾಕಿಸಿಕೊಂಡು ಇವಿಎಂ ಬಳಿ ಹೋದಾಗ ಗಮನಿಸಬೇಕಾದ್ದು ಇಷ್ಟು- ಮೊದಲ ಹಂತದಲ್ಲಿ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿ ಬ್ಯಾಲೆಟ್ ಯೂನಿಟ್ ಅನ್ನು ಚಾಲನೆಗೊಳಿಸುತ್ತಾರೆ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಇಂದು 1ನೇ ಹಂತದ ಮತದಾನ, ಇವಿಎಂ ವಿವಿಪ್ಯಾಟ್ ಬಳಸುವುದು ಹೀಗೆ, 5 ಹಂತಗಳ ವಿವರಣೆಯ ಚಿತ್ರನೋಟ

Friday, April 26, 2024

ಚುನಾವಣೆಗೆ ಹೊರಡುವ ಸಿಬ್ಬಂದಿಗಳಿಗೆ ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ನೀಡಲು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತಿದ್ದರು.

ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಿದ್ದತೆ, ಹೊರಟರು ಸಿಬ್ಬಂದಿ, ತಯಾರಿ ನೋಟ ಹೀಗಿದೆ

Thursday, April 25, 2024

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸೂಟ್‌ಕೇಸ್‌ನಲ್ಲಿ ಮರೆಮಾಚಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ಸಾಗಿಸಿದ್ದನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ (ಏಪ್ರಿಲ್ 22) ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಆ ಸೂಟ್‌ಕೇಸ್ ಹೊಂದಿದ್ದ ಪ್ರಯಾಣಿಕರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

Wednesday, April 24, 2024

ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು.

Photos: ಮಂಗಳೂರು ಬಂದರಿಗೆ ಬಂದ ಐಷಾರಾಮಿ ಹಡಗಿನಲ್ಲಿ ಮತದಾನ ಜಾಗೃತಿ

Friday, April 19, 2024