ಕರ್ನಾಟಕ ಉಪ ಚುನಾವಣೆ 2024: ಗೆಲುವು ಯಾರ ಪಾಲಿಗೆ, ಮುಖಭಂಗ ಅನುಭವಿಸುವವರು ಯಾರು? ವಿಶ್ಲೇಷಣೆ
ಕರ್ನಾಟಕ ಉಪ ಚುನಾವಣೆ 2024: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಉಪ ಚುನಾವಣೆ ಫಲಿತಾಂಶ ಶನಿವಾರ (ನ. 23) ರಂದು ಪ್ರಕಟವಾಗಲಿದೆ. ಚುನಾವಣೆಯಲ್ಲಿ ಯಾರು ಗೆಲ್ತಾರೆ. ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸ್ಥಾನ ದೊರೆಯಬಹುದು ಎಂದು ಚರ್ಚೆ ಜೋರಾಗಿದೆ. ಜೊತೆಗೆ ಬೆಟ್ಟಿಂಗ್ ಕೂಡಾ ಜೋರಾಗಿದೆ. ಬುಧವಾರ ಸಂಜೆಯಷ್ಟೇ ಎಕ್ಸಿಟ್ ಪೋಲ್ ಪ್ರಕಟವಾಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಬಳಗದ ನಡುವೆ ನೇರ ಪೈಪೋಟಿ ಇದ್ದರೆ, ಶಿಗ್ಗಾಂವಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬಹುದು ಎನ್ನಲಾಗುತ್ತಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಲಕ್ಷಣ ಕಾಣುತ್ತಿದೆ. ಇದರ ಬಗ್ಗೆ ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್ ವಿಶ್ಲೇಷಣೆ ನಡೆಸಿದ್ದಾರೆ.