logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Chanakya Niti: ಮನುಷ್ಯನ ಈ 5 ಗುಣಗಳು ತಪಸ್ಸಿನ ಫಲ, ಜೀವನಲ್ಲಿ ಯಶಸ್ವಿಯಾಗಲು ಸಾಧ್ಯ -ಚಾಣಕ್ಯ ನೀತಿ

Chanakya Niti: ಮನುಷ್ಯನ ಈ 5 ಗುಣಗಳು ತಪಸ್ಸಿನ ಫಲ, ಜೀವನಲ್ಲಿ ಯಶಸ್ವಿಯಾಗಲು ಸಾಧ್ಯ -ಚಾಣಕ್ಯ ನೀತಿ

Raghavendra M Y HT Kannada

Nov 10, 2024 12:19 PM IST

google News

ಒಳ್ಳೆಯ ವ್ಯಕ್ತಿ, ಜೀವನಲ್ಲಿ ಯಶಸ್ಸು ಕಾಣಬೇಕಾರೆ ಏನೆಲ್ಲಾ ಗುಣಗಳಿರಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ತಿಳಿಯಿರಿ

    • ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯನು ಒಬ್ಬ ವ್ಯಕ್ತಿಯು ಕಠಿಣ ತಪಸ್ಸಿನಿಂದ ಮಾತ್ರ ಸಾಧಿಸಬಹುದಾದ ಕೆಲವು ವಿಷಯಗಳನ್ನು ತಮ್ಮ ನೀತಿಯಲ್ಲಿ ವಿವರಿಸಿದ್ದಾನೆ. ನೀವು ಈ ಚಾಣಕ್ಯ ನೀತಿಯನ್ನು ತಿಳಿಯಿರಿ.
ಒಳ್ಳೆಯ ವ್ಯಕ್ತಿ, ಜೀವನಲ್ಲಿ ಯಶಸ್ಸು ಕಾಣಬೇಕಾರೆ ಏನೆಲ್ಲಾ ಗುಣಗಳಿರಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ತಿಳಿಯಿರಿ
ಒಳ್ಳೆಯ ವ್ಯಕ್ತಿ, ಜೀವನಲ್ಲಿ ಯಶಸ್ಸು ಕಾಣಬೇಕಾರೆ ಏನೆಲ್ಲಾ ಗುಣಗಳಿರಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ತಿಳಿಯಿರಿ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯನನ್ನು ಮಹಾನ್ ದಾರ್ಶನಿಕ, ರಾಜಕಾರಣಿ ಮತ್ತು ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಚಾಣಕ್ಯನು ತನ್ನ ನೀತಿ ಶಾಸ್ತ್ರ ಗ್ರಂಥದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಅಂಶಗಳನ್ನು ವಿವರಿಸಿದ್ದಾನೆ. ಜೀವನದಲ್ಲಿ ಕೆಲವು ವಿಷಯಗಳನ್ನು ಸಾಧಿಸಲು ಮಾನವರು ಕಠಿಣ ತಪಸ್ಸು ಮಾಡಬೇಕು ಎಂದು ಚಾಣಕ್ಯನು ಒಂದು ಶ್ಲೋಕದ ಮೂಲಕ ಹೇಳಿದ್ದಾನೆ. ಕಠಿಣ ಪರಿಶ್ರಮದ ನಂತರವೇ ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಶ್ಲೋಕಗಳಾದ ಭೋಜ್ಯಂ ಭೋಜನಶಕ್ತಿ ರತಿಶಕ್ತಿ ವರಂಗನ, ವಿಭವೋ ದಾನಶಕ್ತಿ ನಲ್ಪಸ್ಯ ತಪಶ್ ಫಲಂ ಎಂದರೆ ಆಹಾರಕ್ಕಾಗಿ ಉತ್ತಮ ವಸ್ತುಗಳನ್ನು ಪಡೆಯುವುದು, ಅವುಗಳನ್ನು ಸೇವಿಸಿದ ನಂತರ ಅವುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ, ಸುಂದರ ಮಹಿಳೆಯನ್ನು ಪಡೆಯುವುದು, ಆಕೆಯನ್ನು ಸಂತೋಷದಿಂದ ನೋಡಿಕೊಳ್ಳುವ ಶಕ್ತಿ, ಹಣದಿಂದ ದಾನ ಮಾಡುವ ಬಯಕೆ, ಇವೆಲ್ಲವೂ ಒಬ್ಬ ವ್ಯಕ್ತಿಯು ಕಠಿಣ ತಪಸ್ಸಿನ ನಂತರವೇ ಸಾಧಿಸುತ್ತಾನೆ.

ಪ್ರತಿಯೊಬ್ಬರೂ ಆಹಾರದಲ್ಲಿ ಒಳ್ಳೆಯದನ್ನು ಬಯಸುತ್ತಾರೆ ಎಂದು ಚಾಣಕ್ಯನು ನಂಬುತ್ತಾನೆ, ಆದರೆ ಅದನ್ನು ಪಡೆಯುವುದು ಮತ್ತು ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಪ್ರತಿಯೊಬ್ಬ ಪುರುಷನು ತನ್ನ ಹೆಂಡತಿ ಸುಂದರವಾಗಿರಬೇಕು ಎಂದು ಬಯಸುತ್ತಾನೆ, ಆದರೆ ಪುರುಷನಿಗೆ ಲೈಂಗಿಕ ಶಕ್ತಿಯೂ ಇರಬೇಕು. ಹೊಂದಾಣಿಕೆಯಿಂ ಜೀವಿಸಲು ಇದೂ ಕೂಡ ಮುಖ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಹಣವನ್ನು ಹೊಂದುವ ಬಯಕೆಯನ್ನು ಹೊಂದಿರುತ್ತಾನೆ, ಆದರೆ ಹಣವನ್ನು ಪಡೆದ ನಂತರ ಅದನ್ನು ಹೇಗೆ ಬಳಸಬೇಕೆಂಬುದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಹಣ ಬಳಸುವ ವಿಚಾರಲ್ಲಿ ಸಾಕಷ್ಟು ಮಂದಿ ವಿಫಲರಾಗಿರುತ್ತಾರೆ. ಹಣವನ್ನು ಸರಿಯಾದ ರೀತಿಯಲ್ಲಿ ಬಳಸುವ ಜ್ಞಾನವಿರಬೇಕು. ಹಣ ಬಂದಾಗ ಒಂದಿಷ್ಟು ಪಾಲು ದಾನ ಮಾಡುವ ಮನಸ್ಸು ಇರಬೇಕು ಎಂದು ಚಾಣಕ್ಯ ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ.

ಆಚಾರ್ಯ ಚಾಣಕ್ಯರು ತಮ್ಮ ತಂತ್ರಗಳು ಮತ್ತು ಕೌಶಲ್ಯಗಳಿಂದ ಯಶಸ್ವಿಯಾಗಿ ಸಾಮ್ರಾಜ್ಯವನ್ನು ಆಳಿದವರು. ಅವರ ತತ್ವಗಳು ಮತ್ತು ನೀತಿಗಳು ಎಷ್ಟು ಪರಿಣಾಮಕಾರಿ ಎಂದು ಎಲ್ಲರಿಗೂ ಗೊತ್ತು. ರಾಜಕೀಯ ಮಾತ್ರವಲ್ಲದೆ, ಅರ್ಥಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಅನೇಕ ಮೌಲ್ಯಯುತ ವಿಷಯಗಳನ್ನು ವಿವರಿಸಿದ್ದಾರೆ. ಚಾಣಕ್ಯರ ನೀತಿಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಅದ್ಭುತ ಸಂಗತಿಗಳು ಇಂದಿನ ಪೀಳಿಗೆಗೂ ಸ್ಪೂರ್ತಿಯಾಗಿವೆ. ಚಾಣಕ್ಯರು ಬರೆದ ನೀತಿ ಗ್ರಂಥ ಇಂದಿಗೂ ಬಹಳ ಜನಪ್ರಿಯವಾಗಿದೆ. ಚಾಣಕ್ಯ ನೀತಿಶಾಸ್ತ್ರದ ಪ್ರಕಾರ, ಜೀವನದ ಪ್ರಮುಖ ಸಂಗತಿಗಳನ್ನು ತಿಳಿದುಕೊಂಡಿರಬೇಕು. ಆಗ ಮಾತ್ರ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ