logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚಾಣಕ್ಯ ನೀತಿ ಸೂತ್ರಗಳು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಏನು ಲಾಭ, ಶ್ರೀಮಂತರಾಗಲು ಏನು ಮಾಡಬೇಕು? ಕೌಟಿಲ್ಯ ನೀಡಿದ ಸಲಹೆಗಳಿವು

ಚಾಣಕ್ಯ ನೀತಿ ಸೂತ್ರಗಳು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಏನು ಲಾಭ, ಶ್ರೀಮಂತರಾಗಲು ಏನು ಮಾಡಬೇಕು? ಕೌಟಿಲ್ಯ ನೀಡಿದ ಸಲಹೆಗಳಿವು

Praveen Chandra B HT Kannada

Nov 09, 2024 05:56 PM IST

google News

ಚಾಣಕ್ಯ ನೀತಿ ಸೂತ್ರಗಳು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಏನು ಲಾಭ, ಶ್ರೀಮಂತರಾಗುವುದು ಹೇಗೆ

    • Thoughts of Acharya Chanakya- ಚಾಣಕ್ಯ ನೀತಿ ಸೂತ್ರಗಳು: ಆಚಾರ್ಯ ಚಾಣಕ್ಯರು ಯಶಸ್ಸು ಪಡೆಯಲು ಮತ್ತು ಶ್ರೀಮಂತರಾಗಲು ಬಯಸುವವರಿಗೆ ಅಮೂಲ್ಯ ಸಲಹೆ ನೀಡಿದ್ದಾರೆ. ನಿಮ್ಮ ಗುರಿಯನ್ನು ಯಾರಿಗೂ ಹೇಳಬೇಡಿ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಿ ಇತ್ಯಾದಿ ಹಲವು ಅಮೂಲ್ಯ ಸಲಹೆ ನೀಡಿದ್ದಾರೆ.
ಚಾಣಕ್ಯ ನೀತಿ ಸೂತ್ರಗಳು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಏನು ಲಾಭ, ಶ್ರೀಮಂತರಾಗುವುದು ಹೇಗೆ
ಚಾಣಕ್ಯ ನೀತಿ ಸೂತ್ರಗಳು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಏನು ಲಾಭ, ಶ್ರೀಮಂತರಾಗುವುದು ಹೇಗೆ (Chanakya Neeti book cover, Jwala Prasad Shandilya )

Thoughts of Acharya Chanakya- ಚಾಣಕ್ಯ ನೀತಿ ಸೂತ್ರಗಳು: ಆಚಾರ್ಯ ಚಾಣಕ್ಯರನ್ನು ಇಪ್ಪತ್ತನೇ ಶತಮಾನದ ಅತ್ಯಂತ ಪ್ರಬುದ್ಧ ಮತ್ತು ವಿದ್ವಾಂಸರಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ. ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯರು ಭಾರತದ ಪ್ರಾಚೀನ ವಿದ್ವಾಂಸರಲ್ಲಿ ಒಬ್ಬರು. ಅದ್ವಿತೀಯ ಅರ್ಥಶಾಸ್ತ್ರಜ್ಞರಾದ ಕೌಟಿಲ್ಯ ವಿವಿಧ ಸಂದರ್ಭದಲ್ಲಿ ಹೇಳಿರುವ ಮಾತುಗಳು ಚಾಣಕ್ಯ ನೀತಿಗಳೆಂದು ಜನಪ್ರಿಯತೆ ಪಡೆದಿವೆ. ಚಾಣಕ್ಯನ ನಿಜವಾದ ಹೆಸರು ವಿಷ್ಣುಗುಪ್ತ. ಚಣಕನ ಮಗನಾಗಿರುವ ಕಾರಣ ಇವರಿಗೆ ಚಾಣಕ್ಯನೆಂದು ಹೆಸರು ಬಂದಿದೆ. ಗಾಂಧಾರದ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದ ಚಾಣಕ್ಯ ಹೇಳಿರುವ ಅಮೂಲ್ಯ ಮಾತುಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಚಾಣಕ್ಯ ನೀತಿ ಹೆಸರಿನಲ್ಲಿ ಈ ತಾಣದಲ್ಲಿ ಪ್ರಕಟಿಸುತ್ತಿದೆ. ಯಾವುದೇ ವ್ಯಕ್ತಿಯು ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ನಡೆಸಲು ಬಯಸಿದರೆ, ಅವನು ಚಾಣಕ್ಯ ನೀತಿಯ ಬೋಧನೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಚಾಣಕ್ಯ ನೀತಿಯ ಸೂತ್ರಗಳನ್ನು ಅನುಸರಿಸಿ ಯಶಸ್ಸು ಪಡೆದವರು ಸಾಕಷ್ಟು ಜನರು ಇದ್ದಾರೆ. ಇಂದಿನ ಲೇಖನದಲ್ಲಿ ಚಾಣಕ್ಯ ನೀತಿ ಸೂತ್ರಗಳಿಂದ ಆಯ್ದ ಕೆಲವು ಅಮೂಲ್ಯ ಸಲಹೆಗಳನ್ನು ತಿಳಿದುಕೊಳ್ಳೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ನಿಮ್ಮ ಗುರಿಯನ್ನು ಯಾರಿಗೂ ಹೇಳಬೇಡಿ

ಬಹುಶಃ ನಾವೆಲ್ಲರೂ ಒಂದು ತಪ್ಪು ಮಾಡುತ್ತೇವೆ. "ನಾನು ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ" ಎಂದು ನಮ್ಮ ಗುರಿಯ ಬಗ್ಗೆ ಡಂಗುರ ಸಾರುತ್ತೇವೆ. ಆದರೆ, ಚಾಣಕ್ಯ ನೀತಿಯ ಪ್ರಕಾರ ನೀವು ಜೀವನದಲ್ಲಿ ಯಶಸ್ವಿಯಾಗಲು ಮತ್ತು ಶ್ರೀಮಂತರಾಗಲು ಬಯಸಿದರೆ ನೀವು ಜೀವನದಲ್ಲಿ ಹೊಂದಿರುವ ಯಾವುದೇ ಗುರಿಯನ್ನು ಬೇರೆ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು. ನೀವು ಈ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡಾಗ ನೀವು ಜೀವನದಲ್ಲಿ ಯಶಸ್ವಿಯಾಗದಿರುವ ಸಾಧ್ಯತೆಗಳಿವೆ. ಹೀಗಾಗಿ ನಿಮ್ಮ ಜೀವನದ ಪ್ರಮುಖ ಗುರಿಗಳನ್ನು ಸಿಕ್ಕಸಿಕ್ಕವರೊಂದಿಗೆ ಹಂಚಿಕೊಳ್ಳಬೇಡಿ ಎಂದು ಆಚಾರ್ಯ ಚಾಣಕ್ಯ ನೀಡಿದ ಸಲಹೆಯನ್ನು ಪಾಲಿಸಬಹುದು ಅಲ್ಲವೇ?

ಬೆಳಗ್ಗೆ ಎದ್ದೇಳಲು ಬ್ರಾಹ್ಮಿ ಮುಹೂರ್ತ ಸೂಕ್ತ ಸಮಯ

ಬಹುತೇಕರು ಸೂರ್ಯೋದಯವಾದ ಸಾಕಷ್ಟು ಸಮಯದ ಬಳಿಕ ಹಾಸಿಗೆಯಿಂದ ಎದ್ದೇಳುತ್ತಾರೆ. ಜೀವನದಲ್ಲಿ ಯಶಸ್ಸು ಪಡೆಯಲು ಬೆಳಗ್ಗೆ ಬೇಗ ಎದ್ದೇಳಬೇಕು ಎಂದು ಸಾಕಷ್ಟು ಸಾಧಕರು ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಇದನ್ನೇ ಹೇಳಿದ್ದಾರೆ. ಚಾಣಕ್ಯರ ಪ್ರಕಾರ ನೀವು ಜೀವನದಲ್ಲಿ ಯಶಸ್ವಿಯಾಗಲು ಮತ್ತು ಶ್ರೀಮಂತರಾಗಲು ಬಯಸಿದರೆ ನೀವು ಬ್ರಹ್ಮ ಮುಹೂರ್ತ (ಬ್ರಾಹ್ಮಿ ಮುಹೂರ್ತ)ದಲ್ಲಿ ಎದ್ದೇಳಬೇಕು. ಮುಂಜಾನೆ ಬೇಗ ಏಳುವವನು ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತ್ತಾನೆ ಎಂದು ಚಾಣಕ್ಯ ನೀತಿ ಶಾಸ್ತ್ರದಲ್ಲಿ ಹೇಳಲಾಗಿದೆ.

ಬ್ರಾಹ್ಮಿ ಮುಹೂರ್ತ ಎಂದರೇನು?: ಸೂರ್ಯ ಉದಯವಾಗುವ 1 ಗಂಟೆ 22 ನಿಮಿಷ ಮೊದಲು ಬ್ರಾಹ್ಮಿ ಮುಹೂರ್ತ ಇರುತ್ತದೆ. ಪ್ರತಿದಿನ ಮುಂಜಾನೆ 4 ರಿಂದ 5.30 ರವರೆಗಿನ ಸಮಯವನ್ನು ಬ್ರಹ್ಮ ಕಾಲ ಅಥವಾ ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಸೂರ್ಯ ಉದಯಿಸುವ 88 ನಿಮಿಷಗಳ ಮೊದಲು ಪ್ರಭಾತ ಕಾಲದಲ್ಲಿ ಸಂಪೂರ್ಣ ಪ್ರಕೃತಿಯು ಭಗವದ್​ ಶಕ್ತಿಯಿಂದ ಆವರಿಸಿಕೊಂಡಿರುತ್ತದೆ. ಇದನ್ನೇ ಬ್ರಾಹ್ಮೀ ಮುಹೂರ್ತವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸರಸ್ವತಿ ದೇವಿಯ ಆಶೀರ್ವಾದ ಹೆಚ್ಚಿರುತ್ತದೆ ಎಂದೂ ಸಹ ಹೇಳಲಾಗುತ್ತದೆ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

ಕಠಿಣ ಕೆಲಸ ಮಾಡಲು ಹಿಂಜರಿಯಬೇಡಿ

ಸುಲಭವಾದ ಕೆಲಸವನ್ನು ನೀವು ಮಾಡಿ, ಕಠಿಣ ಕೆಲಸವನ್ನು ಇತರರಿಗೆ ಬಿಟ್ಟುಬಿಡುವ ಪ್ರವೃತ್ತಿ ಒಳ್ಳೆಯದಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಜೀವನದಲ್ಲಿ ಶ್ರೀಮಂತರಾಗಲು ಬಯಸಿದರೆ, ನೀವು ಎಂದಿಗೂ ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯಬಾರದು. ಮನಃಪೂರ್ವಕವಾಗಿ ಕಠಿಣ ಪರಿಶ್ರಮ ಪಡುವವನು ಖಂಡಿತಾ ಪ್ರಗತಿ ಸಾಧಿಸುತ್ತಾನೆ, ಶ್ರೀಮಂತನಾಗುತ್ತಾನೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಅಹಂಕಾರ ತ್ಯಜಿಸಿ

ಚಾಣಕ್ಯನ ಪ್ರಕಾರ ಯಾವುದೇ ವ್ಯಕ್ತಿಯು ಜೀವನದಲ್ಲಿ ಪ್ರಗತಿ ಸಾಧಿಸಲು ಮತ್ತು ಶ್ರೀಮಂತನಾಗಲು ಬಯಸಿದರೆ, ಅವನು ಮೊದಲು ಅಹಂಕಾರವನ್ನು ತ್ಯಜಿಸಬೇಕು. ಇದು ಮನುಷ್ಯನ ದೊಡ್ಡ ಶತ್ರು. ತಾಯಿ ಲಕ್ಷ್ಮಿಯು ಅಹಂಕಾರಿಗಳನ್ನು ಎಂದಿಗೂ ಮೆಚ್ಚುವುದಿಲ್ಲ.

ಹಣ ಉಳಿತಾಯ ಮಾಡಲು ಸಲಹೆ

ಆಚಾರ್ಯ ಚಾಣಕ್ಯರ ಪ್ರಕಾರ ಯಾವುದೇ ವ್ಯಕ್ತಿ ಶ್ರೀಮಂತನಾಗಲು ಬಯಸಿದರೆ, ಕಷ್ಟದ ಸಮಯಕ್ಕಾಗಿ ಹಣವನ್ನು ಉಳಿಸಬೇಕು. ಹಣವನ್ನು ಉಳಿಸುವ ಜನರು ಕಡಿಮೆ ಸಮಯದಲ್ಲಿ ಶ್ರೀಮಂತರಾಗುತ್ತಾರೆ ಎಂದು ಆಚಾರ್ಯರು ಹೇಳುತ್ತಾರೆ.

ಎಷ್ಟೊಂದು ಮಹತ್ವವಾದ ಸಲಹೆಗಳು ಅಲ್ಲವೇ, ಬೆಳಗ್ಗೆ ಬೇಗ ಎದ್ದರೆ ನಮಗೆ ಹಲವು ಗಂಟೆಗಳು ಹೆಚ್ಚುವರಿಯಾಗಿ ದೊರಕುತ್ತದೆ. ಜತೆಗೆ ಸಾಧನೆ ಮಾಡಲು ಸ್ಪೂರ್ತಿಯೂ ದೊರಕುತ್ತದೆ. ಕಠಿಣ ಪರಿಶ್ರಮದಿಂದ ದುಡಿಯುವವರಿಗೆ ಖಂಡಿತಾ ಯಶಸ್ಸು ದೊರಕುತ್ತದೆ. ಅಹಂಕಾರದಿಂದ ಸರ್ವನಾಶವಾಗುತ್ತದೆ. ಹಣ ದುಂದುವೆಚ್ಚ ಮಾಡುವ ಬದಲು ಉಳಿತಾಯ ಮಾಡಬೇಕು ಎಂದು ಚಾಣಕ್ಯರು ಅಮೂಲ್ಯವಾದ ಸಲಹೆ ನೀಡಿದ್ದಾರೆ.

ಡಿಸ್ಕ್ಲೈಮರ್‌/ ಹಕ್ಕುತ್ಯಾಗ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ