ತಿರುಪತಿ ತಿಮ್ಮಪ್ಪನ ಲಡ್ಡಿಗೆ ಕರ್ನಾಟಕದ ಹೆಮ್ಮೆಯ ನಂದಿನಿಯ ಶುದ್ಧ ತುಪ್ಪ ಸರಬರಾಜು; 350 ಮೆಟ್ರಿಕ್ ಟನ್ ಸಪ್ಲೈ
- Karnataka KMF: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಮತ್ತೆ ನಂದಿನಿ ತುಪ್ಪದ ಘಮಲು ಕಾಣಿಸಿಕೊಳ್ಳಲಿದೆ. 2013-14ನೇ ಸಾಲಿನಿಂದ ನಿರಂತರವಾಗಿ 5 ಸಾವಿರ ಮೆಟ್ರಿಕ್ ಟನ್ ತುಪ್ಪ ಕಳಿಸಿದ್ದ ನಂದಿನಿ ನಷ್ಟದ ಕಾರಣ ಕಳೆದೊಂದು ವರ್ಷದಿಂದ ಟೆಂಡರ್ನಿಂದ ಹಿಂದೆ ಸರಿದಿತ್ತು. ಈಗ ಮತ್ತೆ ಒಪ್ಪಂದ ಮಾಡಿಕೊಂಡಿದ್ದು, ಆರಂಭಿಕವಾಗಿ ಟ್ಯಾಂಕರ್ನಲ್ಲಿ 350 ಮೆಟ್ರಿಕ್ ಟನ್ ತುಪ್ಪವನ್ನು ಕಳುಹಿಸಲಾಗಿದೆ.