temples-in-karnataka News, temples-in-karnataka News in kannada, temples-in-karnataka ಕನ್ನಡದಲ್ಲಿ ಸುದ್ದಿ, temples-in-karnataka Kannada News – HT Kannada
ಕನ್ನಡ ಸುದ್ದಿ  /  ವಿಷಯ  /  temples in karnataka

Latest temples in karnataka Photos

ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.

ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

Wednesday, April 23, 2025

ವಿಶೇಷವಾಗಿ ಅಲಂಕರಿಸಿದ್ದ ರಥಗಳಲ್ಲಿ ಸಂಗಮೇಶ್ವರ ಉತ್ಸವಮೂರ್ತಿಯನ್ನು ತಂದಿರಿಸಿದಾಗ ಭಕ್ತರು ರಥವನ್ನು ಎಳೆದರು.

ಕೃಷ್ಣಾ ಮಲಪ್ರಭಾ ನದಿ ತೀರದ ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವಕ್ಕೆ ಭಕ್ತ ಸಾಗರ

Saturday, April 19, 2025

ಜಾಗೃತ ಶ್ರೀ ಲೈನ್ ಬಜಾರ್ ಮಾರುತಿ ದೇವರ ದೇವಸ್ಥಾನದ 56ನೇ ವಾರ್ಷಿಕ ಮಹಾ ರಥೋತ್ಸವ ಆಚರಣೆ ಹನುಮಾನ್ ಜಯಂತಿ ದಿನವೇ (ಏಪ್ರಿಲ್ 12) ನೆರವೇರಿತು. ದೇವಸ್ಥಾನದ ವಿಶ್ವಸ್ಥ ಮಂಡಳಿ ಹನುಮಾನ್ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿತ್ತು.

ಧಾರವಾಡದ ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ಮಹಾ ರಥೋತ್ಸವ ಸಂಪನ್ನ- ಆಕರ್ಷಕ ಚಿತ್ರನೋಟ

Sunday, April 13, 2025

ಮುಗಿಲು ಮುಟ್ಟಿದ ಹರ್ಷೋದ್ಗಾರ, ಎಲ್ಲಿ ನೋಡಿದರೂ ಜನಸಾಗರ, ಹಣ್ಣು ಸಮಪಿ೯ಸಿ ಭಕ್ತಿ ಮೆರೆದ ಭಕ್ತರ ನಡುವೆ ವಿಜಯಪುರ ಜಿಲ್ಲೆಯ ಗೊಲ್ಲಾಳೇಶ್ವರ ರಥೋತ್ಸವ ಜರುಗಿತು,

Vijayapura News: ಗೋಲಗೇರಿ ಗೋಲ್ಲಾಳೇಶ್ವರ ರಥೋತ್ಸವ ಸಂಭ್ರಮ; ಮುಗಿಲುಮುಟ್ಟಿದ ಹರ್ಷೋದ್ಗಾರ, ಭಕ್ತರಿಂದ ದೀಡ ನಮಸ್ಕಾರ

Sunday, April 13, 2025

ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.

Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Saturday, April 12, 2025

ಐತಿಹಾಸಿಕ ‘ಬೆಂಗಳೂರು ಕರಗ’ ಚೈತ್ರ ಪೂರ್ಣಿಮೆಯ ದಿನವಾದ ಇಂದು ನಡೆಯಲಿದೆ. ಇದಕ್ಕೆ ಮುನ್ನಾ ದಿನ ಶುಕ್ರವಾರ‌ ಸಂಪಂಗಿ ಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ಪೂಜೆ, ಆರತಿ, ಮೆರವಣಿಗೆ ವಿಜೃಂಭಣೆಯಿಂದ ನಡೆದವು. ಅದರ ಆಕರ್ಷಕ ಚಿತ್ರನೋಟ ಇಲ್ಲಿದೆ.

Bengaluru Karaga 2025: ಶ್ರದ್ಧಾ ಭಕ್ತಿಯೊಂದಿಗೆ ಸಾಗಿದ ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಮೆರವಣಿಗೆ- ಚಿತ್ರನೋಟ

Saturday, April 12, 2025

ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಸುದೀರ್ಘ ಒಂದು ತಿಂಗಳ ಕಾಲದ ವಾರ್ಷಿಕ ಜಾತ್ರೆಯ ನಿಮಿತ್ತ ವೈಭವದ ಮಹಾರಥೋತ್ಸವ ಗುರುವಾರ (ಏಪ್ರಿಲ್ 10) ಸಂಜೆ ನಡೆಯಿತು. ಭಕ್ತರ ಜಯಘೋಷದ ನಡುವೆ ರಥೋತ್ಸವ ಸಂಪನ್ನಗೊಂಡಿತು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನ; ಫೋಟೊಸ್ ನೋಡಿ

Friday, April 11, 2025

ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ನಿನ್ನೆ (ಏಪ್ರಿಲ್ 10) ಶುರುವಾಗಿದೆ. ಶ್ರೀ ದೇವರ ಮೊದಲ ದಿನದ ಪೇಟೆ ಸವಾರಿ ನೆಹರೂ ನಗರದ ಬೊಳುವಾರು, ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲವರೆಗೆ ಹೋಗಿ ವಾಪಸ್ ದೇವಸ್ಥಾನದಲ್ಲಿ ಸಂಪನ್ನವಾಯಿತು.

ಪುತ್ತೂರು ಜಾತ್ರೆ 2025: ಮೊದಲ ದಿನ ಬೊಳುವಾರು, ಕರ್ಮಲ ಕಡೆಗೆ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ- ಆಕರ್ಷಕ ಚಿತ್ರನೋಟ

Friday, April 11, 2025

ಬೆಳಿಗ್ಗೆ ದೇಗುಲದ ಪ್ರಾಕಾರದ ಒಳಗೆ ಹಾಗೂ ಸುತ್ತಲಿನ ಬೀದಿ ಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂತ್ರಘೋಷಗಳ ನಡುವೆ ಜರುಗಿತು.

Belur Channakeshava Rathotsav 2025: ಐತಿಹಾಸಿಕ ತಾಣ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ರಥೋತ್ಸವ ಸಂಭ್ರಮ

Thursday, April 10, 2025

ಇಲ್ಲಿನ ಕಲ್ಲಂಗಡಿ ಹಣ್ಣನ್ನು ಪುರಾಣದ ರಕ್ತಬೀಜಾಸುರನೆಂದೇ ನಂಬಲಾಗುತ್ತದೆ. ಅದರೊಳಗಿನ ಕೆಂಪು ತಿರುಳು ರಾಕ್ಷಸನ ರಕ್ತವನ್ನು ಸಂಕೇತಿಸಿದರೆ, ಅದರೊಳಗಿನ ಬೀಜಗಳು ಬೀಜಾಸುರಾದಿಗಳನ್ನು ಸಂಕೇತಿಸುತ್ತದೆ. ಪೊಳಲಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದ್ದು, ಇದು ಇತ್ತೀಚೆಗೆ ಕಡಿಮೆಯಾಗಿದೆ.

ಪೊಳಲಿ ಶ್ರೀರಾಜರಾಜೇಶ್ವರಿ ದೇವರ ಜಾತ್ರೆಯಲ್ಲಿ ಕಲ್ಲಂಗಡಿಯನ್ನೇ ಪ್ರಸಾದವಾಗಿ ಕೊಡುವುದು ಏಕೆ; ಫೋಟೊ ಸಹಿತ ಮಾಹಿತಿ ತಿಳಿಯಿರಿ

Thursday, April 10, 2025

ದೊಡ್ಡ ತೇರಿನಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಜರುಗಿತು. ಈ ವೇಳೆ  ಭಕ್ತರು ನಂಜುಂಡೇಶ್ವರನ ತೇರು ಎಳೆದು ತಮ್ಮ ಭಕ್ತಿ ಭಾವವನ್ನು ಅರ್ಪಿಸಿದರು. ಅಂತಿಮವಾಗಿ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು.

ನಂಜನಗೂಡಿನಲ್ಲಿ ತೇರು ಎಳೆದು ಖುಷಿ ಪಟ್ಟ ಭಕ್ತರು; ಅದ್ಧೂರಿ ಗೌತಮ ಪಂಚ ಮಹಾ ರಥೋತ್ಸವದ ಫೋಟೊಸ್ ಇಲ್ಲಿವೆ

Wednesday, April 9, 2025

ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

Melkote Vairamudi 2025: ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ವೈಭವ; ರಾಜವೈಭೋಗದ ಉತ್ಸವದಲ್ಲಿ ಮಿಂದೆದ್ದ ಭಕ್ತ ಗಣ

Tuesday, April 8, 2025

ಸೀತಾರಾಮ ಆಂಜನೇಯುಲು ಎಲ್ಲಾ ಪ್ರವಾಸಗಳಲ್ಲಿ ತಮ್ಮ ಗುರುಗಳೊಂದಿಗೆ ಇರುತ್ತಿದ್ದರು. ಅವರು ತಮ್ಮ ಮಾತೃಭಾಷೆಯಾದ ತೆಲುಗುಗಿಂತ ಹೆಚ್ಚಾಗಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದರು. ಬಾಲ್ಯದಲ್ಲಿಯೇ ಅವರು ವ್ಯಾಕರಣ, ಸಾಹಿತ್ಯ, ತರ್ಕ ಮತ್ತು ತತ್ವಶಾಸ್ತ್ರದ ಅಧ್ಯಯನವನ್ನು ಪೂರ್ಣಗೊಳಿಸಿದರು.

Sringeri Mutt Swamiji: ಶೃಂಗೇರಿ ಶಾರದಾಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ 75 ನೇ ವರ್ಧಂತಿ ಇಂದು, ಅವರ ಹಿನ್ನೆಲೆ ಏನು

Thursday, April 3, 2025

ಏಪ್ರಿಲ್‌ 20 ರಂದು ದಕ್ಷಿಣ ಕನ್ನಡದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ರಥೋತ್ಸವ

April Jatre in Karnataka: ಏಪ್ರಿಲ್‌ ತಿಂಗಳಿನಲ್ಲಿರುವ ಜರುಗಲಿರುವ ಕರ್ನಾಟಕದ ಪ್ರಮುಖ 10 ಜಾತ್ರೆ, ರಥೋತ್ಸವಗಳು

Tuesday, April 1, 2025

ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಮಲೈ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು. ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

MM Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ

Wednesday, March 26, 2025

ಆನೇಕಲ್ ಹುಸ್ಕೂರು ಮದ್ದೂರಮ್ಮ ಜಾತ್ರೆ ಅಂದರೆ ಕುರುಜುಗಳದ್ದೇ ಆಕರ್ಷಣೆ. ಕುರುಜುಗಳು ಅಂದರೆ ತೇರುಗಳು. ಹಿಂದೆಲ್ಲ 15 -16 ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡ ಇತಿಹಾಸವಿದೆ. ಈ ಬಾರಿ 6 ತೇರುಗಳಷ್ಟೇ ಇದ್ದವು. ದೇವಸ್ಥಾನದ ಇತಿಹಾಸ, ಕುರುಜುಗಳ ವಿಶೇಷ ಅಂಶಗಳ ವಿವರ ಇಲ್ಲಿದೆ.

ಹುಸ್ಕೂರು ಮದ್ದೂರಮ್ಮ ಜಾತ್ರೆ; ಅತಿ ಎತ್ತರದ ರಂಗು ರಂಗಿನ ತೇರುಗಳೇ ಆನೇಕಲ್‌ ಮದ್ದೂರಮ್ಮ ಜಾತ್ರೆಯ ಆಕರ್ಷಣೆ, ಇಲ್ಲಿದೆ ಚಿತ್ರನೋಟ

Sunday, March 23, 2025

ಶತಮಾನದ ಹಿನ್ನೆಲೆಯಿರುವ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಗಳ ಸಂಕೀರ್ಣದಲ್ಲಿರುವ ಶ್ರೀ ಮಹಾಬಲೇಶ್ವರ ರಥೋತ್ಸವ ಜರುಗಿತು.

Mysore Mahabaleshwar Rathotsav: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ರಥೋತ್ಸವ ಸಂಭ್ರಮ, ಪುರಾತನ ದೇಗುಲದಲ್ಲಿ ವಿಶೇಷ ಪೂಜೆ

Thursday, March 20, 2025

ಎರಡು ವಾರಗಳ ಕಾಲ ನಡೆಯುವ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆ ಎಂದು ಪ್ರಸಿದ್ದಿಯಾಗಿರುವ ಕಲಬುರಗಿ ಶರಣಬಸವೇಶ್ವರರ 203ನೇ ಮಹಾರಥೋತ್ಸವ ಬುಧವಾರ  ಸಂಜೆ  ನೆರವೇರಿತು

Sharana Basaveshwara Rathotsav2025: ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರರ ರಥೋತ್ಸವ ವೈಭವ, ಲಕ್ಷಾಂತರ ಭಕ್ತರ ಸಡಗರ

Thursday, March 20, 2025

ಮೈಸೂರಿನ ಸಂತೇಪೇಟೆ ಎಂದರೆ ಅದು ಶತಮಾನಗಳಿಂದ ವ್ಯಾಪಾರಿ ತಾಣ. ಇಲ್ಲಿನ ಪ್ರಸನ್ನ ನಂಜುಂಡೇಶ್ವರ ದೇಗುಲವೂ ಮೂರು ನೂರು ವರ್ಷದಷ್ಟು ಹಳೆಯದು. ಈ ದೇಗುಲದ ಬ್ರಹ್ಮ ರಥೋತ್ಸವ ಭಕ್ತರ ಸಂಭ್ರಮದಿಂದ ನೆರವೇರಿತು.

Mysore News: ಮೈಸೂರು ಮಹಾರಾಜರು ನಿರ್ಮಿಸಿದ್ದ ಪ್ರಸನ್ನ ನಂಜುಂಡೇಶ್ವರ ದೇಗುಲದಲ್ಲಿ ರಥೋತ್ಸವ ಸಡಗರ

Friday, March 14, 2025

ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಿಗಿರಿ ಕ್ಷೇತ್ರದಲ್ಲಿ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಮಧ್ಯಾಹ್ನ ಭಕ್ತಾದಿಗಳ ಹರ್ಷೋದ್ಘಾರದ ನಡುವೆ ಗರುಡ ಬಂದು ರಥ ಪ್ರದಕ್ಷಿಣೆ ಹಾಕಿದ ನಂತರ ವಿದ್ಯುಕ್ತವಾಗಿ ನೆರವೇರಿತು.

Devarayanadurga Jatre: ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದಲ್ಲಿ ಜಾತ್ರೆ, ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ವೈಭವದ ಫೋಟೋಗಳು

Thursday, March 13, 2025