logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿ ದೀಪಾವಳಿ ಭವಿಷ್ಯ: ಕಮಿಷನ್ ಆಧಾರಿತ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಲಾಭ ಕಾಣುವಿರಿ, ಆರೋಗ್ಯ ಮೊದಲ ಆದ್ಯತೆಯಾಗಿರುತ್ತೆ

ವೃಶ್ಚಿಕ ರಾಶಿ ದೀಪಾವಳಿ ಭವಿಷ್ಯ: ಕಮಿಷನ್ ಆಧಾರಿತ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಲಾಭ ಕಾಣುವಿರಿ, ಆರೋಗ್ಯ ಮೊದಲ ಆದ್ಯತೆಯಾಗಿರುತ್ತೆ

Raghavendra M Y HT Kannada

Oct 20, 2024 06:46 AM IST

google News

ವೃಶ್ಚಿಕ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ ತಿಳಿಯಿರಿ

    • Deepavali Scorpio Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ವೃಶ್ಚಿಕ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌.ಸತೀಶ್)
ವೃಶ್ಚಿಕ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ ತಿಳಿಯಿರಿ
ವೃಶ್ಚಿಕ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ ತಿಳಿಯಿರಿ

Deepavali Scorpio Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ವೃಶ್ಚಿಕ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ವೃಶ್ಚಿಕ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದಲ್ಲಿ ನಿಮ್ಮಕೆಲಸ ಕಾರ್ಯಗಳಿಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ನಿಮ್ಮಲ್ಲಿರುವ ಹಠದ ಗುಣ ಬೇಸರ ಉಂಟು ಮಾಡಿದರು ಅದರ ಆಂತರ್ಯದ ಅರಿವು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ರೀತಿಯ ಆತಂಕಗಳು ಎದುರಾದರು ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ನಿಮ್ಮಲ್ಲಿರುವ ಹಠ ಮತ್ತು ದೃಢವಾದ ಸಂಕಲ್ಪ ಹೊಸ ಅವಕಾಶಗಳನ್ನು ನೀಡುತ್ತದೆ. ಭಯದ ಮನೋಭಾವನೆ ನಿಧಾನದ ತೀರ್ಮಾನಗಳಿಗೆ ಕಾರಣವಾಗುತ್ತದೆ. ಆರಂಭಿಸುವ ಹೊಸ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸುವ ಸೂಚನೆಗಳಿವೆ.

ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕಾನೂನಿನ ವಿಚಾರದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಗಳಿವೆ. ಮುಖ್ಯವಾದ ಕೆಲಸಗಳ ವೇಳೆ ನಿಮ್ಮನ್ನು ಅನಾರೋಗ್ಯವು ಕಾಡುತ್ತದೆ. ಹಿಂದಿನ ದಿನಗಳಲ್ಲಿ ಮಾಡಿದ್ದ ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಗಳಿಸುವಿರಿ. ಆತ್ಮೀಯರ ಸಹಾಯದಿಂದ ಬಗೆಹರಿಯದಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಗೃಹಿಣಿಯರ ಸಹಾಯ, ಸಹಕಾರದಿಂದ ನೆಮ್ಮದಿಯ ಜೀವನ ನಡೆಸುವಿರಿ. ಗೃಹಿಣಿಯರು ಆದಿಕ ಪ್ರಮಾಣದ ಖರ್ಚು ವೆಚ್ಚದಲ್ಲಿ ತೊಡಗುತ್ತಾರೆ. ಉಡುಗೊರೆಯಾಗಿ ಸಂಗಾತಿಗೆ ಇಚ್ಚಿಸುವಂತಹ ವಸ್ತ್ರಗಳು ಅಥವಾ ಒಡವೆಗಳನ್ನು ನೀಡಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆಯಿಂದ ನಡೆದುಕೊಳ್ಳುವ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಆತ್ಮೀಯರ ಗೆಳೆತನ ಹೊಸ ಪ್ರಯೋಗಗಳಿಗೆ ನಾಂದಿಯಾಗುತ್ತದೆ

ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟವನ್ನು ತಲುಪುತ್ತಾರೆ. ಉತ್ತಮ ಭವಿಷ್ಯಕ್ಕಾಗಿ ಕುಟುಂಬದ ಹಿರಿಯರು ಮೊದಲ ಆದ್ಯತೆ ನೀಡುತ್ತಾರೆ. ಉನ್ನತ ವಿದ್ಯಾಭ್ಯಾಸದ ಆಸೆಯು ನೆರವೇರುತ್ತದೆ. ನಿಮಗೆ ಅನಿರೀಕ್ಷಿತವಾಗಿ ಉದ್ಯೋಗದ ಅವಕಾಶವು ದೊರೆಯಲಿದೆ. ಪರಿಪಕ್ವ ನಿರ್ಣಯಗಳು ನಿಮ್ಮ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಧ್ಯಾನ ಯೋಗದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆತ್ಮೀಯರ ಗೆಳೆತನ ಹೊಸ ಪ್ರಯೋಗಗಳಿಗೆ ನಾಂದಿಯಾಗುತ್ತದೆ. ಜೀವನದಲ್ಲಿ ಸದಾಕಾಲ ಬದಲಾವಣೆಗಳನ್ನು ಇಷ್ಟಪಡುವಿರಿ. ನಿಮ್ಮ ಕೆಲಸ ಕಾರ್ಯಗಳಿಂದ ನಿಮ್ಮೊಡನೆ ಇರುವ ಜನರಿಗೆ ಅನುಕೂಲ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಕೆಲಸವನ್ನು ತ್ವರಿತವಾಗಿ ಮುಗಿಸಬೇಕಾದ ಅನಿವಾರ್ಯತೆ ಇರುತ್ತದೆ. ಮಾನಸಿಕ ಒತ್ತಡವು ಕೆಲಸ ಕಾರ್ಯಗಳು ಸಹ ಹಿಂದುಳಿಯುವಂತೆ ಮಾಡುತ್ತದೆ. ಕಲುಷಿತ ಆಹಾರ ಸೇವನೆ ಅಜೀರ್ಣಕ್ಕೆ ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ತಲೆನೋವು, ನೆಗಡಿ ಮತ್ತು ಕೆಮ್ಮು ಪದೇ ಪದೇ ಕಾಡುತ್ತದೆ. ಆದ್ದರಿಂದ ನೈರ್ಮಲ್ಯರಹಿತ ಗಾಳಿಗಾಗಿ ಬೆಳಗಿನ ವೇಳೆ ವಾಯುವಿಹಾರ ಮಾಡಬೇಕು. ಕೀಲುಗಳಲ್ಲಿ ನೋವಿನ ಅನುಭವ ಆಗುತ್ತದೆ. ಗೃಹಿಣಿಯರು ಮನೆಯ ಕೆಲಸವನ್ನು ಮಾಡುವ ವೇಳೆ ಜಾರಿ ಬಿದ್ದು ಕೈ ಕಾಲುಗಳಲ್ಲಿ ಊತ ಉಂಟಾಗಬಹುದು.

ಮಾತು ಕಡಿಮೆ ಮಾಡಿ ಕೆಲಕ್ಕೆ ಆದ್ಯತೆ ನೀಡುತ್ತೀರಿ

ನಿಮ್ಮ ಮಾತುಗಳಿಗೆ ಎಲ್ಲರಿಂದ ಗೌರವ ದೊರೆಯುತ್ತದೆ. ನಿರೀಕ್ಷಿತ ವೇಳೆಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸದೆಹೋದಲ್ಲಿ ಸಿಡುಕಿನಿಂದ ವರ್ತಿಸುವಿರಿ. ಅನಿರೀಕ್ಷಿತ ಧನ ಲಾಭವಿದೆ. ಆದರೂ ಹಣವನ್ನು ಉಳಿಸಲು ವಿಫಲರಾಗುವಿರಿ. ಕಮಿಷನ್ ಆಧಾರಿತ ಹಣಕಾಸಿನ ವ್ಯವಹಾರದಲ್ಲಿ ಹೇರಳ ಲಾಭವಿರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ನಿಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಸಭೆ ಸಮಾರಂಭಗಳಲ್ಲಿ ಮೌನವನ್ನು ಆಶ್ರಯಿಸುವಿರಿ. ಆಡುವ ಮಾತನ್ನು ಕಡಿಮೆ ಮಾಡಿ ಕೆಲಸಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ.

ಹೊಸ ಕೆಲಸವನ್ನು ಆರಂಭಿಸುವ ಕಿರಿಯರಿಗೆ ಉತ್ತಮ ಮಾರ್ಗದರ್ಶನ ನೀಡುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ನಿಮಗೆ ವಿಶೇಷ ಗೌರವ ಲಭಿಸುತ್ತದೆ. ಸುದೀರ್ಘವಾದ ಪ್ರವಾಸಗಳಿಗೆ ಹೆಚ್ಚಿನ ಹಣಖರ್ಚು ಮಾಡುವಿರಿ. ಉಸಿರಾಟದ ತೊಂದರೆ ಇರುತ್ತದೆ. ರಕ್ತಕ್ಕೆ ಸಂಬಂಧ ಪಟ್ಟ ದೋಷವನ್ನು ಹೊಂದಿರುವವರು ಎಚ್ಚರಿಕೆ ವಹಿಸಬೇಕು. ಗೃಹವೈದ್ಯದಿಂದ ನಿಮ್ಮ ಹಲವು ಸಮಸ್ಯೆಗಳು ದೂರವಾಗುತ್ತವೆ. ಸೋಲುವ ಸಂದರ್ಭದಲ್ಲಿ ಕೆಲಸ ಕಾರ್ಯಗಳಿಂದ ನಿರ್ಗರ್ಮಿಸುವಿರಿ. ಸಂವಿಧಾನ ಸಭೆಯಿಂದ ಆತ್ಮೀಯರ ಆಂತರಿಕ ಸಮಸ್ಯೆಗಳಿಗೆ ಪರಿಹಾರ ನೀಡುವಿರಿ. ಎಲ್ಲರನ್ನೂ ಗೌರವಿಸುವ ನೀವು ಬೇರೆಯವರಿಂದಲೂ ಗೌರವವನ್ನು ನಿರೀಕ್ಷಿಸುವಿರಿ. ಬೇರೆಯವರಿಂದ ಅವಮಾನವಾದ ಸಂದರ್ಭದಲ್ಲಿ ಉಗ್ರವಾಗಿ ವರ್ತಿಸಿ ಅವರಿಂದ ದೂರ ಸರಿಯುವಿರಿ.

ದೀಪಾವಳಿ 2024: ನಿಮಗೆ ತಿಳಿದರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ವೃಶ್ಚಿಕ ರಾಶಿಯವರ ಗುಣಲಕ್ಷಣಗಳು

ವೃಶ್ಚಿಕ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಸ್ನೇಹಮಯ ವ್ಯಕ್ತಿತ್ವವಿರುತ್ತದೆ. ಕೇವಲ ಕುಟುಂಬದವರನ್ನು ಮಾತ್ರವಲ್ಲದೆ ಹೊರಗಿನವರನ್ನು ಸಹ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಸಮಾಜದಲ್ಲಿ ಜನಪ್ರಿಯತೆ ಮತ್ತು ಉನ್ನತ ಸ್ಥಾನಮಾನ ಲಭಿಸುತ್ತದೆ. ಮನದ ನೋವನ್ನು ನುಂಗಿ ಸದಾ ಕಾಲ ನಗುತ್ತಾ ಬಾಳುವುದು ಇವರ ವಿಶೇಷ ಗುಣ. ಏಕಾಂತವನ್ನು ಇಷ್ಟಪಡುತ್ತಾರೆ. ಯಾರ ಮೇಲೂ ಅವಲಂಬಿತರಾಗಿ ಬಾಳುವುದು ಇಷ್ಟವಾಗುವುದಿಲ್ಲ. ಯಾರಿಂದಲೂ ಟೀಕೆ ಮಾತುಗಳನ್ನು ಕೇಳುವುದಿಲ್ಲ. ಉತ್ತಮ ಹಾಸ್ಯದ ಪರಿಜ್ಞಾನವಿರುತ್ತದೆ. ದೀರ್ಘಕಾಲದ ಪ್ರವಾಸ ಮಾಡುವುದೆಂದರೆ ಬಲು ಇಷ್ಟ. ಈಗಿನ ಕಾಲದ ಮೊಬೈಲ್ ಫೋನ್ ಇವರ ನಿಜವಾದ ಸ್ನೇಹಿತ ಅಥವಾ ಸ್ನೇಹಿತೆ. ಪತಿಯ ಮೇಲೆ ವಿಶೇಷವಾದ ಒಲವು ಇರುತ್ತದೆ. ಸ್ವಾರ್ಥಿಗಳೂ ಹೌದು. ತಾವು ಪಾಲಿಸದೇ ಹೋದರು ಬೇರೆಯವರಿಗೆ ಬುದ್ಧಿವಾದ ಹೇಳುವುದರಲ್ಲಿ ನಿಸ್ಸೀಮರು.

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಪುರುಷರು ಸದಾ ಕಾಲ ಉತ್ಸಾಹದಿಂದ ಕೂಡಿರುತ್ತಾರೆ. ಬೇರೆಯವರ ಮಾತನ್ನು ಕೇಳದೆ ಸದಾಕಾಲ ಏನಾದರೂ ಒಂದು ಕೆಲಸವನ್ನು ನಿರ್ವಹಿಸುತ್ತಾರೆ. ಇವರಿಗೆ ಸಹ ಏಕಾಂತವೆಂದರೆ ಇಷ್ಟ. ಮುಖದಲ್ಲಿ ಸದಾಕಾಲ ನಗುವು ತುಂಬಿರುತ್ತದೆ. ಮನಸ್ಸಿನಲ್ಲಿ ಕೆಟ್ಟ ಉದ್ದೇಶ ಇರುವುದಿಲ್ಲ. ಸಮಯಕ್ಕೆ ತಕ್ಕಂತೆ ನಗೆಹನಿಗಳನ್ನು ಹೇಳಬಲ್ಲರು. ಪ್ರೇಮ ವಿವಾಹದಲ್ಲಿ ಇವರಿಗೆ ನಂಬಿಕೆ ಇರುವುದಿಲ್ಲ. ತಂದೆ ತಾಯಿ ಎಂದರೆ ವಿಶೇಷ ಭಕ್ತಿ ಮತ್ತು ಗೌರವ. ತಪ್ಪು ಮಾಡಿ ನೊಂದು ಬಂದ ಜನರನ್ನು ದೂರ ಮಾಡುವುದಿಲ್ಲ. ಯಾವುದೇ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸಬಲ್ಲರು.

ವೃಶ್ಚಿಕ ರಾಶಿಯವರ ಶುಭ ದಿನಾಂಕರ, ವಾರ, ಬಣ್ಣ

ವೃಶ್ಚಿಕ ರಾಶಿಯ ಅಧಿಪತಿ: ಮಂಗಳ, ಶುಭ ದಿನಾಂಕಗಳು: 1, 2, 3, 4, 7, 9, ವೃಶ್ಚಿಕ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ವೃಶ್ಚಿಕ ರಾಶಿಯವರಿಗೆ ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕೆನೆಬಣ್ಣ, ವೃಶ್ಚಿಕ ರಾಶಿಯವರಿಗೆ ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ವೃಶ್ಚಿಕ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ವೃಶ್ಚಿಕ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15 ರಿಂದ ಅಕ್ಟೋಬರ್ 14, ವೃಶ್ಚಿಕ ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ವೃಶ್ಚಿಕ ರಾಶಿಯವರಿಗೆ ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ವೃಶ್ಚಿಕ ರಾಶಿಯವರಿಗೆ ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ.

ವೃಶ್ಚಿಕ ರಾಶಿಯವರಿಗೆ ಪರಿಹಾರಗಳು

1)ಹನುಮಾನ ಚಾಲೀಸಾ: ಪ್ರತಿದಿನ ಹನುಮಾನ್ ಚಾಲಿಸಾ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.
2)ಈ ದಾನಗಳಿಂದ ಶುಭಫಲ: ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.
3)ದೇವಾಲಯ, ಗುರುಪೂಜೆ: ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ