Sade Sati Shani: 2024-2025 ರಲ್ಲಿ ಕರ್ಮಕಾರಕ ಶನಿಯ ಸಾಡೇಸಾತಿಯಿಂದ ಯಾವ ರಾಶಿಯವರಿಗೆ ಸಮಸ್ಯೆ; ಪರಿಹಾರವೇನು?
Feb 22, 2024 02:39 PM IST
ಕರ್ಮಕಾರಕ ಶನಿಯ ಸಾಡೇಸಾತಿಯಿಂದ ಯಾವ ರಾಶಿಯವರಿಗೆ ಸಮಸ್ಯೆ; ಪರಿಹಾರವೇನು?
Sade Sati Shani 2024: ಈ ವರ್ಷ ಹಾಗೂ ಮುಂದಿನ ವರ್ಷ ಮಕರ, ಕುಂಭ, ಮೀನ ರಾಶಿಯವರು ಶನಿ ಸಾಡೇಸಾತಿಯಿಂದ ಸಮಸ್ಯೆ ಎದುರಿಸಲಿದ್ದಾರೆ. ಕುಂಭ ರಾಶಿಯವರ ಮೇಲೆ ಶನಿಯ ಸಾಡೇಸಾತಿಯ ಪರಿಣಾಮವು 3 ಜೂನ್ 2027 ರವರೆಗೆ ಇರುತ್ತದೆ. ಶನಿಯ ಪ್ರಭಾವ ಕಡಿಮೆ ಮಾಡಿಕೊಳ್ಳಲು ಏನು ಪರಿಹಾರ ಎಂಬುದನ್ನು ನೋಡೋಣ.
ಸಾಡೇ ಸಾತಿ ಶನಿ 2024: ವೈದಿಕ ಜ್ಯೋತಿಷ್ಯದಲ್ಲಿ ವಿವರಿಸಿರುವಂತೆ 9 ಗ್ರಹಗಳು ಮನುಷ್ಯನ ಹಾಗು ಹೋಗುಗಳನ್ನು ನಿರ್ಧರಿಸುತ್ತದೆ. ಇದರಲ್ಲಿ ಇತರ ಎಲ್ಲಾ ಗ್ರಹಗಳಿಗಿಂತ ಶನಿಗ್ರಹವು ನಿಧಾನವಾಗಿ ಸಾಗುತ್ತಾನೆ. ಶನೈಶ್ಚರನು 12 ದ್ವಾದಶ ರಾಶಿಗಳ ಚಕ್ರವನ್ನು ಪೂರ್ಣಗೊಳಿಸಲು 30 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ.
ತಾಜಾ ಫೋಟೊಗಳು
ಶನಿ ದೃಷ್ಟಿ ಇದ್ದಲ್ಲಿ ಜನರಿಗೆ ಬಹಳ ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಬಹಳ ಹೆದರುತ್ತಾರೆ. ಅದರಂತೆ ಶನಿಯ ಸಾಡೇಸಾತಿ ಇದ್ದಲ್ಲಿ ಆಯಾ ರಾಶಿಚಕ್ರದ ಜನರು ಕರ್ಮಗಳಿಗೆ ಅನುಸಾರ ನೋವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸಾಡೇಸಾತಿ ಇರುವಾಗ ಮುಂದಿನ ರಾಶಿ ಮತ್ತು 12ನೇ ಸ್ಥಾನದಲ್ಲಿರುವ ಶನಿಯ ಸಾಡೇ ಸತಿ ಸಂಭವಿಸುವ ರಾಶಿಯ ಮೇಲೂ ಪರಿಣಾಮ ಬೀರುತ್ತದೆ. ಶನಿ ದೇವನು ಈ 3 ರಾಶಿಚಕ್ರದ ಚಿಹ್ನೆಗಳ ಮೂಲಕ ಪ್ರಯಾಣಿಸಲು ಸುಮಾರು ಏಳೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ, ಇದನ್ನೇ ಸಾಡೆ ಸತಿ ಎಂದು ಕರೆಯಲಾಗುತ್ತದೆ. 2024 ಮತ್ತು 2025 ರಲ್ಲಿ ಶನಿಯ ಸಾಡೇಸಾತಿಯಿಂದ
ಯಾವ ರಾಶಿಯವರಿಗೆ ಸಮಸ್ಯೆಯಾಗುತ್ತದೆ ಹಾಗೂ ಅದಕ್ಕೆ ಪರಿಹಾರ ಏನು ನೋಡೋಣ.
ಕಳೆದ ವರ್ಷ, ಅಂದರೆ ಜನವರಿ 17, 2023 ರಂದು ಶನಿಯು ಕುಂಭರಾಶಿಯನ್ನು ಪ್ರವೇಶಿಸಿದ್ದಾನೆ. ಇಂದಿಗೂ ಶನಿ ಇದೇ ರಾಶಿಚಕ್ರ ಚಿಹ್ನೆಯಲ್ಲಿದ್ದಾನೆ. ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಮಕರ, ಕುಂಭ, ಮೀನ ರಾಶಿಯವರಿಗೆ 2024ರಲ್ಲಿ ಶನಿಯ ಸಾಡೇಸಾತಿಯ ಪ್ರಭಾವವಿದ್ದು ವೃಶ್ಚಿಕ ಮತ್ತು ಕರ್ಕಾಟಕ ರಾಶಿಯವರ ಮೇಲೆ ಶನಿಯ ಪ್ರಭಾವ ಇರುತ್ತದೆ. ಸದ್ಯ ಮೀನ ರಾಶಿಯವರಿಗೆ ಶನಿಯ ಸಾಡೇಸಾತಿಯ ಮೊದಲ ಘಟ್ಟ ಸಂಭವಿಸುತ್ತದೆ. ಕುಂಭ ರಾಶಿಯವರಿಗೆ ಎರಡನೇ ಘಟ್ಟ ಹಾಗೂ ಮಕರ ರಾಶಿಯವರಿಗೆ ಕೊನೆಯ ಹಂತ ನಡೆಯುತ್ತಿದೆ.
2025ರಲ್ಲಿ ಶನಿ ಸಾಡೇ ಸಾತಿ
ಶನಿದೇವನು 2025, ಮಾರ್ಚ್ 29 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. 2028 ರವರೆಗೆ ಮೀನ ರಾಶಿಯಲ್ಲಿ ಇರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯವರಿಗೆ ಶನಿಯ ಸಾಡೇಸಾತಿ ಪ್ರಾರಂಭವಾಗಲಿದೆ. ಇದರ ಪ್ರಭಾವವು ಮೇ 31, 2032 ರವರೆಗೆ ಇರುತ್ತದೆ. ಶನಿಯು ಮೀನ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮಕರ ರಾಶಿಯವರಿಗೆ ಶನಿಯ ಸಾಡೇ ಸಾತಿಯಿಂದ ಮುಕ್ತಿ ದೊರೆಯುತ್ತದೆ. ಅದೇ ಸಮಯದಲ್ಲಿ, ಕುಂಭ ರಾಶಿಯವರ ಮೇಲೆ ಶನಿಯ ಸಾಡೇಸಾತಿಯ ಪರಿಣಾಮವು ಜೂನ್ 3, 2027 ರವರೆಗೆ ಇರುತ್ತದೆ.
ಪರಿಹಾರ: ಸಾಡೇಸಾತಿ ಸಮಯದಲ್ಲಿ ಶನಿಯ ಪ್ರಭಾವವನ್ನು ಕಡಿಮೆ ಮಾಡಲು ಪ್ರತಿ ಶನಿವಾರ ಶನೈಶ್ಚರ ದೇವಸ್ಥಾನಕ್ಕೆ ಹೋಗಿ ಎಳ್ಳು ಬತ್ತಿ ದೀಪ ಹಚ್ಚಬೇಕು. ಶನೈಶ್ಚರ ಅಷ್ಟೋತ್ತರ ಶತನಾಮಾವಳಿ ಪಠಿಸಬೇಕು. ಹಾಗೇ ಪ್ರತಿ ಮಂಗಳವಾರ ಆಂಜನೇಯನನ್ನು ಪೂಜಿಸಿ ಹನುಮಾನ್ ಚಾಲಿಸಾ ಪಠಿಸಬೇಕು. ಶನಿಯು ಕರ್ಮಕಾರಕನಾಗಿರುವುದರಿಂದ ಸಾಡೇಸಾತಿ ಸಮಯದಲ್ಲಿ ದಾನ ಧರ್ಮ ಮಾಡಿ, ಎಲ್ಲರಿಗೂ ಒಳಿತು ಬಯಸಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.