logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಬಲಶಾಲಿಯು ಬಲವನ್ನು ಯಾವಾಗಲೂ ದುರ್ಬಲರ ರಕ್ಷಣೆಗಾಗಿ ಬಳಸಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಬಲಶಾಲಿಯು ಬಲವನ್ನು ಯಾವಾಗಲೂ ದುರ್ಬಲರ ರಕ್ಷಣೆಗಾಗಿ ಬಳಸಬೇಕು; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Mar 19, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಬಲಶಾಲಿಯು ಬಲವನ್ನು ವೈಯಕ್ತಿಕ ಆಕ್ರಮಣಕ್ಕಾಗಿ ಬಳಸಬಾರದು. ದುರ್ಬಲರ ರಕ್ಷಣೆಗಾಗಿ ಬಳಸಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯ ಶ್ಲೋಕ 11 ಮತ್ತು 12 ರಲ್ಲಿ ಓದಿ. 
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 11

ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ |

ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ ||11||

ಅನುವಾರ: ನಾನು ರಾಗ ಮತ್ತು ಕಾಮಗಳಿಲ್ಲದ ಬಲಶಾಲಿಗಳ ಬಲ, ನಾನು ಧರ್ಮವಿರುದ್ಧವಲ್ಲದ ಕಾಮ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಭಾವಾರ್ಥ: ಬಲಶಾಲಿಯು ಬಲವನ್ನು ವೈಯಕ್ತಿಕ ಆಕ್ರಮಣಕ್ಕಾಗಿ ಬಳಸಬಾರದು. ದುರ್ಬಲರ ರಕ್ಷಣೆಗಾಗಿ ಬಳಸಬೇಕು. ಹೀಗೆಯೇ ಧರ್ಮಕ್ಕನುಗುಣವಾಗಿ ಕಾಮವು ಮಕ್ಕಳನ್ನು ಪಡೆಯುವುದಕ್ಕೆ ಮಾತ್ರ ಇರಬೇಕು. ಬೇರೆ ಕಾರಣಕ್ಕಾಗಲ್ಲ. ತಮ್ಮ ಮಕ್ಕಳಲ್ಲಿ ಕೃಷ್ಣಪ್ರಜ್ಞೆಯನ್ನು (Bhagavad Gita Updesh in Kannada) ಬೆಳೆಸುವುದು ತಂದೆ ತಾಯಿಯರ ಹೊಣೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 12

ಯೇ ತೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ |

ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ ||12||

ಅನುವಾದ: ಇದನ್ನು ತಿಳಿದುಕೊ, ಸಾತ್ವಿಕ, ರಾಜಸ, ತಾಮಸ ಸ್ಥಿತಿಗಳೆಲ್ಲ ನನ್ನ ಶಕ್ತಿಯಿಂದ ಪ್ರಕಟವಾದವು. ಒಂದು ಅರ್ಥದಲ್ಲಿ ಪ್ರತಿಯೊಂದು ವಸ್ತುವೂ ನಾನೇ, ಆದರೆ ನಾನು ಸ್ವತಂತ್ರನು. ನಾನು ಐಹಿಕ ಪ್ರಕೃತಿಯ ಗುಣಗಳಿಗೆ ಒಳಪಟ್ಟಿಲ್ಲ, ಬದಲಿಗೆ ಅವು ನನ್ನಲ್ಲಿರುವುವು.

ಭಾವಾರ್ಥ: ಈ ಜಗತ್ತಿನ ಎಲ್ಲ ಐಹಿಕ ಚಟುವಟಿಕೆಗಳೂ ಐಹಿಕ ಪ್ರಕೃತಿಯ ತ್ರಿಗುಣಗಳಿಗೆ ಅನುಗುಣವಾಗಿ ನಡೆಯುತ್ತವೆ. ಈ ಪ್ರಕೃತಿಯ ಐಹಿಕ ಗುಣಗಳು ಪರಮ ಪ್ರಭು ಕೃಷ್ಣನಿಂದ ಹೊರಸೂಸಿದರೂ ಆತನು ಅದಕ್ಕೆ ಒಳಪಟ್ಟವಲ್ಲ. ಉದಾಹರಣೆಗೆ ರಾಜ್ಯದ ಕಾನೂನಿಗನುಗುಣವಾಗಿ ಒಬ್ಬ ಮನುಷ್ಯನನ್ನು ಶಿಕ್ಷಿಸಬಹುದು. ಆದರೆ ಕಾನೂನನ್ನು ಮಾಡುವ ರಾಜನು ಆ ಕಾನೂನಿಗೆ ಅಧೀನನಲ್ಲ. ಇದೇ ರೀತಿಯಲ್ಲಿ ಐಹಿಕ ನಿಸರ್ಗದ ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸುಗಳು ಪರಮ ಪ್ರಭು ಕೃಷ್ಣನಿಂದ ಹೊರಸೂಸಿದವು. ಆದರೆ ಕೃಷ್ಣನು ಐಹಿಕ ಪ್ರಕೃತಿಗೆ ಅಧೀನನಲ್ಲ. ಆತನು ನಿರ್ಗುಣನು. ಎಂದರೆ ಈ ಗುಣಗಳು ಅವನಿಂದಲೇ ಮೂಡಿಬಂದರೂ ಅವನನ್ನು ಬಾಧಿಸುವುದಿಲ್ಲ. ಇದು ಭಗವಂತನ ಅಥವಾ ದೇವೋತ್ತಮ ಪರಮ ಪುರುಷನ ವಿಶಿಷ್ಟ ಗುಣಗಳಲ್ಲಿ ಒಂದು.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ