Deepavali 2024: ದೀಪಾವಳಿಯಲ್ಲಿ ಬಳಸಿದ ಹಣತೆಗಳು ಮುಂದಿನ ವರ್ಷಕ್ಕೂ ಬೇಕಾ? ಸುರಕ್ಷಿತವಾಗಿ ಎತ್ತಿಡಲು ಇಲ್ಲಿದೆ ಟಿಪ್ಸ್
ದೀಪಾವಳಿ ಮುಗಿದ ಬಳಿಕ ಹಬ್ಬಕ್ಕೆ ಬಳಿಸಿದ ದೀಪಗಳನ್ನು ಸುರಕ್ಷಿತವಾಗಿ ಇಟ್ಟರೆ ಇದೇ ಹಣತೆಗಳನ್ನು ಮುಂದಿನ ವರ್ಷಕ್ಕೆ ಬಳಸಬಹುದು. ಹಾಗಿದ್ದರೆ ಹತೆಗಳನ್ನು ಎತ್ತಿಡುವುದು ಹೇಗೆ, ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಕುರಿತು ವಿವರವಾಗಿ ತಿಳಿಯಿದುಕೊಳ್ಳಿ.
ಬೆಳಕಿನ ಹಬ್ಬ ದೀಪಾವಳಿಗೆ ಇನ್ನ ಕೆಲವೇ ಕೆಲವು ದಿನಗಳು ಬಾಕಿ ಇದ್ದು, ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿವೆ. ಪ್ರತಿಯೊಬ್ಬರು ದೀಪಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಹಬ್ಬ ಮುಗಿದ ಕೂಡಲೇ ಬಹುತೇಕ ವಸ್ತುಗಳನ್ನು ತ್ಯಾಜ್ಯವಾಗಿ ಹೊರಗಡೆ ಎಸೆಯುತ್ತೇವೆ. ಕೆಲವರು ದೀಪಾವಳಿಗೆ ಬಳಸಿದ ಹಣತೆಗಳನ್ನೂ ಎಸೆಯುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ಖರ್ಚು ಹೆಚ್ಚಾಗುತ್ತದೆ. ಇದರ ಬದಲಾಗಿ ದೀಪಾವಳಿಗೆ ಬಳಸಿದ ಹಣತೆಗಳನ್ನು ಸುರಕ್ಷಿತವಾಗಿ ಎತ್ತಿಟ್ಟರೆ ಮುಂದಿನ ವರ್ಷಕ್ಕೂ ಇದೇ ಹಣತೆಗಳನ್ನು ಬಳಸಬಹುದು. ಒಂದು ವೇಳೆ ಬೇಡ ಎನಿಸಿದರೆ ವಿಸರ್ಜನೆ ಮಾಡುವುದು ಹೇಗೆ ಅನ್ನೋದರ ಬಗ್ಗೆಯೂ ಇಲ್ಲಿ ತಿಳಿಯಿರಿ
ದೀಪಾವಳಿಯಲ್ಲಿ ಬಳಸಿದ ಹಣತೆಗಳನ್ನು ಮುಂದಿನ ವರ್ಷಕ್ಕ ಸುರಕ್ಷಿತವಾಗಿ ಎತ್ತಿಡುವುದು ಹೇಗೆ
ಟಿಶ್ಯೂ ಪೇಪರ್‌ನಲ್ಲಿ ಒರೆಸಿ: ದೀಪಾವಳಿ ಹಬ್ಬದಲ್ಲಿ ಬಳಸಿದ ಹಣತೆಗಳನ್ನು ಸುರಕ್ಷಿತವಾಗಿ ಎತ್ತಿಡಲು ಮೊದಲು ಹಣತೆಗಳಲ್ಲಿನ ಎಣ್ಣೆ ಹೋಗುವಂತೆ ಟಿಶ್ಯೂ ಪೇರ್‌ನಲ್ಲಿ ಚೆನ್ನಾಗಿ ಊಜ್ಜಿದ ನಂತರ ಸ್ವಲ್ಪ ಬಿಸಿಲಿನಲ್ಲಿ ಹಾರಿಸಿದ ಬಳಿಕ ಎತ್ತಿಡಬೇಕು.
ಬಟ್ಟೆಯಿಂದ ಒರೆಸಿ: ಟಿಶ್ಯೂ ಪೇಪರ್‌ನಲ್ಲಿ ಒರೆಸಿ ಹಣತೆಗಳನ್ನು ಎತ್ತಿಡುವುದು ಒಂದು ವಿಧಾನವಾದರೆ ಮತ್ತೊಂದು ವಿಧಾನವೆಂದರೆ ತೇವದ ಬಟ್ಟೆಯಿಂದಲೂ ಹಣತೆಯಲ್ಲಿರುವ ಎಣ್ಣೆಯನ್ನು ಚೆನ್ನಾಗಿ ಒರೆಸಿದ ಬಳಿಕ ಸ್ವಲ್ಪ ಸಮಯ ಬಿಸಿಲಿನಲ್ಲಿ ಹಾರಿಸಿದ ಬಳಿಕ ಎತ್ತಿಡಬಹುದು.
ಥರ್ಮಾಕೋಲ್ ಬಾಕ್ಸ್ ಬಳಕೆ: ಸಾಮಾನ್ಯವಾಗಿ ಮಣ್ಣಿನಿಂದ ಮಾಡಿದ ಹಣತೆಗಳನ್ನು ಸುರಕ್ಷಿತವಾಗಿ ಎತ್ತಿಡಬೇಕು. ಸ್ವಲ್ಪ ಯಾಮಾರಿದರೂ ಹಣತೆಗಳು ಒಡೆದು ಹೋಗುತ್ತವೆ. ಹೀಗಾಗಿ ಥರ್ಮಾಕೋಲ್ ಬಳಸಿದ ಸಣ್ಣ ಕಾರ್ಟೆಡ್ ಬಾಕ್ಸ್‌ಗಳಲ್ಲಿ ದೀಪಗಳನ್ನು ಎತ್ತಿಟ್ಟರೆ ಮುಂದಿನ ವರ್ಷಕ್ಕೆ ಇದೇ ಹಣತೆಗಳನ್ನು ಬಳಸಿಕೊಳ್ಳಿ.
ತೇವದ ಸ್ಥಳದಲ್ಲಿ ಹಣತೆಗಳನ್ನು ಇಡಬೇಡಿ: ಹಣತೆಗಳಲ್ಲಿನ ಎಣ್ಣೆಯನ್ನು ಒರೆಸಿ ಎತ್ತಿಡುವ ಸಂದರ್ಭದಲ್ಲಿ ಕೆಲವು ಮುನ್ನಚೆರಿಕೆಯ ಕ್ರಮಗಳನ್ನು ವಹಿಸಬೇಕು. ಹಣತೆಗಳ ಬಾಕ್ಸ್ ಇಡುವ ಸ್ಥಳ ತೇವಾಂಶದಿಂದ ಕೂಡಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವಿಸರ್ಜಿಸುವುದು ಹೇಗೆ?: ಒಂದು ವೇಳೆ ನೀವೇನಾದರೂ ಮುಂದಿನ ವರ್ಷಕ್ಕೆ ಹಣತೆಗಳನ್ನು ಎತ್ತಿಡಬಹುದು ಬೇಡ, ಮುಂದಿನ ವರ್ಷಕ್ಕೆ ಹೊಸ ಹಣತೆಗಳನ್ನೇ ಖರೀದಿಸುವುದಾರೆ ಪ್ರಸ್ತುತ ಇರುವ ಹಣತೆಗಳನ್ನು ಒಂದು ಬಕೆಟ್ ಅಥವಾ ಪಾತ್ರೆಯಲ್ಲಿ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ. ನೀರಿನಲ್ಲಿ ಹಣತೆಗಳು ಕರಗಿದ ನಂತರ ನಗರದಲ್ಲಿ ಇರುವುವವರಾದರೆ ಯಾವುದಾದರೂ ಸಸ್ಯಕ್ಕೆ ಸುರಿಯಬೇಕು. ನಿಮ್ಮದು ಗ್ರಾಮೀಣ ಪ್ರದೇಶವಾಗಿದ್ದರೆ ಕರೆ, ಕುಂಟೆ ಅಥವಾ ನದಿಗೆ ಎಸೆಯಬೇಕು.