logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಪತ್ತಿನ ಒಡತಿ ಲಕ್ಷ್ಮಿ-ಕುಬೇರನ ಪೂಜೆ ಏಕೆ ಮಾಡಬೇಕು; ಮಹತ್ವ, ಕಥೆ, ಪೂಜೆಯಿಂದ ಸಿಗಲುವ ಶುಭ ಫಲಗಳು ಹೀಗಿವೆ

ಸಂಪತ್ತಿನ ಒಡತಿ ಲಕ್ಷ್ಮಿ-ಕುಬೇರನ ಪೂಜೆ ಏಕೆ ಮಾಡಬೇಕು; ಮಹತ್ವ, ಕಥೆ, ಪೂಜೆಯಿಂದ ಸಿಗಲುವ ಶುಭ ಫಲಗಳು ಹೀಗಿವೆ

Raghavendra M Y HT Kannada

Oct 26, 2024 04:12 PM IST

google News

ಲಕ್ಷ್ಮಿ-ಕುಬೇರ ಪೂಜೆಯಿಂದ ಸಿಗಲು ಪ್ರಯೋಜನಗಳ ಬಗ್ಗೆ ತಿಳಿಯಿರಿ

    • ಕುಬೇರನ ಕಣ್ಣುಗಳು ಒಂದು ದೊಡ್ಡದಾಗಿದ್ದರೆ ಮತ್ತೊಂದು ಕಣ್ಣು ಚಿಕ್ಕದಾಗಿರುತ್ತದೆ. ಕುಬೇರನ ಸತ್ಯನಿಷ್ಠೆ ಮೆಚ್ಚಿದ ಶಿವನು ಉತ್ತರ ದಿಕ್ಕಿಗೆ ಕಾವಲುಗಾರನನ್ನಾಗಿ ನೇಮಿಸುತ್ತಾನೆ. ಪಾರ್ವತಿಯು ಅವನನ್ನು ಸಕಲ ಸಂಪತ್ತು ಮತ್ತು ಬೆಲೆಬಾಳುವ ವಸ್ತುಗಳಿಗೆ ಅಧಿಪತಿಯನ್ನಾಗಿ ಮಾಡುತ್ತಾಳೆ. ದೀಪಾವಳಿ ಸಮಯದಲ್ಲಿ ಲಕ್ಷ್ಮಿ-ಕುಬೇರ ಪೂಜೆಯ ಮಹತ್ವ, ಕಥೆಯನ್ನು ಓದಿ.
ಲಕ್ಷ್ಮಿ-ಕುಬೇರ ಪೂಜೆಯಿಂದ ಸಿಗಲು ಪ್ರಯೋಜನಗಳ ಬಗ್ಗೆ ತಿಳಿಯಿರಿ
ಲಕ್ಷ್ಮಿ-ಕುಬೇರ ಪೂಜೆಯಿಂದ ಸಿಗಲು ಪ್ರಯೋಜನಗಳ ಬಗ್ಗೆ ತಿಳಿಯಿರಿ

ವಾಸ್ತುವಿನ ಪ್ರಕಾರ ಕುಬೇರ ಉತ್ತರ ದಿಕ್ಕಿನ ಅಧಿಪತಿ. ಮೊದಲು ಇವನಿಗೆ ಅಂದವಿಲ್ಲದ ವಿಕಾರದ ದೇಹ ಇರುತ್ತದೆ. ಆದರೆ ಇವನಿಗೆ ಸೋಮ ಎಂಬ ಹೆಸರು ಬರುತ್ತದೆ. ಆನಂತರ ಕುಬೇರನಿಗೆ ಅಂದದ ಮುಖ ದೊರೆಯುತ್ತದೆ. ಈ ಕಾರಣದಿಂದ ಉತ್ತರ ದಿಕ್ಕಿಗೆ ಸೌಮ್ಯ ಎಂಬ ಹೆಸರಿದೆ. ಇವನ ಆವಾಸಸ್ಥಾನ ಕೈಲಾಸ. ಇವನ ಪತ್ನಿಯ ಹೆಸರು ಭದ್ರೆ. ಇವನ ಪಟ್ಟಣದ ಹೆಸರು ವೈರಾಜ. ರಾವಣ ಮತ್ತು ಕುಂಭ ಕರ್ಣರು ಈತನ ಮಲತಾಯಿಯ ಮಕ್ಕಳು. ಪುಷ್ಪಕವಿಮಾನ ಕುಬೇರನಿಗೆ ಸೇರಿದ್ದು. ಆದರೆ ರಾವಣ ಕುಂಭ ಕರ್ಣರು ಕುಬೇರನನ್ನು ಲಂಕೆಯಿಂದ ಓಡಿಸಿ ಪುಷ್ಪಕವಿಮಾನವನ್ನು ತನ್ನ ವಶಕ್ಕೆ ಪಡೆಯುತ್ತಾನೆ. ರಾವಣನನ್ನು ಕೊಂದ ನಂತರ ಶ್ರೀರಾಮನು ಪುಷ್ಪಕವಿಮಾನವನ್ನು ಮರಳಿ ಕುಬೇರನಿಗೆ ನೀಡುತ್ತಾನೆ. ಆನಂತರ ಶ್ರೀಪರಮೇಶ್ವರನ ವರದಿಂದ ಕೈಲಾಸದಲ್ಲಿ ಹೊಸ ಪಟ್ಟಣವನ್ನು ನಿರ್ಮಿಸುತ್ತಾನೆ. ಈ ಪಟ್ಟಣದ ಹೆಸರೆ ಅಲಕಾನಗರ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ತನ್ನ ಮುಂಚಿನ ದಿನಗಳಲ್ಲಿ ಕುಬೇರನು ಶಿವನನ್ನು ಕಾಣಲೆಂದು ಕೈಲಾಸಗಿರಿಗೆ ತೆರಳುತ್ತಾನೆ. ಆದರೆ ಶಿವನಿಗೂ ಮುಂಚೆ ಪಾರ್ವತಿ ದೇವಿಯನ್ನು ಕಾಣುತ್ತಾನೆ. ಪಾರ್ವತಿದೇವಿಯ ಮೊಗದಲ್ಲಿ ವಿಶಿಷ್ಠವಾದ ಕರುಣೆ ಕಂಡುಬರುತ್ತದೆ. ಭಕ್ತರನ್ನು ಕಾಪಾಡಬೇಕೆನ್ನುವ ಆತುರತೆ ಇರುತ್ತದೆ. ಅದಲ್ಲದೆ ಕುಬೇರನಲ್ಲಿ ಆತ್ಮತೃಪ್ತಿ ಉಂಟಾಗುತ್ತದೆ. ಇದರಿಂದ ಪುಳಕಿತನಾಗುತ್ತಾನೆ. ಪಾರ್ವತಿ ದೇವಿಯ ವೈಭವ, ಕಾಂತಿ ಮತ್ತು ಸೌಂದರ್ಯವನ್ನು ಕಂಡ ಕುಬೇರನು ತನ್ನನ್ನು ತಾನೇ ಮರೆತು ಒಂದು ಕ್ಷಣ ದಿಗ್ಭ್ರಮೆಗೆ ಒಳಗಾಗುತ್ತಾನೆ. ಇಂತಹ ಅಗಾಧ ಶಕ್ತಿ ಇರುವ , ನೋಡಲು ಸುಂದರವಾಗಿರುವ ದೇವಿಯನ್ನು ಪೂಜೆ ಮಾಡಲಿಲ್ಲ ಎಂದು ಪಶ್ಚಾತ್ತಾಪ ಪಡುತ್ತಾನೆ. ಈ ಕಾರಣದಿಂದ ಕುಬೇರನ ಒಂದು ಕಣ್ಣು ಮುಚಿಕೊಳ್ಳುತ್ತದೆ.

ಆ ಕ್ಷಣವನ್ನು ಪಾರ್ವತಿ ದೇವಿಯು ಗಮನಿಸಿಬಿಡುತ್ತಾಳೆ. ಅವಳಿಗೆ ಕುಬೇರನ ಭಕ್ತಿಯು ಅರ್ಥವಾಗುವುದಿಲ್ಲ. ಅಪಾರ್ಥ ಮಾಡಿಕೊಂಡ ಪಾರ್ವತಿಯು ಕುಬೇರನು ತನ್ನನ್ನು ನೋಡಿ ಕಣ್ಣು ಮಿಟುಕಿಸುತ್ತಿದ್ದಾನೆ ಎಂದು ತಿಳಿದು ಬಿಡುತ್ತಾಳೆ. ತನ್ನನ್ನು ಕೆಟ್ಟ ಉದ್ದೇಶದಿಂದ ನೋಡುತ್ತಿದ್ದಾನೆ ಎಂದು ಪಾರ್ವತಿಯು ಭಾವಿಸುತ್ತಾಳೆ. ಕ್ಷಣಾರ್ಧದಲ್ಲಿ ಪಾರ್ವತಿ ದೇವಿಗೆ ಅಸಾಧ್ಯ ಕೋಪ ಬರುತ್ತದೆ. ತನ್ನ ದೃಷ್ಠಿಯಿಂದಲೇ ಕುಬೇರನ ಮುಚ್ಚಿದ್ದ ಕಣ್ಣು ಸಿಡಿಯುವಂತೆ ಮಾಡುತ್ತಾಳೆ. ಈ ಕಾರಣದಿಂದಾಗಿ ಕುಬೇರನ ಒಂದು ಕಣ್ಣು ತನ್ನ ದೃಷ್ಠಿಯನ್ನು ಕಳೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ ಪಾರ್ವತಿಯು ಕುಬೇರನಿಗೆ ಸದಾಕಾಲ ಎಲ್ಲರಿಗೂ ಕುರೂಪಿಯಾಗಿ ಕಾಣು ಎಂಬ ಶಾಪವನ್ನು ನೀಡುತ್ತಾಳೆ. ಈ ಅಹಿತಕರ ಬೆಳವಣೆಗೆಯಿಂದ ನೊಂದ ಕುಬೇರನು ಶಿವನನ್ನು ಕುರಿತು ನನಗೆ ಯಾವುದೆ ಕೆಟ್ಟಬಾವನೆ ಇರಲಿಲ್ಲ. ದಯವಿಟ್ಟು ನನ್ನನ್ನು ಕಾಪಾಡು ಎಂದು ಕೇಳುತ್ತಾನೆ.

ಸಂದಿಗ್ದತೆಗೆ ಸಿಲುಕಿದ ಶಿವನು ಇದರ ವಿಚಾರ ನನಗೆ ಬೇಡ. ನೀನು ನೇರವಾಗಿ ಪಾರ್ವತಿಯನ್ನೇ ಕೇಳು ಎಂದು ಹೇಳುತ್ತಾನೆ. ಭಯಭಕ್ತಿಯಿಂದ ಕುಬೇರನು ಪಾರ್ವತಿಯನ್ನು ಕುರಿತು, ತಾಯಿ ಹೆತ್ತಮ್ಮನ ಬಗ್ಗೆ ಮಗನಿಗೆ ಕೆಟ್ಟಭಾವನೆ ಉಂಟಾಗುವುದೇ. ನಿನ್ನನ್ನು ಪೂಜಿಸಲಿಲ್ಲ ಎಂಬ ಅಪರಾಧಿ ಮನೋಭಾವನೆಯಿಂದಾಗಿ ನನ್ನ ಒಂದು ಕಣ್ಣು ಮುಚ್ಚಿಕೊಂಡಿತು. ಇದರ ಹೊರತಾಗಿ ನನಗೆ ನಿಮ್ನ ಮೇಲೆ ಯಾವುದೆ ಕೆಟ್ಟಭಾವನೆ ಅಥವಾ ಉದ್ದೇಶ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಉದ್ದರಿಸು ಎಂದು ಬೇಡುತ್ತಾನೆ.

ಆಗ ಪಾರ್ವತಿಯು ಕೋಪವನ್ನು ಮರೆತು, ಕುಬೇರನನ್ನು ಕ್ಷಿಮಿಸುತ್ತಾಳೆ. ಆಗ ಕುಬೇರನಿಗೆ ಸುಟ್ಟುಹೋದ ಕಣ್ಣು ಮತ್ತೆ ಬೆಳೆಯುತ್ತದೆ. ಆದರೆ ಅದು ಎಂದಿಗಿಂತ ಸಣ್ಣಪ್ರಮಾಣದಲ್ಲಿ ಇರುತ್ತದೆ. ನೋಡಲು ಚಿಕ್ಕದಾಗಿ ಕಾಣುತ್ತದೆ. ಆದ್ದರಿಂದ ಕುಬೇರನ ಕಣ್ಣುಗಳು ಒಂದು ದೊಡ್ಡದಾಗಿದ್ದರೆ ಮತ್ತೊಂದು ಕಣ್ಣು ಚಿಕ್ಕದಾಗಿರುತ್ತದೆ. ಕುಬೇರನ ಸತ್ಯನಿಷ್ಠೆ ಮೆಚ್ಚಿದ ಶಿವನು ಉತ್ತರ ದಿಕ್ಕಿಗೆ ಕಾವಲುಗಾರನನ್ನಾಗಿ ನೇಮಿಸುತ್ತಾನೆ. ಪಾರ್ವತಿಯು ಅವನನ್ನು ಸಕಲ ಸಂಪತ್ತು ಮತ್ತು ಬೆಲೆಬಾಳುವ ವಸ್ತುಗಳಿಗೆ ಅಧಿಪತಿಯನ್ನಾಗಿ ಮಾಡುತ್ತಾಳೆ.

ಸಂಪತ್ತಿನ ಸೃಷ್ಟಿ ಲಕ್ಷ್ಮಿ ದೇವಿಯ ಕೈಯಲ್ಲಿದ್ದಾಗ ಅವುಗಳನ್ನು ವಿತರಿಸುವ ಜವಾಬ್ದಾರಿಯನ್ನು ಸಂಪತ್ತು ಮತ್ತು ವಸ್ತುವಿನ ದೇವರಾಗಿ ಕುಬೇರನು ಹೊಂದಿದ್ದನು. ಕುಬೇರನು ತನ್ನ ಕುಟುಂಬದೊಂದಿಗೆ ಹೆಚ್ಚಾಗಿ ಚಿತ್ರಿಸಲ್ಪಟ್ಟಿದ್ದಾನೆ ಮತ್ತು ಚಿನ್ನದ ನಾಣ್ಯಗಳು ಮತ್ತು ನವರತ್ನಗಳನ್ನು ಸುರಿಸುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದು. ಇದರಿಂದಾಗಿ ಭಗವಾನ್ ಕುಬೇರನಿಗೆ ಪೂಜೆಯನ್ನು ಮಾಡುವುದರಿಂದ ನಮ್ಮ ಜೀವನ ಸುಖ ಸಂಪತ್ತಿನಿಂದ ಕೂಡಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಇದೆ. ಆದ್ದರಿಂದ ದೀಪಾವಳಿಯ ದಿನಗಳಲ್ಲಿ ಮುಖ್ಯವಾಗಿ ಶ್ರೀಮಂತ ಮತ್ತು ಆರಾಮದಾಯಕ ಜೀವನವನ್ನು ಗಳಿಸಲು, ನಾವು ಶ್ರೀ ಲಕ್ಷ್ಮೀ ಕುಬೇರ ಪೂಜೆಯನ್ನು ಮಾಡಬೇಕು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ