Kannada Panchanga: ನಿತ್ಯ ಪಂಚಾಂಗ; ಆಗಸ್ಟ್ 19ರ ದಿನ ವಿಶೇಷ, ಇತರ ಅತ್ಯಗತ್ಯ ಧಾರ್ಮಿಕ ವಿವರ ಇಲ್ಲಿದೆ
Aug 18, 2023 10:56 PM IST
ಆಗಸ್ಟ್ 19 ರ ದಿನ ವಿಶೇಷ, ನಿತ್ಯ ಪಂಚಾಂಗ, ಇತರ ಅತ್ಯಗತ್ಯ ಧಾರ್ಮಿಕ ವಿವರ
Todays Panchaga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಆಗಸ್ಟ್ 19ರ ನಿತ್ಯ ಪಂಚಾಂಗ, ದಿನವಿಶೇಷ ಮತ್ತು ಇತರೆ ವಿವರ ಹೀಗಿದೆ.
ಹಿಂದು ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಆಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಆಗಸ್ಟ್ 19ರ ನಿತ್ಯ ಪಂಚಾಂಗ ವಿವರ ಇಲ್ಲಿದೆ.
ತಾಜಾ ಫೋಟೊಗಳು
ಇಂದಿನ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 3, ಶ್ರೀ ಶೋಭಾಕೃನ್ನಾಮ ಸಂವತ್ಸರ, ವರ್ಷ ಋತು, ದಕ್ಷಿಣಾಯನ, ತಿಂಗಳು- ಶ್ರಾವಣ, ಪಕ್ಷ- ಶುಕ್ಲ ಪಕ್ಷ.
ದಿನ –ಶನಿವಾರ,
ಸ್ಥಳ – ಬೆಂಗಳೂರು
ಸೂರ್ಯೋದಯ -06:08 AM
ಸೂರ್ಯಾಸ್ತ -06:39 PM
ಚಂದ್ರೋದಯ -08:14 AM
ಚಂದ್ರಾಸ್ತ -08:39 PM
ಹಗಲಿನ ಅವಧಿ - 12 ಗಂಟೆ 26 ನಿಮಿಷ
ರಾತ್ರಿ ಅವಧಿ - 11 ಗಂಟೆ 34 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಶುಕ್ಲ ತದಿಗೆ
ಶುಕ್ಲ ತದಿಗೆ –10:19 PM ವರೆಗೆ ನಂತರ ಚೌತಿ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ಉತ್ತರ ಫಲ್ಗುಣಿ ಆಗಸ್ಟ್ 20ರ 01:47 AM ವರೆಗೆ ನಂತರ ಹಸ್ತಾ
ನಕ್ಷತ್ರ ಚರಣ
ಉತ್ತರ-1 ಇಂದು 05:42 AM ವರೆಗೆ
ಉತ್ತರ-2 ಇಂದು 12:25 PM ವರೆಗೆ
ಉತ್ತರ-3 ಇಂದು 07:07 PM ವರೆಗೆ
ಉತ್ತರ-4 ನಾಳೆ (ಆ.20) 01:48 AM ವರೆಗೆ
ಯೋಗ
ಸಿದ್ಧ09:19 PM ವರೆಗೆ, ನಂತರಸಾಧ್ಯ
ಕರಣ
ಪ್ರಥಮ ಕರಣತೈತುಲ 09:13 AM ವರೆಗೆ
ದ್ವಿತೀಯ ಕರಣಗರಿಜ10:21 PM ವರೆಗೆ
ಸೂರ್ಯ ರಾಶಿ - ಕರ್ಕಟಕ (17.07.2023ರ 5.13ರಿಂದ 17.08.2023ರ ಅಪರಾಹ್ನ 13.36ರ ತನಕ)
ಚಂದ್ರ ರಾಶಿ – ಸಿಂಹ ರಾಶಿ (16/08/2023, 16:58:33 ರಿಂದ 19/08/2023, 05:42:05 ವರೆಗೆ)
ರಾಹು ಕಾಲ -09:16 AM ರಿಂದ 10:50 AM ವರೆಗೆ
ಅಮೃತ ಕಾಲ - ಇಂದು05:45 PM ರಿಂದ07:33 PMವರೆಗೆ
ಅಭಿಜಿತ್ ಮುಹೂರ್ತ -11:58 AM ರಿಂದ 12:48 PM ವರೆಗೆ
ದುರ್ಮುಹೂರ್ತ -06:08 AM ರಿಂದ06:58 AM ವರೆಗೆ ಮತ್ತು 06.58 AM ರಿಂದ 07:48 AM ವರೆಗೆ
ವರ್ಜ್ಯಂ -07:00 AM ರಿಂದ 08:47 AM ವರೆಗೆ
ಗುಳಿಗ ಕಾಲ -07:43 AM ರಿಂದ 09:16 AM ವರೆಗೆ
ಯಮಗಂಡ -03:30 PM ರಿಂದ 05:03 PM ವರೆಗೆ
ತಾರಾಬಲ:ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಪೂರ್ವಭಾದ್ರಪದ, ರೇವತಿ
ಚಂದ್ರಬಲ :ಮೇಷ, ಕರ್ಕಾಟಕ, ಕನ್ಯಾ, ವೃಷ್ಚಿಕ, ಧನು, ಮೀನ
ಶುಭವಾಗಲಿ, ಶುಭದಿನ
----------------------------------------------------------------