ನೆರೆ ರಾಜ್ಯದಲ್ಲಿದೆ ಚಕಿತಗಳನ್ನು ಸೃಷ್ಟಿಸುವ ಶ್ರೀ ಕನಕದುರ್ಗಾ ದೇವಸ್ಥಾನ; ಉದ್ಯೋಗ ಸಮಸ್ಯೆ ನಿವಾರಣೆಗೆ ಇದು ಪುಣ್ಯ ಸ್ಥಳ
Aug 22, 2023 06:00 AM IST
ನೆರೆ ರಾಜ್ಯದಲ್ಲಿದೆ ಚಕಿತಗಳನ್ನು ಸೃಷ್ಠಿಸುವ ಶ್ರೀ ಕನಕದುರ್ಗಾ ದೇವಸ್ಥಾನ; ಉದ್ಯೋಗ ಸಮಸ್ಯೆ ನಿವಾರಣೆಗೆ ಇದು ಪುಣ್ಯ ಸ್ಥಳ
- ಉದ್ಯೋಗದಲ್ಲಿ ಸಮಸ್ಯೆ, ಉದ್ಯೋಗ ಹುಡುಕಾಟದಲ್ಲಿದ್ದರೆ, ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿನ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಅಮ್ಮನ ದರ್ಶನ ಪಡೆಯಿರಿ. ಹಲವು ವಿಶೇಷತೆಯಿಂದಲೇ ಕೂಡಿರುವ ಈ ತಾಯಿ, ನಂಬಿದವರ ಕೈ ಬಿಟ್ಟಿಲ್ಲ. ನಿತ್ಯ ಸಾವಿರಾರು ಭಕ್ತರು ಈ ದೇವಿಯ ದರ್ಶನ ಪಡೆಯುತ್ತಾರೆ.
Spiritual news: ನೆರೆಯ ಆಂಧ್ರ ಪ್ರದೇಶದಲ್ಲಿ ವಿಶೇಷವಾದ ಶಕ್ತಿ ಇರುವ ಅನೇಕ ದೇವಾಲಯಗಳಿವೆ. ಅದರ ಪ್ರಮುಖ ಸ್ಥಾನವನ್ನು ಅಲಂಕರಿಸುವ ದೇವಾಲಯವೇ ಈ ಶ್ರೀ ಕನಕದುರ್ಗಮ್ಮ ದೇವಾಲಯ. ಆದರೆ ಜನರ ಮಾತಿನಿಂದಾಗಿ ಶ್ರೀ ಕನಕದುರ್ಗಾ ಎಂಬ ಹೆಸರು ಪಡೆದಿದೆ.
ತಾಜಾ ಫೋಟೊಗಳು
ಕೃಷ್ಣ ನದಿ ಆಂಧ್ರದ ಪ್ರಮುಖ ನದಿಗಳಲ್ಲಿ ಒಂದು. ಈ ನದಿಯು ವಿಜಯವಾಡದಲ್ಲಿ ಕಾಣಸಿಗುತ್ತದೆ. ಈ ನದಿಯ ದಂಡೆಯಲ್ಲಿ ಬೆಟ್ಟವಿದೆ. ಆ ಬೆಟ್ಟವೆ ಇಂದ್ರಕೀಲಾದ್ರಿ ಬೆಟ್ಟ. ಇಲ್ಲಿರುವುದೇ ಕನಕದುರ್ಗಾ ದೇವಸ್ಥಾನ. ಹಿಂದೂಗಳ ಅನೇಕ ವೈದಿಕ ಪುರಾಣಗಳಲ್ಲಿ ಈ ಪ್ರದೇಶದ ಬಗ್ಗೆ ಉಲ್ಲೇಖವಿದೆ. ಈ ದೇವಸ್ಥಾನಗಳ ಬಗ್ಗೆ ವೀರ ಬ್ರಹ್ಮೇಂದ್ರ ಸ್ವಾಮಿಗಳ ಪ್ರಳಯಕ್ಕೆ ಸಂಬಂಧಿಸಿದ ಪದ್ಯಗಳಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ.
ಈ ದೇವರ ವಿಗ್ರಹವನ್ನು ಯಾರೂ ಪ್ರತಿಷ್ಠಾಪಿಸಿದ್ದಲ್ಲ. ಇದು ಉದ್ಭವವಾದ ವಿಗ್ರಹವಾಗಿದೆ. ಸತ್ಪುರುಷರನ್ನು ಮತ್ತು ದೇವಾನುದೇವತೆಗಳನ್ನು ಹಿಂಸಿಸುತ್ತಿದ್ದ ಮಹಿಷಾಸುರನ ಸಂಹಾರ ಮಾಡಿದ ದುರ್ಗೆಯನ್ನು ಕನಕಮಹಾಲಕ್ಶ್ಮಿ ಎಂದು ಕರೆಯಲಾಗಿದೆ. ಮಹಾಋಷಿಯಾದ ಇಂದ್ರಕೀಲನು ಅಹೋರಾತ್ರಿ ತಪಸ್ಸನ್ನು ಮಾಡಿ, ದುರ್ಗೆಯನ್ನು ತನ್ನ ತಲೆಯ ಮೇಲೆ ನೆಲೆಸುವಂತೆ ಬೇಡುತ್ತಾನೆ. ಆನಂತರ ಪರ್ವತದ ಆಕಾರದಲ್ಲಿ ನೆಲಸುತ್ತಾನೆ ಎಂದು ಹೇಳಲಾಗಿದೆ. ಆನಂತರ ಶತ್ರುಗಳನ್ನು ಸಂಹರಿಸಿದ ದುರ್ಗೆಯು ಈ ಬೆಟ್ಟದ ಮೇಲೆ ನೆಲಸಿದ್ದಾಳೆ ಎಂದು ಹೇಳಲಾಗಿದೆ. ಈ ರೀತಿ ವಿಜಯವಾಡವನ್ನು ರಕ್ಷಿಸಿದ ಕಾರಣ ಜನರ ಆರಾಧ್ಯದೈವವಾಗಿದ್ದಾಳೆ.
ಎಂಟು ಭುಜಗಳನ್ನು ಹೊಂದಿ ಮಹಿಷಾಸುರನನ್ನು ಸಂಹರಿಸಿದ ರೀತಿಯಂತಿದೆ ಈ ವಿಗ್ರಹದ ಭಂಗಿ. ಶ್ರಾವಣ ಮಾಸದಲ್ಲಿ ಈ ದೇವಾಲಯದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ವಿಶೇಷವಾಗಿ ಆಚರಿಸುತ್ತಾರೆ. ಶ್ರಾವಣಮಾಸದ ಪ್ರತಿ ಶುಕ್ರವಾರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ನವರಾತ್ರಿಯ ವೇಳೆ ಕೃಷ್ಣಾನದಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ ಪೂಜೆ ಸಲ್ಲಿಸಿದಲ್ಲಿ ವಿಶೇಷ ಫಲಗಳು ದೊರೆಯುತ್ತವೆ ಎಂದು ಹೇಳಲಾಗಿದೆ. ಪ್ರಳಯವಾಗುವ ಮುನ್ನ ಈ ದೇವಾಲಯವು ನದಿನೀರಿನಲ್ಲಿ ಮುಳುಗುತ್ತದೆ ಎಂಬ ಪ್ರತೀತಿ ಇದೆ.
ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾದಲ್ಲಿ ಅಷ್ಠಮಿಯ ದಿನ ಮಾಡುವ ಪೂಜೆಯಿಂದ ಶುಭ ಉಂಟಾಗುತ್ತದೆ. ಇಲ್ಲಿ ಕುಂಕುಮಾರ್ಚನೆಯನ್ನು ಮಾಡಿಸಿ, ಆ ಕುಂಕುಮದ ಭಂಡಾರವನ್ನು ಬಳಸಿದಲ್ಲಿ ದೃಷ್ಠಿದೋಷದಿಂದ ಪಾರಾಗಬಹುದು. ಈ ದೇವಾಲಯದಲ್ಲಿ ಸಪ್ತಶತಿ ಪಾರಾಯಣ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ಈ ದೇವಾಲಯದಲ್ಲಿ ಅನ್ನದಾನ ಮಾಡಿದಲ್ಲಿ ದಾರಿದ್ರ್ಯವು ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ.
ಮಾಹಿತಿ: ಜ್ಯೋತಿಷಿ: ಹೆಚ್. ಸತೀಶ್, ಬೆಂಗಳೂರು ಮೊಬೈಲ್: 8546865832
ದೇಗುಲ, ಪುಣ್ಯ ಕ್ಷೇತ್ರ, ಜೋತಿಷ್ಯ ಕುರಿತ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ