logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ, 3 ರಾಶಿಯವರಿಗೆ ಶುಭದಿನಗಳ ಆರಂಭ; ಅನಿರೀಕ್ಷಿತ ಧನಲಾಭ, ಉದ್ಯೋಗ–ವ್ಯವಹಾರ ಕ್ಷೇತ್ರದಲ್ಲೂ ಪ್ರಗತಿ

ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ, 3 ರಾಶಿಯವರಿಗೆ ಶುಭದಿನಗಳ ಆರಂಭ; ಅನಿರೀಕ್ಷಿತ ಧನಲಾಭ, ಉದ್ಯೋಗ–ವ್ಯವಹಾರ ಕ್ಷೇತ್ರದಲ್ಲೂ ಪ್ರಗತಿ

Reshma HT Kannada

Nov 26, 2024 11:15 AM IST

google News

ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ

    • ನವೆಂಬರ್ 30ರಂದು ಬುಧನು ವೃಶ್ಚಿಕ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಲಾಭವಾಗಲಿದೆ. ವಿಶೇಷವಾಗಿ 3 ರಾಶಿಯವರಿಗೆ ಶುಭದಿನಗಳು ಆರಂಭವಾಗಲಿದೆ. ಇವರ ಹಣಕಾಸಿನ ಸಮಸ್ಯೆಗಳೆಲ್ಲಾ ಪರಿಹಾರವಾಗಿ ನೆಮ್ಮದಿ ನೆಲೆಸಲಿದೆ. ಹಾಗಾದರೆ ಬುಧನ ಅಸ್ತದಿಂದ ಲಾಭ ಪಡೆಯುವ ರಾಶಿಯವರು ಯಾರು ನೋಡಿ
ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ
ವೃಶ್ಚಿಕ ರಾಶಿಯಲ್ಲಿ ಬುಧ ಅಸ್ತ

ಜ್ಯೋತಿಷ್ಯದಲ್ಲಿ ಬುಧ ಗ್ರಹಕ್ಕೆ ವಿಶೇಷ ಮಹತ್ವವಿದೆ. ಬುಧನು ಸದ್ಯದಲ್ಲೇ ವೃಶ್ಚಿಕ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ನವೆಂಬರ್‌ 30 ರಂದು ಬುಧನು ಸಂಪೂರ್ಣವಾಗಿ ವೃಶ್ಚಿಕ ರಾಶಿಯಲ್ಲಿ ಅ‌ಸ್ತಮಿಸುತ್ತಾನೆ. ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಕೆಲವು ರಾಶಿಯವರು ಲಾಭವನ್ನೂ ಪಡೆಯಲಿದ್ದಾರೆ. 3 ರಾಶಿಯವರು ಬಹಳ ದಿನಗಳ ನಂತರ ವಿಶೇಷ ಲಾಭವನ್ನು ಪಡೆಯುತ್ತಾರೆ. ಹಾಗಾದರೆ ಈ ರಾಶಿಯವರು ಯಾರು, ಬುಧನ ಅಸ್ತದಿಂದ ಏನೆಲ್ಲಾ ಲಾಭವಾಗಲಿದೆ ನೋಡಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ತುಲಾ ರಾಶಿ

ನಿಮ್ಮ ರಾಶಿಯವರಿಗೆ ಬುಧನ ಅಸ್ತವು ತುಂಬಾ ಪಯೋಜನಕಾರಿ. ಈ ಸಮಯದಲ್ಲಿ ನೀವು ಹಠಾತ್ ಲಾಭ, ಸಂಪತ್ತನ್ನು ಪಡೆಯಬಹುದು. ಯಾವುದೇ ರೀತಿಯ ಪ್ರಚಾರ ಹಾಗೂ ಮಾರ್ಕೆಟಿಂಗ್‌ನಿಂದ ಹೆಚ್ಚಿನ ಲಾಭವಾಗಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ವೇಳೆ ಸ್ಥಗಿತಗೊಂಡ ಕಾಮಗಾರಿ ಪೂರ್ಣಗೊಳ್ಳಲಿದೆ. ನೀವು ಅಂದುಕೊಂಡ ಕೆಲಸದಿಂದ ಲಾಭ ಪಡೆಯಲಿದ್ದೀರಿ. ನಿಮ್ಮ ಮಾತುಗಳಿಂದ ಹಲವರು ಆಕರ್ಷಿತರಾಗುತ್ತಾರೆ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ.

ಮಕರ ರಾಶಿ

ಬುಧನ ಅಸ್ತದ ಸಮಯದಲ್ಲಿ ನಿಮ್ಮ ಆದಾಯ ಹಾಗೂ ಲಾಭ ಎರಡೂ ಹೆಚ್ಚಿರುತ್ತದೆ. ಈ ಸಮಯದಲ್ಲಿ ಹಣಕಾಸಿನ ಲಾಭ ನಿರೀಕ್ಷೆಗೂ ಮೀರಿರುತ್ತದೆ. ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗಲಿವೆ. ಎಲ್ಲ ಕೆಲಸಗಳು ಮೊದಲಿಗಿಂತ ಉತ್ತಮವಾಗಿ ನಡೆಯಲಿದೆ. ಹೂಡಿಕೆ ಹೊಸ ಮಾರ್ಗಗಳು ಗೋಚರವಾಗುತ್ತವೆ. ಈ ಸಮಯದಲ್ಲಿ ನೀವು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಷೇರು ಮಾರುಕಟ್ಟೆಯಿಂದ ಲಾಭ ಪಡೆಯುತ್ತೀರಿ.

ಕುಂಭ ರಾಶಿ

ಈ ಸಮಯದಲ್ಲಿ ನೀವು ವೃತ್ತಿಯಲ್ಲಿ ಉತ್ತುಂಗಕ್ಕೇರುತ್ತೀರಿ. ಅಭಿವೃದ್ಧಿಯ ಹಾದಿಯಲ್ಲಿ ನಡೆಯಲಿದ್ದೀರಿ. ಹೊಸ ಉದ್ಯೋಗ ಸಿಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ, ಇದರಿಂದ ನಿಮಗೆ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ವ್ಯಾಪಾರ ವಿಸ್ತರಣೆಯಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. ನೀವು ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ನಂಬಿಕೆ, ಶಾಸ್ತ್ರಗಳನ್ನು ಆಧರಿಸಿದೆ. ಅಂತರ್ಜಾಲದಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಠೀಕರಿಸುವುದಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ