ಹೈದರಾಬಾದ್‌ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ; ನೋಡ ನೋಡುತ್ತಿದ್ದಂತೆ ಶಾಪ್‌ನಲ್ಲಿದ್ದ ಪಟಾಕಿಗಳು ಭಸ್ಮ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹೈದರಾಬಾದ್‌ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ; ನೋಡ ನೋಡುತ್ತಿದ್ದಂತೆ ಶಾಪ್‌ನಲ್ಲಿದ್ದ ಪಟಾಕಿಗಳು ಭಸ್ಮ

ಹೈದರಾಬಾದ್‌ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ; ನೋಡ ನೋಡುತ್ತಿದ್ದಂತೆ ಶಾಪ್‌ನಲ್ಲಿದ್ದ ಪಟಾಕಿಗಳು ಭಸ್ಮ

Published Oct 29, 2024 09:35 PM IST Rakshitha Sowmya
twitter
Published Oct 29, 2024 09:35 PM IST

ದೀಪಾವಳಿ ಸಂಭ್ರಮ ಶುರುವಾಗಿದೆ. ಮಕ್ಕಳು ಈಗಾಗಲೇ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಹಬ್ಬದ ದಿನವಂತೂ ಸಂಭ್ರಮದ ಜೊತೆ ಶಬ್ಧ ಮಾಲಿನ್ಯವೂ ಹೆಚ್ಚಾಗುತ್ತದೆ. ಜೊತೆಗೆ ಎಷ್ಟೋ ಕಡೆ ಅವಘಡ ಸಂಭವಿಸುತ್ತದೆ. ಪಟಾಕಿ ಸಿಡಿದು ದೇಹಕ್ಕೆ ಗಾಯವಾಗುವುದು, ಪ್ರಾಣ ಕಳೆದುಕೊಳ್ಳುವುದು, ಬೆಂಕಿ ಕಿಡಿ ಬಟ್ಟೆಗೆ ಹೊತ್ತಿಕೊಳ್ಳುವ ಏಷ್ಟೋ ದುರ್ಘಟನೆಗಳು ಸಂಭವಿಸುವುದನ್ನು ನೋಡಿರುತ್ತವೆ. ಜೊತೆಗೆ ಪಟಾಕಿ ಅಂಗಡಿಗೆ ಬೆಂಕಿ ಹೊತ್ತಿಕೊಳ್ಳುವುದನ್ನೂ ನೋಡಿದ್ದೇವೆ. ಇದೀಗ ಹೈದರಾಬಾದ್‌ನಲ್ಲಿ ಇಂಥದ್ದೇ ಘಟನೆ ಸಂಭವಿಸಿದೆ. ದೊಡ್ಡ ಪಟಾಕಿಯೊಂದಕ್ಕೆ ಹೊತ್ತಿಕೊಂಡ ಕಿಡಿ ದೊಡ್ಡದಾಗಿ ವ್ಯಾಪಿಸಿದೆ. ನೋಡ ನೋಡುತ್ತಿದ್ದಂತೆ ದಟ್ಟ ಹೊಗೆ ಆಕಾಶದೆತ್ತರಕ್ಕೆ ಹರಡಿದೆ. ಅಂಗಡಿಗೆ ಪಟಾಕಿ ಹೊತ್ತುಕೊಳ್ಳುತ್ತಿದ್ದಂತೆ ಅಂಗಡಿಯವರು ಉಳಿದ ಪಟಾಕಿ ಬಾಕ್ಸ್‌ಗಳನ್ನು ಹೊರಗೆ ತರುವ ಪ್ರಯತ್ನ ಮಾಡುತ್ತಿರುವ ದೃಶ್ಯವನ್ನು ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು.

More