Bangalore Kambala : ಬೆಂಗಳೂರಿನ ರಾಜ ಮಹಾರಾಜ ಜೋಡುಕೆರೆ ಕಂಬಳದಲ್ಲಿ ಕಾಂತಾರ ಕೋಣಗಳಿಗೆ ಚಿನ್ನದ ಪದಕ
- ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಜೋಡುಕೆರೆ ಕಂಬಳ ವಿದ್ಯುಕ್ತ ತೆರೆಕಂಡಿದೆ. ಅರಮನೆ ಮೈದಾನದಲ್ಲಿ ನಡೆದ ರಾಜ ಮಹಾರಾಜ ಜೋಡುಕರೆ ಕಂಬಳದ ಫಲಿತಾಂಶ ಹೊರಬಿದ್ದಿದ್ದು, ಕರಾವಳಿಯಿಂದ ಬೆಂಗಳೂರಿಗೆ ಹೋಗಿದ್ದ ಕೋಣಗಳು ಪ್ರಶಸ್ತಿಯೊಂದಿಗೆ ಮರಳುತ್ತಿವೆ. ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದ ಕೋಣಗಳಿಗೂ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ 6.5 ಕೋಲು ನೀರು ಚಿಮ್ಮಿಸಿ ಚಿನ್ನದ ಪದಕ ಗೆದ್ದಿವೆ.