logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಸುಖ, ದುಃಖದಲ್ಲಿ ಸಮಚಿತ್ತನಾಗಿ ಇರುವ ವ್ಯಕ್ತಿಗೆ ಜಯವಿದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಸುಖ, ದುಃಖದಲ್ಲಿ ಸಮಚಿತ್ತನಾಗಿ ಇರುವ ವ್ಯಕ್ತಿಗೆ ಜಯವಿದೆ; ಗೀತೆಯ ಅರ್ಥ ತಿಳಿಯಿರಿ

Raghavendra M Y HT Kannada

Jun 14, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಸುಖ, ದುಃಖದಲ್ಲಿ ಸಮಚಿತ್ತನಾಗಿ ಇರುವ ವ್ಯಕ್ತಿಗೆ ಜಯವಿದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 33 ಮತ್ತು 34ನೇ ಶ್ಲೋಕದಲ್ಲಿ ಓದಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 33

ಅಕ್ಷರಾಣಾಮಕಾರೋಸ್ಮಿ ದ್ವನ್ದ್ವಃ ಸಾಮಾಸಿಕಸ್ಯ ಚ |

ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ ||33||

ಅನುವಾದ: ಅಕ್ಷರಗಳಲ್ಲಿ ನಾನು ಅ, ಸಮಾಸಗಳಲ್ಲಿ ದ್ವಂದ್ವ ಸಮಾಸ. ನಾನೇ ಅಕ್ಷಯವಾದ ಕಾಲ, ಸೃಷ್ಟಿಕರ್ತರಲ್ಲಿ ನಾನು ಬ್ರಹ್ಮ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಭಾವಾರ್ಥ: ಸಂಸ್ಕೃತ ವರ್ಣಮಾಲೆಯ ಮೊದಲಕ್ಷರ ಅಕಾರ. ಇದು ವೇದ ಸಾಹಿತ್ಯದ ಪ್ರಾರಂಭ. ಅಕಾರವಿಲ್ಲದೆ ಅನನ್ನೂ ಹೇಳಲು ಸಾಧ್ಯವಿಲ್ಲ. ಆದುದರಿಂದ ಅದು ಶಬ್ದದ ಪ್ರಾರಂಭ. ಸಂಸ್ಕೃತದಲ್ಲಿ ಹಲವು ಸಮಾಸ ಪದಗಳಿವೆ. ಇವುಗಳಲ್ಲಿ ರಾಮ-ಕೃಷ್ಣ ಎನ್ನುವಂತಹ ಪದಗಳನ್ನು ದ್ವಂದ್ವ ಎಂದು ಕರೆಯುತ್ತಾರೆ. ಈ ದ್ವಂದ್ವ ಸಮಾಸದಲ್ಲಿ ರಾಮ ಮತ್ತು ಕೃಷ್ಣ ಎರಡು ಪದಗಳಿಗೂ ಒಂದೇ ರೂಪವಿದೆ. ಆದುದರಿಂದ ಈ ಸಮಾಸವನ್ನು ದ್ವಂದ್ವ ಎಂದು ಕರೆಯುತ್ತಾರೆ (Bhagavad Gita Updesh in Kannada).

ಕೊಲ್ಲುವವರೆಲ್ಲೆಲ್ಲ ಕಾಲವೇ ಕಟ್ಟಕಡೆಯದು. ಏಕೆಂದರೆ ಕಾಲವು ಎಲ್ಲವನ್ನೂ ಕೊಲ್ಲುತ್ತದೆ. ಅದು ಕೃಷ್ಣನ ಪ್ರತಿನಿಧಿ. ಏಕೆಂದರೆ ಕಾಲ ಬಂದಾಗ ಪ್ರಳಯಾಗ್ನಿ ಉಂಟಾಗಿ ಎಲ್ಲವೂ ನಾಶವಾಗುತ್ತವೆ. ಸೃಷ್ಟಿಕರ್ತರಾದ ಜೀವಿಗಳಲ್ಲಿ ಚತುರ್ಮುಖನಾದ ಬ್ರಹ್ಮನೇ ಪ್ರಧಾನ. ಆದುದರಿಂದ ಅವನು ಪರಮ ಪ್ರಭು ಕೃಷ್ಣನ ಪ್ರತಿನಿಧಿ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 34

ಮೃತ್ಯಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ |

ಕೀರ್ತಿಃಶ್ರೀವಾರ್ಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ||34||

ಅನುವಾದ: ಸರ್ವಭಕ್ಷಕನಾದ ಮೃತ್ಯವು ನಾನೇ. ಇನ್ನೂ ಹುಟ್ಟಲಿರುವ ಎಲ್ಲದರ ಉತ್ಪತ್ತಿತತ್ವ ನಾನೇ. ಸ್ತ್ರೀಯರಲ್ಲಿ ಕೀರ್ತಿ, ಶ್ರೀ, ವಾಕ್ಕು, ಸ್ಮೃತಿ, ಮೇಧಾಶಕ್ತಿ, ದೃಢತೆ ಮತ್ತು ತಾಳ್ಮೆ ನಾನು.

ಭಾವಾರ್ಥ: ಮನುಷ್ಯನು ಹುಟ್ಟಿದಾನಿಂದ ಪ್ರತಿ ಕ್ಷಣವೂ ಸಾಯುತ್ತಿರುತ್ತಾನೆ. ಹೀಗೆ ಸಾವು ಜೀವಿಯನ್ನು ಪ್ರತಿ ಕ್ಷಣವೂ ತಿನ್ನುತ್ತಿರುತ್ತದೆ. ಕಡೆಯ ಪಟ್ಟಿಗೆ ಸಾವು ಎಂದು ಹೆಸರು. ಕೃಷ್ಣನೇ ಆ ಸಾವು. ಮುಂದಿನ ಬೆಳವಣಿಗೆಯ ವಿಷಯ ಹೇಳುವುದೆಂದರೆ, ಎಲ್ಲ ಜೀವಿಗಳಲ್ಲಿ ಮೂಲ ಬದಲಾವಣೆಗಳಾಗುತ್ತವೆ. ಅವರು ಹುಟ್ಟುತ್ತಾರೆ, ಬೆಳೆಯುತ್ತಾರೆ, ಕೆಲ ಕಾಲ ಇರುತ್ತಾರೆ, ಮಕ್ಕಳನ್ನು ಪಡೆಯುತ್ತಾರೆ, ಕಡೆಗೆ ಮಾಯವಾಗುತ್ತಾರೆ. ಇವುಗಳಲ್ಲಿ ಮೂದಲನೆಯದು ಗರ್ಭದಿಂದ ಬಿಡುಗಡೆ. ಇದು ಕೃಷ್ಣ. ಮೊದಲ ಹುಟ್ಟು ಎಲ್ಲ ಮುಂದಿನ ಚಟುವಟಿಕೆಗಳ ಪ್ರಾರಂಭ.

ಇಲ್ಲಿ ಹೆಸರಿಸಿರುವ ಏಳು ಸಿರಿಗಳು - ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ - ಸ್ತ್ರೀ ಸಹಜ ಎಂದು ಪರಿಗಣಿಸಲಾಗುತ್ತವೆ. ಇವೆಲ್ಲ ಅಥವಾ ಇವುಗಳಲ್ಲಿ ಕೆಲವು ಸಿರಿಗಳಿರುವವನು ಮಹಾನ್‌ವ್ಯಕ್ತಿಯಾಗುತ್ತಾನೆ. ವ್ಯಕ್ತಿಯು ಧರ್ಮಿಷ್ಟನೆಂದು ಪ್ರಸಿದ್ಧನಾಗಿದ್ದರೆ ಅವನು ಮಹಿಮಾನ್ವಿತನಾಗುತ್ತಾನೆ. ಸಂಸ್ಕೃತವು ಪರಿಪೂರ್ಣ ಭಾಷೆ. ಆದುದರಿಂದ ಮಹತ್ವದ್ದಾಗಿದೆ. ಅಧ್ಯಯನ ಮಾಡಿದನಂತರ ಮನುಷ್ಯನು ವಿಷಯವನ್ನು ಜ್ಞಾಪಿಸಿಕೊಳ್ಳಬಲ್ಲವನಾದರೆ ಅವನಿಗೆ ಒಳ್ಳೆಯ ಸ್ಮರಣಶಕ್ತಿ ಅಥವಾ ಸ್ಮೃತಿ ಉಂಟು. ಬೇರೆ ಬೇರೆ ವಿಷಯಗಳನ್ನು ಕುರಿತು ಅಧಿಕ ಸಂಖ್ಯೆಯ ಪುಸ್ತಕಗಳನ್ನು ಓದಿ ಅವುಗಳನ್ನು ಅರ್ಥಮಾಡಿಕೊಂಡು ಅಗತ್ಯವಾದಾಗ ಅನ್ವಯಿಸು ಶಕ್ತಿಯು ಬುದ್ಧಿಶಕ್ತಿ (ಮೇಧಾ). ಅಸ್ಥಿರತೆಯನ್ನು ನಿವಾರಿಸಿಕೊಳ್ಳುವ ಶಕ್ತಿಯು ದೃಢತೆ ಅಥವಾ ಧೃತಿ. ಸಂಪೂರ್ಣವಾಗಿ ಅರ್ಹನಾದರೂ ನಮ್ರನಾಗಿ ಮೃದುಸ್ವಭಾವದವನಾಗಿದ್ದು, ದುಃಖದಲ್ಲಿಯೂ ಹರ್ಷೋನ್ಮಾದದಲ್ಲಿಯೂ ಸಮಚಿತ್ತನಾಗಿ ಇರುವವನಿಗೆ ತಾಳ್ಮೆಯ ಸಿರಿಯುಂಟು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ