logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ದೃಢ ಮನಸ್ಸು ಇಲ್ಲದೆ ಮನುಷ್ಯನು ವಾಸ್ತವವಾದ ಪ್ರಗತಿ ಸಾಧಿಸಲಾರ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ದೃಢ ಮನಸ್ಸು ಇಲ್ಲದೆ ಮನುಷ್ಯನು ವಾಸ್ತವವಾದ ಪ್ರಗತಿ ಸಾಧಿಸಲಾರ; ಭಗವದ್ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

Aug 22, 2024 04:59 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ದೃಢ ಮನಸ್ಸು ಇಲ್ಲದೆ ಮನುಷ್ಯನು ವಾಸ್ತವವಾದ ಪ್ರಗತಿ ಸಾಧಿಸಲಾರ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ವರೆಗಿನ ಶ್ಲೋಕಗಳಲ್ಲಿನ ಮುಂದುವರಿದ ಭಾಗದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12

ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |

ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|

ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |

ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||

ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |

ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |

ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |

ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||

ಅನುವಾದ: ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು, ಅನಾಸಕ್ತಿ, ಮಕ್ಕಳು ಹೆಂಡತಿ, ಮನ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ, ಏಕಾಂತಪ್ಪರದೇಶದಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು, ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ. ಇದಲ್ಲದೆ ಇರುವುದೆಲ್ಲ ಅಜ್ಞಾನ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ರವರೆಗಿನ ಶ್ಲೋಕಗಳ ಮುಂದುವರಿದ ಭಾಗದಲ್ಲಿ ಸ್ಥೈರ್ಯವೆಂದರೆ ಮನುಷ್ಯನು ಅಧ್ಯಾತ್ಮಿಕ ಬದುಕಿನಲ್ಲಿ ಮುಂದುವರಿಯಲು ಮಾಡಬೇಕಾದ ದೃಢಮನಸ್ಸು. ದೃಢಮನಸ್ಸಿಲ್ಲದೆ ಮನುಷ್ಯನು ವಾಸ್ತವವಾದ ಪ್ರಗತಿಯನ್ನು ಸಾಧಿಸಲಾರ. ಆತ್ಮ ಸಂಯಮವೆಂದರೆ ಅಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವ ಏನನ್ನೂ ಮನುಷ್ಯನು ಒಪ್ಪಿಕೊಳ್ಳಬಾರದು. ಇದನ್ನು ಅಭ್ಯಾಸಮಾಡಿಕೊಳ್ಳಬೇಕು ಮತ್ತು ಅಧ್ಯಾತ್ಮಿಕ ಪ್ರಗತಿಗೆ ವಿರುದ್ಧವಾದದ್ದು ಏನೇ ಆಗಲಿ ಅದನ್ನು ತಿರಸ್ಕರಿಸಬೇಕು. ಇದು ನಿಜವಾದ ಸನ್ಯಾಸ (Bhagavad Gita Updesh in Kannada).

ಇಂದ್ರಿಯಗಳ ಬಲ ಎಷ್ಟೆಂದರೆ ಅವು ಯಾವಾಗಲೂ ಇಂದ್ರಿಯತೃಪ್ತಿಗಾಗಿ ಕಾತರವಾಗಿರುತ್ತವೆ. ಅನಗತ್ಯವಾದ ಈ ಬಯಕೆಗಳನ್ನು ತೃಪ್ತಿಪಡಿಸಬಾರದು ಮನುಷ್ಯನು ಅಧ್ಯಾತ್ಮಿಕ ಬದುಕಿನಲ್ಲಿ ಮುಂದುವರಿಯಲು ತನ್ನ ಕರ್ತವ್ಯವನ್ನು ಮಾಡಲು ಸಾಧ್ಯವಾಗುವಂತೆ ದೇಹವನ್ನು ಯೋಗ್ಯಸ್ಥಿತಿಯಲ್ಲಿಡುವುದರಲ್ಲಿ ಇಂದ್ರಿಯಗಳ ತೃಪ್ತಿಯನ್ನು ಕಂಡುಕೊಳ್ಳಬೇಕು. ಬಹು ಮುಖ್ಯವಾದ ಮತ್ತು ನಿಯಂತ್ರಿಸಲು ಸಾಧ್ಯವಿಲ್ಲದ ಇಂದ್ರಿಯ ನಾಲಿಗೆ. ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯವಾದರೆ ಉಳಿದ ಇಂದ್ರಿಯಗಳನ್ನು ನಿಯಂತ್ರಿಸುವ ಎಲ್ಲ ಸಾಧ್ಯತೆಯಿರುತ್ತದೆ.

ನಾಲಿಗೆಯ ಕೆಲಸ ರುಚಿ ನೋಡುವುದು ಮತ್ತು ಮಾತನಾಡುವುದು. ಆದುದರಿಂದ ವ್ಯವಸ್ಥಿತ ನಿಯಂತ್ರಣದಿಂದ ನಾಲಿಗೆಯು ಸದಾ ಕೃಷ್ಣನ ಪ್ರಸಾದವನ್ನು ಸ್ವೀಕರಿಸುವುದರಲ್ಲಿ ಮತ್ತು ಹರೇ ಕೃಷ್ಣ ಸಂಕೀರ್ತನೆಯಲ್ಲಿ ತೊಡಗಿರುವಂತೆ ಮಾಡಬೇಕು. ಕಣ್ಣುಗಳ ವಿಷಯ ಹೇಳುವುದಾದರೆ ಕೃಷ್ಣನ ಸುಂದರ ರೂಪವನ್ನು ಬಿಟ್ಟು ಬೇರೇನನ್ನೂ ನೋಡಲು ಅವಕಾಶಕೊಡಬಾರದು. ಇದು ಕಣ್ಣುಗಳನ್ನು ನಿಯಂತ್ರಿಸುತ್ತದೆ. ಹೀಗೆಯೇ ಕಿವಿಗಳು ಕೃಷ್ಣನ ವಿಷಯವನ್ನು ಕೇಳುವುದರಲ್ಲಿ ಮತ್ತು ಮೂಗು ಕೃಷ್ಣನಿಗೆ ಅರ್ಪಿಸಿದ ಹೂವುಗಳನ್ನು ಆಘ್ರಾಣಿಸುವುದರಲ್ಲಿ ನಿರತವಾಗಿರಬೇಕು. ಇದು ಭಕ್ತಿಸೇವೆಯ ಪ್ರಕ್ರಿಯೆ.

ಇಲ್ಲಿ ಭಗವದ್ಗೀತೆಯು ಭಕ್ತಿಸೇವೆಯ ವಿಜ್ಞಾನವನ್ನು ಹೇಳುತ್ತಿದೆ ಅಷ್ಟೇ ಎಂದು ಅರ್ಥ. ಭಕ್ತಿಸೇವೆಯೇ ಮುಖ್ಯವಾದ ಮತ್ತು ಏಕೈಕವಾದ ಗುರಿ. ಭಗವದ್ಗೀತೆಯ ಬುದ್ಧಿಹೀನ ವ್ಯಾಖ್ಯಾನಕರಾರು ಓದುವವನ ಮನಸ್ಸನ್ನು ಬೇರೆ ವಿಷಯಗಳ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಾರೆ. ಆದರೆ ಭಗವದ್ಗೀತೆಯಲ್ಲಿ ಭಕ್ತಿಸೇವೆಯನ್ನು ಬಿಟ್ಟು ಬೇರೆ ಯಾವ ವಿಷಯವೂ ಇಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ