logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lord Shiva: ಪಶುಪತಿ, ಪುಷ್ಪಲೋಚನ ಶಿವನಿಗಿದೆ 108 ಹೆಸರು, ಅರ್ಥ ತಿಳಿದು ಧ್ಯಾನ ಮಾಡಿ; ಗಂಗಾಧರನ ಆಶೀರ್ವಾದ ಪಡೆಯಿರಿ

Lord Shiva: ಪಶುಪತಿ, ಪುಷ್ಪಲೋಚನ ಶಿವನಿಗಿದೆ 108 ಹೆಸರು, ಅರ್ಥ ತಿಳಿದು ಧ್ಯಾನ ಮಾಡಿ; ಗಂಗಾಧರನ ಆಶೀರ್ವಾದ ಪಡೆಯಿರಿ

Rakshitha Sowmya HT Kannada

Jun 19, 2024 03:32 PM IST

google News

ಪಶುಪತಿ, ಪುಷ್ಪಲೋಚನ ಶಿವನಿಗಿದೆ 108 ಹೆಸರು, ಅರ್ಥ ತಿಳಿದು ಧ್ಯಾನ ಮಾಡಿ; ಗಂಗಾಧರನ ಆಶೀರ್ವಾದ ಪಡೆಯಿರಿ

  • ಶಿವನಿಗೆ ಅಶುತೋಷ, ಆದಿಗುರು, ಆದಿನಾಥ, ಆದಿಯೋಗಿ ಎಂದೆಲ್ಲಾ ನಾನಾ ಹೆಸರುಗಳಿವೆ. ಶಿವನ ಈ ಎಲ್ಲಾ ಹೆಸರನ್ನು ಪಠಿಸಿದರೆ ಜೀವನದಲ್ಲಿ ಯಶಸ್ಸು, ಸಂಪತ್ತು ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೇ ಶಿವನ ಸ್ತುತಿ ಮಾಡುವುದರಿಂದ ಮೋಕ್ಷ ಪಡೆಯಬಹುದಾಗಿದೆ. ಶಿವನ 108 ಹೆಸರುಗಳು ಮತ್ತುಅದರ ಅರ್ಥ ಹೀಗಿದೆ. (ಬರಹ: ಅರ್ಚನಾ ವಿ. ಭಟ್)

ಪಶುಪತಿ, ಪುಷ್ಪಲೋಚನ ಶಿವನಿಗಿದೆ 108 ಹೆಸರು, ಅರ್ಥ ತಿಳಿದು ಧ್ಯಾನ ಮಾಡಿ; ಗಂಗಾಧರನ ಆಶೀರ್ವಾದ ಪಡೆಯಿರಿ
ಪಶುಪತಿ, ಪುಷ್ಪಲೋಚನ ಶಿವನಿಗಿದೆ 108 ಹೆಸರು, ಅರ್ಥ ತಿಳಿದು ಧ್ಯಾನ ಮಾಡಿ; ಗಂಗಾಧರನ ಆಶೀರ್ವಾದ ಪಡೆಯಿರಿ

ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳನ್ನು ಜಗತ್ಪಾಲಕರು, ಜಗತ್ ರಕ್ಷಕರು ಎಂದು ಕರೆಯುತ್ತಾರೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನನ್ನು ಸೃಷ್ಟಿಕರ್ತ, ಲಯಕಾರಕನೆಂದು ಕರೆಯುತ್ತಾರೆ. ಶಿವನ ಮಹಿಮೆ ಅಪಾರ. ಶಿವನನ್ನು ಪೂಜಿಸುವುದರಿಂದ ಸುಭವಾಗಿ ಮೋಕ್ಷ ದೊರೆಯುತ್ತದೆ ಎಂಬುದು ನಂಬಿಕೆ. ಶಿವನಿಗೆ ಅದೆಷ್ಟೋ ಹೆಸರುಗಳಿವೆ. ಶಿವನನ್ನು ಮಹಾದೇವ, ಮಹೇಶ್ವರ, ಶಂಕರ, ದೇವೇಂದ್ರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆ ಹೆಸರುಗಳಿಗೆ ಅದರದೇ ಆದ ಅರ್ಥವೂ ಇದೆ. ಅದು ಶಿವನ ಗುಣಸ್ವಭಾವವನ್ನು ಹೇಳುತ್ತದೆ. ಶಿವನ 108 ಹೆಸರುಗಳನ್ನು ಪಠಿಸುವುದರಿಂದ ಜೀವನದಲ್ಲಿ ಸುಖ–ಶಾಂತಿ, ಸಮೃದ್ಧಿ ನೆಲೆಸುತ್ತದೆ. 

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶಿವನ 108 ಮಂಗಳಕರ ಹೆಸರು ಮತ್ತು ಅರ್ಥಗಳು ಹೀಗಿವೆ 

1. ಆಶುತೋಷ– ಎಲ್ಲಾ ಆಸೆಗಳನ್ನು ತಕ್ಷಣವೇ ಪೂರೈಸುವವನು

2. ಆದಿಗುರು – ಮೊದಲ ಗುರು

3. ಆದಿನಾಥ – ಮೊದಲ ದೇವರು

4. ಆದಿಯೋಗಿ – ಮೊದಲ ಯೋಗಿ

5. ಅಜಾ – ಜನನವೇ ಇಲ್ಲದಿರುವುದು, ಸ್ವಯಂಭು

6. ಅಕ್ಷಯಗುಣ - ಎಲ್ಲಾ ಗುಣಗಳನ್ನು ಹೊಂದಿರುವವನು

7. ಅನಘಾ - ದೋಷರಹಿತನಾದವನು

8. ಅನಂತ ದೃಷ್ಟಿ - ಅನಂತ ದೃಷ್ಟಿಯುಳ್ಳವನು

9. ಔಗಧ್ - ಸದಾ ಆನಂದದಿಂದಿರುವವನು

10. ಅವ್ಯಯ ಪ್ರಭು - ನಾಶವಾಗದ

11. ಭೈರವ - ಭಯ ನಾಶಕ

12. ಭಲನೇತ್ರ - ಹಣೆಯ ಮೇಲೆ ಕಣ್ಣಿರುವವನು

13. ಭೋಲೆನಾಥ್ - ಮುಗ್ಧ ಸ್ವಭಾವದವನು

14. ಭೂತೇಶ್ವರ - ಎಲ್ಲದರಲ್ಲೂ ಪಾಂಡಿತ್ಯವನ್ನು ಹೊಂದಿರುವವನು

15. ಭೂದೇವ– ಭೂಮಿಯ ದೇವರು

16. ಭೂತಪಾಲ– ಭೂತಗಣಗಳ ರಕ್ಷಕ

17. ಚಂದ್ರಪಾಲ – ಚಂದ್ರನ ಅಧಿಪತಿ

18. ಚಂದ್ರಪ್ರಕಾಶ - ಚಂದ್ರನನ್ನು ಮುಡಿಯಲ್ಲಿ ಹೊತ್ತಿರುವವನು

19. ದಯಾಳು - ಕರುಣಾಮಯಿ

20. ದೇವಾದಿ ದೇವ - ದೇವತೆಗಳ ದೇವರು

21. ಧನದೀಪ - ಸಂಪತ್ತಿನ ಒಡೆಯ

22. ಧ್ಯಾನದೀಪ – ಧ್ಯಾನದ ಬೆಳಕು

23. ದ್ಯುತಿಧರ - ತೇಜಸ್ವೀಯಾದವನು

24. ದಿಗಂಬರ - ಆಕಾಶವನ್ನು ಉಡುಪಾಗಿ ಧರಿಸಿರುವವನು

25. ದುರ್ಜನೀಯ - ಅರ್ಥಮಾಡಿಕೊಳ್ಳಲು ಅಸಾಧ್ಯನಾದವನು

26. ದುರ್ಜಯ - ಅಜೇಯ

27. ಗಂಗಾಧರ - ಗಂಗಾ ನದಿಯ ಅಧಿಪತಿ

28. ಗಿರಿಜಾಪತಿ - ಗಿರಿಜಾ ಪತ್ನಿ

29. ಗುಣಗ್ರಾಹಿನ್ - ಗುಣಗಳನ್ನು ಸ್ವೀಕರಿಸುವವನು

30. ಗುರುದೇವ - ಶ್ರೇಷ್ಠ ಗುರು

31. ಹರ – ಪಾಪಗಳನ್ನು ಹೋಗಲಾಡಿಸುವವನು

32. ಜಗದೀಶ - ಜಗತ್ತಿನ ನಾಯಕ

33. ಜರಾಧೀಶಮನ – ಸಂಕಟಗಳನ್ನು ದೂರಮಾಡುವವನು

34. ಜತಿನ್ – ಜಟೆಯನ್ನು ಹೊಂದಿದವನು

35. ಕೈಲಾಶಾಧಿಪತಿ - ಕೈಲಾಸ ಪರ್ವತದ ಅಧಿಪತಿ

36. ಕೈಲಾಸನಾಥ - ಕೈಲಾಸ ಪರ್ವತದ ದೇವರು

37. ಕಮಲಾಕ್ಷನ - ಕಮಲದಂತ ಕಣ್ಣುಗಳನ್ನು ಹೊಂದಿರುವವನು

38. ಕಂಠ - ಸದಾ ಪ್ರಕಾಶಮಾನನಾದವನು

39. ಕಪಾಲಿನ್ - ತಲೆಬುರುಡೆಗಳ ಹಾರವನ್ನು ಧರಿಸಿರುವವನು

40. ಕೇದಾರನಾಥ – ಕೇದಾರದ ದೇವರು

41. ಕೊಚ್ಚಡೈಯಾನ್ - ಉದ್ದನೆಯ ಜಟೆಯನ್ನು ಹೊಂದಿರುವವನು

42. ಕುಂಡಲಿನ್ - ಕಿವಿಯೋಲೆಗಳನ್ನು ಧರಿಸಿರುವವನು

43. ಲಲಾಟಾಕ್ಷ - ಹಣೆಯ ಮೇಲೆ ಕಣ್ಣಿರುವವನು

44. ಲಿಂಗಾಧ್ಯಕ್ಷ - ಲಿಂಗದ ಅಧಿಪತಿ

45. ಲೋಕಂಕರ - ಎಲ್ಲಾ ಮೂರು ಲೋಕಗಳ ಸೃಷ್ಟಿಕರ್ತ

46. ಲೋಕಪಾಲ - ಜಗತ್ತನ್ನು ನೋಡಿಕೊಳ್ಳುವವನು

47. ಮಹಾಬುದ್ಧಿ - ವಿಪರೀತ ಬುದ್ಧಿವಂತಿಕೆ ಹೊಂದಿದವನು

48. ಮಹಾದೇವ – ದೇವರುಗಳಲ್ಲೇ ಶ್ರೇಷ್ಠ ದೇವರು

49. ಮಹಾಕಾಲ - ಕಾಲದ ಅಧಿಪತಿ

50. ಮಹಾಮಾಯಾ - ಮಾಯೆ ಅಥವಾ ಭ್ರಮೆಯನ್ನು ಸೃಷ್ಟಿಸುವವನು

51. ಮಹಾಮೃತ್ಯುಂಜಯ - ಸಾವನ್ನು ಗೆದ್ದವನು

52. ಮಹಾನಿಧಿ - ದೊಡ್ಡದಾದ ನಿಧಿ ಹೊಂದಿದವನು

53. ಮಹಾಶಕ್ತಿಮಯ - ಅತ್ಯಂತ ಶಕ್ತಿಶಾಲಿಯಾದವನು

54. ಮಹಾಯೋಗಿ - ಶ್ರೇಷ್ಠ ಯೋಗಿ

55. ಮಹೇಶ - ಸರ್ವೋಚ್ಛ ದೇವರು

56. ಮಹೇಶ್ವರ – ದೇವತೆಗಳಿಗೆ ದೇವರು

57. ನಾಗಭೂಷಣ - ಸರ್ಪಗಳನ್ನು ಆಭರಣವನ್ನು ಧರಿಸಿರುವವನು

58. ನಟರಾಜ - ನೃತ್ಯ ಕಲೆಯ ರಾಜ

59. ನೀಲಕಂಠ– ನೀಲ ಬಣ್ಣದ ಕಂಠವನ್ನು ಹೊಂದಿರುವವನು

60. ನಿತ್ಯಸುಂದರ - ಯಾವಾಗಲೂ ಸುಂದರವಾಗಿರುವವನು

61. ನೃತ್ಯಪ್ರಿಯಾ– ನೃತ್ಯದ ಪ್ರೇಮಿ

62. ಓಂಕಾರ – ಓಂ ಶಬ್ದ ಅಥವಾ ನಾದದ ಸೃಷ್ಟಿಕರ್ತ

63. ಪಾಲನ್ಹಾರ್– ಎಲ್ಲರನ್ನೂ ರಕ್ಷಿಸುವವನು

64. ಪಂಚತ್ಸರನ್ - ಹುರುಪಿನ

65. ಪರಮೇಶ್ವರ - ಎಲ್ಲಾ ದೇವರುಗಳಲ್ಲಿ ಮೊದಲನೆಯವನು

66. ಪರಮಜ್ಯೋತಿ - ಶ್ರೇಷ್ಠ ದೀಪ

67. ಪಶುಪತಿ - ಎಲ್ಲಾ ಜೀವಿಗಳ ಒಡೆಯ

68. ಪಿನಾಕಿ- ಕೈಯಲ್ಲಿ ಬಿಲ್ಲು ಹಿಡಿದಿರುವವನು

69. ಪ್ರಣವ - ಓಂ ಸ್ವರದ ಮೂಲ

70. ಪ್ರಿಯಭಕ್ತ - ಭಕ್ತರ ಅಚ್ಚುಮೆಚ್ಚಿನ ದೇವರು

71. ಪ್ರಿಯದರ್ಶನ – ಪ್ರೀತಿಯ ದರ್ಶನ ಹೊಂದಿರುವವನು

72. ಪುಷ್ಕರ - ಪೋಷಣೆಯನ್ನು ನೀಡುವವನು

73. ಪುಷ್ಪಲೋಚನ - ಹೂವಿನಂತಹ ಕಣ್ಣುಗಳನ್ನು ಹೊಂದಿರುವವನು

74. ರವಿಲೋಚನ - ಸೂರ್ಯನಂತೆ ತೇಜಸ್ವೀ ಕಣ್ಣು ಹೊಂದಿರುವವನು

75. ರುದ್ರ - ಭಯಂಕರನಾದವನು

76. ಸದಾಶಿವ - ಅತೀತನಾದವನು

77. ಸನಾತನ - ಶಾಶ್ವತ ದೇವರು

78. ಸರ್ವಾಚಾರ್ಯ - ಸರ್ವೋಚ್ಚ ಆಚಾರ್ಯ

79. ಸರ್ವಶಿವ - ಶಾಶ್ವತನಾದವನು

80. ಸರ್ವತಾಪನ – ಎಲ್ಲರಿಗೂ ಶಿಕ್ಷಕ

81. ಸರ್ವಯೋನಿ - ಯಾವಾಗಲೂ ಶುದ್ಧನಾದವನು

82. ಸರ್ವೇಶ್ವರ – ಸರ್ವ ಜೀವಿಗಳಿಗೂ ದೇವರು

83. ಶಂಭೋ – ಮಂಗಳಕರನಾದವನು

84. ಶಂಕರ - ಎಲ್ಲಾ ದೇವರುಗಳ ಪ್ರಭು

85. ಶಾಂತಃ - ಸ್ಕಂದದ ಉಪದೇಶಕ

86. ಶೂಲಿನ - ಸಂತೋಷವನ್ನು ನೀಡುವವನು

87. ಶ್ರೇಷ್ಠ – ಚಂದ್ರನ ಅಧಿಪತಿ

88. ಶ್ರೀಕಂಠ - ಯಾವಾಗಲೂ ಶುದ್ಧ

89. ಶ್ರುತಿಪ್ರಕಾಶ – ತ್ರಿಶೂಲವುಳ್ಳವನು

90. ಸ್ಕಂದಗುರು - ವೇದಗಳ ಪ್ರಕಾಶಕ

91. ಸೋಮೇಶ್ವರ - ಶುದ್ಧ ದೇಹವನ್ನು ಹೊಂದಿರುವವನು

92. ಸುಖದಾ - ಸಂತೋಷವನ್ನು ಕೊಡುವವನು

93. ಸ್ವಯಂಭು - ಸ್ವಯಂ ಸೃಷ್ಟಿಸಲ್ಪಟ್ಟವನು

94. ತೇಜಸ್ವನಿ - ಪ್ರಕಾಶವನ್ನು ಹಡುವವನು

95. ತ್ರಿಲೋಚನ – ಮೂರು ಕಣ್ಣುಗಳನ್ನು ಹೊಂದಿರುವ ಭಗವಂತ

96. ತ್ರಿಲೋಕಪತಿ - ಎಲ್ಲಾ ಮೂರು ಲೋಕಗಳಿಗೂ ಒಡೆಯನಾದವನು

97. ತ್ರಿಪುರಾರಿ - ತ್ರಿಪುರ (ಲೋಕ)ದ ನಾಶಕ

98. ತ್ರಿಶೂಲಿನ್- ಕೈಯಲ್ಲಿ ತ್ರಿಶೂಲವನ್ನು ಹಿಡಿದವನು

99. ಉಮಾಪತಿ – ಉಮೆಯ ಪತಿ

100. ವಾಚಸ್ಪತಿ - ಮಾತಿನ ದೇವರು

101. ವಜ್ರಹಸ್ತ - ಕೈಯಲ್ಲಿ ಸಿಡಿಲು ಹಿಡಿದವನು

102. ವರದ – ಬೇಡಿದ ವರ ಕೊಡುವವನು

103. ವೇದಕರ್ತ - ವೇದಗಳನ್ನು ರಚಿಸಿದವನು

104. ವೀರಭದ್ರ - ಜಗತ್ತಿನ ಒಡೆಯ

105. ವಿಶಾಲಾಕ್ಷ - ವಿಶಾಲ ಕಣ್ಣುಗಳನ್ನು ಹೊಂದಿದವನು

106. ವಿಶ್ವೇಶ್ವರ – ವಿಶ್ವದ ನಾಯಕ

107. ವಿಶ್ವನಾಥ – ವಿಶ್ವಕ್ಕೆ ಒಡೆಯ

108. ವೃಷಭವಾಹನ– ನಂದಿಯನ್ನು ತನ್ನ ವಾಹನವನ್ನಾಗಿ ಹೊಂದಿರುವವನು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಬರಹ: ಅರ್ಚನಾ ವಿ. ಭಟ್)

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ