logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಯೋತಿಷ್ಯದ ಪ್ರಕಾರ ರಾತ್ರಿ ಹೊತ್ತು ತಪ್ಪಿಯೂ ಈ ಕೆಲಸಗಳನ್ನ ಮಾಡಬಾರದು, ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು

ಜ್ಯೋತಿಷ್ಯದ ಪ್ರಕಾರ ರಾತ್ರಿ ಹೊತ್ತು ತಪ್ಪಿಯೂ ಈ ಕೆಲಸಗಳನ್ನ ಮಾಡಬಾರದು, ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು

Reshma HT Kannada

Dec 18, 2024 01:23 PM IST

google News

ಜ್ಯೋತಿಷ್ಯದ ಪ್ರಕಾರ ರಾತ್ರಿ ಹೊತ್ತು ತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು

    • ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಅತ್ಯಮೂಲ್ಯ ಯಾವುದು ಎಂದು ಕೇಳಿದರೆ ಆರೋಗ್ಯ ಎಂಬ ಉತ್ತರ ಸಿಗುತ್ತದೆ. ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ರಾತ್ರಿ ಹೊತ್ತು ಈ ಕೆಲವು ಕೆಲಸಗಳನ್ನು ಮಾಡದಿರುವುದು ಉತ್ತಮ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ಅಭ್ಯಾಸಗಳು ನಿಮಗೆ ರೂಢಿಯಾಗಿದ್ದರೆ ಈಗಲೇ ಅದನ್ನು ಬದಲಿಸಿಕೊಳ್ಳಿ.
ಜ್ಯೋತಿಷ್ಯದ ಪ್ರಕಾರ ರಾತ್ರಿ ಹೊತ್ತು ತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು
ಜ್ಯೋತಿಷ್ಯದ ಪ್ರಕಾರ ರಾತ್ರಿ ಹೊತ್ತು ತಪ್ಪಿಯೂ ಈ ಕೆಲಸಗಳನ್ನು ಮಾಡಬಾರದು (PC: Canva)

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾತ್ರಿ ಹೊತ್ತಿನಲ್ಲಿ ಈ ಕೆಲವು ಕೆಲಸಗಳನ್ನು ಮಾಡುವುದರಿಂದ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ರಾತ್ರಿಯನ್ನು ವಿಶ್ರಾಂತಿ ಸಮಯವೆಂದು ಪರಿಗಣಿಸಲಾಗುತ್ತದೆ. ರಾತ್ರಿಯು ಶಾಂತಿಯ ಸಂಕೇತವೂ ಹೌದು. ಈ ಸಮಯದಲ್ಲಿ ವಿಶ್ರಾಂತಿ, ಆತ್ಮಶೋಧನೆ, ಧ್ಯಾನ ಮತ್ತು ನಿದ್ರೆಯನ್ನು ಮಾತ್ರ ಮಾಡುವುದು ಸೂಕ್ತ. ಈ ಹೊತ್ತನ್ನು ಮನಸ್ಸಿನ ಶಾಂತಿ ಪಡೆಯಲು ಬಳಸಿಕೊಳ್ಳಬೇಕು. ಆದರೆ ಅದನ್ನೆಲ್ಲಾ ಬಿಟ್ಟು ರಾತ್ರಿ ಈ ಕೆಲವು ಕೆಲಸಗಳನ್ನು ಮಾಡಿದರೆ ಬದುಕಿನ ಶಾಂತಿ, ನೆಮ್ಮದಿ ಕೆಡುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ತಾಜಾ ಫೋಟೊಗಳು

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ; ನಾಳಿನ ದಿನಭವಿಷ್ಯ

Dec 17, 2024 05:14 PM

12 ವರ್ಷಗಳ ನಂತರ ಮೀನ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ: 2025 ಈ 3 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

Dec 16, 2024 09:59 PM

ನಾಳಿನ ದಿನ ಭವಿಷ್ಯ: ಆರ್ಥಿಕ ವಿಚಾರದಲ್ಲಿ ಏರಿಳಿತಗಳನ್ನು ಕಾಣುತ್ತೀರಿ, ಸಂಗಾತಿಗೆ ಇಷ್ಟವಾಗದ ಯಾವುದೇ ಕೆಲಸ ಮಾಡಬೇಡಿ

Dec 16, 2024 03:08 PM

ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶುಕ್ರ, ಶನಿ ಸಂಯೋಗ: ಡಿಸೆಂಬರ್‌ನಿಂದ ಈ 5 ರಾಶಿಯವರ ಜೀವನವೇ ಬದಲಾಗಲಿದೆ

Dec 15, 2024 09:24 PM

1. ರಾತ್ರಿ ಹೊತ್ತು ಎಚ್ಚರವಾಗಿರುವುದು

ರಾತ್ರಿ ಹೊತ್ತು ಮಲಗಿ ಬೆಳಿಗ್ಗೆ ಏಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಮಧ್ಯರಾತ್ರಿ ಕಳೆದರೂ ನಿದ್ದೆ ಮಾಡುವುದಿಲ್ಲ. ರಾತ್ರಿ ಹೊತ್ತು ನಾವು ನಿರ್ದಿಷ್ಟ ಅವಧಿ ನಿದ್ದೆ ಮಾಡಿಲ್ಲ ಎಂದರೆ ಮನಸ್ಸಿನಲ್ಲಿ ಒತ್ತಡ ಮತ್ತು ಖಿನ್ನತೆ ಅನುಭವಿಸಬೇಕಾಗಬಹುದು. ಪರಿಣಾಮವಾಗಿ, ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ದೇಹದ ಚಕ್ರಗಳು ಸೂರ್ಯೋದಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಇದಲ್ಲದೆ, ಸೂರ್ಯನ ಅನುಪಸ್ಥಿತಿಯಲ್ಲಿ ಚಟುವಟಿಕೆಗಳನ್ನು ಮಾಡುವುದು ಮಾನಸಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಈ ಒತ್ತಡವು ಮನಸ್ಸಿನ ಶಾಂತಿಯನ್ನು ನಾಶಪಡಿಸುವುದಲ್ಲದೆ, ಆತ್ಮವನ್ನು ಆಧ್ಯಾತ್ಮಿಕವಾಗಿ ದೂರವಿಡುತ್ತದೆ.

2. ಶ್ರಮದಾಯಕ ದೈಹಿಕ ಕಾರ್ಯಗಳು

ರಾತ್ರಿಯಲ್ಲಿ ದೇಹವನ್ನು ಹೆಚ್ಚು ಆಯಾಸಗೊಳಿಸುವ ಕೆಲಸಗಳನ್ನು ಮಾಡಬೇಡಿ. ಪರಿಣಾಮವಾಗಿ, ದೇಹವು ಹೆಚ್ಚು ದಣಿಯಬಹುದು ಮತ್ತು ಮರುದಿನ ಬೆಳಿಗ್ಗೆ ದಿನದ ಕೆಲಸವನ್ನು ಮಾಡಲು ದೇಹವು ಸಿದ್ಧವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾತ್ರಿ ಸಮಯದಲ್ಲಿ ದೇಹವನ್ನು ವಿಶ್ರಾಂತಿ ಪಡೆಯಲು ಮಾತ್ರ ಮೀಸಲಿಡಬೇಕು. ಶ್ರಮದಾಯಕ ದೈಹಿಕ ಚಟುವಟಿಕೆಯು ಆರೋಗ್ಯಕ್ಕೆ ಹಾನಿಕರವಾಗಿದೆ.

3. ಆಲೋಚನೆಗಳು, ಚರ್ಚೆಗಳು

ರಾತ್ರಿ ಹೊತ್ತು ಹೆಚ್ಚು ಭಾವನಾತ್ಮಕ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ಅಥವಾ ಸಂಭಾಷಣೆಗಳನ್ನು ನಡೆಸುವುದು ಸೂಕ್ತವಲ್ಲ. ಉದಾಹರಣೆಗೆ: ಜಗಳ, ಅಹಂಕಾರ ಅಥವಾ ಅನಗತ್ಯ ವ್ಯವಹಾರಗಳನ್ನು ಮಾಡುವುದು ಮನಸ್ಸಿನಲ್ಲಿ ಒತ್ತಡವನ್ನು ಹೆಚ್ಚಿಸಬಹುದು. ಇದು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ.

4. ಆರ್ಥಿಕ ಚಟುವಟಿಕೆಗಳು

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾತ್ರಿ ಸಮಯವು ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವ್ಯಾಪಾರ ವಹಿವಾಟುಗಳನ್ನು ಮಾಡಲು ಸೂಕ್ತವಾಗಿಲ್ಲ. ಈ ಸಮಯದಲ್ಲಿ ತೆಗೆದುಕೊಳ್ಳುವ ಹಣಕಾಸಿನ ನಿರ್ಧಾರಗಳು ನಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಕೆಲವು ಸಂದರ್ಭಗಳಲ್ಲಿ, ಹಣಕಾಸಿನ ನಷ್ಟದ ಸಾಧ್ಯತೆಯೂ ಇದೆ.

5. ಭಯಾನಕ ಕಥೆಗಳನ್ನು ಹೇಳುವುದು– ಹೇಳುವುದು

ರಾತ್ರಿಯಲ್ಲಿ ಭಯಾನಕ ಕಥೆಗಳನ್ನು ಹೇಳುವುದು ಅಥವಾ ಕೇಳುವುದನ್ನು ನಿಷೇಧಿಸಲಾಗಿದೆ. ಗೊಂದಲದ ವಿಷಯಗಳನ್ನು ಓದುವುದು ಸಹ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಚಂಚಲತೆ ಹೆಚ್ಚುತ್ತದೆ. ಪದೇ ಪದೇ ಅದನ್ನೇ ನೆನಪಿಸಿಕೊಳ್ಳುವುದರಿಂದ ಭಯ ಉಂಟಾಗಿ ನಿದ್ರೆಗೆ ಅಡ್ಡಿಯಾಗುತ್ತದೆ.

6. ನಿರ್ಧಾರಗಳನ್ನು ತೆಗೆದುಕೊಳ್ಳುವುದು

ರಾತ್ರಿಯ ಸಮಯದಲ್ಲಿ ಭಾವನಾತ್ಮಕ ಒತ್ತಡ ಅಥವಾ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಳಿಗ್ಗೆ ಅಥವಾ ಮಧ್ಯಾಹ್ನ ಸೂಕ್ತ ಸಮಯ.

7. ಆಹಾರ ಅಥವಾ ಊಟ

ರಾತ್ರಿಯಲ್ಲಿ ತಡವಾಗಿ ಅಥವಾ ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾತ್ರಿಯ ಊಟಕ್ಕೆ ಕೆಲವು ವಿಶೇಷ ಸಮಯಗಳಿವೆ. ಸಮಯಕ್ಕೆ ಸರಿಯಾಗಿ ಸೇವಿಸುವುದರೊಂದಿಗೆ ಸಾಮಾನ್ಯವಾಗಿ ಕಡಿಮೆ ಕ್ಯಾಲೋರಿ ಹೊಂದಿರುವ ಸಣ್ಣ ಪ್ರಮಾಣದ ಆಹಾರವನ್ನು ಸೇವಿಸುವುದು ಉತ್ತಮ. ತಡರಾತ್ರಿ ಊಟ ಮಾಡುವುದನ್ನು ಜ್ಯೋತಿಷ್ಯದಲ್ಲಿ ನಿಷೇಧಿಸಲಾಗಿದೆ.

8. ಶುಭ ಕಾರ್ಯಗಳಿಗೆ ಪ್ರತಿಕೂಲ ಸಮಯ

ಕೆಲವು ಜ್ಯೋತಿಷ್ಯ ಪದ್ಧತಿಗಳ ಪ್ರಕಾರ, ಶುಭ ಕಾರ್ಯಗಳನ್ನು ಪ್ರಾರಂಭಿಸಲು ರಾತ್ರಿಯು ಅಶುಭ ಸಮಯವಾಗಿದೆ. ರಾತ್ರಿ ವೇಳೆ ಹೊಸ ಬಟ್ಟೆ ಖರೀದಿಸುವುದು, ಕಟ್ಟಡ ಕಾಮಗಾರಿ ಆರಂಭಿಸುವುದು ಮುಂತಾದ ಶುಭ ಕಾರ್ಯಗಳನ್ನು ಮಾಡುವುದು ಗೌರವಾರ್ಹವಲ್ಲ ಎನ್ನುತ್ತಾರೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ಈ ಕೆಲಸಗಳನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

9. ಧಾರ್ಮಿಕ ಕಾರ್ಯಗಳು, ಪೂಜೆಗಳನ್ನು ಮಾಡುವುದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ಯಜ್ಞ, ಹೋಮ ಮುಂತಾದ ಪುಣ್ಯ ಕಾರ್ಯಗಳನ್ನು ಮಾಡುವಂತಿಲ್ಲ. ಪೂಜೆ, ಹೋಮ, ದೀಪಾರಾಧನೆ ಇತ್ಯಾದಿಗಳನ್ನು ಮುಂಜಾನೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಮಾಡುವುದು ಮಂಗಳಕರ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ರಾತ್ರಿಯಲ್ಲಿ ಈ ಆಚರಣೆಗಳನ್ನು ನಡೆಸುವುದು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ