ವಿರಾಜಪೇಟೆಯಲ್ಲಿ ಕಾರು ಅಡ್ಡಗಟ್ಟಿ ದೋಚಲು ಯತ್ನಿಸಿದ ದರೋಡೆಕೋರರು; ದೂರು ದಾಖಲು
ರಾತ್ರಿ ಸಮಯದಲ್ಲಿ ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕಾರು, ಲಾರಿ, ಬಸ್‌ಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಎಷ್ಟೋ ಪ್ರಕರಣಗಳು ಪದೇ ಪದೆ ವರದಿಯಾಗುತ್ತಿದೆ. ಇದೀಗ ಮಡಿಕೇರಿಯ ವಿರಾಜಪೇಟೆಯಲ್ಲಿ ಕೂಡಾ ಇಂಥದ್ದೇ ಒಂದು ಪ್ರಕರಣ ನಡೆದಿದೆ. ರಸ್ತೆ ಮಧ್ಯದಲ್ಲಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಅಷ್ಟರಲ್ಲಿ ಕಾರು ಚಾಲಕ ಅವರಿಂದ ತಪ್ಪಿಸಿಕೊಂಡು ವೇಗವಾಗಿ ಕಾರು ಚಲಾಯಿಸಿದ್ದಾನೆ. ಆತನ ಸಮಯ ಪ್ರಜ್ಞೆಯಿಂದ ಮುಂದಾಗಬಹುದಾದ ಅನಾಹುತವೊಂದು ತಪ್ಪಿದೆ. ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.