logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rajkumar Ayyappa Songs: ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ

Rajkumar Ayyappa Songs: ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ

Raghavendra M Y HT Kannada

Dec 23, 2024 01:45 PM IST

google News

ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆಗಳು ಇಲ್ಲಿವೆ

    • ವರನಟ ಡಾ ರಾಜ್ ಕುಮಾರ್ ಅವರು ಸಿನಿಮಾಗಳ ಜೊತೆಗೆ ಸಾಕಷ್ಟು ಭಕ್ತಿ ಗೀತೆಗಳನ್ನೂ ಹಾಡಿದ್ದಾರೆ. ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದಂತೆ ಅಣ್ಣಾವ್ರ ಹಲವಾರು ಭಕ್ತಿ ಗೀತೆಗಳು ಸಖತ್ ಹಿಟ್ ಆಗಿವೆ. ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಹಾಡುಗಳು ಇಲ್ಲಿವೆ. 
ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆಗಳು ಇಲ್ಲಿವೆ
ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆಗಳು ಇಲ್ಲಿವೆ

ಮಂಡಲ ಮಕರ ಜ್ಯೋತಿ ಪೂಜೆಗಾಗಿ ಶಬರಿಮಲೆಯಲ್ಲಿ 2024ರ ನವೆಂಬರ್ 15 ರಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಮಂದಿ ಭಕ್ತರು ಈಗಾಗಲೇ ಮಾಲೆಯನ್ನು ಧರಿಸಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಗೆ ತೆರೆಳುತ್ತಿದ್ದಾರೆ. ಮಾಲಾಧಾರಿಗಳು ಪ್ರತಿನಿತ್ಯ ಅಯ್ಯಪ್ಪನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಭಜನೆ ಮಾಡುತ್ತಿದ್ದಾರೆ. ಸ್ವಾಮಿ ಶರಣಂ, ಅಯ್ಯಪ್ಪ ಶರಣಂ, ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪನ ಭಕ್ತರು ಭಕ್ತಿ ಗೀತೆಗಳನ್ನು ಕೇಳುವುದು ಸಹಜ. ಇಂತಹ ಭಕ್ತರಿಗಾಗಿ ಡಾ ರಾಜ್ ಕುಮಾರ್ ಅವರು ಹಾಡಿರುವ ಪ್ರಮುಖ 10 ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿ ಗೀತೆಗಳನ್ನು ಇಲ್ಲಿ ನೀಡಲಾಗಿದೆ. ಈ ಸುಮಧುರ ಗೀತೆಗಳನ್ನು ಪ್ರತಿಯೊಬ್ಬ ಅಯ್ಯಪ್ಪನ ಭಕ್ತರು ಇಷ್ಟಪಡುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಒತ್ತಡ ಕಡಿಮೆ ಮಾಡಿಕೊಳ್ಳುವ ಪ್ರಯತ್ನಿಸುತ್ತೀರಿ, ವಿವಾಹಿತ ಜೋಡಿಗಳು ಉತ್ತಮ ಸಮಯ ಕಳೆಯುತ್ತಾರೆ

Dec 23, 2024 04:05 PM

2025 ಫೆಬ್ರವರಿ 4ವರೆಗೆ ಹಿಮ್ಮುಖವಾಗಿ ಚಲಿಸಲಿರುವ ಗುರು: ಕಟಕ ಸೇರಿ ಈ 4 ರಾಶಿಯವರಿಗೆ ಎಲ್ಲಾ ಕೆಲಸದಲ್ಲೂ ಜಯ

Dec 23, 2024 03:03 PM

2025 ರಲ್ಲಿ ಮಂಗಳನ ಆಳ್ವಿಕೆಯಿಂದ ಭಾರಿ ಅದೃಷ್ಟ; ಈ ರಾಶಿಯವರ ಬಡತನ ದೂರವಾಗುತ್ತೆ, ಆದಾಯ ಹೆಚ್ಚಾಗಲಿದೆ

Dec 23, 2024 07:47 AM

2025 ಮೇ ತಿಂಗಳಲ್ಲಿ ಸಿಂಹ ರಾಶಿಗೆ ಕೇತು ಸಂಚಾರ; ಧನಸ್ಸು ಸೇರಿ 3 ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ

Dec 22, 2024 05:50 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನ ಪ್ರಮುಖ ಸವಾಲುಗಳು ಇಲ್ಲದೆ ಮುಂದುವರಿಯುತ್ತೆ, ಸಾಮಾನ್ಯಕ್ಕಿಂತ ಖರ್ಚು ಹೆಚ್ಚಿರಲಿದೆ

Dec 22, 2024 03:49 PM

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ಕೆಳಗೆ ನೀಡಲಾಗಿರುವ ಲಿಂಕ್ ನಲ್ಲಿರುವ ಅಯ್ಯಪ್ಪನ ಹಾಡುಗಳ ಪಟ್ಟಿ

  1. ಶಬರಿಗಿರಿ
  2. ಏನು ಶಕ್ತಿ ಅಡಗಿದೆಯೋ
  3. ಈ ಕಾಡಿಗೇಕೆ ನೀನು ಬಂದೆ
  4. ನೀನೆಲ್ಲೊ ನಾನಲ್ಲೇ
  5. ಸುಮ್ಮನೆ ಏತಕ್ಕೆ
  6. ಬೇರೆ ಏನು ಕೇಳಲಾರೆ
  7. ಏನು ಅನುಬಂಧ
  8. ಸಾಲದೇ ಎರಡು ಕಣ್ಣು ಸಾಲದೇ
  9. ಬಿಡಬೇಡ ನೀ ಬಿಡಬೇಡ
  10. ಏನೇ ಮಾಡು ನಿನ್ನನು ನಾನು ಬಿಡೆನು

ಡಾ ರಾಜ್ ಕುಮಾರ್ ಹಾಡಿರುವ ಈ ಹಾಡುಗಳಿಗೆ ಎಂ ರಂಗ ರಾವ್ ಅವರು ಸಂಗೀತವನ್ನು ನೀಡಿದ್ದಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಹೆಸರಿನಲ್ಲಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆ ಈ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ. ಹಾಡುಗಳ ಲಿಂಕ್ ಇಲ್ಲಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ