west-indies News, west-indies News in kannada, west-indies ಕನ್ನಡದಲ್ಲಿ ಸುದ್ದಿ, west-indies Kannada News – HT Kannada

Latest west indies Photos

ಎಲ್ಲಾ ಪಂದ್ಯಗಳ ಕೊನೆಯಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತದ ಯಾವ ಸ್ಥಾನದಲ್ಲಿದೆ?

Tuesday, August 13, 2024

12 ಸಾವಿರ ರನ್​​ಗಳ ಗಡಿ ದಾಟುವುದರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಲಾರಾ 131 ಟೆಸ್ಟ್ ಪಂದ್ಯಗಳಲ್ಲಿ 11953 ರನ್ ಗಳಿಸಿದ್ದಾರೆ. ಈ ಟೆಸ್ಟ್​​​ಗೂ ಮೊದಲು ಲಾರಾಗಿಂತ 14 ರನ್ ಹಿಂದೆ ಇದ್ದ ರೂಟ್ ಈಗ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್; ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಮುರಿದ ಜೋ ರೂಟ್

Saturday, July 27, 2024

ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 241 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿದೆ. ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಸೋಲು ಕಂಡ ವೆಸ್ಟ್ ಇಂಡೀಸ್ ಆರನೇ ಸ್ಥಾನದಿಂದ ಕೊನೆಯ ಸ್ಥಾನಕ್ಕಿಳಿದಿದೆ.

ಡಬ್ಲ್ಯುಟಿಸಿ ಅಂಕಪಟ್ಟಿ: ವೆಸ್ಟ್ ಇಂಡೀಸ್‌ ವಿರುದ್ಧ ಗೆದ್ದು 6ನೇ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್; ಭಾರತ ಅಗ್ರಸ್ಥಾನದಲ್ಲೇ ಭದ್ರ

Monday, July 22, 2024

ಇದೇ ವೇಳೆ ಸ್ಟೋಕ್ಸ್​ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ಜಾಕ್ ಕಾಲಿಸ್ ನಂತರ ಟೆಸ್ಟ್​​ನಲ್ಲಿ 6000ಕ್ಕೂ ಹೆಚ್ಚು ರನ್ ಮತ್ತು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ. 93 ಟೆಸ್ಟ್​​​ನಲ್ಲಿ 8032 ರನ್ ಗಳಿಸಿದ್ದು, 235 ವಿಕೆಟ್ ಪಡೆದಿದ್ದಾರೆ. ಕಾಲಿಸ್ 166 ಟೆಸ್ಟ್​​ಗಳಲ್ಲಿ 13289 ರನ್, 292 ವಿಕೆಟ್ ಪಡೆದಿದ್ದಾರೆ.

6000 ರನ್, 200 ವಿಕೆಟ್; ಜಾಕ್ ಕಾಲಿಸ್-ಗ್ಯಾರಿ ಸೋಬರ್ಸ್ ಕ್ಲಬ್ ಸೇರಿದ ಬೆನ್​ಸ್ಟೋಕ್ಸ್

Friday, July 12, 2024

ಭಾರತದಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್‌ ವೇಳೆ ಎಲ್ಲವೂ ಪರಿಪೂರ್ಣವಾಗಿತ್ತು. ಆದರೆ, ವೆಸ್ಟ್‌ ಇಂಡೀಸ್‌ನಲ್ಲಿ ಹಲಾಲ್ ಮಾಂಸ ಒಂದು ಸಮಸ್ಯೆಯಾಗಿದೆ ಎಂದು ಆಟಗಾರರು ಹೇಳಿದ್ದಾರೆ.

ಸಿಗದ ಹಲಾಲ್‌ ಮಾಂಸ; ವೆಸ್ಟ್‌ ಇಂಡೀಸ್‌ನಲ್ಲಿ ಬಾಣಸಿಗರಾಗಿ ಬದಲಾದ ಅಫ್ಘಾನಿಸ್ತಾನ ಆಟಗಾರರು!

Saturday, June 22, 2024

ಸೇಂಟ್ ಲೂಸಿಯಾದಲ್ಲಿ ಜೂನ್ 20ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇಂಗ್ಲೆಂಡ್ 8 ವಿಕೆಟ್​ಗಳಿಂದ ಸೋಲಿಸಿತು. ಈ ಹಂತದಲ್ಲಿ ಇಂಗ್ಲೆಂಡ್ ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್ ಟಿಕೆಟ್ ಖಚಿತಗೊಳ್ಳಲಿದೆ.

ಫಿಲ್ ಸಾಲ್ಟ್, ಬೈರ್​ಸ್ಟೋ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

Thursday, June 20, 2024

ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಿರೋಲಸ್ ಪೂರನ್ ಓವರ್​​ವೊಂದರಲ್ಲಿ 36 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.

ಓವರ್​​ನಲ್ಲಿ 36 ರನ್ ಚಚ್ಚಿ ವಿಶ್ವದಾಖಲೆ ಬರೆದ ನಿಕೋಲಸ್ ಪೂರನ್; ಯುವರಾಜ್-ರೋಹಿತ್​ ದಾಖಲೆ ಸರಿಗಟ್ಟಿದ ವಿಂಡೀಸ್ ಕ್ರಿಕೆಟಿಗ

Tuesday, June 18, 2024

ಜೂನ್ 18ರ ಮಂಗಳವಾರ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಸಿ ಗುಂಪಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್​ ಗುಂಪು ಹಂತದ ಪಂದ್ಯಗಳಿಗೆ ತೆರೆ ಎಳೆಯಿತು. ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಸುತ್ತಿಗೆ ಅರ್ಹತೆ ಪಡೆದಿವೆ. ಒಟ್ಟು 12 ತಂಡಗಳು ಗುಂಪು ಲೀಗ್​ನಿಂದ ಹೊರಗುಳಿದಿವೆ. ಪಾಕಿಸ್ತಾನ-ನ್ಯೂಜಿಲೆಂಡ್​ನಂತಹ ಪ್ರಮುಖ ತಂಡಗಳೇ ನಾಕೌಟ್ ಆಗಿವೆ.

ಟಿ20 ವಿಶ್ವಕಪ್​ 2024 ಗುಂಪು ಹಂತದ ಪಂದ್ಯಗಳು ಮುಕ್ತಾಯ; ಲೀಗ್ ಅಂಕಪಟ್ಟಿಯಲ್ಲಿ ಟಾಪರ್ಸ್ ಯಾರು ನೋಡಿ

Tuesday, June 18, 2024

ಭರ್ಜರಿ ಫಾರ್ಮ್​​​​​​​ನಲ್ಲಿರುವ ಆಫ್ಘನ್, ತನ್ನ ಮುಂದಿನ ಪಂದ್ಯವನ್ನು ದುರ್ಬಲ ತಂಡ ಪಪುವಾ ನ್ಯೂಗಿನಿಯಾ ವಿರುದ್ಧ ಕಣಕ್ಕಿಳಿಯಲಿದೆ. ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದ್ದು, ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ.

ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೂಪರ್​-8 ಪ್ರವೇಶಿಸಿದ ವೆಸ್ಟ್ ಇಂಡೀಸ್; ಕಿವೀಸ್​ಗೆ ಲೀಗ್​ನಿಂದಲೇ ಹೊರಬೀಳುವ ಆತಂಕ

Thursday, June 13, 2024

ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಉಗಾಂಡಾ, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 58 ರನ್‌ಗಳಿಗೆ ಆಲೌಟ್ ಆಗಿತ್ತು. ಮುಂದಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾವನ್ನು ಸೋಲಿಸಿ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಗೆಲುವನ್ನು ಸಾಧಿಸಿತು. ಈ ಬಾರಿ, ವೆಸ್ಟ್ ಇಂಡೀಸ್ ವಿರುದ್ಧ ಮತ್ತೆ ಸೋಲುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ನಿರಾಶಾದಾಯಕ ವಿಶ್ವದಾಖಲೆಗೆ ಕಾರಣವಾಗಿದೆ.

ವೆಸ್ಟ್‌ ಇಂಡೀಸ್‌‌ ವಿರುದ್ಧ ಅಲ್ಪ ಮೊತ್ತಕ್ಕೆ ಆಲೌಟ್; ಡಚ್ಚರ ಹೆಸರಲ್ಲಿದ್ದ ಅನಗತ್ಯ ದಾಖಲೆ ಸರಿಗಟ್ಟಿದ ಉಗಾಂಡಾ

Sunday, June 9, 2024

ಆಸ್ಟ್ರೇಲಿಯಾ ವಿರುದ್ದದ ಗಬ್ಬಾ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟ ವೇಗಿ ಶಮರ್ ಜೋಸೆಫ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅವಿಸ್ಮರಣೀಯ ಗೆಲುವು ತಂದುಕೊಟ್ಟ ಜೋಸೆಫ್​ ಅವರನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

Shamar Joseph: ಗಬ್ಬಾ ಗೆಲುವಿನ ಹೀರೋ ಶಮರ್ ಜೋಸೆಫ್​ಗೆ ವೆಸ್ಟ್ ಇಂಡೀಸ್​ನಲ್ಲಿ ಸಿಕ್ತು ಅದ್ಧೂರಿ ಸ್ವಾಗತ

Sunday, February 4, 2024

ಮತ್ತೊಂದೆಡೆ ಭಾರತದ ನೆಲದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಮಹೋನ್ನತ ದಾಖಲೆ ಬರೆದಿದೆ. ಮೊದಲ ಟೆಸ್ಟ್​ನಲ್ಲಿ 28 ರನ್​ಗಳ ಗೆಲುವು ಸಾಧಿಸಿದೆ. ಹಾಗಾದರೆ ಎರಡೂ ಪಂದ್ಯಗಳ ನಂತರ ಡಬ್ಲ್ಯುಟಿಸಿ ಅಂಕಪಟ್ಟಿ ಏನೆಲ್ಲಾ ಬದಲಾಗಿದೆ ನೋಡೋಣ ಬನ್ನಿ.

ಗೆದ್ದರೂ ಇಂಗ್ಲೆಂಡ್ ತಟಸ್ಥ, ಸೋತು ಭಾರಿ ಕುಸಿತ ಕಂಡ ಭಾರತ; ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ

Monday, January 29, 2024

ಆಸೀಸ್​ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿದ್ದರೂ ಎರಡನೇ ಪಂದ್ಯದಲ್ಲಿ ಅಮೂಲ್ಯವಾದ ಜಯ ಸಾಧಿಸಿತು. ಇದರಿಂದ ಅಂಕ ಪಟ್ಟಿಯಲ್ಲಿ ಶೇ.33.33 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಈವರೆಗೂ ಆಡಿದ 4 ಟೆಸ್ಟ್​​ಗಳಲ್ಲಿ 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ.

ವೆಸ್ಟ್ ಇಂಡೀಸ್​ಗೆ ಗೆಲುವು, ಆಸ್ಟ್ರೇಲಿಯಾಗೆ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಬದಲಾವಣೆ

Sunday, January 28, 2024

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಿನವೇ ಸುರೇಶ್ ರೈನಾ ಸಹ ವಿದಾಯ ಘೋಷಿಸಿದರು. ಅನೇಕ ಕ್ರಿಕೆಟಿಗರು ಏಕಕಾಲದಲ್ಲಿ ನಿವೃತ್ತಿ ಘೋಷಿಸುವುದು ಕ್ರಿಕೆಟ್​​ನಲ್ಲಿ ಅಸಾಮಾನ್ಯವೇನಲ್ಲ. ಆದರೆ, ಒಂದೇ ತಂಡದ ನಾಲ್ವರು ಕ್ರಿಕೆಟಿಗರು ಒಟ್ಟಿಗೆ ನಿವೃತ್ತಿಯಾಗಿರುವುದನ್ನು ನೀವು ಕೇಳಿದ್ದೀರಾ?

ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ರಾಜೀನಾಮೆ ಪರ್ವ; ನಾಲ್ವರು ಮಹಿಳಾ ಕ್ರಿಕೆಟರ್ಸ್ ಒಟ್ಟಿಗೆ ನಿವೃತ್ತಿ

Friday, January 19, 2024

ಶಾಯ್ ಹೋಪ್ ಜವಾಬ್ದಾರಿಯುತ ಆಟವಾಡಿದರು. ಶೆರ್ಫಾನ್ ರುದರ್‌ಫೋರ್ಡ್ ಅವರೊಂದಿಗೆ ಜೊತೆಯಾದರು. ಅವರು 24 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 30 ರನ್ ಗಳಿಸಿದರು. ರೊವ್ಮನ್ ಪೊವೆಲ್ 8 ರನ್, ಆಂಡ್ರೆ ರಸೆಲ್ 3 ರನ್ ಗಳಿಸಿ ನಿರಾಶೆ ಮೂಡಿಸಿದರು. ಶಾಯ್ ಹೋಪ್ ತಾಳ್ಮೆಯಿಂದ ಬ್ಯಾಟ್‌ ಬೀಸಿದರು. 43 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಅಜೇಯರಾಗಿ ಪಂದ್ಯ ಗೆಲ್ಲಿಸಿದರು.

ಇಂಗ್ಲೆಂಡ್ ವಿರುದ್ಧ ಕೆರಿಬಿಯನ್ನರಿಗೆ ರೋಚಕ ಜಯ; ಏಕದಿನ ಬಳಿಕ ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್

Friday, December 22, 2023

ಇವರಷ್ಟೇ ಅಲ್ಲ, ನ್ಯೂಜಿಲೆಂಡ್​ನ ಕ್ರಿಸ್ ಕ್ರೈನ್ಸ್ (ಫಿಕ್ಸಿಂಗ್), ಬಾಂಗ್ಲಾದೇಶದ ರುಬೆಲ್​ ಹೊಸೈನ್ (ಲೈಂಗಿಕ ಕಿರುಕುಳ) ಭಾರತದ ಅಮಿತ್ ಮಿಶ್ರಾ (ಸ್ನೇಹಿತೆಯ ಮೇಲೆ ಹಲ್ಲೆ), ಬೆನ್​ ಸ್ಟೋಕ್ಸ್ (ಸಾರ್ವಜನಿಕರೊಂದಿಗೆ ಗಲಾಟೆ), ಧನುಷ್ಕಾ ಗುಣತಿಲಕ (ಲೈಂಗಿಕ ಕಿರುಕುಳ), ಶೇನ್​​ ವಾರ್ನ್ (ಮೈದಾನದ ಹೊರಗಿನ ಹಗರಣ), ಸಂದೀಪ್ ಲಮಿಚಾನೆ (ಅತ್ಯಾಚಾರ ಪ್ರಕರಣ), ಕಮ್ರಾನ್ ಅಕ್ಮಲ್ (ಸಂಚಾರ ನಿಯಮ ಉಲ್ಲಂಘನೆ), ಖಲೀದ್ ಲತೀಫ್ ಸೇರಿದಂತೆ ಇನ್ನೂ ಹಲವರು ಜೈಲಿನಲ್ಲಿ ಕಾಲ ಕಳೆದಿದ್ದಾರೆ.

ಫಿಕ್ಸಿಂಗ್​, ಕೊಲೆ, ಹಲ್ಲೆ ಸೇರಿ ಹಲವು ಪ್ರಕರಣಗಳಿಂದ ಜೈಲಿಗೆ ಹೋದ ಕ್ರಿಕೆಟರ್ಸ್; ಪಾಕಿಸ್ತಾನದವರೇ ಹೆಚ್ಚು

Wednesday, December 6, 2023

ಆದರೆ, ಕ್ರಿಕೆಟಿಗನೊಬ್ಬನನ್ನು ಗಲ್ಲಿಗೇರಿಸಿದ ಘಟನೆಯೊಂದು ಕೂಡ ನಡೆದಿದೆ. ಇಂತಹ ಭೀಕರ ಘಟನೆ ಕುರಿತು ಯಾರಿಗೂ ತಿಳಿದಿಲ್ಲ. ಈ ಘಟನೆ ನಡೆದಿದ್ದು 1955ರಲ್ಲಿ. ವೆಸ್ಟ್ ಇಂಡೀಸ್​ ತಂಡದ ಆಟಗಾರ. ಆ ಕುರಿತ ವಿವರ ಇಲ್ಲಿದೆ.

ಗಲ್ಲಿಗೇರಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು; ಪ್ರೀತಿಸಿ ಮದುವೆಯಾದ ಪತ್ನಿಗೆ ಏಳು ಗುಂಡು ಹಾರಿಸಿ ಕೊಂದಿದ್ದೇಕೆ?

Monday, December 4, 2023

ODI Ranking: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಂ.1 ಸ್ಥಾನ ಅಲಂಕರಿಸಿದ ಕ್ರಿಕೆಟಿಗರು ಇವರು

ODI Ranking: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಂ.1 ಸ್ಥಾನ ಅಲಂಕರಿಸಿದ ಕ್ರಿಕೆಟಿಗರು ಇವರು; ಭಾರತದ ಇಬ್ಬರಿಗೆ ಸ್ಥಾನ

Monday, August 14, 2023

ಫ್ಲೋರಿಡಾದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ನ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕೂಡ ಉತ್ತಮ ಆಟವಾಡಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಪೂರನ್ 35 ಎಸೆತಗಳಿಂದ 1 ಬೌಂಡರಿ 4 ಸಿಕ್ಸರ್‌ ಸೇರಿ 47 ರನ್ ಗಳಿಸಿದರು.

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20ಯಲ್ಲಿ ಎಡವಿದ ಟೀಂ ಇಂಡಿಯಾ; ಸರಣಿ ಸೋತ ಹಾರ್ದಿಕ್ ಪಡೆ; ಫೋಟೋಸ್

Monday, August 14, 2023

3ನೇ ಟಿ20 ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 4ನೇ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದರು 51 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 84 ರನ್ ಚಚ್ಚಿದರು.

India vs West Indies: ಸತತ 2 ಸೋಲುಗಳ ಬಳಿಕ ಮುಂದುವರಿದ ಟೀಂ ಇಂಡಿಯಾ ಗೆಲುವು; 4ನೇ ಟಿ20ಯಲ್ಲಿ ವಿಂಡೀಸ್ ಮಣಿಸಿದ ರೋಚಕ ಕ್ಷಣಗಳು

Sunday, August 13, 2023