ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆಲವೇ ದಿನಗಳಲ್ಲಿ ಬುಧನ ಹಿಮ್ಮುಖ ಚಲನೆ ಆರಂಭ; ಈ 3 ರಾಶಿಯವರ ಲವ್‌ ಲೈಫ್‌, ವೃತ್ತಿ ಜೀವನದಲ್ಲಿ ಸಿಹಿಯೋ ಸಿಹಿ

ಕೆಲವೇ ದಿನಗಳಲ್ಲಿ ಬುಧನ ಹಿಮ್ಮುಖ ಚಲನೆ ಆರಂಭ; ಈ 3 ರಾಶಿಯವರ ಲವ್‌ ಲೈಫ್‌, ವೃತ್ತಿ ಜೀವನದಲ್ಲಿ ಸಿಹಿಯೋ ಸಿಹಿ

Mercury Retrograde: ಮಿಥುನ ರಾಶಿಯಲ್ಲಿರುವ ಬುಧನು ಕೆಲವೇ ದಿನಗಳಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರಿಂದ ಧನಸ್ಸು ಸೇರಿದಂತೆ 3 ರಾಶಿಯವರಿಗೆ ಬುಧನು ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾನೆ. ಇವರ ಪ್ರೇಮ ಜೀವನ, ವೈವಾಹಿಕ, ವೃತ್ತಿ ಜೀವನ ಬಹಳ ಸಂತೋಷದಿಂದ ಕೂಡಿರುತ್ತದೆ.

ಕೆಲವೇ ದಿನಗಳಲ್ಲಿ ಬುಧನ ಹಿಮ್ಮುಖ ಚಲನೆ ಆರಂಭ; ಈ 3 ರಾಶಿಯವರ ಲವ್‌ ಲೈಫ್‌, ವೃತ್ತಿ ಜೀವನದಲ್ಲಿ ಸಿಹಿಯೋ ಸಿಹಿ
ಕೆಲವೇ ದಿನಗಳಲ್ಲಿ ಬುಧನ ಹಿಮ್ಮುಖ ಚಲನೆ ಆರಂಭ; ಈ 3 ರಾಶಿಯವರ ಲವ್‌ ಲೈಫ್‌, ವೃತ್ತಿ ಜೀವನದಲ್ಲಿ ಸಿಹಿಯೋ ಸಿಹಿ

ಗ್ರಹಗಳು ಆಗ್ಗಾಗ್ಗೆ ತಮ್ಮ ರಾಶಿಯನ್ನು ಬದಲಿಸುತ್ತವೆ. ಕೆಲವೊಮ್ಮೆ ಗ್ರಹಗಳು ಹಿಮ್ಮುಖವಾಗಿ ಚಲಿಸುತ್ತವೆ. ಇದರಿಂದ ವಿವಿಧ ರಾಶಿಚಕ್ರದವರಿಗೆ ವಿವಿಧ ಫಲಗಳು ದೊರೆಯುತ್ತದೆ. ಕೆಲವರಿಗೆ ಶುಭಫಲಗಳು ದೊರೆತರೆ ಕೆಲವರಿಗೆ ಅಶುಭ ಫಲಗಳು ದೊರೆಯುತ್ತದೆ. ಬುಧನ ಹಿಮ್ಮುಖ ಚಲನೆ ಕೂಡಾ ದ್ವಾದಶ ರಾಶಿಗಳಿಗೆ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನು ತರುತ್ತದೆ.

ಪ್ರಸ್ತುತ, ಬುಧನು ಮಿಥುನ ರಾಶಿಯಲ್ಲಿ ನೇರವಾಗಿ ಸಂಚರಿಸಲಿದ್ದಾನೆ. ಆಗಸ್ಟ್ ತಿಂಗಳಲ್ಲಿ, ಬುಧವು ನೇರದಿಂದ ಹಿಮ್ಮುಖವಾಗಿ ಹೋಗಲಿದೆ. ಹಿಮ್ಮುಖ ಚಲನೆಯಿಂದ ಬುಧನು ಕೆಲವೊಂದು ರಾಶಿಯವರಿಗೆ ಬಹಳ ಶುಭ ಫಲಗಳನ್ನು ನೀಡಲಿದ್ದಾನೆ. ಬುಧನ ಹಿಮ್ಮುಖ ಚಲನೆಯಿಂದ ಯಾವ ರಾಶಿಚಕ್ರದ ಜನರು ಯಾವ ರೀತಿ ಶುಭಫಲಗಳನ್ನು ಪಡೆಯಲಿದ್ದಾರೆ ನೋಡೋಣ.

ಧನು ರಾಶಿ

ಬುಧದ ಹಿಮ್ಮುಖ ಚಲನೆಯಿಂದ ಧನಸ್ಸು ರಾಶಿಯ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳೂ ಇವೆ. ಅದೇ ಸಮಯದಲ್ಲಿ, ನಿಮ್ಮ ಊಹೆಗೂ ನಿಲುಕದಂತೆ ವಿವಿಧ ಮೂಲಗಳಿಂದ ಹಣ ಹರಿದುಬರಲಿದೆ. ಪ್ರೇಮ ಜೀವನದಲ್ಲಿ ರೋಮಾನ್ಸ್‌ ಹೆಚ್ಚಾಗುತ್ತದೆ. ವೃತ್ತಿಜೀವನದ ಪರಿಸ್ಥಿತಿಯೂ ಸುಧಾರಿಸುತ್ತದೆ.

ಸಿಂಹ ರಾಶಿ

ಬುಧನ ಹಿಮ್ಮುಖ ಚಲನೆಯು ಸಿಂಹ ರಾಶಿಯ ಜನರಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಉದ್ಯಮಿಗಳಿಗೆ ಸಮಯವು ಬಹಳ ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಹೊಸ ಉದ್ಯೋಗ ಕೂಡಾ ದೊರೆಯಲಿದೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ

ಬುಧನ ಹಿಮ್ಮುಖ ಚಲನೆ ಕರ್ಕಾಟಕ ರಾಶಿಯವರಿಗೆ ಕೂಡಾ ಬಹಳ ಮಂಗಳಕರವಾಗಿದೆ. ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕಡಿಮೆಯಾಗುತ್ತದೆ. ನೀವು ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.