logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mrigashira Nakshatra: ಐಷಾರಾಮಿ ಜೀವನ ಇಷ್ಟಪಡುವುದಿಲ್ಲ,ಅಡುಗೆಯಲ್ಲಿ ಬಹಳ ಆಸಕ್ತಿ;ಮೃಗಶಿರಾ ನಕ್ಷತ್ರದವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

Mrigashira Nakshatra: ಐಷಾರಾಮಿ ಜೀವನ ಇಷ್ಟಪಡುವುದಿಲ್ಲ,ಅಡುಗೆಯಲ್ಲಿ ಬಹಳ ಆಸಕ್ತಿ;ಮೃಗಶಿರಾ ನಕ್ಷತ್ರದವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

HT Kannada Desk HT Kannada

Jun 06, 2023 06:00 AM IST

ಮೃಗಶಿರಾ ನಕ್ಷತ್ರದವರ ಬಗ್ಗೆ ಮಾಹಿತಿ

    • ಮೃಗಶಿರಾ ನಕ್ಷತ್ರದವರು ಉತ್ಸಾಹದಿಂದ ಕೆಲಸ ಕಾರ್ಯದಲ್ಲಿ ಮುಂದುವರೆಯುತ್ತಾರೆ. ಯಾರಲ್ಲೂ ಬೇದ ಭಾವ ತೋರುವುದಿಲ್ಲ. ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಈ ನಕ್ಷತ್ರದವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ರುಚಿಕರ ಆಹಾರವನ್ನು ಸದಾ ಬಯಸುತ್ತಾರೆ. ತಂಪು ಪಾನಿಯಗಳು ಐಸ್ ಕ್ರೀಮ್‌ನಂತಹ ಆಹಾರ ಪದಾರ್ಥಗಳು ಇವರಿಗೆ ಇಷ್ಟ.
ಮೃಗಶಿರಾ ನಕ್ಷತ್ರದವರ ಬಗ್ಗೆ ಮಾಹಿತಿ
ಮೃಗಶಿರಾ ನಕ್ಷತ್ರದವರ ಬಗ್ಗೆ ಮಾಹಿತಿ (PC: Freepik)

ಮೃಗಶಿರಾ ನಕ್ಷತ್ರವು ಧೈರ್ಯಕ್ಕೆ ಆಗರ. ಈ ನಕ್ಷತ್ರದ ಒಂದು ಮತ್ತು ಎರಡನೇ ಪಾದಗಳು ವೃಷಭ ರಾಶಿಯಲ್ಲಿ ಬಂದರೆ, ಮೂರು ನಾಲ್ಕನೇ ಪಾದಗಳು ಮಿಥುನ ರಾಶಿಯಲ್ಲಿ ಬರುತ್ತದೆ. ಈ ಕಾರಣದಿಂದ ಮಿಥುನ ಮತ್ತು ವೃಷಭ ರಾಶಿಯ ಒಟ್ಟಾರೆ ಗುಣ ಧರ್ಮಗಳು ಈ ನಕ್ಷತ್ರದಲ್ಲಿ ಜನಿಸಿದವರಿಗೆ ದೊರೆಯುತ್ತದೆ.

ತಾಜಾ ಫೋಟೊಗಳು

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Apr 29, 2024 02:19 PM

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Apr 29, 2024 10:06 AM

ಒಮ್ಮೆ ಮನದ್ದು ಮಾಡಿದರೆ ಮೃಗಶಿರಾ ನಕ್ಷತ್ರದವರು ಯಾವುದೇ ಕೆಲಸ ಮಾಡಬಲ್ಲರು. ಸದಾ ಉತ್ಸಾಹದ ಚಿಲುಮೆ ಆಗಿರುತ್ತಾರೆ. ಇವರ ಸಂತೋಷಕ್ಕೆ ಪಾರವಿಲ್ಲ. ಎಂತಹ ಕಷ್ಟಕರವಾದ ಕೆಲಸವಿದ್ದರೂ ಸರಿಯೇ ಬೇರೆಯವರ ಸ್ಪೂರ್ತಿಯಿಂದ ಇವರು ಕೆಲಸವನ್ನು ಸಂಪೂರ್ಣಗೊಳಿಸುತ್ತಾರೆ. ಇವರು ಯಾರ ಸಹಾಯವನ್ನು ಕೇಳುವುದಿಲ್ಲ . ಅಲಂಕಾರ ಪ್ರಿಯರು . ಒಮ್ಮೆ ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಹಾಕುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಇವರಿಗೆ ದುರಾಸೆ ಇರುವುದಿಲ್ಲ. ಹಣದ ತೊಂದರೆ ಉಂಟಾಗದು. ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಯಾರ ಮೇಲೆ ಆಗಲಿ ಇರುವ ಪ್ರೀತಿಯನ್ನು ತೋರ್ಪಡಿಸುವುದಿಲ್ಲ.

ಮೃಗಶಿರಾ ನಕ್ಷತ್ರದವರು ಉತ್ಸಾಹದಿಂದ ಕೆಲಸ ಕಾರ್ಯದಲ್ಲಿ ಮುಂದುವರೆಯುತ್ತಾರೆ. ಯಾರಲ್ಲೂ ಬೇದ ಭಾವ ತೋರುವುದಿಲ್ಲ. ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಈ ನಕ್ಷತ್ರದವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ರುಚಿಕರ ಆಹಾರವನ್ನು ಸದಾ ಬಯಸುತ್ತಾರೆ. ತಂಪು ಪಾನಿಯಗಳು ಐಸ್ ಕ್ರೀಮ್‌ನಂತಹ ಆಹಾರ ಪದಾರ್ಥಗಳು ಇವರಿಗೆ ಇಷ್ಟ. ಸಮಾಜಕ್ಕೆ ಉಪಯೋಗವಾಗುವ ಹಲವು ಕಾರ್ಯಗಳನ್ನು ಮಾಡುತ್ತಾರೆ. ರಾಜಕೀಯ ಇಷ್ಟವಿಲ್ಲದೆ ಹೋದರೂ ರಾಜಕೀಯದ ವ್ಯಕ್ತಿಗಳನ್ನು ಪೋಷಿಸುತ್ತಾರೆ. ಬೇಗನೆ ಏಳುವುದಿಲ್ಲ ಹಾಗೇ ರಾತ್ರಿ ಬೇಗನೆ ಮಲಗುವುದೂ ಇಲ್ಲ. ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ಇವರೇ ಮೊದಲಿಗರು.

ಈ ನಕ್ಷತ್ರದವರು ಸದಾ ಹೋರಾಟ ಓಡಾಟದಲ್ಲಿ ಇರಬೇಕೆಂದು ಬಯಸುತ್ತಾರೆ. ಒಡವೆಗಳ ಬಗ್ಗೆ ಆಸಕ್ತಿ ಇರದು. ಆದರೆ ಎಷ್ಟೇ ಬಟ್ಟೆಗಳಿದ್ದರೂ ಇವರಿಗೆ ಸಾಲದು. ಐಷಾರಾಮಿ ಜೀವನ ಇಷ್ಟಪಡುವುದಿಲ್ಲ. ಎಲ್ಲರೊಂದಿಗೆ ಬೆರೆತು ಬಾಳುತ್ತಾರೆ. ಇವರು ಇರುವ ಕಡೆ ಹಾಸ್ಯಕ್ಕೆ ಕೊರತೆ ಇರದು. ಒಂದಕ್ಕಿಂತಲೂ ಹೆಚ್ಚು ವಾಹನಗಳನ್ನು ಕೊಳ್ಳುವ ಇಚ್ಛೆ ಇರುತ್ತದೆ. ಒಟ್ಟಾರೆ ಇವರು ಸುಖವಾಗಿ ಬಾಳುವುದಲ್ಲದೆ ಬೇರೆಯವರ ಸುಖ ಸಂತೋಷದ ಬಾಳುವೆಗೂ ಕಾರಣರಾಗುತ್ತಾರೆ. ಸಂಗೀತ ಜ್ಞಾನ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳು

ಶಾಂತರಾದರೂ ಕೋಪ ಬಂದಾಗ ಉಗ್ರವಾಗಿ ವರ್ತಿಸುತ್ತಾರೆ; ಕೃತ್ತಿಕಾ ನಕ್ಷತ್ರದವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಜ್ಯೋತಿಷ್ಯದಲ್ಲಿ ಎಲ್ಲರ ಗುಣ ಲಕ್ಷಣವನ್ನು ತಿಳಿಯಬಹುದಾಗಿದೆ. ಇಂದು ಕೃತ್ತಿಕಾ ನಕ್ಷತ್ರಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ತಿಳಿಯೋಣ. ಅಶ್ವಿನಿ ಮತ್ತು ಭರಣಿ ನಕ್ಷತ್ರಗಳ ನಾಲ್ಕೂ ಪಾದಗಳು ಮೇಷ ರಾಶಿಯಲ್ಲಿ ಬರುತ್ತವೆ. ಆದರೆ ಕೃತ್ತಿಕ ನಕ್ಷತ್ರದ ಒಂದನೇ ಪಾದ ಮೇಷದಲ್ಲಿಯೂ, ಉಳಿದ ಮೂರೂ ಪಾದಗಳು ವೃಷಭದಲ್ಲಿಯೂ ಬರುತ್ತದೆ. ಆದ್ದರಿಂದ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ಫಲವು ಎರಡೂ ರಾಶಿಯನ್ನು ಅವಲಂಬಿಸಿರುತ್ತದೆ. ಕೃತ್ತಿಕಾ ನಕ್ಷತ್ರದವರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಸ್ತ್ರೀ ಗ್ರಹವಾದ ಚಂದ್ರನ ಬಗ್ಗೆ ನಿಮಗೆಷ್ಟು ಗೊತ್ತು; ಚಂದ್ರನಿಗೆ ಸಂಬಂಧಿಸಿದ ಧಾನ್ಯ, ಬಣ್ಣ, ಲೋಹದ ಬಗ್ಗೆ ಇಲ್ಲಿದೆ ಮಾಹಿತಿ

ಜಾತಕದಲ್ಲಿ ಸೂರ್ಯ ಮತ್ತು ಚಂದ್ರರಿಗೆ ಕೇವಲ ಒಂದು ಮನೆಯ ಅಧಿಪತ್ಯವಿದೆ. ಸೂರ್ಯನಂತೆ ಮುಖ್ಯವಾದ ಗ್ರಹ ಎಂದರೆ ಚಂದ್ರ. ಚಂದ್ರನು ಸ್ತ್ರೀಗ್ರಹ. ಗೋಚಾರದಲ್ಲಿ ಅತಿ ವೇಗವಾಗಿ ಚಲಿಸುವ ಗ್ರಹ ಎಂದರೆ ಚಂದ್ರ ಮಾತ್ರ. ಚಂದ್ರನು ಒಬ್ಬ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತಾನೆ. ಚಂದ್ರನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು