logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pendants: ದೇವರ ಪೆಂಡೆಂಟ್ ಕತ್ತಲ್ಲಿ ಹಾಕಿಕೊಳ್ಳುವುದು ಶುಭನಾ? ಅಶುಭನಾ; ತಿಳಿಯಬೇಕಾದ ಅಂಶಗಳಿವು

Pendants: ದೇವರ ಪೆಂಡೆಂಟ್ ಕತ್ತಲ್ಲಿ ಹಾಕಿಕೊಳ್ಳುವುದು ಶುಭನಾ? ಅಶುಭನಾ; ತಿಳಿಯಬೇಕಾದ ಅಂಶಗಳಿವು

Raghavendra M Y HT Kannada

Aug 30, 2024 03:22 PM IST

google News

ದೇವರ ಮೂರ್ತಿಯ ಪೆಂಡೆಂಟ್ ಕತ್ತಿಗೆ ಹಾಕಿಕೊಳ್ಳುವುದು ಒಳ್ಳೆಯದಾ, ಕೆಟ್ಟದ್ದಾ ಅನ್ನೋದನ್ನು ತಿಳಿಯಿರಿ.

    • Pendants: ಕೆಲವರು ದೇವರ ಪೆಂಡೆಂಟ್‌ ಅನ್ನು ಚೈನ್ ಮೂಲಕ ಕತ್ತಿಗೆ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಉಂಗುರದಲ್ಲೂ ದೇವರ ಪೆಂಟೆಂಡ್ ಧರಿಸುತ್ತಾರೆ. ಆದರೆ ದೇವರ ಆಕೃತಿ ಇರುವ ಲಾಕೆಟ್ ಅನ್ನು ಕತ್ತಿಗೆ ಹಾಕಿಕೊಳ್ಳುವುದು ಶುಭನಾ, ಅಶುಭನಾ? ಜ್ಯೋತಿಷ್ಯ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನು ತಿಳಿಯೋಣ.
ದೇವರ ಮೂರ್ತಿಯ ಪೆಂಡೆಂಟ್ ಕತ್ತಿಗೆ ಹಾಕಿಕೊಳ್ಳುವುದು ಒಳ್ಳೆಯದಾ, ಕೆಟ್ಟದ್ದಾ ಅನ್ನೋದನ್ನು ತಿಳಿಯಿರಿ.
ದೇವರ ಮೂರ್ತಿಯ ಪೆಂಡೆಂಟ್ ಕತ್ತಿಗೆ ಹಾಕಿಕೊಳ್ಳುವುದು ಒಳ್ಳೆಯದಾ, ಕೆಟ್ಟದ್ದಾ ಅನ್ನೋದನ್ನು ತಿಳಿಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಧರಿಸುವ ವಸ್ತುಗಳು ನಮ್ಮ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ಕತ್ತಲ್ಲಿ ಹಲವು ಬಗೆಯ ಪೆಂಡೆಂಟ್ ಗಳನ್ನು ಧರಿಸುವುದನ್ನು ನೋಡಿದ್ದೇವೆ. ಕೆಲವರು ತಮ್ಮ ಹೆಸರಿನ ಲಾಕೆಟ್ ಅನ್ನು ಧರಿಸಿದರೆ, ಇನ್ನೂ ಕೆಲವರು ಧಾರ್ಮಿಕ ಗುರುತಿನ ಲಾಕೆಟ್‌ಗಳನ್ನು ಧರಿಸುತ್ತಾರೆ. ದೇವರಗಳು ಆಕೃತಿಯ ಪೆಂಡೆಂಟ್‌ಗಳನ್ನು ಚೈನ್ ಮೂಲಕ ಕತ್ತಿನಲ್ಲಿ ಹಾಕಿಕೊಳ್ಳುವುದನ್ನು ನೋಡಿದ್ದೇವೆ. ದೇವರ ಪೆಂಡೆಂಟ್‌ಗಳನ್ನು ಕತ್ತಿನಲ್ಲಿ ಹಾಕಿಕೊಳ್ಳುವುದರಿಂದ ಒಳ್ಳೆಯದಾಗುತ್ತಾ ಅಥವಾ ಅಶುಭನಾ ಅನ್ನೋದನ್ನು ತಿಳಿಯಿರಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವರ ಚಿತ್ರ ಅಥವಾ ದೇವರ ಮುಖದಿಂದ ವಿನ್ಯಾಸಗೊಳಿಸಲಾದ ಲಾಕೆಟ್ ಅನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಯಾಕೆಂದರೆ ದಿನನಿತ್ಯದ ಕೆಲಸದ ಭಾಗವಾಗಿ ದೇಹ ಮತ್ತು ಲಾಕೆಟ್ ಕೂಡ ಕೊಳೆಯಾಗುವುದು ನಿಮಗೆ ಗೊತ್ತೇ ಇರುತ್ತೆ. ಕೈಗಳು ಗಲೀಜು ಆಗುತ್ತವೆ. ದೇವರ ಚಿತ್ರವಿರುವ ಲಾಕೆಟ್ ಮೇಲೆ ಧೂಳು ಅಥವಾ ಕೊಳೆ ಕೂರುವುದರಿಂದ ಜೀವನದಲ್ಲಿ ನಕಾರಾತ್ಮಕ ಸನ್ನಿವೇಶಗಳು ಎದುರಾಗುತ್ತವೆ. ಈ ಕಾರಣಕ್ಕಾಗಿ, ದೇವರ ಮುಖದ ಪೆಂಡೆಂಟ್‌ಗಳನ್ನು ಧರಿಸುವುದು ಒಳ್ಳೆಯದಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಕೆಲವರು ಚಿನ್ನದ ಸರಗಳಲ್ಲಿ ಈ ಲಾಕೆಟ್‌ಗಳನ್ನು ಧರಿಸಿದರೆ ಇನ್ನು ಕೆಲವರು ಸರಳ ದಾರದಲ್ಲಿ ದೇವರ ಆಕೃತಿ ಇರುವ ಲಾಕೆಟ್ ಧರಿಸುತ್ತಾರೆ. ದೇವರ ಲಾಕೆಟ್ ಧರಿಸುವುದರಿಂದ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಧನಾತ್ಮಕ ಶಕ್ತಿಯನ್ನು ಸ್ವೀಕರಿಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಹೀಗೆ ಅಂದುಕೊಳ್ಳುವುದು ತಪ್ಪು ಎಂದು ಹೇಳಲಾಗಿದೆ.

ಧರ್ಮಗ್ರಂಥಗಳ ಪ್ರಕಾರ, ದೇವರನ್ನು ಇರಿಸಲು ಸರಿಯಾದ ಸ್ಥಳವಿದೆ. ಆದರೆ ಅದು ಲಾಕೆಟ್ ಅಥವಾ ಪೆಂಡೆಂಟ್ ಅಲ್ಲ. ಒಬ್ಬ ವ್ಯಕ್ತಿಯು ತನ್ನ ದೇಹದ ಮೇಲೆ ದೇವರಿಗೆ ಸಂಬಂಧಿಸಿದ ಇಂತಹ ವಸ್ತುಗಳನ್ನು ಧರಿಸಬಾರದು. ಹೀಗೆ ಮಾಡುವುದರಿಂದ ಪ್ರಗತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇವುಗಳ ಬದಲಿಗೆ ತುಳಸಿ ಮತ್ತು ರುದ್ರಾಕ್ಷವನ್ನು ಧರಿಸಬಹುದು. ದೇವರ ಲಾಕೆಟ್ ಧರಿಸುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ಪ್ರಗತಿಗೆ ಅಡೆತಡೆಗಳು

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ದೇವರ ಲಾಕೆಟ್ ಧರಿಸುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ದಿನವಿಡೀ ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ. ಬೆಳಗ್ಗಿನಿಂದಲೇ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇವೆ. ತಿನ್ನುವುದರಿಂದ ಹಿಡಿದು ಕುಡಿಯುವವರೆಗೆ ನಾವು ವಿವಿಧ ಪ್ರಕ್ರಿಯೆಗಳನ್ನು ಅನುಸರಿಸುತ್ತೇವೆ. ಅದು ಜೀವನದ ಭಾಗವೇ ಆಗಿರುತ್ತದೆ. ಕೆಲವೊಂದು ಸಮಯದಲ್ಲಿ ನಮ್ಮ ಕೈಗಳು ಕೊಳಕಾಗುತ್ತವೆ. ಅಲ್ಲದೆ ಲಾಕೆಟ್‌ನಲ್ಲಿ ಕೊಳೆ ಕುಳಿದುಕೊಳ್ಳುತ್ತದೆ. ಇದರಿಂದ ನಾವು ದೇವರನ್ನು ಅಪವಿತ್ರಗೊಳಿಸಿದಂತಾಗುತ್ತೆ. ಇದು ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತದೆ.

ಪತಿ, ಪತ್ನಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣ

ಕೊರಳಲ್ಲಿ ದೇವರ ಮುಖದ ಲಾಕೆಟ್ ಧರಿಸುವುದು ಧರ್ಮಶಾಸ್ತ್ರದ ಪ್ರಕಾರ ನಿಷಿದ್ಧ. ಅದರಲ್ಲೂ ಮದುವೆಯಾದವರು ದೇವರ ಲಾಕೆಟ್ ಹಾಕಿಕೊಳ್ಳುವುದು ಒಳ್ಳೆಯದಲ್ಲ. ಮಲಗಿದಾಗ ಲಾಕೆಟ್ ಅವರ ಬಾಯಿಯ ಮೇಲೆ ಬರುತ್ತದೆ. ಇದು ಒಳ್ಳೆಯದಲ್ಲ. ಈ ರೀತಿ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗುತ್ತವೆ.

ಗ್ರಹಗಳ ಮೇಲೆ ಕೆಟ್ಟ ಪ್ರಭಾವ

ದೇವರ ಲಾಕೆಟ್ ತುಂಬಾ ಪವಿತ್ರವಾಗಿರುತ್ತೆ. ನಮ್ಮ ದೇಹವು ಅನೇಕ ಕಾರಣಗಳಿಂದ ಅಶುದ್ಧವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಲಾಕೆಟ್ ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ. ಧರ್ಮಗ್ರಂಥಗಳ ಪ್ರಕಾರ ಅಶುಚಿಯಾದ ಲಾಕೆಟ್ ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಅಶುಭ ಫಲಗಳು ಉಂಟಾಗುತ್ತವೆ. ಗ್ರಹಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಬೆಳವಣಿಗೆಗೆ ತೊಡಕಾಗಬಹುದು.

ರಾಹುವಿನ ಪರಿಣಾಮಗಳು

ದೇವರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಧರಿಸುವ ಪೆಂಡೆಂಟ್‌ನಿಂದಲೇ ನಕಾರಾತ್ಮಕ ಸಂದರ್ಭಗಳು ಸೃಷ್ಟಿಯಾಗುತ್ತವೆ. ದೇಹದ ಪಾವಿತ್ರ್ಯಕ್ಕೂ ಭಂಗ ಬರುತ್ತದೆ. ಹೀಗೆ ಮಾಡುವುದರಿಂದ ನಮ್ಮ ಒತ್ತಡ ಹೆಚ್ಚುತ್ತದೆ. ರಾಹು ಅವರ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಜ್ಯೋತಿಷಿಗಳ ಪ್ರಕಾರ, ದೇವರ ಲಾಕೆಟ್ ಅಥವಾ ದೇವರಿಗೆ ಸಂಬಂಧಿಸಿದ ಯಾವುದನ್ನೂ ಕುತ್ತಿಗೆಯಲ್ಲಿ ಧರಿಸಬಾರದು ಎಂಬುದಕ್ಕೆ ಇವು ಪ್ರಮುಖ ಕಾರಣಗಳಾಗಿವೆ.

ಒಂದು ವೇಳೆ ನೀವು ದೇವರ ಪೆಂಡೆಂಟ್‌ ಅನ್ನು ಕತ್ತಲಿನಲ್ಲಿ ಧರಿಸಲೇಬೇಕೆಂದು ನಿರ್ಧರಿಸಿದರೆ ಜ್ಯೋತಿಷ್ಯ ಸಲಹೆಯ ಪ್ರಕಾರ ಅಧ್ಯಾತ್ಮಿಕ ಸಂಕೇತಗಳೆಂದು ಪರಿಗಣಿಸಲಾದ ಯಂತ್ರಗಳನ್ನು ಧರಿಸಬಹುದು. ಯಂತ್ರವನ್ನು ಸರಿಯಾದ ರೀತಿಯಲ್ಲಿ ಲಾಕೆಟ್ ಆಗಿ ಧರಿಸುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುವುದಲ್ಲದೆ ಗ್ರಹಗಳ ದೋಷಗಳನ್ನು ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ