logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mokshada Ekadashi 2022 : ವೈಕುಂಠ ಏಕಾದಶಿ ಉಪವಾಸ ಡಿ.3ಕ್ಕಾ ಅಥವಾ 4ಕ್ಕಾ? ಎರಡೂ ದಿನ ಏಕಾದಶಿಯಾ?

Mokshada ekadashi 2022 : ವೈಕುಂಠ ಏಕಾದಶಿ ಉಪವಾಸ ಡಿ.3ಕ್ಕಾ ಅಥವಾ 4ಕ್ಕಾ? ಎರಡೂ ದಿನ ಏಕಾದಶಿಯಾ?

HT Kannada Desk HT Kannada

Dec 02, 2022 03:57 PM IST

ಭಗವಾನ್‌ ಮಹಾವಿಷ್ಣು

  • Mokshada ekadashi 2022: ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎನ್ನುತ್ತಾರೆ. ಈ ಸಲ ಏಕಾದಶಿ ತಿಥಿ ಡಿಸೆಂಬರ್ 03ರ ಶನಿವಾರದಂದು ಬೆಳಗ್ಗೆ 05.39 ರಿಂದ ಪ್ರಾರಂಭವಾಗಿ ಡಿಸೆಂಬರ್ 04 ರಂದು ಬೆಳಗ್ಗೆ 05.34 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ವೈಕುಂಠ ಏಕಾದಶಿ ಉಪವಾಸ ಡಿ.3ಕ್ಕಾ ಅಥವಾ 4ಕ್ಕಾ? ವಿವರ ಇಲ್ಲಿದೆ.

ಭಗವಾನ್‌ ಮಹಾವಿಷ್ಣು
ಭಗವಾನ್‌ ಮಹಾವಿಷ್ಣು (livehindustan )

ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮೋಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನೆ ವೈಕುಂಠ ಏಕಾದಶಿ ಎಂದೂ ಹೇಳುತ್ತಾರೆ. ಹೆಸರೇ ಹೇಳುವಂತೆ ಇದು ಮೋಕ್ಷ ಪಡೆಯುವುದಕ್ಕೆ ಇರುವ ಮಾಧ್ಯಮ.

ತಾಜಾ ಫೋಟೊಗಳು

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Apr 29, 2024 02:19 PM

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Apr 29, 2024 10:06 AM

ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದ ಮೋಕ್ಷದ ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲ ಪಾಪಗಳು ದೂರವಾಗುತ್ತವೆ. ಇದನ್ನು ಆಚರಿಸುವ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಮೋಕ್ಷದ ಏಕಾದಶಿ ದಿನ ಉಪವಾಸ ಆಚರಿಸುವ ವ್ಯಕ್ತಿಗಷ್ಟೆ ಅಲ್ಲ, ಅವರ ಪೂರ್ವಜರಿಗೂ ಮೋಕ್ಷ ಒದಗಿಸುತ್ತದೆ. ಅದಕ್ಕಾಗಿಯೇ ಈ ಉಪವಾಸವು ಮೋಕ್ಷವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.

ಈ ಬಾರಿ ಏಕಾದಶಿ ದಿನಾಂಕದ ಬಗ್ಗೆ ಗೊಂದಲವಿದೆ. ಈ ಸಲ ಏಕಾದಶಿ ತಿಥಿ ಡಿಸೆಂಬರ್ 03ರ ಶನಿವಾರದಂದು ಬೆಳಗ್ಗೆ 05.39 ರಿಂದ ಪ್ರಾರಂಭವಾಗಿ ಡಿಸೆಂಬರ್ 04 ರಂದು ಬೆಳಗ್ಗೆ 05.34 ಕ್ಕೆ ಕೊನೆಗೊಳ್ಳುತ್ತದೆ. ಆದರೆ ವಿದ್ವಾಂಸರ ಪ್ರಕಾರ ಉಪವಾಸ ಮತ್ತು ಪೂಜೆಯನ್ನು 4 ನೇ ದಿನ ಮಾತ್ರ ಮಾಡಬೇಕು.
ಮೋಕ್ಷದ ಏಕಾದಶಿಯನ್ನು ಆಚರಿಸುವ ಜನರನ್ನು ಅವರ ಕೊನೆಯ ಪ್ರಯಾಣದಲ್ಲಿ ಗರುಡನ ಮೇಲೆ ಸವಾರಿ ಮಾಡಲು ವಿಷ್ಣುವೇ ಬರುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ದಿನ ಸ್ವರ್ಗದ ಬಾಗಿಲು ತೆರೆಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಸಮುದಾಯದಿಂದ ಸಮುದಾಯಕ್ಕೆ ಪಂಗಡದಿಂದ ಪಂಗಡಕ್ಕೆ ಏಕಾದಶಿ ಆಚರಣೆಯಲ್ಲಿ ವ್ಯತ್ಯಾಸಗಳಿವೆ. ಸಾಂಸ್ಕೃತಿಕ, ಧಾರ್ಮಿಕ ವಿಧಿ ವಿಧಾನಗಳಲ್ಲೂ ಭಿನ್ನತೆಗಳಿವೆ. ಪಂಚಾಂಗದಲ್ಲೂ ಅಷ್ಟೆ. ಸಮಯದಲ್ಲೂ ಕೆಲವು ನಿಮಿಷಗಳ ವ್ಯತ್ಯಾಸವನ್ನು ನಾವು ಗುರುತಿಸುವುದು ಸಾಧ್ಯವಿದೆ. ಡಿ.3ಕ್ಕೆ ಸ್ಮಾರ್ತೈಕಾದಶಿ ಆಚರಣೆ ಎಂದಿದ್ದರೆ, ಡಿ.4ಕ್ಕೆ ವೈಷ್ಣವ ಏಕಾದಶಿ ಆಚರಣೆ ಎಂದಿದೆ. ಇವು ಯಾವುದೇ ಇದ್ದರೂ ಕೊನೆಗೆ ಮೋಕ್ಷದ ಏಕಾದಶಿ ಆಚರಣೆಯೇ ಇದರ ತಿರುಳು ಎಂಬುದನ್ನು ನಾವು ಮರೆಯುವಂತೆ ಇಲ್ಲ.

ಗೀತಾ ಜಯಂತಿಗಿಂತ ಈ ದಿನದ ವಿಶೇಷತೆ ಹೆಚ್ಚು. ಇದು ಮಂಗಳಕರವಾಗಿದೆ. ಗೀತ ಜಯಂತಿ ಆಗಿರುವುದರಿಂದ ಈ ದಿನ ಶ್ರೀಕೃಷ್ಣನ ಗೀತೆಯನ್ನು ಪಠಿಸಲಾಗುತ್ತದೆ.

Mokshda ekadashi 2022 Date: ವೈಕುಂಠ ಏಕಾದಶಿ ಶುಭ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನ

Vaikunta Ekadashi 2022 Importance: ಹಿಂದು ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲ್ಪಟ್ಟಿದೆ. ಈ ದಿನ ಉಪವಾಸ ವ್ರತ ಮಾಡಿದರೆ ಭಗವಾನ್‌ ವಿಷ್ಣು ಪ್ರಸನ್ನನಾಗುವನೆಂಬ ನಂಬಿಕೆ ಇದೆ. ಈ ದಿನದ ಮಹತ್ವ, ಪೂಜಾ ವಿಧಾನ ಮುಂತಾದ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

ಗೀತಾ ಜಯಂತಿ ದಿನಾಂಕ ಮತ್ತು ಮಹತ್ವ ಏನು? ಇದು ಶ್ರೀಕೃಷ್ಣಾರ್ಜುನರಿಗೆ ಸಂಬಂಧಿಸಿದ ದಿನವೂ ಹೌದು!

Geeta Jayanti 2022: ಹಿಂದೂ ಧರ್ಮದ ಅನೇಕ ಪಠ್ಯಗಳಲ್ಲಿ ಶ್ರೀಮದ್ಭಗವದ್ಗೀತೆಗೆ ವಿಶೇಷ ಸ್ಥಾನವಿದೆ. ಇದು ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ವಿವರಿಸುತ್ತದೆ. ಆ ದಿನದ ವಾರ್ಷಿಕ ಆಚರಣೆ ಇದು. ದಿನ ವಿಶೇಷ, ಗೀತಾ ಜಯಂತಿಯ ಮಹತ್ವದ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

Geeta Jayanti 2022: ಮನೆಯಲ್ಲಿ ಶ್ರೀಮದ್ಭಗವದ್ಗೀತೆ ಇದೆಯಾ? ಹಾಗಾದರೆ ಈ ನಿಯಮ ಪಾಲಿಸಿ, ತಪ್ಪಿದರೆ ಸಂಕಷ್ಟ ಎದುರಾದೀತು!

Geeta Jayanti 2022: ಈ ವರ್ಷ ಡಿಸೆಂಬರ್ 3 ರ ಶನಿವಾರ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಮೋಕ್ಷದ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಶ್ರೀಮದ್ಭಗವದ್ಗೀತೆಯನ್ನು ಇಡುವ ಕುರಿತಾದ ಕೆಲವು ನಿಯಮಗಳನ್ನು ಖಂಡಿತವಾಗಿ ತಿಳಿದುಕೊಳ್ಳಿ. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ

    ಹಂಚಿಕೊಳ್ಳಲು ಲೇಖನಗಳು