temples-in-andhra-pradesh News, temples-in-andhra-pradesh News in kannada, temples-in-andhra-pradesh ಕನ್ನಡದಲ್ಲಿ ಸುದ್ದಿ, temples-in-andhra-pradesh Kannada News – HT Kannada
ಕನ್ನಡ ಸುದ್ದಿ  /  ವಿಷಯ  /  temples in andhra pradesh

Latest temples in andhra pradesh Photos

ತಿರುಮಲ ತಿರುಪತಿ ಬೆಟ್ಟದ ಆಸುಪಾಸಿನಲ್ಲಿ ಮತ್ತೊಮ್ಮೆ ಚಿರತೆ ಕಂಡುಬಂದಿದೆ. ಈ ಬಾರಿ ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿಯೇ ಚಿರತೆ ಕಾಣಸಿಕ್ಕಿರುವುದು ಭಕ್ತರಲ್ಲಿ ಕಳವಳ ಮೂಡಿಸಿದೆ. ಇದರ ಬಗ್ಗೆ ಟಿಟಿಡಿ ಅಧಿಕಾರಿಗಳಿಗೆ ಭಕ್ತರು ಮಾಹಿತಿ ನೀಡಿದ್ದು, ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ಶುರುವಾಗಿದೆ.

ಚಿರತೆ ಇದೆ ಎಚ್ಚರ, ಗುಂಪು ಗುಂಪಾಗಿ ಬನ್ನಿ; ತಿರುಮಲ ಶ್ರೀವಾರಿ ಮೆಟ್ಟು ಮಾರ್ಗದಲ್ಲಿ ಸಾಗುವ ಭಕ್ತರಿಗೆ ಟಿಟಿಸಿ ಸೂಚನೆ

Sunday, September 29, 2024

ತಿರುಪತಿ ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರತಿಷ್ಠಿತ ದೇಗುಲಗಳಲ್ಲಿ ಒಂದು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ಇರುವ ತಿರುಮಲ ಬೆಟ್ಟದ ಮೇಲೆ ಶ್ರೀನಿವಾಸನ ದೇಗುಲವಿದೆ. ಇಲ್ಲಿ ಮಹಾವಿಷ್ಣುವನ್ನು ವೆಂಕಟೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ತಿರುಪತಿ ಬಾಲಾಜಿ ಎಂಬ ಹೆಸರಿನಿಂದ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ವೆಂಕಟೇಶ್ವರನು ತನ್ನ ಪತ್ನಿ ಪದ್ಮಾವತಿಯೊಂದಿಗೆ ತಿರುಮಲದಲ್ಲಿ ನೆಲೆಸಿದ್ದಾನೆ ಎನ್ನುವುದು ಆಸ್ತಿಕರ ನಂಬಿಕೆ.

ದೇಗುಲ ವಿಶೇಷ: ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿರುವ ನಿಗೂಢ ರಹಸ್ಯಗಳು, ಹಲವರಿಗೆ ತಿಳಿದಿರದ ಕುತೂಹಲಕಾರಿ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ

Tuesday, September 24, 2024

ತಿರುಮಲ ಶ್ರೀವಾರಿ ಲಡ್ಡು ಕಲಬೆರಕೆ ವಿವಾದ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಸಂಬಂಧ ಹಿಂದೂ ಸಮುದಾಯಗಳು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಶ್ರೀವಾರಿ ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಲಾಗಿದೆ ಎಂದು ಸಮ್ಮಿಶ್ರ ಸರ್ಕಾರ ಟೀಕಿಸಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ.

ತಿರುಪತಿ ಲಡ್ಡು ಕಲಬೆರಕೆ ವಿವಾದ; 3 ದಿನಗಳ ಮಹಾಶಾಂತಿ ಯಾಗ ನಡೆಸುವ ಮಹತ್ವದ ನಿರ್ಧಾರ ಪ್ರಕಟಿಸಿದ ಟಿಟಿಡಿ

Saturday, September 21, 2024

ಜಗತ್ತಿನ ಅತಿಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಕೇಂದ್ರ. ನಿತ್ಯವೂ ಇಲ್ಲಿ  50,000 ದಿಂದ 1 ಲಕ್ಷದ ಆಸುಪಾಸಿನಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಹೀಗೆ ತಿರುಪತಿಗೆ ಬಂದವರು ತಪ್ಪಿಸಿಕೊಳ್ಳದೇ ನೋಡಬೇಕಾದ ಒಂಬತ್ತು ಪ್ರವಾಸಿ ಆಕರ್ಷಣೆಗಳಿವೆ. ಅವುಗಳ ವಿವರ ಇಲ್ಲಿದೆ ನೋಡಿ.

Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tuesday, June 11, 2024

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ. ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು. ಅದಕ್ಕಾಗಿ ಈ ದೇವಸ್ಥಾನಗಳ ಕಿರು ವಿವರ ಇಲ್ಲಿದೆ.

ತಿರುಪತಿಗೆ ಭೇಟಿ ಕೊಡ್ತಿದ್ದೀರಾ, ಈ 6 ದೇವಸ್ಥಾನಗಳು ಕೂಡ ಕೆಲವೇ ಮೈಲಿ ಅಂತರದಲ್ಲಿವೆ, ಪ್ಲಾನ್ ಮಾಡಿಕೊಂಡು ಹೋದರೆ ದರ್ಶನ ಮಾಡ್ಕೊಂಡು ಬರಬಹುದು

Tuesday, June 11, 2024

ಆತ್ಮವು ಸಾರಥಿ, ದೇಹವು ರಥ, ಬುದ್ಧಿಯು ಚಾಲಕ, ಮನಸ್ಸು ಲಗಾಮು, ಇಂದ್ರಿಯಗಳು ಕುದುರೆಗಳು ಮತ್ತು ವಸ್ತುಗಳು ಬೀದಿಗಳಾಗಿವೆ. ಹೀಗೆ ದೇಹವನ್ನು ರಥದೊಂದಿಗೆ ಹೋಲಿಸಿ ನೋಡಿದಾಗ ಸ್ಥೂಲ ಶರೀರವೇ ಬೇರೆ, ಸೂಕ್ಷ್ಮ ಶರೀರವೇ ಬೇರೆ, ಆತ್ಮವೇ ಬೇರೆ. ರಥೋತ್ಸವದಲ್ಲಿ ತತ್ತ್ವಜ್ಞಾನವಿದೆ ಎಂದು ವಿದ್ವಾಂಸರು ನಂಬುತ್ತಾರೆ.

ತಿರುಪತಿಯಲ್ಲಿ ಜರುಗಿದ ಗೋವಿಂದರಾಜಸ್ವಾಮಿ ವಾರ್ಷಿಕ ಬ್ರಹ್ಮೋತ್ಸವ; ರಥೋತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು

Thursday, May 23, 2024

ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ 'ವಸಂತೋತ್ಸವ' ಎಂದು ಕರೆಯಲಾಗುತ್ತದೆ. ಸೂರ್ಯನ ಶಾಖದಿಂದ ಭಗವಂತನನ್ನು ನಿವಾರಿಸುವ ಹಬ್ಬವಾದ್ದರಿಂದ ಇದನ್ನು ಉಪಸಮಾನೋತ್ಸವವೆಂದೂ ಕರೆಯುತ್ತಾರೆ.

Annual Vasanthotsavalu 2024: ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ ವಸಂತೋತ್ಸವ; ಕಾರ್ಯಕ್ರಮ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Monday, April 22, 2024

ಆಂಧ್ರಪ್ರದೇಶದಲ್ಲಿರುವ ಪಂಚರಾಮ ಶಿವದೇಗುಲಗಳು ಶಿವನಿಗೆ ಅರ್ಪಿತವಾಗಿರುವ ಅತ್ಯಂತ ಹಳೆಯ ದೇಗುಲಗಳಾಗಿವೆ. ಆಂಧ್ರದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಒಂದೇ ಲಿಂಗದಿಂದ 5 ಶಿವಲಿಂಗಗಳು ಹುಟ್ಟಿಕೊಂಡವು ಎಂದು ದಂತಕಥೆಗಳು ಹೇಳುತ್ತವೆ. ರಾಕ್ಷಸ ತಾರಕಾಸುರ ಶಿವನ ಮೇಲೆ ದಾಳಿ ಮಾಡಿದಾಗ ಲಿಂಗವು 5 ತುಂಡುಗಳಾಗಿ ಒಡೆಯಿತು ಎನ್ನಲಾಗುತ್ತದೆ. ಈ 5 ತುಂಡುಗಳು ಬಿದ್ದ ಜಾಗವನ್ನು ಪಂಚರಾಮ ಶಿವಕ್ಷೇತ್ರಗಳು ಎಂದು ಕರೆಯಲಾಯಿತು. ಈ ಪಂಚಲಿಂಗ ದೇಗುಲಗಳು ಯಾವುವು, ಅವು ಎಲ್ಲಿವೆ ತಿಳಿಯಿರಿ.

Maha Shivaratri 2024: ಆಂಧ್ರಪ್ರದೇಶದ ಪಂಚರಾಮ ಶಿವ ದೇಗುಲಗಳ ಪರಿಚಯ ಇಲ್ಲಿದೆ, ಮನಸಿಗೆ ಶಾಂತಿ ನೀಡುವ ಶಿವಾಲಯಗಳಿವು

Wednesday, March 6, 2024

ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ,  “ರಾಮಾಯಣದಲ್ಲಿ ಲೇಪಾಕ್ಷಿಗೆ ಹೆಚ್ಚಿನ ಮಹತ್ವವಿದೆ. ಇಂದು ವೀರಭದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಗೌರವ ನನಗೆ ಸಿಕ್ಕಿದೆ. ಭಾರತದ ಜನರು ಸಂತೋಷದಿಂದ, ಆರೋಗ್ಯವಾಗಿರಲಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಏರಲಿ ಎಂದು ಪ್ರಾರ್ಥಿಸಿದೆ" ಎಂದು ಬರೆದುಕೊಂಡಿದ್ದಾರೆ.

PM Modi: ಲೇಪಾಕ್ಷಿ ವೀರಭದ್ರ ಮಂದಿರದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ; ಭಕ್ತಿ ಭಾವದ ಚಿತ್ರನೋಟ

Wednesday, January 17, 2024

ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾರತದಲ್ಲೇ ವಿಶಿಷ್ಟ ಎನ್ನಿಸಿಕೊಂಡ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯವಿದೆ. 17ನೇ ಶತಮಾನದ ಈ ದೇವಾಲಯಕ್ಕೆ ವಿಶ್ವದಾದ್ಯಂತ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ಲಾನ್‌ ನಿಮಗಿದ್ರೆ ಈ ಜಾಗಗಳನ್ನು ತಪ್ಪದೇ ನೋಡಿ ಬನ್ನಿ.

Bhadrachalam: ಶ್ರೀರಾಮನ ದರ್ಶನ ಪಡೆಯಲು ಭದ್ರಾಚಲಂಗೆ ಹೋದ್ರೆ ಈ 6 ಜಾಗಗಳನ್ನು ತಪ್ಪದೇ ನೋಡಿ ಬನ್ನಿ

Saturday, January 6, 2024

ತಿರುಪತಿಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಅವರು ತಂದೆ ಲಾಲೂ ಪ್ರಸಾದ್‌ ಯಾದವ್‌, ತಾಯಿ, ಪತ್ನಿ ಹಾಗೂ ಸಹೋದರನೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಸಂದರ್ಭ.

Lalu family in tirupati:ತಿರುಪತಿಯಲ್ಲಿ ಲಾಲೂ ಯಾದವ್‌ ಕುಟುಂಬದ ತೀರ್ಥಯಾತ್ರೆ: ಮೊಮ್ಮಗಳೊಂದಿಗೆ ತಾತನ ದೇಗುಲ ದರ್ಶನ

Sunday, December 10, 2023

ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡು: ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡಿನಲ್ಲಿರುವ ಪುರಾತನ ಹಿಂದೂ ದೇವಾಲಯ. ಮದುರೈ ಪಟ್ಟಣದಲ್ಲಿರುವ ಈ ದೇಗುಲಕ್ಕೆ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಮೀನಾಕ್ಷಿ ದೇವಿ ಹಾಗೂ ಸುಂದರೇಶ್ವರ ಅಂದರೆ ಶಿವನು ಇಲ್ಲಿ ನೆಲೆಯಾಗಿದ್ದಾರೆ. ಸುಂದರ ವಾಸ್ತುಶಿಲ್ಪಗಳನ್ನು ಹೊಂದಿರುವ ಈ ದೇವಾಲಯವನ್ನು ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು.

Indian Temples: ಭಕ್ತಿ, ಭಾವ ಮಾತ್ರವಲ್ಲ, ಕಣ್ಮನ ಸೆಳೆವ ವಾಸ್ತುಶಿಲ್ಪದ ಕಾರಣದಿಂದಲೂ ಹೆಸರು ಗಳಿಸಿರುವ ಭಾರತದ 10 ಸುಂದರ ದೇವಾಲಯಗಳಿವು

Thursday, November 30, 2023

ಧಾರ್ಮಿಕ ಸ್ಥಳ ಭೇಟಿ ಎಂದರೆ ಅಪ್ಪಟ ಭಾರತೀಯರೇ ಆಗಿ ಬಿಡುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಸೋಮವಾರ ಅವರು ಪ್ರಸಿದ್ದ ಧಾರ್ಮಿಕ ಕ್ಷೇತ್ರದ ತಿರುಪತಿ ತಿರುಮಲದಲ್ಲಿ ಕಂಡು ಬಂದಿದ್ದು ಹೀಗೆ.

Modi in Tirumala: ವೆಂಕಟೇಶ್ವರ ಸನ್ನಿಧಿಯಲ್ಲಿ ಮೋದಿ: ಅಪ್ಪಟ ಭಕ್ತರಾಗಿ ತಿರುಮಲದಲ್ಲಿ ಸುತ್ತು ಹಾಕಿದ ಪ್ರಧಾನಿ

Monday, November 27, 2023

ತಿರುಮಲದಲ್ಲಿ ಶ್ರೀವಾರಿ ದೇವರ ನವರಾತ್ರಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

Tirumala Brahmotsava: ತಿರುಮಲ ನವರಾತ್ರಿ ಬ್ರಹ್ಮೋತ್ಸವ, ಸಿಂಹ ರಥದ ಮೇಲೆ ಯೋಗಾನರಸಿಂಹ, ಆಕರ್ಷಕ ಫೋಟೋ ವರದಿ

Tuesday, October 17, 2023

ತಿರುಮಲದಲ್ಲಿ ವರ್ಷಂಪ್ರತಿ ನಡೆಯುವ ಶ್ರೀವಾರಿ ಬ್ರಹ್ಮೋತ್ಸವ ಇಂದು (ಸೆ.26) ಸಂಪನ್ನವಾಗಿದೆ. ಕೊನೆಯದಿನವಾದ ಮಂಗಳವಾರ (ಸೆ.26) ಶ್ರೀವಾರಿ ದೇವರ ಚಕ್ರಸ್ನಾನ ವೈಭವದಿಂದ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಶ್ರೀವಾರಿ ಪುಷ್ಕರಿಣಿಯಲ್ಲಿ ಪುಣ್ಯಸ್ನಾನ ಮಾಡಿದರು.

Tirumala Brahmotsava:ತಿರುಮಲ ಬ್ರಹ್ಮೋತ್ಸವ ಇಂದು ಸಂಪನ್ನ, ವೈಭವದಿಂದ ಶ್ರೀವಾರಿ ಚಕ್ರಸ್ನಾನ

Tuesday, September 26, 2023

ತಿರುಮಲದಲ್ಲಿ ವರ್ಷಂಪ್ರತಿ ಜರಗುವ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಏಳನೇ ದಿನ ಬೆಳಗ್ಗೆ ಕೊಲುವುದೂರಿನ ಶ್ರೀ ಮಲಯಪ್ಪ ಸ್ವಾಮಿ ಸೂರ್ಯಪ್ರಭ ವಾಹನದಲ್ಲಿ ಭಕ್ತರಿಗೆ ದರ್ಶನ ನೀಡಿದರು.

ತಿರುಮಲ ಬ್ರಹ್ಮೋತ್ಸವ ಸೂರ್ಯಪ್ರಭ ರಥವೇರಿದ ಏಳು ಬೆಟ್ಟದೊಡೆಯ, ದರ್ಶನ ಪಡೆದು ಪುನೀತರಾದ ಭಕ್ತಜನ ವೃಂದ

Sunday, September 24, 2023

ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಆರನೇ ದಿನವಾದ ಶನಿವಾರ ಸಂಜೆ 4 ಗಂಟೆಗೆ ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ್ವರ ಸ್ವಾಮಿ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಿದರು.

ತಿರುಮಲ ಬ್ರಹ್ಮೋತ್ಸವ, ಶ್ರೀ ವೆಂಕಟೇಶ್ವರ ದೇವರ ರಥೋತ್ಸವ, ಚಿನ್ನದ ರಥವೇರಿದ ಶ್ರೀವಾರಿ ದೇವರು, ಇಲ್ಲಿವೆ ಚಿತ್ತಾಕರ್ಷಕ ಫೋಟೋಸ್

Saturday, September 23, 2023

ವರ್ಷಂಪ್ರತಿ ನಡೆಯುವ ಬ್ರಹ್ಮೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ತಿರುಮಲದ ಶ್ರೀನಿವಾಸ ದೇವರು ತಮ್ಮ ನೆಚ್ಚಿನ ಗರುಡ ರಥವನ್ನೇರಿ ಸವಾರಿ ಮಾಡುತ್ತ ಭಕ್ತರನ್ನು ಆಶೀರ್ವದಿಸಿದರು. ಸಹಸ್ರ ನಾಮಗಳ ಮಾಲೆ, ಲಕ್ಷ್ಮೀ ಕಾಸಿನ ಮಾಲೆ, ಹಸಿರೆಲೆ ಮಾಲೆಗಳಿಂದ ದೇವರನ್ನು ಪೌರಾಣಿಕ ಸನ್ನಿವೇಶದಂತೆ ಅಲಂಕರಿಸಲಾಗಿತ್ತು. ಎಲ್ಲ 108 ವೈಷ್ಣವ ದಿವ್ಯದೇಶಗಳಲ್ಲಿ ಗರುಡಸೇವೆಯು ಬಹಳ ಮಹತ್ವದ್ದಾಗಿದೆ.

ತಿರುಮಲ ಬ್ರಹ್ಮೋತ್ಸವ, ಗರುಡವಾಹನ ಸವಾರಿ ದರ್ಶನ ತೋರಿದ ತಿಮ್ಮಪ್ಪ, ತಿರುಪತಿಯಲ್ಲಿ ಭಕ್ತಜನ ಸಂಭ್ರಮ

Friday, September 22, 2023

ಶ್ರೀವಾರಿಯ ವರ್ಷಂಪ್ರತಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಗುರುವಾರ ರಾತ್ರಿ ಶ್ರೀದೇವಿ ಭೂದೇವಿ ಜತೆಗೆ ಶ್ರೀಮಲಯಪ್ಪ ಸ್ವಾಮಿ ಸರ್ವಭೂಪಾಲ ವಾಹನವೇರಿ ವೇಣುಗೋಪಾಲಕೃಷ್ಣನ ಅಲಂಕಾರದಲ್ಲಿ ಭಕ್ತದರ್ಶನ ಮಾಡಿದರು.

Tirumala Brahmotsavam: ತಿರುಪತಿ ಬ್ರಹ್ಮೋತ್ಸವ, ಸರ್ವಭೂಪಾಲ ರಥವೇರಿ ಭಕ್ತರಿಗೆ ದರ್ಶನ ನೀಡಿದ ಶ್ರೀನಿವಾಸ, ಇಲ್ಲಿವೆ ಆಕರ್ಷಕ ಫೋಟೋಸ್

Friday, September 22, 2023