ಪ್ರೇಮ್‌, ದರ್ಶನ್‌ ಸಿನಿಮಾಕ್ಕೆ ಕಟೀಲು ದುರ್ಗಮ್ಮ ಒಳ್ಳೆಯದು ಮಾಡಲಿ; ಅಮ್ಮನಿಗೆ ಸೀರೆ ಅರ್ಪಿಸಿದ ರಕ್ಷಿತಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರೇಮ್‌, ದರ್ಶನ್‌ ಸಿನಿಮಾಕ್ಕೆ ಕಟೀಲು ದುರ್ಗಮ್ಮ ಒಳ್ಳೆಯದು ಮಾಡಲಿ; ಅಮ್ಮನಿಗೆ ಸೀರೆ ಅರ್ಪಿಸಿದ ರಕ್ಷಿತಾ

ಪ್ರೇಮ್‌, ದರ್ಶನ್‌ ಸಿನಿಮಾಕ್ಕೆ ಕಟೀಲು ದುರ್ಗಮ್ಮ ಒಳ್ಳೆಯದು ಮಾಡಲಿ; ಅಮ್ಮನಿಗೆ ಸೀರೆ ಅರ್ಪಿಸಿದ ರಕ್ಷಿತಾ

Oct 22, 2023 10:17 AM IST Manjunath B Kotagunasi
twitter
Oct 22, 2023 10:17 AM IST

  • ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಪ್ರೇಮ್‌, ದೈವ ಭಕ್ತೆ. ಶೂಟಿಂಗ್‌ ಬಿಡುವಿನಲ್ಲಿ ಗುಡಿ ಗುಂಡಾರಗಳಿಗೆ ಭೇಟಿ ನೀಡಿ ದರ್ಶನ ಪಡೆದು ಬರುತ್ತಿರುತ್ತಾರೆ. ಅದರಲ್ಲೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಾಗ ಬರುತ್ತಲೇ ಇರುತ್ತಾರೆ. ಅಮ್ಮನ ದರ್ಶನ ಪಡೆಯುತ್ತಲೇ ಇರುತ್ತಾರೆ. ಇದೀಗ ದಸರಾ ನಿಮಿತ್ತ ಆಪ್ತರ ಜತೆಗೆ ದೇವಿಯ ಸನ್ನಿಧಾನಕ್ಕೆ ಆಗಮಿಸಿದ್ದಾರೆ ರಕ್ಷಿತಾ ಪ್ರೇಮ್. ಶರನ್ನವರಾತ್ರಿಯ ಲಲಿತಾ ಪಂಚಮಿಯ ಶುಭದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ ಭೇಟಿ ನೀಡಿದ್ದಾರೆ. ಈ ವೇಳೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸೀರೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ನಟಿ ರಕ್ಷಿತಾ ಪ್ರೇಮ್ ಅವರನ್ನು ಗೌರವಿಸಲಾಯಿತು.

More