logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವೆಂಬರ್ 25ರ ಸಂಖ್ಯಾಶಾಸ್ತ್ರ: ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ; ಈ ರಾಡಿಕ್ಸ್‌ ನಂಬರ್‌ನವರಿಗೆ ಇದು ಯಶಸ್ಸಿನ ವಾರ

ನವೆಂಬರ್ 25ರ ಸಂಖ್ಯಾಶಾಸ್ತ್ರ: ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ; ಈ ರಾಡಿಕ್ಸ್‌ ನಂಬರ್‌ನವರಿಗೆ ಇದು ಯಶಸ್ಸಿನ ವಾರ

Rakshitha Sowmya HT Kannada

Nov 25, 2024 07:00 AM IST

google News

ನವೆಂಬರ್ 25 ರಂದು 1 ರಿಂದ 9 ರವರೆಗಿನ ಸಂಖ್ಯಾಶಾಸ್ತ್ರ

  • ನವೆಂಬರ್ 25ರ ಸಂಖ್ಯಾಶಾಸ್ತ್ರ: ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಜನರ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಪ್ರತಿಯೊಂದು ಹೆಸರಿನ ಪ್ರಕಾರ ರಾಶಿಚಕ್ರವಿರುವಂತೆಯೇ, ಪ್ರತಿ ಸಂಖ್ಯೆಯ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿವೆ. ನವೆಂಬರ್ 25ರ ಸೋಮವಾರ ನಿಮ್ಮ ಅದೃಷ್ಟ ಹೇಗಿದೆ ತಿಳಿಯಿರಿ.

ನವೆಂಬರ್ 25 ರಂದು 1 ರಿಂದ 9 ರವರೆಗಿನ ಸಂಖ್ಯಾಶಾಸ್ತ್ರ
ನವೆಂಬರ್ 25 ರಂದು 1 ರಿಂದ 9 ರವರೆಗಿನ ಸಂಖ್ಯಾಶಾಸ್ತ್ರ (PC: Freepik)

ನವೆಂಬರ್ 25ರ ಸಂಖ್ಯಾಶಾಸ್ತ್ರ: ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಗಳನ್ನು ಕಂಡುಹಿಡಿಯಲು, ನೀವು ನಿಮ್ಮ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕಿಗೆ ಸೇರಿಸಿದಾಗ ಬರುವ ಸಂಖ್ಯೆ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಉದಾಹರಣೆಗೆ ಯಾವುದೇ ತಿಂಗಳ 6, 15 ಮತ್ತು 24 ರಂದು ಜನಿಸಿದ ಜನರ ರಾಡಿಕ್ಸ್‌ ನಂಬರ್‌ 6 ನ್ನು ಹೊಂದಿರುತ್ತಾರೆ. ನವೆಂಬರ್ 25 ರಂದು 1 ರಿಂದ 9 ರವರಿಗೆ ರಾಡಿಕ್ಸ್ ಸಂಖ್ಯೆಯವರ ದಿನ ಹೇಗಿದೆ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ರಾಡಿಕ್ಸ್ 1: ಈ ಸಂಖ್ಯೆಯ ಜನರು ಈ ವಾರ ಆಸ್ತಿ ವ್ಯವಹಾರ ಇತ್ಯಾದಿಗಳಿಂದ ಲಾಭ ಪಡೆಯುತ್ತಾರೆ, ಇದು ನಿಮಗೆ ಯಶಸ್ಸಿನ ವಾರ, ನೀವು ಬಯಸುವ ಯಾವುದೇ ಕೆಲಸವು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯಿಂದ ನೀವು ಸಹಕಾರ ಪಡೆಯುತ್ತೀರಿ. ಆದರೂ ಮನಸ್ಸಿನಲ್ಲಿ ತಳಮಳ ಮುಂದುವರಿಯುತ್ತದೆ. ಕೌಟುಂಬಿಕ ಸಮಸ್ಯೆ ಬಗೆಹರಿಯುತ್ತದೆ. ಕಚೇರಿಯಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲವು ಶುಭ ಸುದ್ದಿ ಕೇಳಿದ್ದೀರಿ.

ರಾಡಿಕ್ಸ್ 2: ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ, ಸಾಲ ಮರುಪಾವತಿ ಮಾಡಲಿದ್ದೀರಿ. ಈ ವಾರ ನೀವು ತೆಗೆದುಕೊಳ್ಳುವ ನಿರ್ಧಾರಗಳು ದೊಡ್ಡ ಲಾಭವನ್ನು ನೀಡುತ್ತವೆ, ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಕಚೇರಿಯಲ್ಲಿ ಒತ್ತಡ ಇರುತ್ತದೆ. ತಾಳ್ಮೆಯಿಂದ ಮುಂದುವರೆಯಿರಿ.

ರಾಡಿಕ್ಸ್ 3: ಈ ಜನರು ಈ ವಾರ ಭೂಮಿ ಮತ್ತು ಆಸ್ತಿ ಸಂಬಂಧಿತ ಕೆಲಸಗಳಿಂದ ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಹೊಸ ಯೋಜನೆಗಳನ್ನು ಕೈಗೊಳ್ಳುತ್ತೀರಿ. ಆದರೆ ಪೂರ್ಣಗೊಳ್ಳುವುದಿಲ್ಲ. ಅಧಿಕಾರಿಗಳೊಂದಿಗೆ ಸಂಬಂಧ ಸುಧಾರಿಸಲಿದೆ. ಈ ವಾರ ವ್ಯಾಪಾರಕ್ಕೆ ಉತ್ತಮವಾಗಿದೆ ಆದರೆ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು.

ರಾಡಿಕ್ಸ್ 4: ಈ ವಾರ ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗುತ್ತವೆ. ನೀವು ಪ್ರವಾಸಕ್ಕೆ ಹೋಗಬೇಕಾಗಬಹುದು, ಹೆಚ್ಚು ಹಣ ಖರ್ಚಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಆದರೆ ಯಾವುದೇ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಮುಂದುವರೆಯುವಿರಿ, ನೀವು ಖರೀದಿ ಮತ್ತು ಮಾರಾಟದಲ್ಲಿ ಲಾಭವನ್ನು ಪಡೆಯಬಹುದು.

ರಾಡಿಕ್ಸ್ 5: ಈ ಸಂಖ್ಯೆಯ ಜನರು ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮಗೆ ಬರಬೇಕಾದ ಬಾಕಿ ಹಣ ವಾಪಸ್‌ ಬರಲಿದೆ. ಈ ವಾರ ನಿಮಗೆ ಮಂಗಳಕರವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಕೆಲವು ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಅದು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ. ಬಹಳ ಮುಖ್ಯವಾಗಿ, ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು.

ರಾಡಿಕ್ಸ್ 6: ರಾಡಿಕ್ಸ್ ಸಂಖ್ಯೆ 6 ಹೊಂದಿರುವ ಜನರು ಈ ವಾರ ಹಣ ವ್ಯರ್ಥ ಮಾಡುವುದನ್ನು ತಪ್ಪಿಸಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಜಾಗರೂಕರಾಗಿರಿ. ಸಮಸ್ಯೆಗಳು ಉದ್ಭವಿಸಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯ. ನೀವು ವಿದ್ಯಾರ್ಥಿಯಾಗಿದ್ದರೆ ಕ್ರೀಡೆಯಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಇನ್ನಷ್ಟು ಗಟ್ಟಿಯಾಗಲಿದೆ, ಕುಟುಂಬದವರೊಂದಿಗೆ ವಾತ್ಸಲ್ಯ ಹೆಚ್ಚಾಗಬಹುದು.

ರಾಡಿಕ್ಸ್ 7: ಇಷ್ಟು ದಿನಗಳು ನೀವು ಕಷ್ಟಪಟ್ಟಿದ್ದು ಫಲ ನೀಡುತ್ತದೆ. ಶಾಂತಿ ಮತ್ತು ತಾಳ್ಮೆಯಿಂದ ಇರಿ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ತರಾತುರಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ.

ರಾಡಿಕ್ಸ್ 8: ಈ ಸಂಖ್ಯೆಯ ಜನರು ಈ ವಾರ ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬಾರದು, ಅದು ನಷ್ಟಕ್ಕೆ ಕಾರಣವಾಗಬಹುದು. ವ್ಯಾಪಾರದಲ್ಲಿ ಹೊಸ ಜನರನ್ನು ಭೇಟಿ ಮಾಡುವಿರಿ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬ ಸಮೇತ ತೀರ್ಥಕ್ಷೇತ್ರಕ್ಕೆ ಹೋಗುವ ಸಾಧ್ಯತೆ ಇದೆ. ನೀವು ವಿದ್ಯಾರ್ಥಿಯಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲಿದ್ದೀರಿ.

ರಾಡಿಕ್ಸ್ 9: ಈ ರಾಡಿಕ್ಸ್‌ನವರು ಈ ವಾರ ಬಹಳ ಜಾಗರೂಕರಾಗಿರಬೇಕು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕಾಡಬಹುದು. ಖರ್ಚು ಹೆಚ್ಚಾಗಬಹುದು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಾರದ ಮಧ್ಯದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಬಹುದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ