logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಲಕ್ಷ್ಮಿ ದೇವಿ ಶಾಶ್ವತವಾಗಿ ನೆಲಸಬೇಕಾ? ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ

ಮನೆಯಲ್ಲಿ ಲಕ್ಷ್ಮಿ ದೇವಿ ಶಾಶ್ವತವಾಗಿ ನೆಲಸಬೇಕಾ? ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ

Raghavendra M Y HT Kannada

Nov 15, 2024 09:56 AM IST

google News

ಆರ್ಥಿಕ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರಗಳನ್ನು ಪ್ರಯತ್ನಿಸಿ

    • ಕಾರ್ತಿಕ ಪೂರ್ಣಿಮಾ 2024: ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ಬಹಳ ವಿಶೇಷ. ಈ ದಿನ ವಿಷ್ಣು, ಚಂದ್ರ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮಂಗಳಕರ ಎಂದು ಪುರಾಣಗಳು ಹೇಳುತ್ತವೆ. ವಿಶೇಷವಾಗಿ ಕಾರ್ತಿಕ ಪೂರ್ಣಿಮಾ ದಿನ ಕೆಲವು ಪರಿಹಾರಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಎಂಬ ನಂಬಿಕೆಯಿದೆ.
ಆರ್ಥಿಕ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರಗಳನ್ನು ಪ್ರಯತ್ನಿಸಿ
ಆರ್ಥಿಕ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರಗಳನ್ನು ಪ್ರಯತ್ನಿಸಿ

ಕಾರ್ತಿಕ ಪೂರ್ಣಿಮಾ 2024: ಹಿಂದೂ ಪುರಾಣಗಳಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಗೆ ಬಹಳ ಮಹತ್ವವಿದೆ. ಈ ದಿನ ಮಾಡುವ ವ್ರತಗಳು ಮತ್ತು ಪೂಜೆಗಳನ್ನು ದೇವತೆಗಳು ಸ್ವತಃ ಸ್ವೀಕರಿಸುತ್ತಾರೆ ಎಂದು ನಂಬಲಾಗುತ್ತದೆ. ಕಾರ್ತಿಕ ಹುಣ್ಣಿಮೆಯಂದು ಎಲ್ಲಾ ದೇವತೆಗಳಿಗೆ ತೊಂದರೆ ಕೊಡುವ ರಾಕ್ಷಸ ತ್ರಿಪುರಾಸುರನನ್ನು ಸಂಹರಿಸಲಾಗಿದೆ. ತ್ರಿಪುರಾಸುರ ಸಂಹಾರದಿಂದ ಎಲ್ಲ ದೇವತೆಗಳು ತುಂಬಾ ಸಂತೋಷ ಪಡುತ್ತಾರೆ. ಈ ಖುಷಿಯನ್ನು ದೀಪ ಬೆಳಗಿಸಿ ಹಬ್ಬವಾಗಿ ಆಚರಿಸುತ್ತಾರೆ. ಇದನ್ನ ದೇವ್ ದೀಪಾವಳಿ ಅಥವಾ ದೇವರ ದೀಪಾವಳಿ ಎಂದು ಕರೆಯಲಾಗುತ್ತದೆ. ಅಂದಿನಿಂದ ಪ್ರತಿ ಕಾರ್ತಿಕ ಹುಣ್ಣಿಮೆಯಂದು ದೀಪಗಳನ್ನು ಹಚ್ಚುವುದು ವಾಡಿಕೆ. ಈ ಬಾರಿ ಕಾರ್ತಿಕ ಹುಣ್ಣಿಮೆ ನೆವಂಬರ್ 15ರ ಶುಕ್ರವಾರ ಬಂದಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಪುರಾಣಗಳ ಪ್ರಕಾರ, ಕಾರ್ತಿಕ ಹುಣ್ಣಿಮೆಯಂದು ದೀಪಾವಳಿಯನ್ನು ಆಚರಿಸಲು ಎಲ್ಲಾ ದೇವತೆಗಳು ಕಾಶಿಗೆ ಬರುತ್ತಾರೆ. ವಾರಣಾಸಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ದೀಪಗಳನ್ನು ಹಚ್ಚಿ ಗಂಗೆಯಲ್ಲಿ ಬಿಡುವುದು ಮಂಗಳಕರ ಎಂದು ಅಗ್ನಿ ಪುರಾಣ ಹೇಳುತ್ತದೆ. ಎಷ್ಟೋ ಭಕ್ತರು ಹುಣ್ಣಿಮೆಯಂದು 365 ಬತ್ತಿಯ ದೀಪವನ್ನು ಹಚ್ಚಿ ದೇವರನ್ನು ಪೂಜಿಸುತ್ತಾರೆ. ಕಾರ್ತಿಕ ಹುಣ್ಣಿಮೆಯ ದಿನದಂದು ಪವಿತ್ರ ಗಂಗಾಸ್ನಾನಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ.

ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ಪೂಜೆಯು ಹೆಚ್ಚು ವಿಶೇಷವಾಗಿದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪೂರ್ಣಿಮಾ ದಿನ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮೀದೇವಿಯು ಅತ್ಯಂತ ಸಂತೋಷವಾಗಿರುತ್ತಾಳೆ ಮತ್ತು ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ಭಕ್ತರಿಗೆ ಬೇಡಿದ ವರಗಳನ್ನು ನೀಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ವಿಶೇಷವಾಗಿ ಈ ದಿನ ಕೆಲವು ಪರಿಹಾರಗಳನ್ನು ಮಾಡುವ ಮೂಲಕ ಲಕ್ಷ್ಮಿ ದೇವಿಯು ಮೆಚ್ಚಿಗೆಗೆ ಒಳಗಾಗುತ್ತಾಳೆ. ಕಾರ್ತಿಕ ಪೂರ್ಣಿಮಾದಂದು ಏನು ಮಾಡಬೇಕೆಂದು ತಿಳಿಯಿರಿ.

ಕಾರ್ತಿಕ ಪೌರ್ಣಿಮಾ ದಿನದಂದು ಸತ್ಯನಾರಾಯಣ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಸತ್ಯನಾರಾಯಣ ಸ್ವಾಮಿ ವ್ರತದ ಕಥೆಯನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯನ್ನು ಸಂತೋಷಪಡಿಸಲಾಗುತ್ತದೆ. ದೇವಿ ಭಕ್ತರನ್ನು ಆಶೀರ್ವದಿಸುತ್ತಾಳೆ. ನಂಬಿಕೆಗಳ ಪ್ರಕಾರ, ಆರ್ಥಿಕ ಸಮೃದ್ಧಿಯೊಂದಿಗೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಿಸುತ್ತಾಳೆ.

ಹಿಂದೂ ಸಂಪ್ರದಾಯದ ಪ್ರಕಾರ, ಅಶ್ವತ್ಥ ಮರದಲ್ಲಿ ತ್ರಿಮೂರ್ತಿಗಳು ವಾಸಿಸುತ್ತಾರೆ. ಈ ಮರವನ್ನು ಪೂಜಿಸುವುದರಿಂದ ಅನೇಕ ರೀತಿಯ ಅನಿಷ್ಟಗಳು ದೂರವಾಗುತ್ತವೆ. ಕಾರ್ತಿಕ ಹುಣ್ಣಿಮೆಯಂದು ಅಶ್ವತ್ಥ ಮರಕ್ಕೆ ಹಾಲನ್ನು ಸುರಿಯುವುದು ಶುಭ ಫಲ ನೀಡುತ್ತದೆ. ಇದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಮತ್ತು ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಅರಿಶಿನವು ಮಂಗಳಕರ ಸಂಕೇತವೆಂದು ಹಿಂದೂಗಳು ನಂಬುತ್ತಾರೆ. ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ದೇವಿಗೆ ಹಳದಿ ಗೋಧಿಯನ್ನು ಅರ್ಪಿಸುವುದು ಶುಭ ಫಲವನ್ನು ನೀಡುತ್ತದೆ. ಮನೆಯಲ್ಲಿ ಹಣ ಇಟ್ಟಿರುವ ಜಾಗದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಯಾವುದೇ ಹಾನಿಯಾಗದಂತೆ ಶಾಶ್ವತವಾಗಿ ನೆಲಸುತ್ತಾಳೆ ಎಂಬ ನಂಬಿಕೆ ಇದೆ.

ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮಾಡಬೇಕಾದ ಪ್ರಮುಖ ಕೆಲಸ

ಕಾರ್ತಿಕ ಪೂರ್ಣಿಮಾ ದಿನ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಬ್ರಹ್ಮ ಮುಹೂರ್ತದಲ್ಲಿ ಗಂಗೆಯಲ್ಲಿ ಸ್ನಾನ ಮಾಡುವುದು. ನಂತರ ಶಿವ ದೇವಾಲಯಕ್ಕೆ ಹೋಗಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಅನಾದಿ ಕಾಲದಿಂದಲೂ ನಿಲ್ಲಿಸಿದ್ದ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಶತ್ರುಗಳ ವಿರುದ್ಧ ಜಯವನ್ನು ಸಾಧಿಸುತ್ತೀರಿ. ನಿಮ್ಮ ಇಷ್ಟಾರ್ಥಗಳು ಖಂಡಿತ ಈಡೇರುತ್ತವೆ.

ನೀವು ಲಕ್ಷ್ಮಿ ದೇವಿಯನ್ನು ನೋಡಲು ಬಯಸಿದರೆ, ಕಾರ್ತಿಕ ಹುಣ್ಣಿಮೆ ದಿನ ಸಾಲಿಗ್ರಾಮದ ರೂಪದಲ್ಲಿ ವಿಷ್ಣುವನ್ನು ಪೂಜಿಸಬೇಕು. ಈ ದಿನದಂದು ಲಕ್ಷ್ಮಿ ದೇವಿಯ ಜೊತೆಗೆ ವಿಷ್ಣುವನ್ನು ಪೂಜಿಸುವುದರಿಂದ ದೇವರ ಆಶೀರ್ವಾದವು ಬರುತ್ತದೆ. ಭಕ್ತರ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ