Latest yuzvendra chahal Photos

ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ಕುರಿತ ವಿಚಾರವೊಂದು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಹಿಂದೆ ಆರ್​ಸಿಬಿ ತಂಡವನ್ನು ತೊರೆದು ಬೇರೆ ತಂಡಗಳ ಪರ ಅಬ್ಬರಿಸುತ್ತಿರುವ ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್​​ಸಿಬಿ ತೊರೆದ ಬೇರೆ ಫ್ರಾಂಚೈಸಿಗಳ ಪರ ಅಬ್ಬರಿಸುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

ಆರ್​ಸಿಬಿ ಪರ ​ಫ್ಲಾಪ್ ಶೋ, ಬೇರೆ ತಂಡಗಳ ಪರ ಪವರ್​ಫುಲ್ ಶೋ; ಐಪಿಎಲ್​​ನಲ್ಲಿ ಮಿಂಚ್ತಿರುವ ಬೆಂಗಳೂರು ಮಾಜಿ ಆಟಗಾರರು ಇವರೇ

Thursday, April 25, 2024

2013ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಯೂಜಿ, ಈವರೆಗೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಮುಂಬೈ ಪರ ಆಡುತ್ತಿದ್ದ ಅವರು, ಆ ಬಳಿಕ ಸುದೀರ್ಘ ವರ್ಷಗಳ ಕಾಲ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್‌ ಆಗಿದ್ದರು.

ಐಪಿಎಲ್‌ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್

Monday, April 22, 2024

ಐಪಿಎಲ್​ನ ಪ್ರತಿ ಫ್ರಾಂಚೈಸಿ ಪರ ಒಬ್ಬೊಬ್ಬ ಆಟಗಾರ ಅದ್ಭುತ ಪ್ರದರ್ಶನ ನೀಡಿರುತ್ತಾರೆ. ಆದರೆ, ಅದೇ ಆಟಗಾರ ತಾನು ಮೊದಲಿದ್ದ ತಂಡದ ಪರ ಕಳಪೆ ಪ್ರದರ್ಶನ ನೀಡಿರುತ್ತಾರೆ. ಅಥವಾ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಕೈಬಿಡಲಾಗಿರುತ್ತದೆ. ಆದರೆ, ಅಂತಹ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಟ್ಟು ತಪ್ಪು ಮಾಡಿವೆ. ಯಾವ ತಂಡ ಯಾರನ್ನು ಕೈಬಿಟ್ಟು ಕೆಟ್ಟಿದೆ ಎಂಬ ಪಟ್ಟಿ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಈ ಕ್ರಿಕೆಟಿಗರನ್ನು ಕೈಬಿಟ್ಟು ಕೆಟ್ಟ ಫ್ರಾಂಚೈಸಿಗಳು; ದೊಡ್ಡ ಮಿಸ್ಟೇಕ್ ಮಾಡಿಕೊಂಡ ತಂಡಗಳು ಇವು

Wednesday, April 17, 2024

2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಲೀಗ್​ನಲ್ಲಿ ಬ್ಯಾಟರ್​ಗಳು​ ಮತ್ತು ಬೌಲರ್​​ಗಳು​ ಆಯಾ ತಂಡಗಳ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಲು ಸಜ್ಜಾಗುತ್ತಿದ್ದರೆ. ಆರೆಂಜ್ ಕ್ಯಾಪ್ ಗೆಲ್ಲಲು ಬ್ಯಾಟ್ಸ್​​​ಮನ್​​ಗಳ ನಡುವೆ ಸ್ಪರ್ಧೆ ನಡೆದರೆ, ಮತ್ತೊಂದೆಡೆ ಪರ್ಪಲ್​ ಗೆಲ್ಲಲು ಬೌಲರ್​​ಗಳ ನಡುವೆ ಪೈಪೋಟಿ ಏರ್ಪಡಲಿದೆ. ಐಪಿಎಲ್ 2024 ರಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಬಲ್ಲ ಬೌಲರ್​​ಗಳನ್ನು ಈ ಮುಂದೆ ನೋಡೋಣ.

2024ರ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಸಾಮರ್ಥ್ಯ ಹೊಂದಿರುವ ಟಾಪ್-5 ಬೌಲರ್​​ಗಳ ಪಟ್ಟಿ ಇಲ್ಲಿದೆ

Monday, March 11, 2024

ಬಿಸಿಸಿಐನ ಕೇಂದ್ರ ಗುತ್ತಿಗೆಯಿಂದ ಕೈಬಿಡಲ್ಪಟ್ಟ ಯುಜ್ವೇಂದ್ರ ಚಹಲ್ ಇನ್​ಕಮ್ ಟ್ಯಾಕ್ಸ್​ ತಂಡದ ಪರ ಅದ್ಭುತವಾಗಿ ಬೌಲಿಂಗ್ ಮಾಡಿದರು. ಕೆನರಾ ಬ್ಯಾಂಕ್ ವಿರುದ್ಧ 4 ಓವರ್ ಎಸೆದು ಕೇವಲ 22 ರನ್ ನೀಡಿ 4 ವಿಕೆಟ್ ಪಡೆದರು. ಇದೇ ಪಂದ್ಯದಲ್ಲಿ ಶೆಲ್ಡನ್ ಜಾಕ್ಸನ್ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಅವರು 1 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಹೊಡೆದರು. ಮಹಿಪಾಲ್ ಲೊಮ್ರೊರ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್​​​ ಸಹಾಯದಿಂದ 49 ರನ್ ಗಳಿಸಿದರು. ಇಶಾನ್ ಪೊರೆಲ್ 15 ರನ್ ನೀಡಿ 1 ವಿಕೆಟ್ ಪಡೆದರೆ, ಪ್ರದೀಪ್ತಾ ಪ್ರಾಮಾಣಿಕ್ 24 ರನ್ ನೀಡಿ 2 ವಿಕೆಟ್ ಪಡೆದರು.

ಮನೀಶ್ ಪಾಂಡೆ ಶತಕ, ಚಹಲ್​ಗೆ 4 ವಿಕೆಟ್; ಐಪಿಎಲ್​ಗೂ ಮುನ್ನ ಡಿವೈ ಪಾಟೀಲ್ ಟಿ20 ಕಪ್​ನಲ್ಲಿ ಭಾರತೀಯ ಆಟಗಾರರ ಅಬ್ಬರ

Wednesday, March 6, 2024

2013ರ ಐಪಿಎಲ್​ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್​ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್​ಗಳು ಇವರೇ ನೋಡಿ

Friday, February 9, 2024

ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಕಳೆದ ವರ್ಷ ನಡೆದ 58 ಸೀಮಿತ ಓವರ್‌ ಪಂದ್ಯಗಳಲ್ಲಿ ಕೇವಲ 10ರಲ್ಲಿ ಮಾತ್ರ ಆಡಿದ್ದಾರೆ.

2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು

Saturday, January 6, 2024

ಯುಜ್ವೇಂದ್ರ ಚಹಾಲ್ ಹಲವು ಸಂದರ್ಭಗಳಲ್ಲಿ ಭಾರತ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇದೀಗ ಚಹಾಲ್ ಈಗ ಪತ್ನಿ ಧನಶ್ರೀ ಅವರಿಗೆ ತಮ್ಮ ವಿವಾಹ ವಾರ್ಷಿಕೋತ್ಸವದಂದು ವಿಶೇಷವಾಗಿ ಹಾರೈಸಿದ್ದಾರೆ.

Photos: ಚಹಾಲ್-ಧನಶ್ರೀ ದಾಂಪತ್ಯಕ್ಕೆ 3 ವರ್ಷ; ನಿನ್ನಿಂದ ನಾನು ಪರಿಪೂರ್ಣ ವ್ಯಕ್ತಿ ಎಂದ ಯೂಜಿ

Friday, December 22, 2023

ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ಜರುಗಲಿದ್ದು, ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ‌ ಕೋಟಿ ಕೋಟಿ ಸುರಿಯಲು ಸಜ್ಜಾಗಿವೆ. ಹರಾಜಿನ ಕಣದಲ್ಲಿ ಒಟ್ಟು 333 ಆಟಗಾರಿದ್ದು, ಜಾಕ್ ಪಾಟ್ ಹೊಡೆಯಲು ಕಾತರದಿಂದ ಕಾಯುತ್ತಿದ್ದಾರೆ.

RCB 2024: ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​​ಸಿಬಿ ಖರೀದಿಸಿದ ಅತ್ಯುತ್ತಮ ಆಟಗಾರರ ಪಟ್ಟಿ ಇಲ್ಲಿದೆ

Friday, December 15, 2023

ಸ್ಪರ್ಧಾತ್ಮಕ ಕ್ರಿಕೆಟ್‌ ಯುಗದಲ್ಲಿ ಭಾರತದ ಹಲವು ಆಟಗಾರರು ಟೀಮ್‌ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.‌ ಇದು ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ತಂಡಕ್ಕೂಅನ್ವಯಿಸುತ್ತಿದೆ. ಕೆಲವೊಬ್ಬರಿಗೆ ಗಾಯವೇ ಸಮಸ್ಯೆಯಾದರೆ, ಇನ್ನೂ ಕೆಲವು ಆಟಗಾರರಿಗೆ ಅದೃಷ್ಟ ಕೈಕೊಟ್ಟಿದೆ.

ಭಾರತ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರೂ ವಿಶ್ವಕಪ್ ಆಡಲು ಸಾಧ್ಯವಾಗದ ಟಾಪ್ 6 ಆಟಗಾರರು

Friday, September 29, 2023

ಆದರೆ ಈ ಫೋಟೋಗಳಲ್ಲಿ ಚಹಲ್​ಗಿಂತ ಧನಶ್ರೀ ಸಖತ್​ ಬೋಲ್ಡ್​ ಮತ್ತು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ತೊಟ್ಟು ಬೀಚ್​​​ನಲ್ಲಿ ಪುಸ್ತಕ ಓದುವ ಮೂಲಕ ಗಮನ ಸೆಳೆದಿದ್ದಾರೆ.

Dhanashree Verma: ಮಟಮಟ ಮಧ್ಯಾಹ್ನ ಮಿರಿಮಿರಿ ಮಿಂಚುವ ಬಿಕಿನಿ ಧರಿಸಿ ಬುಕ್ ಓದಿದ ಚಹಲ್ ಪತ್ನಿ; ಯಾವ ಪಾಠ ಓದ್ತಿರೋದು ಎಂದ ನೆಟ್ಟಿಗರು

Monday, August 28, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ತಾನು ಹಂಚಿಕೊಂಡಿರುವ ಫೋಟೋಗಳಿಗೆ ನನ್ನ ಭಾಭಿ ಜಗತ್ತಿನಲ್ಲಿ ಸ್ವಲ್ಪ ಬಾರ್ಬಿಯನ್ನು ನುಡಿಸುತ್ತಿದ್ದೇನೆ ಎಂದು ಕ್ಯಾಪ್ಶನ್​ ಹಾಕಿದ್ದಾರೆ. ಚಹಲ್ ತಮ್ಮ ಪತ್ನಿಯ ಫೋಟೋಗಳಿಗೆ ಅದ್ಭುತ ಕಮೆಂಟ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Dhanashree Verma: ಬಾರ್ಬಿ ಗರ್ಲ್​​ ಲುಕ್​ನಲ್ಲಿ ಕಣ್ಮನ ಸೆಳೆದ ಚಹಲ್ ಪತ್ನಿ ಧನಶ್ರೀ; ಆದರೂ ಗ್ಲಾಮರ್‌ ಡೋಸ್ ಕಡಿಮೆಯಾಯ್ತೆಂದ ಫ್ಯಾನ್ಸ್

Wednesday, July 26, 2023

ದಿನಗಳು ಉರುಳಿದಂತೆ ಟ್ರೆಂಡ್​ ಬದಲಾಗುತ್ತದೆ. ಫ್ಯಾಷನ್, ಮೇಕಪ್, ಲೈಫ್‌ಸ್ಟೈಲ್ ಹೀಗೆ ಎಲ್ಲವೂ ಬದಲಾಗುತ್ತದೆ. ಅದೇ ರೀತಿ ಟ್ರೆಂಡ್​​​​ನಲ್ಲಿ ಇರೋದು ಟ್ಯಾಟೂ ಫ್ಯಾಷನ್. ಇದಕ್ಕೆ ಕ್ರಿಕೆಟಿಗರು ಕೂಡ ಹೊರತಾಗಿಲ್ಲ. ಕೊಹ್ಲಿ,​ ರಾಹುಲ್, ಸೂರ್ಯ, ಸ್ಟೋಕ್ಸ್​​.. ಹೀಗೆ ಅನೇಕ ಕ್ರಿಕೆಟಿಗರಿಗೆ ಈ ಟ್ಯಾಟೂ ಹುಚ್ಚು ತುಸು ಹೆಚ್ಚೇ ಇದೆ.

Cricketers Tattoo: ಈ ಕ್ರಿಕೆಟಿಗರ ಮೈತುಂಬಾ ಟ್ಯಾಟೂಗಳೇ, ಒಂದೊಂದಕ್ಕೂ ಇದೆ ವಿಶೇಷ ಅರ್ಥ; ಯಾರೆಷ್ಟು, ಯಾವೆಲ್ಲಾ ಹಚ್ಚೆ ಹಾಕಿಸಿದ್ದಾರೆ ನೋಡಿ

Monday, June 26, 2023

ಸುರೇಶ್​ ರೈನಾ ಐಪಿಎಲ್​-2023ರ ಅತ್ಯುತ್ತಮ ತಂಡವನ್ನು ಪ್ರಕಟಿಸಿದ್ದು, ಅವರ ಆಪ್ತ ಎಂಎಸ್​ ಧೋನಿಯನ್ನೇ ಕೈಬಿಟ್ಟಿದ್ದಾರೆ. ರೈನಾ ಪ್ರಕಟಿಸಿದ ತಂಡವನ್ನು ಕಂಡು ಧೋನಿ ಶಾಕ್​ ಆಗಿದ್ದಾರೆ.

Suresh Raina: ಪ್ರಸಕ್ತ ಐಪಿಎಲ್​ನ ಬಲಿಷ್ಠ ತಂಡ ಕಟ್ಟಿದ ಸುರೇಶ್​ ರೈನಾ; ಧೋನಿಗೇ ಇಲ್ಲ ಈ ಟೀಮ್​ನಲ್ಲಿ ಸ್ಥಾನ

Saturday, May 27, 2023

16ನೇ ಆವೃತ್ತಿಯ ಐಪಿಎಲ್​ನ 56ನೇ ಪಂದ್ಯದಲ್ಲಿ 4 ವಿಕೆಟ್ ಬೇಟೆಯಾಡಿದ ಯುಜ್ವೇಂದ್ರ ಚಹಲ್ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಆ ಮೂಲಕ ಐಪಿಎಲ್​ ಚರಿತ್ರೆಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Chahal IPL Record: ಐಪಿಎಲ್​​ನಲ್ಲಿ ನೂತನ ಚರಿತ್ರೆ ಸೃಷ್ಟಿಸಿದ ಚಹಲ್​; ಅತಿ ಹೆಚ್ಚು ವಿಕೆಟ್​ ಪಡೆದವರಲ್ಲೂ ಭಾರತದವರೇ ಮೇಲುಗೈ

Friday, May 12, 2023

ತಮ್ಮ ಪ್ರೇಮಕಥೆಯು ಶಿಕ್ಷಕಿ ಮತ್ತು ವಿದ್ಯಾರ್ಥಿಯ ಸಂಬಂಧದಿಂದ ಪ್ರಾರಂಭವಾಯಿತು ಎಂದು ಈ ಜೋಡಿಯು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Chahal Love story: ಲಾಕ್‌ಡೌನ್‌ನಲ್ಲಿ ಪರಿಚಯವಾದ ಶಿಕ್ಷಕಿಯನ್ನು ಪ್ರೀತಿಸಿ ಮದುವೆಯಾದ ಯೂಜಿ; ಇವರದ್ದು ಮುದ್ದಾದ ಪ್ರೇಮಕತೆ

Wednesday, May 3, 2023

3. ಸಾಕ್ಷಿ ಧೋನಿ: ಟೀಮ್​ ಇಂಡಿಯಾದ ಮಾಜಿ ನಾಯಕ, ಸಿಎಸ್​ಕೆ ತಂಡದ ನಾಯಕ ಎಂಎಸ್​​ ಧೋನಿ ಅವರ ಪತ್ನಿ ಸಾಕ್ಷಿ ಇನ್​​ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಸದಾ ಆ್ಯಕ್ಟೀವ್​ ಆಗದಿದ್ದರೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

Cricketers Wives: ಇನ್​ಸ್ಟಾಗ್ರಾಂನಲ್ಲಿ ಈ ಕ್ರಿಕೆಟರ್ಸ್​​ ಪತ್ನಿಯರ ಕ್ರೇಜೇ ಬೇರೆ; ಅಧಿಕ ಫಾಲೋವರ್ಸ್ ಹೊಂದಿರುವ​ ಟಾಪ್-10 ಪಟ್ಟಿ ಇಲ್ಲಿದೆ

Saturday, April 29, 2023

50+ ಸ್ಕೋರ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಧವನ್​​ ಸಮಗೊಳಿಸಿದ್ದಾರೆ. IPL​ನಲ್ಲಿ ವಿರಾಟ್ ಕೊಹ್ಲಿ 50 ಬಾರಿ ಫಿಫ್ಟಿ ಪ್ಲಸ್ ರನ್​ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಧವನ್ ಪಾತ್ರರಾದರು.

Dhawan, Chahal: ಕೊಹ್ಲಿ ವಿಶೇಷ ದಾಖಲೆ ಸರಿಗಟ್ಟಿದ ಧವನ್; ಮಲಿಂಗ​ ರೆಕಾರ್ಡ್​ ಮುರಿದ ಚಹಲ್!

Thursday, April 6, 2023