ಅಜ್ಞಾನವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ: ಇಲ್ಲಿದೆ ದೀಪಗಳಿಗೆ ಸಂಬಂಧಪಟ್ಟ ಶ್ಲೋಕಗಳು ಹಾಗೂ ಹಾಡುಗಳು
Oct 30, 2024 08:00 AM IST
ಅಜ್ಞಾನವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ: ಇಲ್ಲಿದೆ ದೀಪಗಳಿಗೆ ಸಂಬಂಧಪಟ್ಟ ಶ್ಲೋಕಗಳು ಹಾಗೂ ಹಾಡುಗಳು
ಅಜ್ಞಾನವನ್ನು ಹೋಗಲಾಡಿಸುವ ಹಬ್ಬ, ದೀಪಗಳ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿಯು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ದೀಪಾವಳಿ ಅಂದರೆ ಹೆಸರೇ ಸೂಚಿಸುವಂತೆ ದೀಪಗಳ ಹಬ್ಬ. ದೀಪದ ಪಾವಿತ್ರ್ಯತೆ ಸೂಚಿಸುವ ಹಲವು ಶ್ಲೋಕಗಳು, ಹಾಡುಗಳಿವೆ. ಇಲ್ಲಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ.
ಅಜ್ಞಾನವನ್ನು ಹೋಗಲಾಡಿಸುವ ಹಬ್ಬ, ದೀಪಗಳ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿಯು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಬೆಳಕಿನ ಹಬ್ಬ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತದೆ. ದೀಪಾವಳಿ ಎಂದರೆ ಕೇವಲ ಪಟಾಕಿ ಸಿಡಿಸುವುದು ಅಲ್ಲ. ಹೆಸರೇ ಹೇಳುವಂತೆ ದೀಪಗಳ ಹಬ್ಬ ದೀಪಾವಳಿಯು ವರ್ಣರಂಜಿತ ರಂಗೋಲಿಯಿಂದ ಮನೆಗಳನ್ನು ಅಲಂಕರಿಸಲಾಗುತ್ತದೆ. ದೀಪಾವಳಿ ಅಂದರೆ ಹೆಸರೇ ಸೂಚಿಸುವಂತೆ ದೀಪಗಳ ಹಬ್ಬ. ಕನ್ನಡದಲ್ಲಿ ದೀಪಗಳಿಗೆ ಸಂಬಂಧಪಟ್ಟಿರುವಂತಹ ಹಲವು ಹಾಡುಗಳಿವೆ. ಇನ್ನು ದೀಪದ ಪಾವಿತ್ರ್ಯತೆ ಸೂಚಿಸುವ ಹಲವು ಶ್ಲೋಕಗಳೂ ಇವೆ. ಇವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ತಾಜಾ ಫೋಟೊಗಳು
ಜ್ಞಾನಜ್ಯೋತಿ ಬೆಳಗಿಸುವ ದೀಪದ ಶ್ಲೋಕಗಳು
ದೇವರಿಗೆ ಪೂಜೆ ಮಾಡುವುದು ಹಿಂದೂ ಧರ್ಮದ ಸಂಪ್ರದಾಯ. ಪೂಜೆ ಮಾಡುವಾಗ ದೀಪಗಳನ್ನು ಬೆಳಗಿಸಲಾಗುತ್ತದೆ. ದೀಪವನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ದೀಪವನ್ನು ಬೆಳಗಿಸುವ ಮೂಲಕ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ದೀಪವನ್ನು ಬೆಳಗಿಸುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ದೀಪದ ಜ್ವಾಲೆಯನ್ನು ಪ್ರಗತಿ ಮತ್ತು ಅಭಿವೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದೀಪವನ್ನು ಬೆಳಗಿಸುವಾಗ ವಿಶೇಷ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ.
ದೀಪವನ್ನು ಹಚ್ಚುವಾಗ ಈ ಮಂತ್ರವನ್ನು ಪಠಿಸಿ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಮ್ಪದ ।
ನಮೋಸ್ತುತೇ, ಶತ್ರು ಬುದ್ಧಿಯ ನಾಶಕ.
ದೀಪೋ ಜ್ಯೋತಿ ಪರಬ್ರಹ್ಮ ದೀಪೋ ಜ್ಯೋತಿರ್ಜನಾರ್ದನಃ ।
ದೀಪೋ ಹರ್ತು ಮೇ ಪಾಪಂ ಸಂಧ್ಯಾದೀಪ ನಮೋಸ್ತುತೇ ।
ದೀಪವನ್ನು ಬೆಳಗಿಸುವಾಗ ಈ ಮಂತ್ರವನ್ನು ಪಠಿಸಿದರೆ, ಅದರಿಂದ ಪ್ರಯೋಜನವನ್ನು ಪಡೆಯಬಹುದು. ಹಚ್ಚಿದ ದೀಪವು ನಮಗೆ ಐಶ್ವರ್ಯ, ಸುಖ, ಆರೋಗ್ಯ, ರೋಗಗಳು ನಾಶವಾಗಲಿ ಮತ್ತು ದೀಪವನ್ನು ಹಚ್ಚುವುದರಿಂದ ಸಂಪತ್ತು ವೃದ್ಧಿಯಾಗಲಿ ಎಂಬುದು ಈ ಮಂತ್ರದ ಅರ್ಥ. ನಮ್ಮ ಶತ್ರುಗಳು ಅವರ ಬುದ್ಧಿವಂತಿಕೆ. ಅವನು ಬುದ್ಧಿವಂತಿಕೆಯನ್ನು ಪಡೆಯಲಿ ಮತ್ತು ಬ್ರಹ್ಮನ ರೂಪದಲ್ಲಿರುವ ಈ ದೀಪವು ವ್ಯಕ್ತಿಯ ಪಾಪಗಳನ್ನು ನಾಶಮಾಡಲಿ ಎಂಬರ್ಥವನ್ನು ಈ ಶ್ಲೋಕ ನೀಡುತ್ತದೆ.
ಶುಭಂ ಕರೋತಿ ಕಲ್ಯಾಣಮಾರೋಗ್ಯಂ ಧನಸಂಪದಾ ।
ಶತ್ರುಬುದ್ಧಿವಿನಾಶಾಯ್ ದೀಪಜ್ಯೋತಿನಮೋಸ್ತುತೆ ॥
ಓ ಐಶ್ವರ್ಯ, ಕ್ಷೇಮ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸುವ ಮತ್ತು ಶತ್ರುತ್ವದ ಆಲೋಚನೆಗಳನ್ನು ನಾಶಮಾಡುವ ದೀಪದ ಜ್ವಾಲೆಯೇ, ನಾನು ನಿನಗೆ ವಂದನೆ ಸಲ್ಲಿಸುತ್ತೇನೆ ಎಂಬರ್ಥವನ್ನು ನೀಡುವ ಶ್ಲೋಕವಿದು.
ದೀಪಜ್ಯೋತಿ: ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ.
ದೀಪೋ ಹರ್ತು ಮೇ ಪಾಂ ದೀಪಜ್ಯೋತಿರ್ನಮೋಸ್ತುತೇ ॥
ದೀಪಜ್ಯೋತಿ: ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ.
ದೀಪೋ ಹರ್ತು ಮೇ ಪಾಂ ದೀಪಜ್ಯೋತಿರ್ನಮೋಸ್ತುತೀ ।।
ದೀಪ-ಬೆಳಕು ಪರಮ ಬ್ರಹ್ಮ, ದೀಪ-ಬೆಳಕು ತಾನೇ ಜನಾರ್ದನ. ದೈವಿಕ ದೀಪವು ನನ್ನ ಪಾಪಗಳನ್ನು ನಾಶಮಾಡಲಿ. ಸಂಜೆಯ ದಿವ್ಯ ದೀಪಕ್ಕೆ ನಮಸ್ಕಾರಗಳು.
ದೀಪಗಳಿಗೆ ಸಂಬಂಧಪಟ್ಟಂತಹ ಹಾಡುಗಳು
ಬೆಳಕಿನ ಹಬ್ಬ ದೀಪಾವಳಿಗೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಹಲವು ಹಾಡುಗಳಿವೆ. ಅದರಲ್ಲೂ ಬಹಳಷ್ಟು ಸಿನಿಮಾ ಹಾಡುಗಳಿವೆ. ಆದರೆ, ಅಂದಿಗೂ-ಇಂದಿಗೂ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ಹಾಗೂ ಬೆಳಕಿನ ಹಬ್ಬ ಬಂದರೆ ನೆನಪಾಗುವಂತಹ ಹಾಡೆಂದರೆ ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚುತಾ ಹಾಡು ಜನಮಾನಸದಲ್ಲಿ ಇಂದಿಗೂ ನೆನಪಿನಲ್ಲಿ ಉಳಿದಿದೆ. ನಟ ಶಿವರಾಜ್‌ಕುಮಾರ್ ಅಭಿನಯದ ನಂಜುಂಡಿ ಸಿನಿಮಾದ ಈ ಹಾಡು ಬಹಳ ಫೇಮಸ್.
ಇದೇ ರೀತಿ ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಹಾಡು ಕೂಡ ತುಂಬಾನೇ ಪ್ರಸಿದ್ಧಿ ಪಡೆದಿದೆ. ಮುದ್ದಿನ ಮಾವ ಸಿನಿಮಾದ ಹಾಡು ಇದಾಗಿದ್ದು, ಶಶಿಕುಮಾರ್ ಹಾಗೂ ನಟಿ ಶೃತಿ ಅಭಿನಯಿಸಿದ್ದಾರೆ. ಈಗಿನ ಜನರೇಶನ್ ಮಂದಿ ಕೂಡ ಈ ಹಾಡನ್ನು ಇಂದಿಗೂ ಕೇಳಲು ಬಹಳ ಇಷ್ಟಪಡುತ್ತಾರೆ.
ಕಪ್ಪು ಬಿಳುಪು ಸಿನಿಮಾ ನಂದಾದೀಪ ಚಿತ್ರದ ದೀಪದ ಹಾಡು ಇಂದಿಗೂ ಬಹಳ ಪ್ರಸಿದ್ಧಿ ಪಡೆದಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲ್ಲಾಟ ಸಿನಿಮಾದ ಪಟ ಪಟಾಕಿ ಹಾಡು ಇಂದಿಗೂ ಬಹಳ ಫೇಮಸ್ ಆಗಿದೆ.