logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ ರಾಶಿ ದೀಪಾವಳಿ ಭವಿಷ್ಯ: ವ್ಯಾಪಾರದಲ್ಲಿ ಉತ್ತಮ ಆದಾಯ ಇದ್ದರೂ ಸಾಲದಿಂದಾಗಿ ಸಮಸ್ಯೆಗಳು ಎದುರಾಗುತ್ತವೆ, ಸಹೋದರರ ನೆರವು ಪಡೆಯುತ್ತೀರಿ

ಸಿಂಹ ರಾಶಿ ದೀಪಾವಳಿ ಭವಿಷ್ಯ: ವ್ಯಾಪಾರದಲ್ಲಿ ಉತ್ತಮ ಆದಾಯ ಇದ್ದರೂ ಸಾಲದಿಂದಾಗಿ ಸಮಸ್ಯೆಗಳು ಎದುರಾಗುತ್ತವೆ, ಸಹೋದರರ ನೆರವು ಪಡೆಯುತ್ತೀರಿ

Raghavendra M Y HT Kannada

Oct 19, 2024 06:30 AM IST

google News

ಸಿಂಹ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ

    • Deepavali Leo Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಸಿಂಹ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌.ಸತೀಶ್)
ಸಿಂಹ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ
ಸಿಂಹ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ

Deepavali Leo Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಸಿಂಹ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ದೀಪಾವಳಿಯ ವರ್ಷ ಭವಿಷ್ಯದಲ್ಲಿ ಸಿಂಹರಾಶಿಯವರಿಗೆ ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆತ್ಮೀಯರ ಸಹಕಾರವು ಸದಾಕಾಲ ನಿಮಗೆ ದೊರೆಯುತ್ತದೆ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಸಮಯಕ್ಕೆ ಅನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ನಿಮ್ಮಲ್ಲಿರುವ ಹಠದ ಕಾರಣ ಅಪೂರ್ವ ಅವಕಾಶವು ಕೈ ಜಾರುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ವ್ಯಾಪಾರ ಪ್ರತಿನಿಧಿಗಳಿಗೆ ವಿಶೇಷ ಅವಕಾಶಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರವನ್ನು ಹೊಂದಿರುವವರು ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುತ್ತಾರೆ.

ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತೀರಿ. ಯಾವುದೇ ವಿವಾದಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ತಂದೆಗೆ ಸಂಬಂಧಪಟ್ಟ ಆಸ್ತಿಯ ವಿಚಾರದಲ್ಲಿ ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಮಾತುಕತೆಯ ಮುಖಾಂತರ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ನೀವು ತೆಗೆದುಕೊಳ್ಳುವ ಕೆಲವೊಂದು ತೀರ್ಮಾನಗಳು ಬೇರೆಯವರ ಆಕ್ರೋಶಕ್ಕೆ ಕಾರಣವಾಗುತ್ತದೆ. ಕುಟುಂಬದ ಪ್ರಗತಿಗೆ ಮೂಲ ಕಾರಣರಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಾಲದ ವ್ಯವಹಾರದಲ್ಲಿ ತೊಂದರೆ ಎದುರಿಸುವಿರಿ. ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು. ಆದರೆ ಅಲ್ಪ ಪ್ರಮಾಣದ ಕಣ್ಣಿನ ದೋಷವು ಉಂಟಾಗುತ್ತದೆ.

ಈ ವರ್ಷ ಸ್ನೇಹಿತರು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ

ಸೋದರರ ಸಹಾಯದಿಂದ ಆರ್ಥಿಕ ಪ್ರಗತಿ ಕಂಡುಬರುತ್ತದೆ. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣವನ್ನು ಹೂಡುವಿರಿ. ದಂಪತಿ ನಡುವೆ ಸಮಾನ ಮನೋಭಾವನೆ ಕಂಡುಬರುತ್ತದೆ. ಕುಟುಂಬದ ಹಿರಿಯರಿಗೆ ಹೆಚ್ಚಿನ ಪ್ರಮಾಣದ ಅನುಕೂಲತೆಗಳು ದೊರೆಯಲಿವೆ. ಸದಸ್ಯರ ಜೊತೆಯಲ್ಲಿ ಸಂತೋಷದಿಂದ ದಿನ ಕಳೆಯುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಉತ್ತಮ ಪ್ರಯತ್ನದಿಂದ ತಮ್ಮ ಗುರಿಯನ್ನುಸಾಧಿಸುತ್ತಾರೆ. ಸ್ನೇಹಿತರು ನಿಮ್ಮ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಾರೆ. ಸಣ್ಣಪುಟ್ಟ ಯಶಸ್ಸಿಗೂ ಸಂಭ್ರಮ ಪಡುವಿರಿ. ಅತಿಯಾದ ಆಸೆ ಇರದ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ಹಿರಿಯರ ಒತ್ತಡಕ್ಕೆ ಮಣಿದು ವಿವಾಹಕ್ಕೆ ಒಪ್ಪುವಿರಿ. ಮಕ್ಕಳ ಜೊತೆ ಹಣಕಾಸಿನ ವಿಚಾರದಲ್ಲಿ ಭಿನಾಭಿಪ್ರಾಯ ಉಂಟಾಗುತ್ತದೆ.

ತಾಂತ್ರಿಕ ಪರಿಣತಿಯನ್ನು ಹೊಂದಿರುವವರು ಸ್ವಂತ ಉದ್ದಿಮೆಯನ್ನು ಆರಂಭಿಸುವ ತವಕದಲ್ಲಿ ಇರುತ್ತಾರೆ. ಆತುರದ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಹಣದ ವ್ಯವಹಾರದಲ್ಲಿ ಯಾರೊಂದಿಗೂ ರಾಜಿ ಆಗುವುದಿಲ್ಲ. ನೇರವಾದ ನಡೆ-ನುಡಿ ಇರುವ ಕಾರಣ ಕೆಲವರು ನಿಮ್ಮಿಂದ ದೂರ ಉಳಿಯುತ್ತದೆ. ಬಂಧು-ಬಳಗದವರಿಂದ ದೂರ ಉಳಿಯುವಿರಿ. ಹಣಕಾಸಿನ ವ್ಯವಹಾರದಲ್ಲಿ ವಿಘ್ನಗಳು ಎದುರಾದರು ನಿಮ್ಮ ಹಠವನ್ನು ಬಿಡುವುದಿಲ್ಲ. ಆಗದ ವಿಚಾರಗಳಿಗೆ ಕನಸು ಕಾಣುವುದು ನಿಮ್ಮ ಹವ್ಯಾಸ. ಕಷ್ಟದಲ್ಲಿ ಇದ್ದವರಿಗೆ ಆಹಾರದ ವ್ಯವಸ್ಥೆ ಮಾಡುವಲ್ಲಿ ಸಂತಸಗೊಳ್ಳುವಿರಿ. ಎಚ್ಚರಿಕೆ ವಹಿಸದಿದ್ದಲ್ಲಿ ಹಣದ ಕೊರತೆ ನಿಮ್ಮನ್ನು ಕಾಡುತ್ತದೆ.

ಗಳಿಸಿದ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ಉಳಿತಾಯ ಮಾಡಲು ಯಶಸ್ವಿಯಾಗುತ್ತೀರಿ

ಆಹಾರ ಸೇವನೆಯಿಂದ ಉದರ ದೋಷ ಉಂಟಾಗುತ್ತದೆ. ಕುಟುಂಬದ ಸಲುವಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಪ್ರೀತಿ ವಿಶ್ವಾಸವನ್ನು ಬಂಡವಾಳವನ್ನಾಗಿಸಿ ನಿಮ್ಮಿಂದ ಸಹಾಯ ಪಡೆಯುವ ಜನ ಸುತ್ತ ಮುತ್ತಲಿರುತ್ತಾರೆ. ಮನೆಯ ನಿರ್ವಹಣೆಯ ಜವಾಬ್ದಾರಿ ಗೃಹಿಣಿಯ ಪಾಲಾಗುತ್ತದೆ. ಗಳಿಸಿದ ಹಣದಲ್ಲಿ ಬುದ್ಧಿವಂತಿಕೆಯಿಂದ ಉಳಿತಾಯ ಮಾಡಲು ಸಫಲರಾಗುವಿರಿ. ಹೆಣ್ಣು ಮಕ್ಕಳಿಗೆ ಹಠದ ಬುದ್ಧಿ ಇರುತ್ತದೆ. ಇದರಿಂದ ದಾಂಪತ್ಯದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ಮನರಂಜನೆಗಾಗಿ ಹೆಚ್ಚಿನ ಪ್ರಮಾಣದ ಹಣವನ್ನು ಖರ್ಚು ಮಾಡುವಿರಿ. ಶುಚಿಯಾದ ರುಚಿಕರ ಭೋಜನವನ್ನು ಇಷ್ಟಪಡುವಿರಿ. ಮನೆಗೆ ಬರುವ ಅತಿಥಿಗಳಿಗಾಗಿ ಉತ್ತೇಜನಕಾರಿ ಸನ್ನಿವೇಶವನ್ನು ರೂಪಿಸುವಿರಿ.

ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಹುಟ್ಟೂರಿಗೆ ಎಲ್ಲರೊಂದಿಗೆ ಪ್ರಯಾಣ ಮಾಡುವಿರಿ. ಯಾತ್ರಾ ಸ್ಥಳಗಳಲ್ಲಿ ದೇವತಾ ಕಾರ್ಯಗಳನ್ನು ಮಾಡುವಿರಿ. ಪ್ರಯತ್ನಪಟ್ಟಲ್ಲಿ ವಿದೇಶದಲ್ಲಿ ಉದ್ಯೋಗವನ್ನು ಗಳಿಸಬಹುದು. ಅನಾವಶ್ಯಕ ಖರ್ಚು ವೆಚ್ಚಗಳಿಂದ ಕೂಡಿಟ್ಟ ಹಣವು ಕರಗುವುದು. ನಿರ್ವಂಚನೆಯಿಂದ ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ದೊಡ್ಡವರು ಚಿಕ್ಕವರು ಎಂಬ ಭೇದ ಭಾವವನ್ನು ತೋರಿಸುವುದಿಲ್ಲ. ಸಂಗಾತಿಯ ಅವಶ್ಯಕತೆಗಳನ್ನು ಸಂತಸದಿಂದ ಪೂರೈಸುವಿರಿ. ಹೊಸ ವಾಹನವನ್ನು ಕೊಳ್ಳುವ ಗುರಿ ಕನಸಾಗಿಯೇ ಉಳಿಯುತ್ತದೆ. ಆತ್ಮತೃಪ್ತಿ ಇರುವುದಿಲ್ಲ.

ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ಸಿಂಹ ರಾಶಿಯವರ ಗುಣಲಕ್ಷಣಗಳು

ಸಿಂಹ ರಾಶಿಯಲ್ಲಿ ಹುಟ್ಟಿರುವ ಮಹಿಳೆಯರು ಸಾಮಾನ್ಯವಾಗಿ ಶೃಂಗಾರ ಪ್ರಿಯರಾಗಿರುತ್ತಾರೆ. ಸಭೆ ಸಮಾರಂಭಗಳಲ್ಲಿ ಬಹು ಮುಖ್ಯ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ತಾನಾಗಿಯೇ ಜನಪ್ರಿಯತೆ ದೊರೆಯುತ್ತದೆ. ಅತಿ ಶೀಘ್ರವೇ ಕೋಪಗೊಳ್ಳುತ್ತಾರೆ. ನಾನು ಮಾಡುವುದೆಲ್ಲ ಸರಿ ಎಂಬ ಭಾವನೆ ಸದಾ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ದೊಡ್ಡವರೊಂದಿಗೆ ದೊಡ್ಡವರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದೇ ಇವರ ವಿಶೇಷ.

ಪುರುಷರಿಗೆ ಸ್ವಾಭಿಮಾನವು ಅತಿಯಾಗಿರುತ್ತದೆ. ಜೀವನದಲ್ಲಿ ಯಾವುದಾದರೂ ಒಂದು ವಿಚಾರದಲ್ಲಿ ಹೆಚ್ಚಿನ ಸಾಧನೆ ಮಾಡುವ ಬಯಕೆ ಇರುತ್ತದೆ. ಅನಾವಶ್ಯಕವಾಗಿ ವೇಳೆಯನ್ನು ವ್ಯರ್ಥ ಮಾಡದೆ ಕೈಹಿಡಿದ ಕೆಲಸಗಳನ್ನು ವೇಗವಾಗಿ ಮುಗಿಸುತ್ತಾರೆ. ಒಳ್ಳೆಯ ಸ್ವಭಾವವಿರುವ ಕಾರಣ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಆದರೆ ಅತಿಯಾದ ಕೋಪ ಕೆಲವರನ್ನು ದೂರ ಸರಿಯುವಂತೆ ಮಾಡುತ್ತದೆ. ಈ ರಾಶಿಗೆ ಸೇರಿದವರು ಸ್ವಭಾವತಃ ಪ್ರಾಮಾಣಿಕರು. ಪತ್ನಿಯನ್ನು ಪ್ರೀತಿಯಿಂದ ಸಲಹುತ್ತಾರೆ.

ಸಿಂಹ ರಾಶಿಯವರ ಶುಭ ದಿನಾಂಕರ, ವಾರ, ಬಣ್ಣ

ಅಧಿಪತಿ: ಸೂರ್ಯ, ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.

ಸಿಂಹ ರಾಶಿಯವರಿಗೆ ಪರಿಹಾರಗಳು

1)ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
2) ಈ ದಾನಗಳಿಂದ ಶುಭ ಫಲ: ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಾಲಯ, ದೇವರ ಪೂಜೆ: ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ. ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.

ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ).

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ