logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  December Pradosh: ಡಿಸೆಂಬರ್ 13 ರ ಶುಕ್ರವಾರ ವಿಶೇಷ ಪ್ರದೋಷ ಪೂಜೆ; ಕಥೆ, ಪೂಜಾ ವಿಧಾನ ಹೀಗಿರಲಿದೆ

December Pradosh: ಡಿಸೆಂಬರ್ 13 ರ ಶುಕ್ರವಾರ ವಿಶೇಷ ಪ್ರದೋಷ ಪೂಜೆ; ಕಥೆ, ಪೂಜಾ ವಿಧಾನ ಹೀಗಿರಲಿದೆ

Raghavendra M Y HT Kannada

Dec 12, 2024 02:50 PM IST

google News

ಪ್ರದೋಷ ವ್ರತದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ

    • 2024ರ ಡಿಸೆಂಬರ್ 13 ರ ಶುಕ್ರವಾರ ಪ್ರದೋಷ ಪೂಜೆಯನ್ನು ಆಚರಿಸಲಾಗುತ್ತದೆ. ಈ ದಿನ ಪೂಜೆ ಆಚರಿಸಿದ ನಂತರ ಕೆಲವು ವಿಧಿ ವಿಧಾನಗಳ ಬಳಿಕ ಆರತಿಯನ್ನು ಬೆಳಗಬೇಕು. ಈ ಬಾರಿಯ ವಿಶೇಷ ಪ್ರದೋಷ ಮತ್ತು ಕಥೆಯನ್ನು ತಿಳಿಯಿರಿ.
ಪ್ರದೋಷ ವ್ರತದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ
ಪ್ರದೋಷ ವ್ರತದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ

ಪ್ರತಿ ಮಾಸದ ಶುಕ್ಲ ಪಕ್ಷ ಮತ್ತು ಕೃಷ್ಣಪಕ್ಷದಲ್ಲಿ ಬರುವ ತ್ರಯೋದಶಿಯ ದಿನದಂದು ಪ್ರದೋಷ ಪೂಜೆಯನ್ನು ಮಾಡುವುದು ಸಂಪ್ರದಾಯ. ಸೂರ್ಯನು ಮುಳುಗಿದ ನಂತರವೂ ತ್ರಯೋದಶಿ ಇರುವುದು ಬಲು ಮುಖ್ಯ. ಸ್ಕಂದ ಪುರಾಣದಲ್ಲಿ ಬಹುತೇಕ ಎಲ್ಲಾ ವ್ರತಗಳ ಬಗ್ಗೆ ತಿಳಿಸಿದ್ದಾರೆ. ಅದರಂತೆ ಪ್ರದೋಷದ ಬಗ್ಗೆ ತಿಳಿಸುವಾಗ ಶಿವನನ್ನು ಪೂಜಿಸಿದಲ್ಲಿ ಉಳಿದ ಎಲ್ಲಾ ದೇವರುಗಳ ಅನುಗ್ರಹವನ್ನು ಪಡೆಯಬಹುದು. ಡಿಸೆಂಬರ್ 13 ರ ಶುಕ್ರವಾರದಂದು ಪ್ರದೋಷ ಪೂಜೆಯನ್ನು ಆಚರಿಸಬೇಕು. ಈ ದಿನ ಪೂಜೆ ಆಚರಿಸಿದ ಮೇಲೆ ಅಕ್ಕಿ ಹಿಟ್ಟಿನಿಂದ ಮಾಡಿದ ತೆಂಬಿಟ್ಟಿನ ದೀಪದಿಂದ ಶಿವಪಾರ್ವತಿಯವರಿಗೆ ಆರತಿಯನ್ನು ಮಾಡಬೇಕು. ಮಂಗಳವಾರ ಪ್ರದೋಷ ಇದ್ದಲ್ಲಿ ಗೋಧಿ ಹಿಟ್ಟಿನಿಂದ ಮಾಡಿದ ತೆಂಬಿಟ್ಟಿನ ದೀಪದಿಂದ ಶಿವಪಾರ್ವತಿಯರಿಗೆ ಆರತಿಯನ್ನು ಮಾಡಬೇಕು. ಕೃತ್ತಿಕಾ ನಕ್ಷತ್ರ ಇರುವ ಕಾರಣ ಇದರಿಂದ ವಿಶೇಷವಾದ ಫಲಗಳು ದೊರೆಯುತ್ತವೆ. ಮುಖ್ಯವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಪ್ರದೋಷದಂದು ಶಿವನು ಸಂತೋಷದಿಂದ ಇರುವ ಕಾರಣ ತನ್ನನ್ನು ಪೂಜಿಸುವ ಭಕ್ತಾಧಿಗಳ ಮನದಾಸೆಗಳನ್ನು ಪೂರೈಸುತ್ತಾನೆ. ಕೃತ್ತಿಕಾನಕ್ಷತ್ರ ರವಿಯ ನಕ್ಷತ್ರವಾದ್ದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ.

ತಾಜಾ ಫೋಟೊಗಳು

ಗಜಕೇಸರಿ ಯೋಗ ಈ ರಾಶಿಯವರ ಜೀವನವನ್ನೇ ಬದಲಾಯಿಸುತ್ತೆ; ಸಂಪತ್ತು ನಿಮ್ಮನ್ನು ಹುಡುಕಿ ಬರುತ್ತೆ, ಆರ್ಥಿಕ ಸ್ಥಿರತೆ ಇರಲಿದೆ

Dec 12, 2024 05:36 PM

ನಾಳಿನ ದಿನ ಭವಿಷ್ಯ: ಬೇರೆಯರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗುತ್ತದೆ, ಅನಗತ್ಯ ಒತ್ತಡಕ್ಕೆ ಒಳಗಾಗುವುದಿಲ್ಲ

Dec 12, 2024 04:21 PM

Surya Gochar: ಧನು ರಾಶಿಗೆ ಸೂರ್ಯನ ಪ್ರವೇಶವು 6 ರಾಶಿಯವರಿಗೆ ಭಾರಿ ಅದೃಷ್ಟ; ಉತ್ತಮ ಅವಕಾಶ ಪಡೆಯುತ್ತೀರಿ

Dec 12, 2024 02:06 PM

ಅದೃಷ್ಟದ ದಿನವಾಗಿರಲಿದೆ, ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ, ಖರ್ಚಿನ ಮೇಲೆ ನಿಗಾ ಇರಲಿ; ನಾಳಿನ ದಿನಭವಿಷ್ಯ

Dec 11, 2024 05:52 PM

ತಿನ್ನುವ ಆಹಾರದ ಮೇಲೆ ನಿಗಾ ಇರಲಿ, ಆರೋಗ್ಯ ಕೆಡಬಹುದು, ಪ್ರೀತಿಪಾತ್ರರನ್ನು ಭೇಟಿಯಾಗುವ ಅವಕಾಶ ಸಿಗಲಿದೆ; ನಾಳಿನ ದಿನಭವಿಷ್ಯ

Dec 10, 2024 04:14 PM

ನಾಳೆಯ ದಿನ ಭವಿಷ್ಯ: ಅನಗತ್ಯ ವಾದ, ಚರ್ಚೆಗಳಿಂದ ದೂರವಿರಿ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರಿ

Dec 09, 2024 04:50 PM

ಪ್ರದೋಷದ ಬಗ್ಗೆ ಕಥೆಯೊಂದಿದೆ. ಊರೊಂದರಲ್ಲಿ ಮೂರು ಜನ ಸ್ನೇಹಿತರಿರುತ್ತಾರೆ. ಅವರ ನಡುವೆ ಅತಿಯಾದ ಪ್ರೀತಿ ವಿಶ್ವಾಸ ಹಾಗೂ ಪರಸ್ಪರ ನಂಬಿಕೆ ಇರುತ್ತದೆ. ಸಣ್ಣ ವಯಸ್ಸಿನಿಂದಲೇ ಇವರ ನಡುವೆ ಇಂತಹ ಮನೋಭಾವನೆ ಬಂದಿರುತ್ತದೆ. ದಿನ ಕಳೆದಂತೆ ಪ್ರಾಪ್ತ ವಯಸ್ಸಿಗೆ ಬಂದ ಕಾರಣ ತಮ್ಮ ಮನಸ್ಸಿಗೆ ಹತ್ತಿರ ಆದವರ ಜೊತೆಯಲ್ಲಿ ವಿವಾಹವಾಗುತ್ತಾರೆ. ವಿವಾಹವಾದ ನಂತರ ಈ ಮೂರಲ್ಲಿ ಇಬ್ಬರು ತಮ್ಮ ಪತ್ನಿಯರನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಸಂತೋಷದಿಂದ ವೈವಾಹಿಕಜೀವನವನ್ನು ನಡೆಸುತ್ತಿರುತ್ತಾರೆ.

ಆದರೆ ಉಳಿದ ಒಬ್ಬನು ಒಳ್ಳೆಯವನಾದರೂ ಸಹ ತನ್ನ ಪತ್ನಿಯನ್ನು ತನ್ನ ಮನೆಗೆ ಕರೆತಂದಿರುವುದಿಲ್ಲ. ಪತ್ನಿಯನ್ನು ಸಾಕ್ಷಾತ್ ಲಕ್ಷ್ಮಿ ಮತ್ತು ಅನ್ನಪೂರ್ಣೇಶ್ವರಿಗೆ ಹೋಲಿಸಲಾಗುತ್ತದೆ. ಆದ್ದರಿಂದ ಪತ್ನಿ ಇಲ್ಲದ ಮನೆಯನ್ನು ಬರಡು ಭೂಮಿಗೆ ಹೋಲಿಸಲಾಗುತ್ತದೆ. ವಿವಾಹವಾದ ನಂತರ ದೇವಾಲಯಕ್ಕೆ ಸಹ ದಂಪತಿ ಒಟ್ಟಿಗೆ ತೆರಳಬೇಕು. ಒಬ್ಬಂಟಿಯಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಯಾವುದೇ ಫಲವು ದೊರೆಯುವುದಿಲ್ಲ. ಇದೇ ರೀತಿಯಲ್ಲಿ ಮನೆಯಲ್ಲಿ ಮಾಡುವ ಪೂಜೆ ಪುನಸ್ಕಾರಗಳಿಗೂ ಫಲಗಳು ದೊರೆಯುವುದಿಲ್ಲ. ಮಾಡುವ ದಾನ ಧರ್ಮಗಳು ಫಲರಹಿತವಾಗುತ್ತದೆ.

ಪತ್ನಿಯನ್ನು ಶುಕ್ರಗ್ರಹಕ್ಕೆ ಹೋಲಿಸಲಾಗುತ್ತದೆ. ಆದರೆ ಈತನು ಶುಕ್ರನು ಅಸ್ತನಾಗಿರುವ ವೇಳೆ ತನ್ನ ಪತ್ನಿಯನ್ನು ಕರೆತರಲು ಪ್ರಯಾಣ ಬೆಳೆಸುತ್ತಾನೆ. ಮನೆಯಲ್ಲಿರುವ ಹಿರಿಯರು ಇದು ಸರಿಯಾದ ವೇಳೆಯಲ್ಲವೆಂದು ತಿಳಿಸಿದರು ಒಪ್ಪುವುದಿಲ್ಲ. ಹಾಗೆಯೇ ಅವನ ಅತ್ತೆ ಮಾವಂದಿರು ಸಹ ಮಗಳನ್ನು ಕಳುಹಿಸಲು ಒಪ್ಪುವುದಿಲ್ಲ. ಇದೇ ಕಾರಣದಿಂದಾಗಿ ಇಂದಿಗೂ ಸಹ ಹೆಣ್ಣು ಮಕ್ಕಳು ಸೂರ್ಯಸ್ತಗೊಂಡ ನಂತರ ಪ್ರಯಾಣ ಮಾಡಬಾರದೆಂದು ಹಿರಿಯರು ಹೇಳುತ್ತಾರೆ.

ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ದುರ್ಗಾ ಮಾತೆಯು ನೆಲೆಸಿರುತ್ತಾಳೆ

ಮಗಳಾಗಲಿ, ಸೋದರಿಯಾಗಲಿ ಅಥವಾ ಪತ್ನಿಯಾಗಲಿ ಸೂರ್ಯ ಮುಳುಗಿದ ನಂತರ ತಾವು ನೆಲೆಸಿರುವ ಮನೆಯಿಂದ ಹೊರಗಡೆ ಪ್ರಯಾಣ ಮಾಡಬಾರದು. ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ದುರ್ಗಾ ಮಾತೆಯು ನೆಲೆಸಿರುತ್ತಾಳೆ. ಮಂಗಳವಾರ ಮಗಳನ್ನು, ಶುಕ್ರವಾರ ಸೊಸೆಯನ್ನು ತಮ್ಮ ಮನೆಯಿಂದ ಕಳುಹಿಸಲು ಹಿಂದಿನ ಕಾಲದಲ್ಲಿ ಯಾರು ಒಪ್ಪುತ್ತಿರಲಿಲ್ಲ. ಆದರೆ ಈತನು ಎಲ್ಲರ ಆದೇಶವನ್ನು ಮೀರಿ ತನ್ನ ಪತ್ನಿಯನ್ನು ಮಾವನ ಮನೆಯಿಂದ ಕರೆ ತರುತ್ತಾನೆ.

ಬರುವ ದಾರಿಯಲ್ಲಿ ಘಟಸರ್ಪವೊಂದು ಆತನ ಕಾಲನ್ನು ಕಡಿಯುತ್ತದೆ. ಹಾವಿನ ವಿಷದ ಕಾರಣ ಪತಿಯು ತನ್ನ ಪ್ರಾಣತ್ಯಾಗ ಮಾಡುತ್ತಾನೆ. ಆಗ ಆತನ ಪತ್ನಿಯು ದಾರಿಕಾಣದೆ ರೋಧಿಸುತ್ತಿದ್ದಾಗ, ಅಲ್ಲಿದ್ದ ಹಿರಿಯರೊಬ್ಬರು ಆ ದಿನವು ಪ್ರದೋಷವಾಗಿರುವುದನ್ನು ಗಮನಿಸುತ್ತಾರೆ. ಆಗ ಆಕೆಗೆ ಸಂಜೆಯ ವೇಳೆ ಸೂರ್ಯನು ಮುಳುಗಿದ ನಂತರ ಶಿವ ಪಾರ್ವತಿಯರ ವಿಗ್ರಹವನ್ನು ಇಟ್ಟು ಪೂಜಿಸುವಂತೆ ತಿಳಿಸುತ್ತಾರೆ. ಹಿರಿಯರ ಆದೇಶದಂತೆ ಅಕ್ಕಿಯಿಂದ ಮಾಡಿದ ತೆಂಬಿಟ್ಟಿನಿಂದ ಶಿವ ಪಾರ್ವತಿಯರಿಗೆ ಆರತಿಯನ್ನು ಮಾಡುತ್ತಾರೆ. ಅಲ್ಲಿದ್ದ ಗಂಧವನ್ನು ತೆಗೆದುಕೊಂಡು ಹಾವು ಕಚ್ಚಿದ್ದ ಸ್ಥಳಕ್ಕೆ ಲೇಪಿಸುತ್ತಾಳೆ. ಆಗ ಅಸುನೀಡಿದ್ದ ಪತಿಗೆ ಮರಳಿ ಜೀವವು ಬರುತ್ತದೆ. ಈ ಕಾರಣದಿಂದ ಶುಕ್ರವಾರ ಬರುವ ಪ್ರದೋಷದ ಪೂಜೆಯನ್ನು ಮಾಡಿದರೆ, ಮನೆಯಲ್ಲಿರುವ ರೋಗಿಗಳಿಗೆ ಪುನರ್ಜನ್ಮ ದೊರೆಯುತ್ತದೆ. ಈ ವಿಚಾರವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ