Ramayana Quiz: ರಾಮಾಯಣದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿರುವ 25 ಪ್ರಶ್ನೆಗಳಿಗೆ ತಿಣುಕಾಡದೆ ಉತ್ತರಿಸಿ ನೋಡೋಣ
Apr 19, 2024 06:00 AM IST
ರಾಮಾಯಣ ರಸಪ್ರಶ್ನೆ
- ರಾಮಾಯಣ ರಸಪ್ರಶ್ನೆ: ರಾಮನ ಕಥೆಯನ್ನು ಹೇಳುವ ಮಹಾಕಾವ್ಯ ರಾಮಾಯಣ. ಇತ್ತೀಚೆಗಷ್ಟೇ ಶ್ರೀರಾಮನವಮಿ ಆಚರಿಸಿದ್ದೀರಿ. ಇಲ್ಲಿರುವ ಪ್ರಶ್ನೆಗಳನ್ನು ಒಮ್ಮೆ ಗಮನಿಸಿ, ಕೊನೆಯಲ್ಲಿರುವ ಉತ್ತರವನ್ನೂ ನೋಡಿ. ರಾಮನ ಕಥೆ ನಿಮಗೆಷ್ಟು ಗೊತ್ತು? -ನಿಮ್ಮನ್ನು ನೀವೇ ಪರೀಕ್ಷೆ ಮಾಡಿಕೊಳ್ಳಿ. (ಬರಹ: ಅರ್ಚನಾ ವಿ ಭಟ್)
ರಾಮಾಯಣವು ಅನೇಕ ಕಥೆಗಳನ್ನು ಒಳಗೊಂಡಿರುವ ಮಹಾಕಾವ್ಯ. ಜೀವನಕ್ಕೆ ಅಗತ್ಯವಿರುವ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತದೆ. ರಾಮಾಯಣಕ್ಕೆ ಸಂಬಂಧಪಟ್ಟ ಕೆಲವು ಆಸಕ್ತಿದಾಯಕ ವಿಷಯಗಳನ್ನು ಪ್ರಶ್ನೆಗಳ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ರಾಮಾಯಣದ ಬಗ್ಗೆ ನಿಮ್ಮ ವಿಷಯ ಜ್ಞಾನ ಎಷ್ಟಿದೆ ಎಂದು ನೀವೇ ಪರೀಕ್ಷಿಸಿಕೊಳ್ಳಿ.
ತಾಜಾ ಫೋಟೊಗಳು
ಮಹರ್ಷಿ ವಾಲ್ಮೀಕಿಯಿಂದ ರಚಿಸಲ್ಪಟ್ಟ ರಾಮಾಯಣವು ಪ್ರಸಿದ್ಧ ಮಹಾಕಾವ್ಯಗಳಲ್ಲಿ ಒಂದು. ಈ ಮಹಾಕಾವ್ಯವು ಶ್ರೀರಾಮ ಮತ್ತು ಸೀತೆಯ ಜೀವನದ ಮೇಲೆ ಕೇಂದ್ರಿತವಾಗಿದೆ. ಅವರ ಜೀವನ ಪ್ರಯಾಣವನ್ನು ಮಹರ್ಷಿಗಳು ಕಥೆಯ ರೂಪದಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಅದು ನಮ್ಮನ್ನು ಆಧ್ಯತ್ಮದ ಕಡೆಗೆ ಸಾಗಲು, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮಾನವರು ಅವರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಸಹ ಒತ್ತಿಹೇಳುತ್ತದೆ. ಸಾವಿರಾರು ವರ್ಷಗಳ ಹಿಂದೆ ನಡೆದ ರಾಮಾಯಣದ ಕಥೆಯು ಆದರ್ಶ ನಾಯಕನಾದ ಶ್ರೀರಾಮನ ಚರಿತ್ರೆಯನ್ನು ಸಾರಿ ಹೇಳುತ್ತದೆ. ರಾಮಾಯಣವನ್ನು ವಿಶ್ವದ ಹಲವು ದೇಶಗಳಲ್ಲಿ ಜನರು ಮೆಚ್ಚಿಕೊಂಡು ಆರಾಧಿಸುತ್ತಾರೆ.
ರಾಮಾಯಣವು ನಮಗೆ ಅನೇಕ ವಿಷಯಗಳನ್ನು ಕಲಿಸುತ್ತದೆ. ಕರ್ತವ್ಯ, ನಿಷ್ಠೆ ಮತ್ತು ಪ್ರೀತಿ ಅವುಗಳಲ್ಲಿ ಪ್ರಮುಖವಾದವು. ರಾಮಾಯಣವು ಭಾರತೀಯರಿಗೆ ಪುರಾತನ ಸಂಸ್ಕೃತಿ, ಪರಂಪರೆಯನ್ನು ತಿಳಿಹೇಳುವ ಜ್ಞಾನದ ದೀವಿಗೆಯಾಗಿದೆ. ಇತ್ತೀಚೆಗಷ್ಟೇ (ಏಪ್ರಿಲ್ 9) ಬಹಳ ವಿಜೃಂಭಣೆಯಿಂದ ಶ್ರೀರಾಮನವಮಿ ಆಚರಿಸಿದ್ದೇವೆ. ಅನೇಕ ರಾಮ ಮಂದಿರಗಳಲ್ಲಿ ನಡೆದ ಭಜನೆ, ಕೀರ್ತನೆ ಮತ್ತು ರಾಮ ಕಥೆಗಳನ್ನು ಕೇಳಿದ್ದೇವೆ. ರಾಮಾಯಣಕ್ಕೆ ಸಂಬಂಧಪಟ್ಟ ಕೆಲವು ಆಸಕ್ತಿದಾಯಕ ಪ್ರಶ್ನೆಗಳನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ. ನಮ್ಮ ದೇಶದ ಪ್ರಾಚೀನ ಮಹಾಕಾವ್ಯದ ಬಗ್ಗೆ ನೀವೆಷ್ಟು ತಿಳಿದುಕೊಂಡಿದ್ದೀರಿ? ಈ ಪ್ರಶ್ನೆಗಳ ಮೂಲಕ ಪರೀಕ್ಷಿಸಿಕೊಳ್ಳಿ. ಕೊನೆಯಲ್ಲಿ ನೀಡಿರುವ ಉತ್ತರದೊಂದಿಗೆ ನಿಮ್ಮ ಉತ್ತರವನ್ನು ಹೋಲಿಸಿ ನೋಡಿ.
1) ರಾಮಾಯಣವನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ?
ಅ) ಮೈಥಿಲಿ
ಬ) ಸಂಸ್ಕೃತ
ಕ) ಇಂಗ್ಲೀಷ್
ಡ) ಹಿಂದಿ
2) ಸೀತಾ ಮಾತೆಯನ್ನು ರಕ್ಷಿಸಲು ರಾಮನಿಗೆ ಸಹಾಯ ಮಾಡಿದವರು ಯಾರು?
ಅ) ಬೆಕ್ಕು
ಬ) ವಾನರ
ಕ) ನಾಯಿ
ಡ) ಹುಲಿ
3) ರಾವಣನ ತಂಗಿಯ ಹೆಸರೇನು?
ಅ) ನಿಖಶಾ
ಬ) ಕೈಕೇಯಿ
ಕ) ಶೂರ್ಪನಖಿ
ಡ) ಸೀತಾ
4) ಸೀತಾ ಮಾತೆಯನ್ನು ಅಪಹರಿಸಿದವರು ಯಾರು?
ಅ) ಕುಂಭಕರ್ಣ
ಬ) ರಾವಣ
ಕ) ಅಹಿರಾವಣ
ಡ) ಕುಬೇರ
5) ಶ್ರೀರಾಮನು ರಾಜನಾಗಿ ಆಳಿದ ರಾಜ್ಯ ಯಾವುದು?
ಅ) ಅಯೋಧ್ಯೆ
ಬ) ಶ್ರೀಲಂಕಾ
ಕ) ಅಲಹಾಬಾದ್
ಡ) ವಾರಣಾಸಿ
6) ರಾಮನ ಮಡದಿಯ ಹೆಸರೇನು?
ಅ) ಶೂರ್ಪನಖಿ
ಬ) ಕೈಕೇಯಿ
ಕ) ನಿಖಶಾ
ಡ) ಸೀತಾ
7) ರಾಮನ ಸಹೋದರನ ಹೆಸರೇನು?
ಅ) ವಿಭೀಷಣ
ಬ) ಲಕ್ಷ್ಮಣ
ಕ) ದುಶ್ಯಾಸನ
ಡ) ಕುಂಭಕರ್ಣ
8) ರಾಮನ ಭಕ್ತ ಯಾರು?
ಅ) ಕುಂಭಕರ್ಣ
ಬ) ಹನುಮಂತ
ಕ) ಲಕ್ಷ್ಮಣ
ಡ) ಶತ್ರುಘ್ನ
9) ಶ್ರೀರಾಮನ ತಾಯಿಯ ಹೆಸರೇನು?
ಅ) ನಿಕಶಾ
ಬ) ಕೈಕೇಯಿ
ಕ) ಕೌಸಲ್ಯ
ಡ) ಶೂರ್ಪನಖಿ
10) ರಾವಣನು ಈ ಕೆಳಗಿನ ಯಾವ ದೇವರನ್ನು ಪೂಜಿಸುತ್ತಿದ್ದನು?
ಅ) ಶಿವ
ಬ) ವಿಷ್ಣು
ಕ) ಬ್ರಹ್ಮಾ
ಡ) ಯಾವುದೂ ಅಲ್ಲ
11) ಶ್ರೀರಾಮನ ತಂದೆಯ ಹೆಸರೇನು?
ಅ) ನಹುಶ
ಬ) ವಿಷ್ಣು
ಕ) ದಶರಥ
ಡ) ಯಾವುದೂ ಅಲ್ಲ
12) ಈ ಕೆಳಗಿನವುಗಳಲ್ಲಿ ಯಾವುದು ರಾಮಾಯಣದ ಭಾಗವಾಗಿದೆ?
ಅ) ಬಾಲಕಾಂಡ
ಬ) ಕಿಷ್ಕಿಂಧಕಾಂಡ
ಕ) ಅರಣ್ಯಕಾಂಡ
ಡ) ಮೇಲಿನ ಎಲ್ಲವೂ ಸರಿಯಾಗಿದೆ
13) ರಾಮಾಯಣದಲ್ಲಿ ರಾಮನ ಶತ್ರು ಯಾರು?
ಅ) ರಾವಣ
ಬ) ಕುಂಭಕರ್ಣ
ಕ) ಇಂದ್ರಜಿತ್
ಡ) ಯಾರೂ ಅಲ್ಲ
14) ಶ್ರೀರಾಮನ ಜನ್ಮ ಸ್ಥಳ ಯಾವುದು?
ಅ) ಅಯೋಧ್ಯೆ
ಬ) ವಾರಣಾಸಿ
ಕ) ಪ್ರಯಾಗ್‌ರಾಜ್
ಡ) ಯಾವುದೂ ಅಲ್ಲ
15) ರಾಮನಿಗೆ ಸೀತಾ ಮಾತೆಯನ್ನು ಹುಡುಕಲು ಸಹಾಯ ಮಾಡಿದ ಪಕ್ಷಿ ಯಾವುದು?
ಅ) ಜಟಾಯು
ಬ) ಗರುಡ
ಕ) ಸುಪರ್ಣ
ಡ) ಹದ್ದು
16) ಲಂಕೆಗೆ ಸೇತುವೆಯನ್ನು ನಿರ್ಮಿಸಿದ ರಾಮನ ನಿಷ್ಠಾವಂತ ವಾನರ ಭಕ್ತ ಯಾರು?
ಅ) ನಳ
ಬ) ವಾಲಿ
ಕ) ಸುಗ್ರೀವ
ಡ) ಯಾರೂ ಅಲ್ಲ
17) ರಾವಣನ ಮಗ ಯಾರು?
ಅ) ಕುಂಭಕರ್ಣ
ಬ) ಇಂದ್ರಜಿತ್
ಕ) ವಿಭೀಷಣ
ಡ) ಯಾರೂ ಅಲ್ಲ
18) ರಾಮಾಯಣದ ಕಥೆಗಳನ್ನು ಮಹರ್ಷಿ ವಾಲ್ಮೀಕಿಗೆ ಹೇಳಿದವರು ಯಾರು?
ಅ) ಶಿವ
ಬ) ಬ್ರಹ್ಮ
ಕ) ನಾರದ ಋಷಿ
ಡ) ಯಾರೂ ಅಲ್ಲ
19) ರಾವಣನು ಸೀತೆಯನ್ನು ಎಲ್ಲಿಗೆ ಅಪಹರಿಸಿಕೊಂಡು ಹೋದನು?
ಅ) ಅಯೋಧ್ಯೆ
ಬ) ಲಂಕೆ
ಕ) ಪಂಚವಟಿ
ಡ) ಯಾವುದೂ ಅಲ್ಲ
20) ರಾವಣನನ್ನು ಸೋಲಿಸಲು ಶ್ರೀರಾಮನು ಉಪಯೋಗಿಸಿದ ಆಯುಧದ ಹೆಸರೇನು?
ಅ) ಬ್ರಹ್ಮಾಸ್ತ್ರ
ಬ) ತ್ರಿಶೂಲ
ಕ) ಪಾಶುಪತಾಸ್ತ್ರ
ಡ) ಯಾವುದೂ ಅಲ್ಲ
21) ರಾವಣನಿಗಿಂತ ಮೊದಲು ಲಂಕೆಯನ್ನು ಆಳಿದವರು ಯಾರು?
ಅ) ಇಂದ್ರಜಿತ್
ಬ) ಕುಬೇರ
ಕ) ಪರಶುರಾಮ
ಡ) ಯಾರೂ ಅಲ್ಲ
22) ಸೀತಾ ಮಾತೆಯ ತಂದೆಯ ಹೆಸರೇನು?
ಅ) ಜನಕ
ಬ) ಸುಗ್ರೀವ
ಕ) ವಿಭೀಷಣ
ಡ) ದಶರಥ
23) ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸವನ್ನು ಕಳೆದ ಕಾಡಿನ ಹೆಸರೇನು?
ಅ) ದಂಡಕಾರಣ್ಯ
ಬ) ಪಂಚವಟಿ
ಕ) ಚಿತ್ರಕೂಟ
ಡ) ಯಾವುದೂ ಅಲ್ಲ
24) ಅಯೋಧ್ಯೆಯನ್ನು ರಾಮನ ತಂದೆಗಿಂತ ಮೊದಲು ಆಳಿದ ರಾಜ ಯಾರು?
ಅ) ಅಜ
ಬ) ದಶರಥ
ಕ) ರಘು
ಡ) ಯಾರೂ ಅಲ್ಲ
25) ರಾಮನ ಸೋದರಿಯ ಹೆಸರೇನು?
ಅ) ಕೌಸಲ್ಯೆ
ಬ) ಮಂಡೋದರಿ
ಕ) ಶಾಂತಾ
ಡ) ಮಂಥರೆ
ಮೇಲಿನ 25 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ
1) ಸಂಸ್ಕೃತ
2) ವಾನರ
3) ಶೂರ್ಪನಖಿ
4) ರಾವಣ
5) ಅಯೋಧ್ಯೆ
6) ಸೀತಾ
7) ಲಕ್ಷ್ಮಣ
8) ಹನುಮಂತ
9) ಕೌಸಲ್ಯ
10) ಶಿವ
11) ದಶರಥ
12) ಮೇಲಿನ ಎಲ್ಲವೂ ಸರಿಯಾಗಿದೆ
13) ರಾವಣ
14) ಅಯೋಧ್ಯೆ
15) ಜಟಾಯು
16) ನಳ
17) ಇಂದ್ರಜಿತ
18 ನಾರದ ಋಷಿ
19) ಲಂಕೆ
20) ಬ್ರಹ್ಮಾಸ್ತ್ರ
21) ಕುಬೇರ
22) ಜನಕ
23) ಪಂಚವಟಿ
24) ಅಜ
25) ಶಾಂತಾ
(ಬರಹ: ಅರ್ಚನಾ ವಿ ಭಟ್)
ಇದನ್ನೂ ಓದಿ: ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು