ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Apr 29, 2024 05:15 AM IST

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಕಾರ್ಯದರ್ಶಿ ಮೇಲೆ ಮಂತ್ರಿ ಇರುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ ಎಂಬುದರ ಅರ್ಥವನ್ನು  ಭಗವದ್ಗೀತೆಯ 9ನೇ ಅಧ್ಯಾಯದ 11ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 11

ಅವಜಾನನ್ತಿ ಮಾಂ ಮೂಢಾ ಮಾನನುಷೀಂ ತನುಮಾಶ್ರಿತಮ್ |

ಪರಂ ಭಾವಮಜಾನನ್ತೋ ಮಮ ಭೂತಮಹೇಶ್ವರಮ್ ||11||

ಅನುವಾದ: ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು.

ತಾಜಾ ಫೋಟೊಗಳು

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

ಭಾವಾರ್ಥ: ಈ ಅಧ್ಯಾಯದ ಇತರ ವಿವರಣೆಗಳಿಂದ ದೇವೋತ್ತಮ ಪರಮ ಪುರುಷನು ಮನುಷ್ಯರೂಪದಲ್ಲಿ ಕಾಣಿಸಿಕೊಂಡರೂ ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಮಸ್ತ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ದೇವೋತ್ತಮ ಪರಮ ಪುರುಷನು ಮನುಷ್ಯನಾಗಿರಲು ಸಾಧ್ಯವಿಲ್ಲ. ಆದರೂ ಕೃಷ್ಣನೊಬ್ಬ ಬಲಶಾಲಿ ಮನುಷ್ಯ ಮಾತ್ರ, ಬೇರೇನೂ ಅಲ್ಲ ಎಂದು ಭಾವಿಸುವ ಅನೇಕ ಮೂಢರಿದ್ದಾರೆ. ಆದರೆ ಬ್ರಹ್ಮಸಂಹಿತೆಯಲ್ಲಿ ದೃಢಪಡಿಸಿರುವಂತೆ (ಈಶ್ವರಃ ಪರಮಃ ಕೃಷ್ಣಃ) ಆತನೇ ಮೂಲ ಪರಮ ಪುರುಷನು. ಆತನು ಪರಮ ಪ್ರಭು (Bhagavad Gita Updesh In Kannada).

ಈಶ್ವರರು, ನಿಯಂತ್ರಕರು ಅನೇಕರಿದ್ದಾರೆ. ಒಬ್ಬರು ಮತ್ತೊಬ್ಬರಿಗಿಂತ ದೊಡ್ಡವರಾಗಿ ಕಾಣುತ್ತಾರೆ. ಈ ಐಹಿಕ ಜಗತ್ತಿನ ವ್ಯವಹಾರಗಳ ಸಾಮಾನ್ಯ ನಿರ್ವಹಣೆಯಲ್ಲಿ ನಾವು ಒಬ್ಬ ಅಧಿಕಾರಿಯನ್ನು ಅಥವಾ ನಿರ್ದೇಶಕನನ್ನು ಕಾಣುತ್ತೇವೆ. ಅವನ ಮೇಲೆ ಒಬ್ಬ ಕಾರ್ಯದರ್ಶಿ ಇರುತ್ತಾನೆ. ಅವನ ಮೇಲೆ ಒಬ್ಬ ಮಂತ್ರಿ ಮತ್ತು ಅವನ ಮೇಲೆ ಒಬ್ಬ ಅಧ್ಯಕ್ಷ. ಅವರಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ. ಆದರೆ ಒಬ್ಬನು ಮತ್ತೊಬ್ಬನನ್ನು ನಿಯಂತ್ರಿಸುತ್ತಾನೆ. ಕೃಷ್ಣನು ಪರಮ ನಿಯಂತ್ರಕ ಎಂದು ಬ್ರಹ್ಮಸಂಹಿತೆಯಲ್ಲಿ ಹೇಳಿದೆ. ಐಹಿಕ ಜಗತ್ತಿನಲ್ಲಿಯೂ ಅಧ್ಯಾತ್ಮಿಕ ಜಗತ್ತಿನಲ್ಲಿಯೂ ನಿಸ್ಸಂಶಯವಾಗಿ ಅನೇಕ ನಿಯಂತ್ರಕರಿದ್ದಾರೆ. ಆದರೆ ಕೃಷ್ಣನು ಪರಮ ನಿಯಂತ್ರಕ (ಈಶ್ವರಃ ಪರಮಃ ಕೃಷ್ಣಃ) ಮತ್ತು ಅವನ ದೇಹವು ಸಚ್ಚಿದಾನಂದ.

ಹಿಂದಿನ ಶ್ಲೋಕಗಳಲ್ಲಿ ವರ್ಣಿಸಿರುವ ಆಶ್ಚರ್ಯಕರ ಕಾರ್ಯಗಳನ್ನು ಐಹಿಕ ದೇಹಗಳು ಮಾಡಲಾರವು. ಅವನ ದೇಹವು ಶಾಶ್ವತವಾದದ್ದು, ಆನಂದಮಯವಾದದ್ದು ಮತ್ತು ಜ್ಞಾನಪೂರ್ಣವಾದದ್ದು. ಆತನು ಸಾಮಾನ್ಯ ಮನುಷ್ಯನಲ್ಲದಿದ್ದರೂ ಮೂಢರು ಅವನನ್ನು ಅಪಹಾಸ್ಯ ಮಾಡುತ್ತಾರೆ ಮತ್ತು ಆತನು ಸಾಮಾನ್ಯ ಮಮನುಷ್ಯನೆಂದುಪರಿಗಣಿಸುತ್ತಾರೆ. ಇಲ್ಲಿ ಅವನ ದೇಹವನ್ನು ಮಾನುಷೀಮ್ ಎಂದು ಕರೆಯಲಾಗಿದೆ. ಏಕೆಂದರೆ ಅವನು ಒಬ್ಬ ಮನುಷ್ಯನಂತೆ, ಅರ್ಜನನ ಸಖನಾಗಿ ಮತ್ತು ಕುರುಕ್ಷೇತ್ರ ಯುದ್ಧದಲ್ಲಿ ಒಳಗಾಗಿರುವ ಒಬ್ಬ ರಾಜಕಾರಣಿಯಂತೆ ವರ್ತಿಸುತ್ತಿದ್ದಾನೆ. ಅನೇಕ ರೀತಿಗಳಲ್ಲಿ ಆತನು ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಾನೆ. ಆದರೆ ಆತನ ದೇಹವು ಸಚ್ಚಿದಾನನ್ದವಿಗ್ರಹ -ಶಾಶ್ವತ ಆನಂದ ಮತ್ತು ಪರಿಪೂರ್ಣಜ್ಞಾನ. ವೇದದ ಭಾಷೆಯು ಇದನ್ನು ದೃಢಪಡಿಸುತ್ತದೆ.

ಸಚ್ಚಿದಾನನ್ದರೂಪಾಯ ಕೃಷ್ಣಾಯ -ಸಚ್ಚಿದಾನಂದ ಸ್ವರೂಪನಾದ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ನಾನು ನಮಸ್ಕರಿಸುತ್ತೇನೆ. (ಗೋಪಾಲ ತಾಪನೀ ಉಪನಿಷತ್ತು 1.1) ವೇದಗಳ ಭಾಷೆಯಲ್ಲಿ ಇತರ ವರ್ಣನೆಗಳೂ ಇವೆ. ತಮ್ ಏಕಮ್ ಗೋವಿನ್ದಮ್ - ನೀನು ಗೋವಿಂದನು, ಇಂದ್ರಿಯಗಳ ಮತ್ತು ಗೋವುಗಳ ಆನಂದನು. ಸಚ್ಚಿದಾನನ್ದ ವಿಗ್ರಹಮ್ - ನಿಮ್ಮ ರೂಪವು ದಿವ್ಯವಾದದ್ದು, ಶಾಶ್ವತ ಜ್ಞಾನ ಮತ್ತು ಆನಂದಗಳಿಂದ ತುಂಬಿರುವುದು. (ಗೋಪಾಲ ತಾಪನೀ ಉಪನಿಷತ್ತು 1.35)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ