logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವನಿಂದ ಕಲಿಯಬಹುದಾದ 10 ಜೀವನಪಾಠಗಳು; ಕೋಪ ನಿಗ್ರಹದಿಂದ ಧ್ಯಾನದವರೆಗೆ ಪರಮೇಶ್ವರನಿಂದ ಕಲಿಯೋಣ

ಶಿವನಿಂದ ಕಲಿಯಬಹುದಾದ 10 ಜೀವನಪಾಠಗಳು; ಕೋಪ ನಿಗ್ರಹದಿಂದ ಧ್ಯಾನದವರೆಗೆ ಪರಮೇಶ್ವರನಿಂದ ಕಲಿಯೋಣ

Praveen Chandra B HT Kannada

Nov 13, 2024 06:20 AM IST

google News

ಶಿವನ ವೇಷ ಧರಿಸಿದ ಮಗು (ಸಂಗ್ರಹ ಚಿತ್ರ) (ಸಾಂದರ್ಭಿಕ)

    • ಶಿವನನ್ನು ಗುರುಗಳ ಗುರು ಆದಿಗುರು ಎನ್ನುತ್ತಾರೆ. ಜೀವನದಲ್ಲಿ ಯಶಸ್ಸು ಪಡೆಯಲು ಬಯಸುವವರು, ತಮ್ಮ ಬದುಕಿನ ರೀತಿಗಳನ್ನು ಬದಲಾಯಿಸಿಕೊಳ್ಳಲು ಬಯಸುವವರು ಶಿವನಿಂದ ಕಲಿಯಬಹುದಾದ 10 ಜೀವನ ಪಾಠಗಳು ಇಲ್ಲಿವೆ.
ಶಿವನ ವೇಷ ಧರಿಸಿದ ಮಗು (ಸಂಗ್ರಹ ಚಿತ್ರ) (ಸಾಂದರ್ಭಿಕ)
ಶಿವನ ವೇಷ ಧರಿಸಿದ ಮಗು (ಸಂಗ್ರಹ ಚಿತ್ರ) (ಸಾಂದರ್ಭಿಕ) (HT_PRINT)

ಶಿವನೆಂದರೆ ಮಂಗಳಕರನು, ಮಹಾದೇವ, ಅಂದರೆ ದೇವರುಗಳಿಗೆ ದೇವರು, ಗುರುಗಳಿಗೆ ಗುರು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಸರ್ವೋಚ್ಚನಾಗಿದ್ದಾನೆ. ಈ ಜಗತ್ತಿನ ರಕ್ಷಣೆ, ಸೃಷ್ಟಿ, ಪರಿವರ್ತನೆಯ ದೈವ ಎನ್ನಲಾಗುತ್ತದೆ. ಶಿವ ಶಾಂತ ಮತ್ತು ರೌದ್ರ ಸ್ವರೂಪಿ. ಶಾಂತ ಸ್ವರೂಪದಲ್ಲಿ ಯೋಗಿಯಾಗಿ ವೈರಾಗ್ಯ ಮತ್ತು ಸಂಸಾರಿ ಜೀವನ ನಡೆಸುತ್ತಾನೆ. ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುತ್ತಾನೆ. ಭೈರವ, ವೀರಭದ್ರ ಸೇರಿದಂತೆ ಹಲವು ರೂಪಗಳಲ್ಲಿ ಇರುತ್ತಾನೆ. ಯೋಗ, ಧ್ಯನ, ಕಲೆಯ ದೇವರಾಗಿ ನಟರಾಜ, ಆದಿಯೋಗಿ ಎಂದೂ ಕರೆಯಲ್ಪಡುತ್ತಾನೆ. ಶಿವನ ಕೊರಳಲ್ಲಿ ಸರ್ಪಗಳ ರಾಜ ವಾಸುಕಿ ಇದ್ದಾನೆ. ಕೇಶದಲ್ಲಿ ಅರ್ಧ ಚಂದ್ರ, ಗಂಗೆ, ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ, ಡಮರು ಹೊಂದಿದ್ದಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶಿವನಿಂದ ಕಲಿಯಬಹುದಾದ 10 ಜೀವನಪಾಠಗಳು

ಗುರುಗಳ ಗುರು ಆದಿಗುರು ಎಂದು ಕರೆಯಲ್ಪಡುವ ಶಿವನಿಂದ ನಾವು ಕಲಿಯಬಹುದಾದ 10 ಜೀವನ ಪಾಠಗಳ ವಿವರ ಇಲ್ಲಿ ನೀಡಲಾಗಿದೆ.

1. ದುಷ್ಟರನ್ನು ಸಹಿಸಬೇಡಿ: ಅನ್ಯಾಯವನ್ನು ಶಿವ ಎಂದಿಗೂ ಸಹಿಸಲಾರ. ದುಷ್ಟರ ನಾಶಕನಾಗಿ ಶಿವ ಜನಪ್ರಿಯ. ರಾಕ್ಷಸರನ್ನು ನಾಶಮಾಡುವಾಗಲೂ ಶಿವನ ನ್ಯಾಯಯುತನಾಗಿದ್ದನು. ನಾವು ಕೂಡ ನಮ್ಮ ಸುತ್ತಮುತ್ತಲಿನ ಅನ್ಯಾಯವನ್ನು ಕಂಡು ಮೌನವಾಗಿರಬಾರದು.

2. ಸ್ವಯಂ ನಿಯಂತ್ರಣ: ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಶಿವನು ಧ್ಯಾನ, ತಪಸ್ಸು, ಯೋಗದ ಮೂಲಕ ಸ್ವಯಂ ನಿಯಂತ್ರಣ ಶಕ್ತಿ ಹೊಂದಿದ್ದನು.

3. ಕೋಪ ನಿಯಂತ್ರಣ: ಶಿವನು ಕೋಪಗೊಂಡರೆ ರುದ್ರತಾಂಡವವಾಡುತ್ತಾನೆ. ತನ್ನ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಾಂತವಾಗಿರಲು ಶಿವನು ಬಯಸುತ್ತಾನೆ. ಶಿವನು ಹಲವು ಗಂಟೆಗಳ ಕಾಲ ಧ್ಯಾನ, ತಪಸ್ಸು ಮಾಡುತ್ತಿದ್ದನು. ಜೀವನದ ವಿವಿಧ ಸಂದರ್ಭಗಳಲ್ಲಿ ಕೋಪ ಎಲ್ಲದಕ್ಕೂ ಉತ್ತರವಲ್ಲ. ಶಾಂತವಾಗಿ ಬದುಕನ್ನು ಮುನ್ನಡೆಸುವುದು ಅತ್ಯಂತ ಅಗತ್ಯ.

4. ಹೆಜ್ಜೆ ಇಡಲು ಹಿಂಜರಿಯಬೇಡಿ: ದಾರಿಯಲ್ಲಿ ಸಾಗುತ್ತಿರುವಾಗ ಹಲವು ಸವಾಲುಗಳು ಎದುರಾಗಬಹುದು. ಯಾವುದೇ ಕಾರಣಕ್ಕೆ ಹಿಂದಡಿ ಇಡಬೇಡಿ.

5. ಸಂತೋಷ ಎನ್ನುವುದು ಭೌತಿಕ ಅಲ್ಲ: ಸಂಪತ್ತು ಎನ್ನುವುದು ದೈಹಿಕ, ಮಾನಸಿಕ, ಭಾವನಾತ್ಮಕ ಬಂಧನಕ್ಕೆ ಕಾರಣವಾಗುತ್ತದೆ. ಸಂಪೂರ್ಣವಾಗಿ ಸಂಪತ್ತಿನೆಡೆಗೆ ಬದುಕನ್ನು ಮೀಸಲಿರಿಸಬೇಡಿ. ಆದರೆ, ನಿಜವಾದ ಸಂತೋಷ ಎಲ್ಲಿ ಇರುವುದು ಕಂಡುಕೊಳ್ಳಿ.

6. ದುರಾಸೆ ಬೇಡ: ರಾವಣನ ಅಂತ್ಯಕ್ಕೆ ಆತನ ದುರಾಸೆ ಕಾರಣ. ಇದೇ ರೀತಿ ಹಲವು ರಾಕ್ಷಸರು ದುರಾಸೆಯಿಂದ ಎಲ್ಲವನ್ನೂ ಕಳೆದುಕೊಂಡರು. ಶಿವನಿಗೆ ಯಾವುದೇ ಆಸೆ, ದುರಾಸೆ ಇಲ್ಲ. ಆತ ಎಲ್ಲಾ ಆಸೆಗಳಿಂದ ಮುಕ್ತನಾಗಿದ್ದಾನೆ.

7. ಯಾವುದೂ ಶಾಶ್ವತವಲ್ಲ: ನಮ್ಮ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಆಸ್ತಿ, ಜನರು, ಸಂಬಂಧ, ಭಾವನೆಗಳು ಯಾವುವೂ ಶಾಶ್ವತವಲ್ಲ. ನಮ್ಮ ದಾರಿಗೆ ಬಂದದ್ದನ್ನು ಎದುರಿಸಲು ಸಿದ್ಧರಾಗಿರಬೇಕು.

8. ರಿಸರ್ಚ್‌ ಮಾಡಿ: ಹೊಸದನ್ನು ಆರಂಭಿಸುವ ಮೊದಲು ಯಾವಾಗಲೂ ರಿಸರ್ಚ್‌ ಮಾಡಿ. ಶಿವನ ಮುಡಿಯಲ್ಲಿರುವ ಗಂಗಾ ಮಾತೆಯು ಅಜ್ಞಾನದ ಅಂತ್ಯವನ್ನು ಪ್ರತಿನಿಧಿಸುತ್ತಾಳೆ. ಹೊಸದನ್ನು ಆರಂಭಿಸುವ ಮೊದಲು ಸಾಕಷ್ಟು ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿದೆ.

9. ಸಂಗಾತಿಯನ್ನು ಗೌರವಿಸಿ: ಶಿವನನ್ನು ಅರ್ಧನಾರೀಶ್ವರ ಎಂದು ಕರೆಯುತ್ತಾರೆ. ಶಿವನು ಪಾರ್ವತಿ ದೇವಿಯನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು.

10. ಅಹಂಕಾರಕ್ಕೆ ಸ್ಥಾನವಿಲ್ಲ: ಜೀವನದ ಎಲ್ಲಾ ಅಡೆತಡೆಗಳಿಗೆ ಅಹಂಕಾರವು ಪ್ರಮುಖ ಕಾರಣವಾಗಿದೆ. ಶಿವನು ತನ್ನ ಅಹಂ ಹತೋಟಿಯಲ್ಲಿಟ್ಟುಕೊಳ್ಳಲು ತ್ರಿಶೂಲವನ್ನು ಹೊಂದಿದ್ದಾನೆ. ಇದೇ ರೀತಿ ಶಿವನು ಇತರರ ಅಹಂಕಾರವನ್ನೂ ಸಹಿಸುತ್ತಿರಲಿಲ್ಲ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ