logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು? ಶಕ್ತಿಯ ಸಂಕೇತದ ಉಗುರುಗಳ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ

ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು? ಶಕ್ತಿಯ ಸಂಕೇತದ ಉಗುರುಗಳ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ

Raghavendra M Y HT Kannada

Dec 02, 2024 01:23 PM IST

google News

ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು ಮತ್ತು ಏಕೆ ಎಂಬುದನ್ನು ತಿಳಿಯೋಣ

    • ಪುರಾಣಗಳ ಪ್ರಕಾರ, ಉಗುರುಗಳು ದೇಹ ಮತ್ತು ಮನಸ್ಸನ್ನು ಸಂಪರ್ಕಿಸುತ್ತವೆ. ದೇಹ ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತವೆ. ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು, ಹೆಚ್ಚಿನ ಮಂದಿ ಯಾವ ದಿನ ಉಗುರುಗಳನ್ನು ಕತ್ತರಿಸುತ್ತಾರೆ. ಇದರಿಂದ ಏನೆಲ್ಲಾ ಸಮಸ್ಯಗಳು ಆಗಬಹುದು ಹಾಗೂ ಉಗುರು ಕತ್ತರಿಸಲು ಉತ್ತಮ ದಿನವನ್ನು ತಿಳಿಯಿರಿ.
ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು ಮತ್ತು ಏಕೆ ಎಂಬುದನ್ನು ತಿಳಿಯೋಣ
ವಾರದಲ್ಲಿ ಯಾವ ದಿನ ಉಗುರುಗಳನ್ನು ಕತ್ತರಿಸಬಾರದು ಮತ್ತು ಏಕೆ ಎಂಬುದನ್ನು ತಿಳಿಯೋಣ

ಹಿಂದೂ ಧರ್ಮದ ಪ್ರಕಾರ, ಉಗುರುಗಳು ಶಕ್ತಿ, ಶಾಂತಿ, ಸಂತೋಷ ಮತ್ತು ಶಾಂತಿಯ ಮಂಗಳಕರ ಸಂಕೇತವೆಂದು ಅನೇಕ ಜನರು ನಂಬುತ್ತಾರೆ. ಇಂತಹ ಉಗುರುಗಳು ಹೆಚ್ಚು ಬೆಳೆದಾಗ ನಿರ್ದಿಷ್ಟವಲ್ಲದ ದಿನದಂದು ಕತ್ತರಿಸುವುದು ಅಶುಭ ಎಂದು ಪುರಾಣಗಳು ಹೇಳುತ್ತವೆ. ಕೆಲವೊಮ್ಮೆ ಉಗುರುಗಳನ್ನು ಕತ್ತರಿಸುವುದರಿಂದ ವ್ಯಕ್ತಿಯು ಕೆಟ್ಟ ಪರಿಣಾಮಗಳು, ನಷ್ಟಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿ ಮತ್ತು ರಾಹುವಿನಂತಹ ದುಷ್ಟ ಗ್ರಹಗಳ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಉಗುರುಗಳನ್ನು ಕತ್ತರಿಸಲು ಸೂಕ್ತವಾದ ದಿನಗಳು ಬಂದಾಗ ಅನುಸರಿಸಲು ಕೆಲವು ನಿಯಮಗಳಿವೆ. ಅವುಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ತಾಜಾ ಫೋಟೊಗಳು

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಯಾವ ದಿನ ಉಗುರುಗಳನ್ನು ಕತ್ತರಿಸಬಾರದು?

1. ಭಾನುವಾರ

ಭಾನುವಾರವೇ ಅನೇಕರು ತಮ್ಮ ಉಗುರುಗಳನ್ನು ಕತ್ತರಿಸುತ್ತಾರೆ. ಪುರಾಣಗಳ ಪ್ರಕಾರ ಇದು ಅಶುಭದ ಸಂಕೇತ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರವು ಸೂರ್ಯನಿಗೆ ನಿಗದಿಪಡಿಸಿದ ದಿನವಾಗಿದೆ. ಶಕ್ತಿ, ಆರೋಗ್ಯ ಮತ್ತು ಪರಾಕ್ರಮಕ್ಕೆ ಇದು ಮಂಗಳಕರ ದಿನವಾಗಿದೆ. ಆದ್ದರಿಂದ ಈ ದಿನದಂದು ಉಗುರುಗಳನ್ನು ಕತ್ತರಿಸುವುದು ವ್ಯಕ್ತಿಯ ಜೀವನದಲ್ಲಿ ಕೆಟ್ಟ ಫಲಿತಾಂಶಗಳನ್ನು ಮತ್ತು ಅನಪೇಕ್ಷಿತ ಘಟನೆಗಳನ್ನು ತರುತ್ತದೆ.

2. ಶನಿವಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿಯು ಕರ್ಮ ಫಲಗಳು, ಶ್ರಮ, ನೋವು ಹಾಗೂ ಸಂಕಟಗಳನ್ನು ನೀಡುವ ದೇವರು. ತಜ್ಞರ ಪ್ರಕಾರ, ಈ ದಿನದಂದು ಉಗುರುಗಳನ್ನು ಕತ್ತರಿಸುವುದು ಜೀವನದಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಶುಭವಲ್ಲ.

3. ಗುರುವಾರ

ಗುರುವಾರ ಗುರುವಿನ ದಿನ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರುವು ಬುದ್ಧಿವಂತಿಕೆ, ಯಶಸ್ಸು ಮತ್ತು ಆಶೀರ್ವಾದದ ದೇವರು. ಈ ದಿನ ಉಗುರುಗಳನ್ನು ಕತ್ತರಿಸುವುದು ಎಂದರೆ ಗುರುವಿನ ಕೃಪೆಯನ್ನು ಕಳೆದುಕೊಳ್ಳುವುದು. ಈ ಗ್ರಹವು ಹೊಂದಾಣಿಕೆಯಾಗದಿದ್ದರೆ, ವ್ಯಕ್ತಿಯ ಸಮೃದ್ಧಿ ನಾಶವಾಗುತ್ತದೆ.

ಇನ್ನೂ ಯಾವೆಲ್ಲಾ ಸಂದರ್ಭದಲ್ಲಿ ಉಗುರುಗಳನ್ನು ಕತ್ತರಿಸಬಾರದು

ಹಬ್ಬ ಹರಿದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಪುರಾಣಗಳು ಹೇಳುತ್ತವೆ. ಉಪವಾಸ, ವಿಶೇಷ ಪೂಜೆ, ವ್ರತಗಳ ದಿನಗಳಂದು ಉಗುರು ಕತ್ತರಿಸುವುದು ಶ್ರೇಯಸ್ಕರವಲ್ಲ ಎಂದು ನಂಬಲಾಗಿದೆ. ಪುನರ್ವಸು ಮತ್ತು ರೋಹಿಣಿಯಂತಹ ಕೆಲವು ನಕ್ಷತ್ರಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಪರಿಗಣಿಸಲಾಗುತ್ತದೆ.

ಯಾವ ದಿನ ಉಗುರುಗಳನ್ನು ಕತ್ತರಿಸಬಹುದು?

1. ಮಂಗಳವಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಮಂಗಳ ಗ್ರಹಕ್ಕೆ ನಿಗದಿಪಡಿಸಿದ ದಿನ. ಮಂಗಳವು ಶಕ್ತಿ, ಧೈರ್ಯ ಮತ್ತು ಸಾಹಸವನ್ನು ಸಂಕೇತಿಸುತ್ತದೆ. ಕೆಲವು ಜ್ಯೋತಿಷಿಗಳು ಈ ದಿನದಂದು ಉಗುರುಗಳನ್ನು ಕತ್ತರಿಸುವುದನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಇದು ನಿಮ್ಮ ದೇಹದಲ್ಲಿನ ಶಕ್ತಿಯನ್ನು ಕಡಿಮೆ ಮಾಡಬಹುದು.

2. ಶುಕ್ರವಾರ

ಶುಕ್ರವಾರ ಶುಕ್ರನಿಗೆ ಸಂಬಂಧಿಸಿದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ಪ್ರೀತಿ ಮತ್ತು ಸೌಂದರ್ಯದ ದೇವರು. ಶುಕ್ರವಾರದಂದು ಉಗುರುಗಳನ್ನು ಕತ್ತರಿಸುವುದು ಸೌಂದರ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಉಗುರು ಕತ್ತರಿಸುವುದರಿಂದ ಆಗುವ ಪ್ರಯೋಜನಗಳು

  • ಉಗುರುಗಳನ್ನು ಕತ್ತರಿಸುವುದರಿಂದ ದೇಹದಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುತ್ತದೆ. ಇದು ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
  • ಉಗುರುಗಳನ್ನು ಕತ್ತರಿಸುವ ಮೂಲಕ ವ್ಯಕ್ತಿಯು ಅಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತಾನೆ. ಹಿಂದೂ ಧರ್ಮದ ಪ್ರಕಾರ ಮನಸ್ಸು, ಆತ್ಮ ಮತ್ತು ದೇಹಕ್ಕೆ ಶಾಂತಿ ಹಾಗೂ ಶುದ್ಧತೆಯನ್ನು ತರಲು ಹೀಗೆ ಮಾಡಲಾಗುತ್ತದೆ.
  • ಕೆಲವು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಉಗುರುಗಳನ್ನು ಕತ್ತರಿಸುವುದು ಕರ್ಮಕ್ಕೆ ಪರಿಹಾರವನ್ನು ನೀಡುತ್ತದೆ. ಇದು ದುರ್ಗುಣಗಳು ಹಾಗೂ ನಕಾರಾತ್ಮಕ ಕರ್ಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಉಗುರು ಸುತ್ತು ಸಮಸ್ಯೆಯಿಂದ ಚಿಂತಿತರಾಗಿರುವಿರಾ: ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

  • ಪ್ರೇಮವಿವಾಹ ಅಥವಾ ಮದುವೆಯಲ್ಲಿ ಹೆಚ್ಚಿನ ಶುಭ ಫಲಗಳಿಗಾಗಿ ಉಗುರುಗಳನ್ನು ಕತ್ತರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಸಂಬಂಧಗಳಲ್ಲಿ ರಕ್ಷಣೆ, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.
  • ಉಗುರುಗಳನ್ನು ಕತ್ತರಿಸುವುದರಿಂದ ದೇಹವು ಹೆಚ್ಚು ಸ್ವಚ್ಛವಾಗುತ್ತದೆ. ಕೂದಲು ಬೆಳವಣಿಗೆ ಮತ್ತು ಇತರ ದೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಇದು ಉಪಯುಕ್ತವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ವಿಶೇಷವಾಗಿ ತಲೆಯ ಉಷ್ಣತೆ ಮತ್ತು ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಉಗುರುಗಳ ಸುತ್ತಲಿನ ಚರ್ಮವು ಸಿಪ್ಪೆ ಸುಲಿಯುತ್ತಿದೆಯೇ: ಇದನ್ನು ಪರಿಹರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

  • ಉಗುರು ಕತ್ತರಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಇದು ಮನಸ್ಸಿನಲ್ಲಿ ಶಾಂತಿಯನ್ನು ಉತ್ತೇಜಿಸುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಅಥವಾ ಸಮಸ್ಯೆಗಳಿದ್ದಾಗ, ಉಗುರುಗಳನ್ನು ಕತ್ತರಿಸುವುದರಿಂದ ಅವುಗಳನ್ನು ತೆಗೆದುಹಾಕಬಹುದು ಮತ್ತು ಶಕ್ತಿಯುತವಾದ ಆಲೋಚನೆಗಳನ್ನು ಹೆಚ್ಚಿಸಬಹುದು.
  • ಉಗುರು ಕತ್ತರಿಸುವುದನ್ನು ಸಾಂಪ್ರದಾಯಿಕ ವಿಧಾನವೆಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ದೇವತೆಗಳ ಅನುಗ್ರಹವನ್ನು ಪಡೆಯಬಹುದು. ಪುಣ್ಯ ಕಾರ್ಯಗಳು, ಮಂಗಳಕರ ಫಲಿತಾಂಶಗಳು ಮತ್ತು ಯಶಸ್ಸನ್ನು ಎದುರಿಸಲು ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ