ಸಹನೆ ಇದ್ದರೆ ಏನನ್ನಾದರೂ ಗೆಲ್ಲಬಹುದು, ಸಾಧು ಸಂತರು ತಾಳ್ಮೆಯಿಂದಲೇ ಎಲ್ಲವನ್ನೂ ಗೆದ್ದದ್ದು; ಮುರುಘಾ ಶ್ರೀಗಳು
ಪೋಕ್ಸೋ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಮುರುಘಾಶ್ರೀ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆ ಶ್ರೀಗಳನ್ನು ಚಿತ್ರದುರ್ಗ ಕಾರಾಗೃಹದಿಂದ ನಿನ್ನೆ ಸಂಜೆ ಬಿಡುಗಡೆ ಮಾಡಲಾಗಿದೆ. ಹೊರಗೆ ಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಭಕ್ತರೆಲ್ಲರೂ ಚೆನ್ನಾಗಿರಬೇಕು, ನೋಡುವವರ ದೃಷ್ಟಿ ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಶಿವಯೋಗಿ ಆಶ್ರಮದಲ್ಲಿ ಉಳಿದುಕೊಳ್ಳುತ್ತೇನೆ. ಭಕ್ತರ ಭೇಟಿಗೆ ಅವಕಾಶವಿದೆ. ಅವರಿಗಾಗಿ ನಾವು ಇರುವುದು. ಧೈರ್ಯ, ಸ್ಥೈರ್ಯ, ಸಹನೆ ಇದ್ದರೆ ಸತ್ಯ ಗೆಲ್ಲುತ್ತದೆ. ಇವೆಲ್ಲವೂ ಇದ್ದರೆ ಎಂತಹ ಸಮಸ್ಯೆಯನ್ನಾದರೂ ಗೆಲ್ಲಬಹುದು, ನಮ್ಮ ಸಾಧು ಸಂತರು ಸಹನೆಯಿಂದಲೇ ಎಲ್ಲವನ್ನೂ ಗೆದ್ದದ್ದು. ಸತ್ಯಕ್ಕೆ ಜಯ ದೊರೆಯುವುದೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.