ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಮಂಗಳೂರಿನ 16 ವರ್ಷದ ಅನ್ವೇಶ್ ಅಂಬೆಕಲ್ಲು; 16 ಜನ ಒಂದೇ ಸಲ ಹೇಳಿದ್ದನ್ನು ನೆನಪಿಡುವ ಹುಡುಗ- Viral Video
ಮಂಗಳೂರು: ಸ್ವರೂಪ ಅಧ್ಯಯನ ಕೇಂದ್ರದ 9 ನೇ ತರಗತಿಯ ವಿದ್ಯಾರ್ಥಿ ಅನ್ವೇಶ್ ಅಂಬೆಕಲ್ಲು ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2024 ರ ಪುಟ ಸೇರಿದ್ದಾರೆ. ಅವರು 'ಹದಿಹರೆಯದವರು ಕಂಠಪಾಠ ಮಾಡಿದ ಮತ್ತು ನೆನಪಿಸಿಕೊಳ್ಳಲಾಗದ ಗರಿಷ್ಠ ವಿಷಯಗಳು' ವಿಭಾಗದಲ್ಲಿ ದಾಖಲೆ ಬರೆದಿದ್ದಾರೆ. ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಅನ್ವೇಶ್. 'ಷೋಡಶ ಅವಧಾನ’ ತಂತ್ರದ ಮೂಲಕ 16 ವಿಷಯಗಳನ್ನು ಮನನ ಮಾಡಿಕೊಳ್ಳುವ ಮೂಲಕ ಅನ್ವೇಶ್ ಈ ಮೈಲಿಗಲ್ಲು ಸಾಧಿಸಿದ್ದಾರೆ.
ಶಿಕ್ಷಣ ಇಲಾಖೆಯ ಗೆಜೆಟೆಡ್ ಅಧಿಕಾರಿ ಸಮ್ಮುಖದಲ್ಲಿ ದಾಖಲೆ ಯತ್ನ ನಡೆದಿದೆ. ಇಂಜಿನಿಯರ್ ಮಧುಸೂಧನ್ ಅಂಬೆಕಲ್ಲು ಮತ್ತು ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರ ಅನ್ವೇಶ್ ಅವರು ಶಾಸ್ತ್ರೀಯ ಸಂಗೀತ, ಮಿಮಿಕ್ರಿ, ಪಿಟೀಲು ವಾದನ ಮತ್ತು ಕಲೆಯ ಅಧ್ಯಯನ ಮಾಡುತ್ತಿದ್ದು, ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮುತ್ತಿದ್ದಾರೆ.