logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರೋಗ್ಯ ಭವಿಷ್ಯ 2025: ತುಲಾ ರಾಶಿಯವರಿಗೆ ವರ್ಷದ ಮೊದಲಾರ್ಧ ಜಾಗರೂಕತೆ ಅಗತ್ಯ, ವೃಶ್ಚಿಕ ರಾಶಿಯವರಿಗೆ ಬೆನ್ನು ನೋವಿನ ಸಮಸ್ಯೆ ಕಾಡಲಿದೆ

ಆರೋಗ್ಯ ಭವಿಷ್ಯ 2025: ತುಲಾ ರಾಶಿಯವರಿಗೆ ವರ್ಷದ ಮೊದಲಾರ್ಧ ಜಾಗರೂಕತೆ ಅಗತ್ಯ, ವೃಶ್ಚಿಕ ರಾಶಿಯವರಿಗೆ ಬೆನ್ನು ನೋವಿನ ಸಮಸ್ಯೆ ಕಾಡಲಿದೆ

Rakshitha Sowmya HT Kannada

Dec 01, 2024 10:16 PM IST

google News

ತುಲಾ, ವೃಶ್ಚಿಕ, ಧನಸ್ಸು ರಾಶಿಯವರ ಆರೋಗ್ಯ ಭವಿಷ್ಯ 2025

  • Health Horoscope 2025: ಜ್ಯೋತಿಷ್ಯದಲ್ಲಿ ನೀರು, ಗಾಳಿ, ಬೆಂಕಿ, ಭೂಮಿಗೆ ಸಂಬಂಧಿಸಿದ ಗ್ರಹಗಳು ಒಂದೊಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. 2025ರಲ್ಲಿ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ತುಲಾ, ವೃಶ್ಚಿಕ, ಧನಸ್ಸು ರಾಶಿಯವರ ಆರೋಗ್ಯ ಭವಿಷ್ಯ ಇಲ್ಲಿದೆ.

ತುಲಾ, ವೃಶ್ಚಿಕ, ಧನಸ್ಸು ರಾಶಿಯವರ ಆರೋಗ್ಯ ಭವಿಷ್ಯ 2025
ತುಲಾ, ವೃಶ್ಚಿಕ, ಧನಸ್ಸು ರಾಶಿಯವರ ಆರೋಗ್ಯ ಭವಿಷ್ಯ 2025 (PC: Canva)

ಆರೋಗ್ಯ ಭವಿಷ್ಯ 2025: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಆಗ್ಗಾಗ್ಗೆ ಕೇಳುತ್ತೇವೆ. ಅದು ದೈಹಿಕ, ಮಾನಸಿಕ ಆರೋಗ್ಯ ಯಾವುದೇ ಆಗಿರಲಿ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಂತೆ. ಆರೋಗ್ಯ ಚೆನ್ನಾಗಿರಬೇಕೆಂದು ವ್ಯಾಯಾಮ, ಉತ್ತಮ ಆಹಾರಗಳನ್ನು ಸೇವಿಸಲು ಗಮನ ಕೊಡುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಎಚ್ಚರವಾಗಿದ್ದರೂ ನಮ್ಮನ್ನು ಅನಾರೋಗ್ಯ ಕಾಡುತ್ತದೆ. ಇದಕ್ಕೆ ಗ್ರಹಗತಿಗಳೂ ಕಾರಣವಾಗಿರುತ್ತದೆ.

ತಾಜಾ ಫೋಟೊಗಳು

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಗ್ನಿ ಅಂಶಕ್ಕೆ ಸೇರಿದ ಗ್ರಹಗಳು ಶಾಖ, ಗಾಯ, ಜೀರ್ಣಕ್ರಿಯೆ ಮತ್ತು ರಕ್ತಕ್ಕೆ ಸಂಬಂಧಿಸಿದ ರೋಗಗಳು ಇತ್ಯಾದಿಗಳಿಗೆ ಕಾರಣವಾದರೆ,

ವಾಯು ಅಂಶಕ್ಕೆ ಸೇರಿದ ಗ್ರಹಗಳು ಗಾಳಿಗೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಭೂಮಿಯ ಅಂಶಗಳಿಗೆ ಸಂಬಂಧಿಸಿದ ಗ್ರಹಗಳು ನೋವನ್ನುಂಟುಮಾಡುವ ಕಾಯಿಲೆಗಳು ಹಾಗೂ ಜಲಕ್ಕೆ ಸಂಬಂಧಿಸಿದ ಗ್ರಹಗಳಿಂದ ಕೆಮ್ಮು, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೊಸ ವರ್ಷ ಬರುತ್ತಿದೆ. ಮುಂದಿನ ವರ್ಷ ದ್ವಾದಶ ರಾಶಿಗಳ ಆರೋಗ್ಯ ಹೇಗಿರಲಿದೆ ನೋಡೋಣ.

ತುಲಾ, ವೃಶ್ಚಿಕ, ಧನಸ್ಸು ರಾಶಿಯವರ ಆರೋಗ್ಯ ಭವಿಷ್ಯ 2025

 

ತುಲಾ ರಾಶಿ

ಜನವರಿಯಿಂದ ಮೇ ಮಧ್ಯದವರೆಗೆ, ಗುರುವು 8ಮನೆಯಲ್ಲಿ ಚಲಿಸುತ್ತದೆ, ಇದರಿಂದಾಗಿ ನಿಮ್ಮ ಹೊಟ್ಟೆ, ಸೊಂಟ ಅಥವಾ ತೋಳುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬಹುದು. ಮಾರ್ಚ್ ತಿಂಗಳಲ್ಲಿ, ಶನಿ ಸಂಕ್ರಮಣದಿಂದ ಕೂಡಾ ಹೊಟ್ಟೆ ಮತ್ತು ಬಾಯಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬಹುದು. ಮೇ ಮಧ್ಯದ ನಂತರ ನಿಮ್ಮ ಆರೋಗ್ಯ ಸುಧಾರಿಸಲಿದೆ. ವರ್ಷದ ಮೊದಲಾರ್ಧ ನೀವು ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೂ ಗಂಭೀರ ಸಮಸ್ಯೆ ಕಾಡುವುದಿಲ್ಲ.ಯಾವುದೇ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ.

ವೃಶ್ಚಿಕ ರಾಶಿ

ಮಾರ್ಚ್ ತಿಂಗಳಲ್ಲಿ ಶನಿ ಸಂಕ್ರಮಣದ ಸಮಯದಲ್ಲಿ ಎದೆ, ಮೊಣಕಾಲು, ಬೆನ್ನು, ಮೆದುಳು ಅಥವಾ ತಲೆನೋವಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಾರ್ಚ್‌ ನಂತರ ಆರೋಗ್ಯ ಸುಧಾರಿಸಿದರೂ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ. ಆದ್ದರಿಂದ ನಿಮ್ಮ ಆಹಾರದತ್ತ ಗಮನ ಹರಿಸಿ, ಯೋಗ ಮಾಡಿ, ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅಗತ್ಯವಿದ್ದರೆ ತಪ್ಪದೆ ವೈದ್ಯರನ್ನು ಸಂಪರ್ಕಿಸಿ.

ಧನು ರಾಶಿ

ವರ್ಷದ ಆರಂಭದಿಂದ ಮಾರ್ಚ್‌ವರೆಗಿನ ಸಮಯ ಆರೋಗ್ಯ ಚೆನ್ನಾಗಿರುತ್ತದೆ. ಆದರೆ. ಮಾರ್ಚ್‌ ನಂತರ ಶನಿ ಸಂಕ್ರಮಣ ಪ್ರಭಾವದಿಂದ ಅನಾರೋಗ್ಯ ಕಾಡುತ್ತದೆ. ಆರೋಗ್ಯದ ವಿಷಯದಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ. ಈಗಾಗಲೇ ಎದೆ ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವ ಜನರು. ಏಪ್ರಿಲ್ ನಿಂದ ಮೇ ಮಧ್ಯದವರೆಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗುರುವು ಮೇ ತಿಂಗಳಲ್ಲಿ ನಿಮ್ಮ 7ನೇ ಮನೆಯಲ್ಲಿ ಸಾಗುತ್ತಾನೆ. ಈ ಪರಿಸ್ಥಿತಿಯಲ್ಲಿ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ಒತ್ತಡದಿಂದ ಮುಕ್ತರಾಗಿ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ.

 ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ