logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Holi 2024: ಹೋಳಿ ಹಬ್ಬದ ಸಂದರ್ಭ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ; ಇದರ ಹಿಂದಿನ ಧಾರ್ಮಿಕ ಕಾರಣವಿದು

Holi 2024: ಹೋಳಿ ಹಬ್ಬದ ಸಂದರ್ಭ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ; ಇದರ ಹಿಂದಿನ ಧಾರ್ಮಿಕ ಕಾರಣವಿದು

Reshma HT Kannada

Mar 24, 2024 11:01 AM IST

google News

ಹೋಳಿ ಹಬ್ಬದ ಸಂದರ್ಭ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ; ಇದರ ಹಿಂದಿನ ಧಾರ್ಮಿಕ ಕಾರಣ ಹೀಗಿದೆ

    • ಹೋಳಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ಬಣ್ಣಗಳ ರಂಗು ಹರಡಿರುತ್ತದೆ. ಹೋಳಿಯಾಡುವಾಗ ಸಾಮಾನ್ಯವಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದು ವಾಡಿಕೆ. ಬಣ್ಣಗಳ ಹಬ್ಬದಂದು ಬಿಳಿ ಬಟ್ಟೆಯನ್ನು ಧರಿಸುವುದೇಕೆ, ಇದರ ಹಿಂದಿನ ಧಾರ್ಮಿಕ ಮಹತ್ವದ ಕುರಿತು ಇಲ್ಲಿದೆ ವಿವರ.
ಹೋಳಿ ಹಬ್ಬದ ಸಂದರ್ಭ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ; ಇದರ ಹಿಂದಿನ ಧಾರ್ಮಿಕ ಕಾರಣ ಹೀಗಿದೆ
ಹೋಳಿ ಹಬ್ಬದ ಸಂದರ್ಭ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ; ಇದರ ಹಿಂದಿನ ಧಾರ್ಮಿಕ ಕಾರಣ ಹೀಗಿದೆ

ಬಣ್ಣಗಳ ಹಬ್ಬ ಹೋಳಿ ಎಂದರೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಬಣ್ಣಗಳನ್ನ ಎರಚುತ್ತಾ ಹಬ್ಬ ಮಾಡುವುದೆಂದರೆ ಖುಷಿಯೋ ಖುಷಿ. ಈ ವರ್ಷ ಮಾರ್ಚ್‌ 25 ರಂದು ಹೋಳಿ ಹುಣ್ಣಿಮೆ ಇದೆ. ಹೋಳಿ ಹುಣ್ಣಿಮೆಯಂದು ಮನೆ ಮಂದಿ, ಸ್ನೇಹಿತರೆಲ್ಲಾ ಒಂದಾಗಿ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಎಲ್ಲರೂ ಒಂದೆಡೆ ಸೇರಿ ಸಂಭ್ರಮದಿಂದ ಕಾಲ ಕಳೆಯಲು ಇದು ಹೇಳಿ ಮಾಡಿಸಿದ ಆಚರಣೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹೋಳಿ ಹಬ್ಬದಂದು ಭಾಂಗ್‌ ಕುಡಿಯುವುದು ಕೂಡ ಉತ್ತರ ಭಾರತದ ಕಡೆ ವಿಶೇಷ. ಇದರೊಂದಿಗೆ ಸಿಹಿ ತಿನಿಸುಗಳನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಇದೆಲ್ಲದರ ಜೊತೆಗೆ ಹೋಳಿಯಾಡುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಹೆಚ್ಚಾಗಿ ಧರಿಸುತ್ತಾರೆ. ಬೇರೆ ದಿನಗಳಲ್ಲಿ ಬಣ್ಣ ತಾಕಿದರೆ ಬಟ್ಟೆ ಹಾಳಾಗುತ್ತದೆ ಎಂದು ಭಾವಿಸಿದರೂ ಹೋಳಿಯಲ್ಲಿ ಬೇಕಂತಲೇ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಳಿಯಾಡಿ ಸಂಭ್ರವಿಸುತ್ತಾರೆ. ಆದರೆ ಹೋಳಿ ಸಂದರ್ಭ ಬಿಳಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿದೆ ಹಲವು ಧಾರ್ಮಿಕ ಕಾರಣಗಳು.

ಬಿಳಿ ಬಟ್ಟೆಯ ಮೇಲೆ ಹಸಿರು, ಕೆಂಪು, ಗುಲಾಬಿ, ನೀಲಿ ಮತ್ತು ಹಳದಿ ಬಣ್ಣಗಳು ವಿಶೇಷವಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಹೋಳಿ ಹಬ್ಬ ಬರುವುದು ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ದೇಹವನ್ನು ಶಾಖದಿಂದ ರಕ್ಷಿಸಲು ಮತ್ತು ಆರಾಮದಾಯಕವಾಗಿರಲು ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ ಎಂಬುದು ಎಂದು ವಿಚಾರ.

ಬಿಳಿ ಬಣ್ಣವನ್ನು ಶಾಂತಿ ಮತ್ತು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಡುಕಿನ ಮೇಲೆ ಒಳಿತಿನ ವಿಜಯಕ್ಕಾಗಿ ಹೋಲಿಕಾ ದಹನವನ್ನು ನಡೆಸಲಾಗುತ್ತದೆ. ಬಣ್ಣಗಳ ಹಬ್ಬವಾದ ಹೋಳಿಯನ್ನು ಮರುದಿನ ಆಚರಿಸಲಾಗುತ್ತದೆ.

ಹೋಳಿ ದಹನದ ಕಥೆ

ಹೋಳಿ ಎಂದರೆ ಹಿರಣ್ಯಕಶಿಪು, ಪ್ರಹ್ಲಾದ, ಹೋಲಿಕ ಮತ್ತು ವಿಷ್ಣುವಿನ ಕಥೆ. ಹಿರಣ್ಯಕಶಿಪು ತನ್ನ ಅಹಂಕಾರದಿಂದ ಎಲ್ಲಾ ದೇವತೆಗಳನ್ನು ಹಿಂಸಿಸುತ್ತಲೇ ಇದ್ದ. ತನ್ನನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸುವಂತಿಲ್ಲ ಎಂದು ಆದೇಶ ನೀಡಿದ್ದ. ಆದರೆ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ ಭಗವಾನ್ ವಿಷ್ಣುವಿನ ಮಹಾನ್ ಭಕ್ತನಾಗಿದ್ದ. ಹಿರಣ್ಯಕಶಿಪು ತನ್ನ ಮಗ ನಿರಂತರವಾಗಿ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಿರುವುದರಿಂದ ಕೋಪಗೊಳ್ಳುತ್ತಾನೆ.

ಪ್ರಹ್ಲಾದನ ವರ್ತನೆಯಿಂದ ಕೋಪಗೊಂಡ ಹಿರಣ್ಯಕಶಿಪು ತನ್ನ ಮಗನನ್ನು ಕೊಲ್ಲುವ ಆಲೋಚನೆಯಲ್ಲಿ ತನ್ನ ಸಹೋದರಿ ಹೋಲಿಕಾಗೆ ಬರ ಹೇಳುತ್ತಾನೆ. ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡ ಹೋಲಿಕಾ ಬೆಂಕಿಯಲ್ಲಿ ಕುಳಿತುಕೊಳ್ಳಲು ಹೇಳುತ್ತಾಳೆ. ಅವಳು ಬೆಂಕಿ ತಾಕದಂತೆ ತಡೆಯುವ ಮಾಂತ್ರಿಕ ಮೇಲಂಗಿಯನ್ನು ಧರಿಸಿರುತ್ತಾಳೆ. ಹೋಲಿಕಾಳ ಮಡಿಲಲ್ಲಿ ಕುಳಿತು ಬೆಂಕಿಯನ್ನು ಪ್ರವೇಶಿಸಿದ ಪ್ರಹ್ಲಾದ ವಿಷ್ಣುವಿನ ನಾಮವನ್ನು ಜಪಿಸುತ್ತಾನೆ. ಆ ಕಾರಣಕ್ಕೆ ಅವನಿಗೆ ಏನೂ ಆಗುವುದಿಲ್ಲ. ಆದರೆ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋಗುತ್ತಾಳೆ. ಹಿರಣ್ಯಕಶಿಪುವಿನ ವರ್ತನೆಯಿಂದ ಕೋಪಗೊಂಡ ವಿಷ್ಣು ನರಸಿಂಹನ ರೂಪವನ್ನು ಧರಿಸಿ ಅವನನ್ನು ಕೊಲ್ಲುತ್ತಾನೆ. ಅಂದಿನಿಂದ ಹೋಳಿ ದಹನ ಆಚರಣೆ ಚಾಲ್ತಿಯಲ್ಲಿದೆ ಎಂಬುದು ಧಾರ್ಮಿಯ ನಂಬಿಕೆ.

ಬಿಳಿ ಬಣ್ಣವು ಶುದ್ಧತೆ, ಒಳ್ಳೆಯತನ, ಶಾಂತಿ ಮತ್ತು ಸಾಮರಸ್ಯದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಕೆಟ್ಟ ನೆನಪುಗಳನ್ನು ಮರೆಯಲು ಮತ್ತು ಒಳ್ಳೆಯದನ್ನು ಸ್ವೀಕರಿಸಲು ಹೋಳಿಯನ್ನು ಆಚರಿಸಲಾಗುತ್ತದೆ. ಹೋಳಿಯನ್ನು ಸಹೋದರತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ಬಣ್ಣದ ಹಬ್ಬದ ದಿನದಂದು ಬಿಳಿ ಬಟ್ಟೆಯನ್ನು ಧರಿಸುವುದರಿಂದ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತಗೊಳಿಸುತ್ತದೆ. ಎಲ್ಲಾ ರೀತಿಯ ಆತಂಕ ಮತ್ತು ಭಯ ದೂರಾಗುತ್ತದೆ ಎಂಬ ನಂಬಿಕೆಯೂ ಇದೆ.

ಧಾರ್ಮಿಕ ಮಹತ್ವ

ಹೋಳಿ ಸಮಯದಲ್ಲಿ ರಾಹುವು ಉಗ್ರನಾಗುತ್ತಾನೆ. ಪರಿಣಾಮವಾಗಿ, ರಾಹುವಿನ ದುಷ್ಪರಿಣಾಮಗಳಿಂದ, ವ್ಯಕ್ತಿಯು ಕೆಟ್ಟ ಸಹವಾಸಕ್ಕೆ ಬೀಳುತ್ತಾನೆ. ನಕಾರಾತ್ಮಕ ಶಕ್ತಿಯು ವ್ಯಕ್ತಿಯನ್ನು ಆಕರ್ಷಿಸುತ್ತದೆ. ಇದು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ರಾಹುವಿನ ಕೋಪವನ್ನು ತಪ್ಪಿಸಲು ಹೋಳಿ ಹಬ್ಬದ ಸಂದರ್ಭ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ ಎನ್ನುವುದು ಧಾರ್ಮಿಕ ನಂಬಿಕೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ