logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ಭಗವಂತ ರಾಮನಿಂದ ನಾವು ಕಲಿಯಬಹುದಾದ ಸಂಬಂಧ, ಅನುಬಂಧದ 5 ಪಾಠಗಳಿವು, ಅನುಸರಿಸಿದರೆ ಬದುಕು ಅದ್ಭುತ

ರಾಮಾಯಣ: ಭಗವಂತ ರಾಮನಿಂದ ನಾವು ಕಲಿಯಬಹುದಾದ ಸಂಬಂಧ, ಅನುಬಂಧದ 5 ಪಾಠಗಳಿವು, ಅನುಸರಿಸಿದರೆ ಬದುಕು ಅದ್ಭುತ

Praveen Chandra B HT Kannada

Nov 13, 2024 09:45 AM IST

google News

ರಾಮನಿಂದ ಕಲಿಯಬಹುದಾದ ಪಾಠಗಳು

    • ಸನಾತನ ಧರ್ಮವನ್ನು ಹಿಂದೂ ಧರ್ಮ ಎನ್ನುವುದು ಕೇವಲ ಧರ್ಮವಲ್ಲ. ಅದೊಂದು ಜೀವನ ವಿಧಾನವಾಗಿದೆ. ರಾಮಾಯಣದ ಭಗವಂತ ರಾಮನ ಬದುಕನ್ನು ನಾವೆಲ್ಲರೂ ಸಂಬಂಧ ಉತ್ತಮಪಡಿಸುವ ಪಾಠವಾಗಿಯೂ ನೋಡಬಹುದು. ರಾಮನೆಂದರೇ ಕೇವಲ ವ್ಯಕ್ತಿ ಹಾಗೂ ಪಾತ್ರವಲ್ಲ. ನಮ್ಮನ್ನು ಪ್ರಭಾವಿಸಿ, ಪ್ರಕಾಶವಾಗಿ ಕಾಡುವ ಶಕ್ತಿಯಾಗಿದ್ದಾನೆ.
 ರಾಮನಿಂದ ಕಲಿಯಬಹುದಾದ ಪಾಠಗಳು
ರಾಮನಿಂದ ಕಲಿಯಬಹುದಾದ ಪಾಠಗಳು (freepik)

ಭಗವಂತ ರಾಮನಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಎನ್ನುತ್ತಾರೆ. ಜಗತ್ತಿನಲ್ಲಿ ಲಕ್ಷಾಂತರ ಜನರು ಭಕ್ತಿಯಿಂದ ರಾಮನಾಮ ಸ್ಮರಣೆ ಮಾಡುತ್ತಾರೆ. ಸನಾತನ ಧರ್ಮವು ಹಿಂದೂ ಧರ್ಮವೆಂದು ಜನಪ್ರಿಯವಾಗಿದೆ. ಆದರೆ, ಇದು ಧರ್ಮವಲ್ಲ, ಒಂದು ಜೀವನ ವಿಧಾನ. ಭಾರತದ ಮಾಹಾಕಾವ್ಯಗಳು, ಪವಿತ್ರಗ್ರಂಥಗಳು ಜನರಿಗೆ ಮಾನವೀಯತೆಯ ಪಾಠವನ್ನು ಕಲಿಸುತ್ತವೆ. ರಾಮಾಯಣ ಎಂಬ ಗ್ರಂಥದ ಸಾರವನ್ನು ಅನೇಕ ಮಹಾನ್‌ ಸಂತರು, ವಿದ್ವಾಂಸರು ಜನರಿಗೆ ತಿಳಿಸುತ್ತ ಇರುತ್ತಾರೆ. ಭಗವಂತ ರಾಮನ ಜೀವನದಿಂದ ನಾವೆಲ್ಲರು ಕಲಿಯಬೇಕಾದ, ಅನುಸರಿಸಬೇಕಾದ ಅಂಶಗಳು ಸಾಕಷ್ಟು ಇವೆ. ಸಂಬಂಧ ಅಥವಾ ರಿಲೇಷನ್‌ ಶಿಪ್‌ ವಿಚಾರವಾಗಿ ರಾಮನಿಂದ ಏನು ಕಲಿಯಬಹುದು ನೋಡೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಒಳ್ಳೆಯ ಮಗನಾಗಿ

ಪೋಷಕರನ್ನು ಪ್ರೀತಿಸಿ, ಗೌರವಿಸಿ, ಸಹೋದರಿಯರನ್ನು ಪ್ರೀತಿಯೊಂದ ನೋಡಿ, ಕೌಟುಂಬಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ

ರಾಜ ದಶರಥನ ಹಿರಿಯ ಮಗನಾದ ರಾಮನು ಅಯೋಧ್ಯೆಯ ಸಿಂಹಾಸನವನ್ನು ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ, ತನ್ನ ಮಲತಾಯಿ ಕೈಕೇಯಿಯ ಒತ್ತಾಯದ ಮೇರೆಗೆ ಕಿರಿಯ ಸಹೋದರ ಭರತನಿಗೆ ಪಟ್ಟ ನೀಡಿದನು. ತನ್ನ ಪತಿಯು ಹಲವು ಸಮಯದ ಹಿಂದೆ ನೀಡಿದ ವಾಗ್ದಾನವನ್ನು ಈ ಮೂಲಕ ದುರುಪಯೋಗಪಡಿಸಿಕೊಂಡಳು. ತನ್ನ ಎಲ್ಲಾ ಪುತ್ರರಿಗಿಂತ ಹಿರಿಯ ಮಗ ರಾಮನನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಜ ದಶರಥನು ಅಸಹಾಯಕನಾಗಿದ್ದನು. ತನ್ನ ಮಗ ಭರನಿಗೆ ಪಟ್ಟ, ರಾಮನಿಗೆ ವನವಾಸವನ್ನು ಕೈಕೇಯಿ ಕೇಳಿದಳು. ಈ ಸಮಯದಲ್ಲಿ ರಾಮನು ತಂದೆಯ ಅಣತಿಯಂತೆ ನಡೆದನು.

ನಿಷ್ಠಾವಂತ ಸಂಗಾತಿಯಾಗಿ

ಲಂಕೇಶ್ವರ ರಾವಣನ ಹಿಡಿತದಿಂದ ಹೆಂಡತಿ ಸೀತೆಯನ್ನು ಕಾಪಾಡಲು ರಾಮನು ಸತತ ಪ್ರಯತ್ನ ಮಾಡಿದನು. ಸೀತೆಯ ಅಪಹರಣ ರಾಮನಿಗೆ ಅಪಾರ ಸಂಕಟ ಉಂಟುಮಾಡಿತು. ಸೀತೆಯನ್ನು ಹುಡುಕುವ ಸಂಕಲ್ಪ ಮಾಡಿದನು. ರಾವಣನ ಜತೆ ಯುದ್ಧ ಮಾಡಬೇಕಾಯಿತು. ನಿಷ್ಠಾವಂತ ಪತಿಯಾಗಿ ರಾಮನು ಕಾರ್ಯನಿರ್ವಹಿಸಿದನು. ರಾವಣನಿಂದ ಬಿಡಿಸಿಕೊಂಡು ಬಂದರು ಸೀತೆಯ ಕುರಿತು ರಾಜ್ಯದಲ್ಲಿ ಕೇಳಿದ ಅಪವಾದದಿಂದ ಸೀತಾ ಪರಿತ್ಯಾಗ ಮಾಡಬೇಕಾಯಿತು. ಬಳಿಕ ಮರುಮದುವೆಯಾಗುವ ಅವಕಾಶವಿದ್ದರೂ ಏಕಪತ್ನಿವೃತಸ್ಥನಾಗಿ ಉಳಿದನು. ಸೀತೆಗೆ ಮಾತ್ರ ನಿಷ್ಠನಾಗಿ ಉಳಿದನು.

ನಿಮ್ಮ ಕರ್ತವ್ಯವನ್ನು ಮಾಡಿ

ರಾಮನು ಸೂರ್ಯವಂಶ ರಾಜವಂಶಕ್ಕೆ ಸೇರಿದವನು. ತನ್ನ ಪ್ರಜ್ಞೆಗಳ ಕಲ್ಯಾಣಕ್ಕೆ ಹಲವು ಕ್ರಮಗಳನ್ನು ಕೈಗೊಂಡನು. ಆದರೆ, ಆಡಳಿತದ ಸಂದರ್ಭದಲ್ಲಿ ಧರ್ಮಕ್ಕೆ ವಿರುದ್ಧವಾಗಿ ಹೋಗಲಿಲ್ಲ. ಪ್ರಜೆಗಳನ್ನು ಸಂತೋಷವಾಗಿಡುವುದು ರಾಜಧರ್ಮವೆಂದು ತಿಳಿದು ಅದರಂತೆ ಬದುಕಿದನು. ನಿಮ್ಮ ಕರ್ತವ್ಯವನ್ನು ಮಾಡಿ, ಧರ್ಮಕ್ಕೆ ಬದ್ಧರಾಗಿ ಎನ್ನುವ ಪಾಠವನ್ನು ಇದರಿಂದ ಕಲಿಯಬಹುದು.

ಸ್ನೇಹದ ಮಹತ್ವ

ರಾಮನು ಉತ್ತಮ ಸ್ನೇಹಪರನಾಗಿದ್ದನು. ಸುಗ್ರೀವನಿಗೆ ಸಹಾಯ ಮಾಡಿದನು. ಸುಗ್ರೀವನನ್ನು ಕಿಷ್ಕಿಂದೆಯ ರಾಜನನ್ನಾಗಿ ಮಾಡಿದನು. ವಿಭಿಷಣನಿಗೆ ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡಿದನು. ಸುಗ್ರೀವ ಮತ್ತು ವಿಭೀಷಣ ಇಬ್ಬರೂ ರಾವಣದ ವಿರುದ್ಧದ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದರು.

ಕರುಣೆ ಇರಲಿ

ರಾಮನು ಕರುಣಾಮಯಿ. ಬಡ ವೃದ್ಧೆ ಶಬರಿಯ ಕಥೆ ನಿಮಗೆ ಗೊತ್ತಿರಬಹುದು. ಭಕ್ತಿಯಿಂದ ಹಣ್ಣುಗಳನ್ನು ಕಚ್ಚಿ ತಿಂದು ರುಚಿ ನೋಡಿ ಇಟ್ಟ ಶಬರಿಯ ಭಕ್ತಿಗೆ ರಾಮನು ಕರಗಿದನು. ಸೀತೆಯನ್ನು ಹುಡುಕಲು ಸೇತುವೆ ನಿರ್ಮಿಸುವ ಸಮಯದಲ್ಲಿ ಚಿಕ್ಕ ಅಳಿಲು ಸೇತುವೆ ನಿರ್ಮಿಸಲು ಸಹಾಯ ಮಾಡಿತ್ತು. ರಾಮನು ಆ ಅಳಿಲನ್ನು ಪ್ರೀತಿಯಿಂದ ತಡವಿದನು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ