Latest tourism Photos

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನನೀರು ಬಂದು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಕೂಡಲಸಂಗಮಕ್ಕೆ ಜೀವ ಕಳೆ ಬಂದಿದೆ.

Kudalasangama: ಸೊರಗಿದ್ದ ಕೂಡಲ ಸಂಗಮಕ್ಕೆ ಬಂತು ಜಲ ಕಳೆ, ಕೃಷ್ಣಾ ನದಿಯಲ್ಲಿ ಬಂತು ಭಾರೀ ನೀರು photos

Wednesday, July 17, 2024

ಸುಮಾರು ಮುನ್ನೂರು ಅಡಿ ಎತ್ತರದಿಂದ ವೈಯ್ಯಾರದಿಂದ ಗಗನದಿಂದಲೇ ಧುಮುಕುತ್ತಿರುವಂತೆ ಭಾಸವಾಗುವುದರಿಂದಲೇ ಇದಕ್ಕೆ ಗಗನಚುಕ್ಕಿ ಎಂಬ ಹೆಸರು ಬಂದಿದೆ.

Gagana Chukki Falls: ಕಾವೇರಿಗೆ ಭಾರೀ ನೀರು, ಮಂಡ್ಯ ಜಿಲ್ಲೆ ಗಗನಚುಕ್ಕಿ ಜಲಪಾತದಲ್ಲಿ ಜಲವೈಭವ, ಹೋಗೋದು ಹೇಗೆ photos

Monday, July 15, 2024

ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡು. ಇರೋದ್ರೋಳಗೆ ಒಮ್ಮೆ ನೋಡಿ ಜೋಗ ಗುಂಡಿ ಎನ್ನುವ ಹಾಡು ಜನಜನಿತ. ಈಗ ಮಳೆಗಾಲದಲ್ಲಿ ಜೋಗ ನೋಡುವುದೇ ಚಂದ.

Jog Falls: ಜೋಗ ನೋಡಲು ಸಾರಿಗೆ ಸೇವೆ, ಹುಬ್ಬಳ್ಳಿಯಿಂದ ಭಾನುವಾರಗಳಂದು ವಿಶೇಷ ಬಸ್‌, ದರ ಎಷ್ಟು

Sunday, July 14, 2024

ಕುಂಚಿಕಲ್ ಜಲಪಾತ( Kunchikal Falls)

ಶಿವಮೊಗ್ಗದಿಂದ 100 ಕಿ.ಮೀ ದೂರದಲ್ಲಿರುವ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಬಳಿ 353 ಮೀಟರ್ ಎತ್ತರದ ಜಲಪಾತವಾಗಿದೆ . ಕುಂಚಿಕಲ್ ಜಲಪಾತವು ವರಾಹಿ ನದಿಯಿಂದ ರೂಪುಗೊಂಡಿರುವಂತದ್ದು. ದಟ್ಟವಾದ ಕಾಡಿನೊಳಗೆ ಇರುವುದರಿಂದ ಸಹಜ ಸೌಂದರ್ಯದಿಂದ ಕೂಡಿದೆ,

Shimoga Monsoon Trip: ಶಿವಮೊಗ್ಗದಲ್ಲಿ ಬರೀ ಜೋಗ ಮಾತ್ರವಲ್ಲ, ಹಲವು ಜಲಪಾತಗಳುಂಟು, ಮುಂಗಾರು ಪ್ರವಾಸಕ್ಕೆ ಅಣಿಯಾಗಿ

Thursday, July 11, 2024

ಬಿಸ್ಲೆ ಘಾಟ್‌//
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ, ಬಿಸ್ಲೆಯಲ್ಲಿ 40 ಹೆಕ್ಟೇರುಗಳಷ್ಟು ಮೀಸಲು ಅರಣ್ಯವು ಹರಡಿಕೊಂಡಿದೆ.  ಏಷ್ಯಾದಲ್ಲಿ ಪ್ರಮುಖ ಅರಣ್ಯವೆಂದು ಗುರುತಿಸಲಾಗಿದ್ದು, ಈ ಅರಣ್ಯವು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಡಿದೆ.  ಈ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ, ಕುಮಾರ ಪರ್ವತ, ಎಣ್ಣೆಕಲ್ಲು, ಪಟ್ಲ, ದೊಡ್ಡಬೆಟ್ಟ ಮತ್ತು ಕನ್ನಡಿಕಲ್ಲು ಎಂದು ಹೆಸರಿಸಲಾದ ಅನೇಕ ಬೆಟ್ಟಗುಡ್ಡಗಳಿವೆ.  ಬಿಸಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ ಲಾರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ, ಇನ್ನಿತರೆ ಬಹಳಷ್ಟು ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿ ಇವೆ.  ಆನೆಗಳು, ಕಾಡುಕೋಣಗಳು, ಜಿಂಕೆ, ಕಡವೆ, ಕಾಡುಹಂದಿ, ಇನ್ನಿತರೆ ಕಾಡುಪ್ರಾಣಿಗಳು ಹೇರಳವಾಗಿ ಸಿಗುತ್ತವೆ.  ಬಿಸ್ಲೆ ಘಾಟ್‌
ರಸ್ತೆ ಮೂಲಕ ಸಕಲೇಶಪುರದಿಂದ 35 ಕಿಲೋಮೀಟರು.

Monsoon Tourism: ಮಳೆಯ ಸಂಭ್ರಮದ ನಡುವೆ ಹಾಸನ ಪ್ರವಾಸದ ಸೊಬಗು, ಬಿಸ್ಲೆ ಘಾಟ್‌, ಗೋರೂರು ಅಣೆಕಟ್ಟೆ, ಮತ್ತೇನು ನೋಡಬಹುದು

Monday, July 8, 2024

ಈ ಶನಿವಾರ ಹಾಗೂ ಭಾನುವಾರವೂ ಪ್ರವಾಸಿಗರಿಂದ ಬೆಟ್ಟ ತುಂಬಿ ಹೋಗಿತ್ತು. ಚಳಿಯ ವಾತಾವರಣದ ಜತೆಗೆ ಮಳೆಯ ಸಿಂಚನಕ್ಕೂ ಪ್ರವಾಸಿಗರು ಫಿದಾ ಆದರು.

Monsoon Tourism: ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಾಂಗುಡಿ, ಮಳೆ, ಚಳಿ ವಾತಾವರಣಕ್ಕೆ ಫಿದಾ photos

Monday, July 8, 2024

ಸಾತೋಡ್ಡಿ ಜಲಪಾತ//
ಸಾತೋಡ್ಡಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ​​ಒಂದು ಆಕರ್ಷಕ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾತೋಡ್ಡಿ ಜಲಪಾತವಾಗಿ ಅಂತಿಮವಾಗಿ ಕಾಳಿ ನದಿಯನ್ನು ಸೇರುತ್ತದೆ. ನಿತ್ಯಹರಿದ್ವರ್ಣ ಕಾಡುಗಳ ಮಧ್ಯದಲ್ಲಿ ಎತ್ತರದ ಬಂಡೆಗಳ ಮೇಲೆ ಹರಿಯುವ, 50 ಅಡಿ (15 ಮೀಟರ್) ಎತ್ತರದ ಈ ಜಲಪಾತವು ವಿಹಂಗಮ ನೋಟವನ್ನುನೀಡುತ್ತದೆ. ಇಲ್ಲಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಅಂಕೋಲಾ ಮತ್ತು ಕುಮಟಾ. ರಸ್ತೆ ಮೂಲಕ ಬರುವುದಾದರೆ ಕಾರವಾರದಿಂದ 90 ಕಿ.ಮೀ. ದೂರದಲ್ಲಿದೆ

Uttara Kannada monsoon tourism: ಜಲಪಾತ, ಬೀಚ್‌ಗಳ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀವೇನು ನೋಡಬಹುದು

Saturday, July 6, 2024

ಕೊಡಗಿನಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಚುಂಚನಕಟ್ಟೆ ಜಲಪಾತದಲ್ಲೂ ಮಂಗಳವಾರ ನೀರಿನ ಪ್ರಮಾಣ ಏರಿಕೆ ಕಂಡಿತು.

Chunchanakatte Falls: ಕೊಡಗಲ್ಲಿ ಮಳೆ, ಕಾವೇರಿ ನದಿ ನೀರಿನಿಂದ ಚುಂಚನಕಟ್ಟೆ ಜಲಪಾತಕ್ಕೂ ಕಳೆ

Tuesday, July 2, 2024

ಕೊಡಗು ಹಾಗೂ ಕೇರಳಕ್ಕೆ ಹೊಂದಿಕೊಂಡಂತೆ ಇರುವ ಇರ್ಪು ಜಲಪಾತವು(Irupu Falls) ಲಕ್ಷ್ಮಣತೀರ್ಥ ನದಿ ಸೃಷ್ಟಿಸಿರುವ ಸೊಬಗು. ಮೈಸೂರು ಹಾಗೂ ಮಡಿಕೇರಿಯಿಂದ ನೂರು ಕಿ.ಮಿ. ದೂರದಲ್ಲಿದೆ. ಇರ್ಪು. ನಾಗೃಹೊಳೆ ಸಮೀಪದಲ್ಲಿಯೇ ಇದೆ.

Monsoon Tour: ಮಳೆಗಾಲ ಶುರುವಾಯ್ತು, ಕರ್ನಾಟಕದ 8 ಜಲಪಾತಗಳ ಟ್ರಿಪ್‌ಗೆ ಅಣಿಯಾಗಿ photos

Thursday, June 13, 2024

ಜಗತ್ತಿನ ಅತಿಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಕೇಂದ್ರ. ನಿತ್ಯವೂ ಇಲ್ಲಿ  50,000 ದಿಂದ 1 ಲಕ್ಷದ ಆಸುಪಾಸಿನಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಹೀಗೆ ತಿರುಪತಿಗೆ ಬಂದವರು ತಪ್ಪಿಸಿಕೊಳ್ಳದೇ ನೋಡಬೇಕಾದ ಒಂಬತ್ತು ಪ್ರವಾಸಿ ಆಕರ್ಷಣೆಗಳಿವೆ. ಅವುಗಳ ವಿವರ ಇಲ್ಲಿದೆ ನೋಡಿ.

Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tuesday, June 11, 2024

ಹಂಪಿಯ ಹದಿನಾರು ಕಾಲು ಮಂಟಪದ ಆವರಣವಂತೂ ಹಚ್ಚ ಹಸುರಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಬಂಗಾರದ ಯುಗದ ಕಥೆಯನ್ನು ಕೇಳಿ ಎಂದು ಹೇಳುತ್ತಿದೆ.

Green Hampi: ಮಳೆ ನಿಂತು ಹೋದ ಮೇಲೆ, ಪ್ರವಾಸಿಗ ರವಿಕೀರ್ತಿಗೌಡ ಕಣ್ಣಲ್ಲಿ ಹಂಪಿ ಹಸಿರು ನೋಟ photos

Wednesday, May 22, 2024

ಐಪಿಎಲ್‌ ಮ್ಯಾಚ್‌ ಬೆಂಗಳೂರಿನಲ್ಲಿ ನಡೆಯುವ ದಿನ ರಾಜ್ಯ, ದೇಶದ ವಿವಿಧ ಭಾಗದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಆರ್‌ಸಿಬಿ ಮ್ಯಾಚ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದರೆ ವಿಶೇಷ ಕ್ರೇಜ್‌ ಇರುತ್ತದೆ. ನೀವು ಇವತ್ತು (ಮೇ 18) ಆರ್‌ಸಿಬಿ-ಸಿಎಸ್‌ಕೆ ನಡುವೆ ನಡೆಯುವ ಮ್ಯಾಚ್‌ ನೋಡಲು ಬೆಂಗಳೂರಿಗೆ ಬಂದಿದ್ರೆ ಸುತ್ತಲಿನ ಈ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿ ಬನ್ನಿ. ನಾಳೆ ಹೇಗೂ ಭಾನುವಾರ ಬೆಂಗಳೂರು ನೋಡಿಕೊಂಡೆ ಊರಿಗೆ ಹೋಗಿ.

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿವು; ಮ್ಯಾಚ್‌ ನೋಡಲು ಬಂದವರು ಮಿಸ್‌ ಮಾಡದೆ ನೋಡಿ

Saturday, May 18, 2024

ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ, ವಿಜ್ಞಾನ ನಡೆದ ಬಂದ ಹಾದಿಯ ಪರಿಚಯ ನಿಮಗಾಗಬೇಕು ಅಂದ್ರೆ ನೀವು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು. ಜ್ಞಾನ ಸಂಪನ್ಮೂಲಗಳ ಆಗರ ತಾಣವಿದು. ಇಲ್ಲಿಗೆ ಭೇಟಿ ನೀಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮಾತ್ರವಲ್ಲ ನಮ್ಮ ರಾಷ್ಟ್ರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ ಮತ್ತು ನಾಗರಿಕತೆಯ ಬಗ್ಗೆ ಪರಿಚಯವೂ ಆಗುತ್ತದೆ. ಇಂತಹ ಅಪರೂಪ ತಾಣವನ್ನು ರಕ್ಷಿಸುವ ಹಾಗೂ ಇದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಮ್ಯೂಸಿಯಂ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಮೇ 18 ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿನಾಚರಣೆ ಇರುತ್ತದೆ. ಇವತ್ತು ಮ್ಯೂಸಿಯಂ ದಿನವಿದ್ದು ಕರ್ನಾಟಕದ ಟಾಪ್‌ 10 ವಸ್ತು ಸಂಗ್ರಹಾಲಯಗಳ ಬಗ್ಗೆ ತಿಳಿಯಿರಿ.

International Museum Day: ಕಲೆ, ಸಂಸ್ಕೃತಿ, ವಿಜ್ಞಾನ ಪರಂಪರೆಯನ್ನು ಬಿಂಬಿಸುವ ಕರ್ನಾಟಕದ ಟಾಪ್‌ 10 ಮ್ಯೂಸಿಯಂಗಳಿವು

Saturday, May 18, 2024

ವಚನಗಳನ್ನು ರಚಿಸುವ ಸಂಬಂಧ ಬಾಲಕ ಬಸವಣ್ಣ ಗುರುಗಳೊಂದಿಗೆ ಚರ್ಚಿಸುವ ಸನ್ನಿವೇಶ.

Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ

Wednesday, May 8, 2024

ಸದ್ಯ ಅಸ್ತಿತ್ವದಲ್ಲಿಲ್ಲದ ಪಂತಾಚ ಕೋಟ್ ಕೋಟೆಯ ಭಾಗವಾಗಿರುವ ಈ ಕೊಳ ಮಾತ್ರ ಇನ್ನೂ ಸುಭದ್ರವಾಗಿರುವುದು ಸೋಜಿಗವೇ ಸರಿ

Summer: ಬೇಸಿಗೆಯಲ್ಲೂ ಈ ಕೋಳ ಕೂಲ್‌ ಕೂಲ್‌, ಕಲ್ಯಾಣಿ ನಿರ್ವಹಣೆಯ ಮಾದರಿ photos

Monday, May 6, 2024

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

ಬೇಸಿಗೆ ಎಂದರೆ ಸಮ್ಮರ್‌ ಹಾಲಿಡೇಸ್‌. ಮಕ್ಕಳ ಬೇಸಿಗೆ ರಜೆ ಎಂಬುದು ಪೋಷಕರಿಗೂ ಒಂದು ರೀತಿಯ ಬಿಡುವಿನ ಕಾಲ. ಹಾಗಾಗಿ ಹಲವರು ಬೇಸಿಗೆ ಟ್ರಿಪ್‌ ಪ್ಲಾನ್‌ ಮಾಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದಿಚೇಗೆ ಅತಿಯಾದ ಬಿಸಿಲಿನ ಕಾರಣದಿಂದ ಹೊರಗಡೆ ಹೋಗುವುದು ಕಷ್ಟವಾಗಿದೆ, ಆದ್ರೂ ಮಕ್ಕಳು ಕೇಳಬೇಕಲ್ಲ. ಟ್ರಿಪ್‌ ಹೋಗುವ ಎಂದು ಹಟ ಮಾಡುವುದು ಸಹಜ.

ಬೇಸಿಗೆ ಟ್ರಿಪ್‌ ಪ್ಲಾನ್‌ ಇದ್ರೆ, ಭಾರತದ ಈ 6 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ; ಬಿರು ಬಿಸಿಲಿನಲ್ಲೂ ಕೂಲ್‌ ಆಗಿರುವ ತಾಣಗಳಿವು

Thursday, April 11, 2024

ಗುಲ್‌ ಮಾರ್ಗ್‌ ಎಂದರೆ ಅದನ್ನು ಹೂವಿನ ಹಾದಿ ಎಂದು ಅಲ್ಲಿನವರು ಕರೆಯುತ್ತಾರೆ. ಆದರೆ ಹಿಮಪಾತದ ಹಾದಿಯನ್ನು ಗುಲ್‌ ಮಾರ್ಗ್‌ ನಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ಖುಷಿ. ಹಿಮಪಾತದೊಂದಿಗೆ ಬದುಕು ಕಂಡುಕೊಂಡಿರುವ ಹಲವು ಪ್ರಾಣಿಗಳನ್ನೂ ಅಲ್ಲಿ ನೋಡಬಹುದು.

Kashmir Cool: ಎಲ್ಲೆಲ್ಲೂ ಬಿಸಿಗಾಳಿ, ಕಾಶ್ಮೀರದಲ್ಲೀಗ ಹಿಮಪಾತ, ಕರ್ನಾಟಕದ ಐಎಫ್‌ಎಸ್‌ ಅಧಿಕಾರಿ ತೆಗೆದ ಮೋಹಕ ಚಿತ್ರಗಳಿವು

Monday, April 8, 2024

ದಿ ವೇವ್‌-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.

ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ

Friday, March 29, 2024

ಭಾರತವು ಸಂಸ್ಕೃತಿ, ಆಚರಣೆಯ ನಲೆವೀಡು. ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೆ ಭಾರತದಲ್ಲಿನ ಈ 7 ಪ್ರಸಿದ್ಧ ದೇವಾಲಯಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ದೈವಭಕ್ತರಾಗಿದ್ದರೆ ಜೀವನದಲ್ಲಿ ಒಮ್ಮೆಯಾದ್ರೂ ಈ ದೇಗುಲಗಳಿಗೆ ಭೇಟಿ ನೀಡಿ, ದೇವರ ಅನುಗ್ರಹ ಪಡೆಯಿರಿ.

Temples in India: ವೈಷ್ಣೋದೇವಿಯಿಂದ ಕೇದಾರನಾಥದವರೆಗೆ, ಭಾರತದ 7 ಪ್ರಸಿದ್ಧ ದೇವಾಲಯಗಳಿವು; ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Thursday, March 28, 2024