ಭಾರತದ ಸೇನೆಯು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ಕೈಗೊಂಡ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ ಎಂದು ಹೆಸರಿಟ್ಟಿದೆ. ಈ ಹೆಸರಿನ ಟ್ರೇಡ್ಮಾರ್ಕ್ಗಾಗಿ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ರಿಲಯೆನ್ಸ್ ಇಂಡಸ್ಟ್ರೀಸ್ ಕೂಡ ಸೇರಿತ್ತು. ಇದೀಗ ರಿಲಯೆನ್ಸ್ ತನ್ನ ಅರ್ಜಿ ಹಿಂತೆಗೆದುಕೊಂಡಿದೆ.